ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

Tuesday, November 7th, 2023
ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

ಮಂಗಳೂರು : ಮೂಡಬಿದ್ರೆ ಪೊಲೀಸ್ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅವರು ಹಾಗೂ ಅವರ ಠಾಣಾ ಸಿಬ್ಬಂದಿಯವರು ಬೆಳಗಿನ ಜಾವ ಮೂಡಬಿದ್ರೆ ಠಾಣ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ , ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ವಶಪಡಿಸಿ ಕೊಂಡಿರುತ್ತಾರೆ. ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲಿನ ಸಮೇತ ವಶಕ್ಕೆ ಪಡೆದು ಠಾಣೆಗೆ […]

ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ : ಭೂಮಾಲೀಕರಿಗೆ ಪರಿಹಾರ ಪಡೆದುಕೊಳ್ಳಲು ಸೂಚನೆ

Saturday, October 7th, 2023
NH169

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169(13) ಸಾವಣೂರು ಜಂಕ್ಷನ್ ಬಿಕರ್ನಕಟ್ಟೆ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಮೂಡಬಿದ್ರೆ ತಾಲ್ಲೂಕು ಪಡುರ್ಮಾನಾಡು ಮತ್ತು ಪುತ್ತಿಲ ಗ್ರಾಮಗಳಿಗೆ ಭೂಸ್ವಾಧೀನಗೊಂಡ ಜಮೀನನ್ನು ಭೂ ಮಾಲೀಕರಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಪಡೆದುಕೊಳ್ಳಲು ದಾಖಲೆಗಳೊಂದಿಗೆ ಕೋರಿಕೆ ಪತ್ರ ಸಲ್ಲಿಸುವಂತೆ ಸೂಚನಾ ಪತ್ರವನ್ನು ಕಚೇರಿಯಿಂದ ಈಗಾಗಲೇ ಜ್ಯಾರಿ ಮಾಡಲಾಗಿದೆ. ಈ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಈವರೆಗೆ ಕ್ಲೇಮ್ ಅರ್ಜಿ ಸಲ್ಲಿಸದಿರುವ ಭೂ ಮಾಲೀಕರು ಒಂದು […]

ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಕೊರೊನಾ ದೃಢ

Friday, September 18th, 2020
umanath kotian

ಮಂಗಳೂರು: ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ದೇವರ ಅನುಗ್ರಹ ಹಾಗೂ ನಿಮ್ಮ ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಗುಣಮುಖವಾಗಿ ನಿಮ್ಮ ಸೇವೆ ಮಾಡಲು ಹಾಜರಾಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾಗುವ ನಾಲ್ಕನೇ ಶಾಸಕರಾಗಿದ್ದಾರೆ. ಇದಕ್ಕೆ ಮೊದಲು ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಂಗಾರ ಅವರಿಗೂ […]

ಎಪಿಎಂಸಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ರಜನಿ ದುಗ್ಗಣ್ಣ ಆಯ್ಕೆ

Wednesday, July 15th, 2020
APMc

ಮಂಗಳೂರು : ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ಮೂಡಬಿದ್ರೆಯ ಕೃಷ್ಣರಾಜ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾರ್ಕಳ ತಾಲೂಕು ಪಂಚಾಯತ್‌ ಸದಸ್ಯರಾಗಿ,ಮಂಡಲ ಪ್ರಧಾನರಾಗಿ, ಮೂಡಬಿದ್ರೆ ಪುರಸಭೆಯ ಸದಸ್ಯರಾಗಿ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ, ಕೆಎಸ್‌ಆರ್‌ಟಿಸಿ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಮೇಯರ್‌ ರಜನಿ ದುಗ್ಗಣ್ಣ ಆಯ್ಕೆಯಾಗಿದ್ದು, ಅವರು  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಮೂಡಬಿದ್ರೆ ಆನ್ ಲೈನ್ ಗೋಲ್ಡ್ ಮಾಲಕನ ಕೊಲೆ, ಯುವ ಕಾಂಗ್ರೆಸ್ ಮುಖಂಡ ಸೇರಿ ಮೂವರ ಬಂಧನ

Saturday, June 6th, 2020
Lathif

ಮಂಗಳೂರು : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ  ವಿಜಯ ಸನ್ನಿಧಿ ಬಳಿಯ ವಿಜಯ  ಬ್ಯಾಂಕ್ ಎದುರುಗಡೆ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಜ್ಯುವೆಲ್ಲರಿ ಉದ್ಯಮಿ  ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕಾರ್ನಾಡ್ ದರ್ಗಾ ರಸ್ತೆಯ ಹಂಝ ಎಂಬವರ ಪುತ್ರ ಮುಹಮ್ಮದ್ ಹಾಶಿಮ್(27), ನಿಸಾರ್ ಯಾನೆ ರಿಯಾಜ್(33), ಉಚ್ಚಿಲ ಬಡಾ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಬೂಬಕರ್ ಸಿದ್ದಿಕ್(27), […]

ಮಿಥುನ್ ರೈ ಸೇರಿ 10 ಯುವ ಕಾಂಗ್ರೆಸ್ ಅಧ್ಯಕ್ಷರುಗಳ ಅಮಾನತು..!

Tuesday, November 6th, 2018
mithun-rai

ಮಂಗಳೂರು: ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗದ ಹಿನ್ನಲೆ : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಮಿಥುನ್ ರೈ ಅಮಾನತು ಬೆಂಗಳೂರು, ನ. 5 : ಪಕ್ಷದ ಚಟುವಟಿಕೆ ಹಾಗು ಸಂಘಟನೆಯಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರವೀಂದ್ರದಾಸ್ ಅವರು […]

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ

Saturday, October 6th, 2018
alwas-clg

ಮೂಡಬಿದ್ರೆ: ವಿದ್ಯಾರ್ಥಿಗಳು ಸತ್ಯ ಹಾಗೂ ನ್ಯಾಯದಿಂದ, ಸನ್ಮಾರ್ಗದಲ್ಲಿ ನಡೆದಾಗ ಭವಿಷ್ಯದಲ್ಲಿ ಯಶಸ್ಸು ಲಭ್ಯವಾಗುತ್ತದೆ ಎಂದು ಶತಾಯುಷಿ ಮಿಜಾರುಗುತ್ತು ಆನಂದ್ ಆಳ್ವ ಹೇಳಿದರು. ಇವರು ಆಳ್ವಾಸ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತುಳು ಸಂಘ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಜನಾಂಗವು ಕೇವಲ ಸಂಪತ್ತಿಗೆ ಕೇಂದ್ರಿಕೃತವಾಗಿದ್ದು, ಭಾಂದವ್ಯಗಳಿಂದ ವಂಚಿತರಾಗಿರುತ್ತಾರೆ. ಆದರೆ ತುಳುನಾಡ ಜನರು ಈ ದುಸ್ಥಿತಿಯನ್ನು ಎದುರಿಸದೇ ಕೂಡು ಕುಟುಂಬದ ಪ್ರೀತಿ ಭಾಂದವ್ಯದಲ್ಲಿ ಬೆಳೆದಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು. ತುಳು ಸಾಹಿತ್ಯ […]

ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಸಮುದಾಯ ಪ್ರಮುಖ ಪಾತ್ರವಹಿಸುತ್ತದೆ: ವಿಲಾಸ್ ನಾಯಕ್

Monday, October 1st, 2018
alwas-college

ಮೂಡಬಿದ್ರೆ: ಜೀವನದಲ್ಲಿ ಅಭಿವೃದ್ಧಿಯುತ ಚಿಂತನೆ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳುವುದರಿಂದ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಬಹುದು ಎಂದು ಹನುಮಾನ್ ಗ್ರೂಪ್ ಆಫ್ ಕನ್ಸರ್ನ್ಸ್ ಮತ್ತು ಸ್ಪಂದನಾ ಟಿ.ವಿಯ ಆಡಳಿತ ನಿರ್ದೇಶಕ ವಿಲಾಸ್ ನಾಯಕ್ ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಫಿಸಿಯೋಥರಪಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಮತ್ತು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಒರಿಯೆಂಟೇಶನ್ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಔಪಚಾರಿಕ ಶಿಕ್ಷಣ ಪದವಿಗಳನ್ನು ನೀಡುತ್ತದೆಯೇ ಹೊರತು ವ್ಯಕ್ತಿತ್ತ್ವವನ್ನಲ್ಲ. ಆದರೆ ಒಬ್ಬ ವ್ಯಕ್ತಿಯ […]

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ: ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಮೇಲೆ ತಲವಾರು ದಾಳಿ!

Monday, September 24th, 2018
prashanth

ಮಂಗಳೂರು: ಮೂಡಬಿದ್ರೆಯ ಸಂಘ ಪರಿವಾರದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ಇಮ್ತಿಯಾಝ್ (32) ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ. ಮೂಡಬಿದ್ರೆಯ ಗಂಟಾಲ್ ಕಟ್ಟೆಯಲ್ಲಿರುವ ಮಸೀದಿ ಕಟ್ಟಡವೊಂದರಲ್ಲಿ ಇಮ್ತಿಯಾಝ್ ಸಣ್ಣ ಹೋಟೆಲ್ ನಡೆಸುತ್ತಿದ್ದು, ತಲವಾರು ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ದುಷ್ಕರ್ಮಿಗಳ ತಂಡ ಹೋಟೆಲ್ಗೆ ಬಂದು ಇಮ್ತಿಯಾಝ್ ಬಳಿ ಚಹಾ ಕೇಳಿತ್ತು. ಚಹಾ ಮಾಡಲು ಇಮ್ತಿಯಾಝ್ ಒಳ ಹೋಗುತ್ತಿದ್ದಂತೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ. ತಲೆ , ಕೈ ಹಾಗೂ ಬೆನ್ನಿಗೆ ಗಾಯಗೊಂಡ […]

ಮೂಡಬಿದ್ರೆಯಲ್ಲಿ ಕಾಂಗ್ರೆಸ್, ಜೆಡಿಎಸ್ ವಿಜಯೋತ್ಸವ

Thursday, May 24th, 2018
moodbidre

ಮೂಡುಬಿದಿರೆ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಪಟಾಕಿ ಸಿಡಿಸಿ ಕುಮಾರಸ್ವಾಮಿ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಿಂದ ಬಸ್‌ನಿಲ್ದಾಣದ ವರೆಗೆ ಅಲ್ಲಲ್ಲಿ ಪಟಾಕಿ ಸಿಡಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರತ್ನಾಕರ ಮೊಯ್ಲಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು ಮತ್ತಿತರರು […]