ಚಾಮುಂಡಿ ಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಎಸ್‌.ಎಂ.ಕೃಷ್ಣ

Thursday, October 7th, 2021
Mysuru Dasara

ಮೈಸೂರು :  ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಮುಂಡಿ ಬೆಟ್ಟದಲ್ಲಿ ರಾಜಕೀಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಅವರು ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ವೈಭವವನ್ನು ಉದ್ಘಾಟಿಸಿದರು. ಗುರುವಾರ  (ಅ.7) ಬೆಳಗ್ಗೆ 7.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಸ್.ಎಂ. ಕೃಷ್ಣ ಅವರು 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ನಾಡದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ 411ನೇ ನಾಡಹಬ್ಬ ದಸರಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ , […]

ದಸರಾ ಉದ್ಘಾಟನೆಗೆ ಎಸ್. ಎಂ. ಕೃಷ್ಣ ಅವರಿಗೆ ಆಹ್ವಾನ

Tuesday, September 28th, 2021
SM Krishana

ಬೆಂಗಳೂರು  : ಈ ಬಾರಿ ಮೈಸೂರು ದಸರಾ ಉದ್ಘಾಟಕರನ್ನಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ದಸರಾ ದಿನದಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ದಸರಾ ಉದ್ಘಾಟನೆ ಮಾಡಲು ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರನ್ನು ಆಹ್ವಾನಿಸಲಾಗುವುದು. ಅವರು ಮುಖ್ಯಮಂತ್ರಿಯಾಗಿ ಹಾಗೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ನಾಡಿನ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು […]

ಸರಳ, ಸಾಂಪ್ರದಾಯಿಕ ದಸರಾ ಆಚರಣೆ: ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ

Saturday, September 4th, 2021
dasara

ಬೆಂಗಳೂರು :  ಕೋವಿಡ್ 19 ಹಿನ್ನೆಲೆಯಲ್ಲಿ ಈ ವರ್ಷವೂ ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2021 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು. ಮೈಸೂರು, ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ನಡೆಸಲು ಆರು ಕೋಟಿ ರೂ. ಅನುದಾನ ಬಿಡುಗಡೆ […]

ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ಐತಿಹಾಸಿಕ ಮೈಸೂರು ದಸರಾಗೆ ಚಾಲನೆ

Saturday, October 17th, 2020
Mysuru Dasara

ಮೈಸೂರು:   ಖ್ಯಾತ ಹೃದ್ರೋಗ ತಜ್ಞ ಡಾ.ಸಿಎನ್‌ ಮಂಜುನಾಥ್‌ರವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ವಿದ್ಯುಕ್ತವಾಗಿ ಐತಿಹಾಸಿಕ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ಬೆಳಿಗ್ಗೆ 7:4ರಿಂದ 8:15ರ  ಶುಭ ತುಲಾ ಲಗ್ನದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಯಿತು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಉದ್ಘಾಟಕರಿಗೆ ಜೊತೆಯಾದರು. ಈ ಬಾರಿ ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಈ ಸಮಯದಲ್ಲಿ ದಸರಾ ಕೂಡ […]

ಮೈಸೂರು ದಸರಾ : ಇಂದು ಸುಪ್ರಸಿದ್ದ ಜಂಬೂ ಸವಾರಿ

Tuesday, October 8th, 2019
jambu-savari

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಅಂತಿಮ ಹಂತಕ್ಕೆ ತಲುಪಿದೆ. ವಿಜಯ ದಶಮಿಯ ದಿನವಾದ ಇಂದು ಸುಪ್ರಸಿದ್ದ ಜಂಬೂ ಸವಾರಿ ನಡೆಯಲಿದ್ದು, ಅರ್ಜುನನ ಮೇಲೆರಿ ಬರುವ ಚಾಮುಂಡೇಶ್ವರಿಯ ಕಾಣಲು ಲಕ್ಷಾಂತರ ಜನ ಕಾತರದಿಂದ್ದಾರೆ. ಇಂದು ಮಧ್ಯಾಹ್ನ 2.15ರಿಂದ 2.58ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆಯ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಸಂಜೆ 4.31 ರಿಂದ 4.57ರೊಳಗೆ ಸಲುವ ಶುಭ ಕುಂಭ ಲಗ್ನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಮುಂಡೇಶ್ವರಿ […]

ಮೈಸೂರು ದಸರಾ ಉದ್ಘಾಟನೆಗೆ ಸಿದ್ಧತೆ ಪೂರ್ಣ : ಸಂಸದ ಪ್ರತಾಪ್​​ ಸಿಂಹ

Saturday, September 28th, 2019
prathap-sinmha

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಸಿದ್ಧತೆಗಳು ಸಂಪೂರ್ಣವಾಗಿವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9:39ಕ್ಕೆ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಸಿಎಂ ಯಡಿಯೂರಪ್ಪ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ದಸರಾ ಉದ್ಘಾಟನೆ ಮಾಡಲಿದ್ದು, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆ ಅಂತಿಮ ಹಂತದಲ್ಲಿದೆ. ಸ್ವಚ್ಛ ವಾತಾವರಣದಲ್ಲಿ ನಾಳೆ ದಸರಾ ಉದ್ಘಾಟನೆ ಆಗಲಿದ್ದು, ಈ ಬಾರಿ ಯುವ ದಸರಾವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಉದ್ಘಾಟಿಸಲಿದ್ದಾರೆ. ಜೊತೆಗೆ ರಾನು […]

ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ.

Monday, October 2nd, 2017
mysurudasara

ಮೈಸೂರು : ಮಧ್ಯಾಹ್ನ 2.16ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆಯ ಮುಂಭಾಗದ ಸಭಾಂಗಣಕ್ಕೆ ತೆರೆದ ಜೀಪಿನಲ್ಲಿ ಬಂದು ಮೊಮ್ಮಕ್ಕಳ ಜೊತೆ ಸುಮಾರು ಎರಡೂವರೆ ತಾಸು ಆ ಸೊಬಗು ವೀಕ್ಷಿಸಿದರು. ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮ್ಮದ್‌, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ರಮಾನಾಥ ರೈ, ಎಚ್‌.ಆಂಜನೇಯ, ಪ್ರಿಯಾಂಕ್‌ ಖರ್ಗೆ, ಎಂ.ಸಿ.ಮೋಹನಕುಮಾರಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೇಯರ್‌ […]

ಕಾಡಿನಿಂದ ನಾಡಿಗೆ ಬಂದ 6 ಆನೆಗಳ ಬಲ ಪರೀಕ್ಷೆ

Sunday, August 31st, 2014
6 Dasara Elephants arrived to Mysore city

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿರುವ 6 ಆನೆಗಳ ಬಲ ಪರೀಕ್ಷೆಯನ್ನು ಭಾನುವಾರ ಮಾಡಲಾಯಿತು. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ವೇಬ್ರಿಡ್ಜ್‌ನಲ್ಲಿ ಆನೆಗಳನ್ನು ನಿಲ್ಲಿಸಿ ತೂಕ ಮಾಡಲಾಯಿತು. ಈ ಬಲ ಪರೀಕ್ಷೆಯಲ್ಲಿ ಅಂಬಾರಿ ಆನೆ ಅರ್ಜುನ 5470 ಕೆ.ಜಿ ಹೊಂದಿದ್ದು, ಮೊದಲ ತಂಡದಲ್ಲಿ ಬಂದಿರವ ಆನೆಗಳ ಪೈಕಿ ಅರ್ಜುನನೇ ಬಲಶಾಲಿಯಾಗಿದ್ದಾನೆ. ಗಜೇಂದ್ರ 5020 ಕೆ.ಜಿ ತೂಕದೊಂದಿಗೆ 2ನೇ ಸ್ಥಾನ, ಮಾಜಿ ಅಂಬಾರಿ ಆನೆ ಬಲರಾಮ 4970 ಕೆ.ಜಿ ತೂಕದೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ […]

ಮೈಸೂರು ದಸರಾ ಜಂಬೂ ಸವಾರಿ

Thursday, October 6th, 2011
Mysore-Dasara

ಮೈಸೂರು : ವೈಭವಯುತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಬಲರಾಮ ಆನೆಗಳಾದ ಸರಳ ಹಾಗೂ ಮೇರಿ ಮತ್ತು ಅಶ್ವಪಡೆಯೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಪುಷ್ಪಲತಾ ಚಿಕ್ಕಣ್ಣರವರಿಗೆ ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವಸಲ್ಲಿಸಿದವು. ಈ ಸಂದರ್ಭ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ […]

ಮೈಸೂರು ದಸರಾಕ್ಕೆ ಆನೆಕಾಡಿನಿಂದ ಹೋರಾಟ ಆನೆಗಳು.

Wednesday, September 14th, 2011
Elephents Starts Travels to Mysore Dasara

ಮಡಿಕೇರಿ : ಇಲ್ಲಿನ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ನಾಲ್ಕು ಆನೆಗಳಾದ ವಿಕ್ರಮ್‌, ಹರ್ಷ ಗೋಪಿ, ಕಾವೇರಿ ಆನೆಗಳು ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 2ನೇ ಹಂತದ ಪ್ರಯಾಣ ಬೆಳೆಸಿದೆ. ದುಬಾರೆಯ ಆನೆಕಾಡಿನ ಈ ಸಾಕಾನೆಗಳನ್ನು ಬುಧವಾರ ಬೆಳಗ್ಗೆ ಶಿಬಿರದಲ್ಲಿ ನಡೆದ ವಿಶೇಷ ಪೂಜೆಗೆ ತೊಳೆದು – ಸ್ನಾನ ಮಾಡಿಸಿ, ಹಣೆ ಹಾಗೂ ಕಾಲುಗಳಿಗೆ ಹರಳೆಣ್ಣೆ ಲೇಪನ ಮಾಡಿ ಆನೆಗಳ ಮುಖ ಹಾಗೂ ದೇಹಗಳ ಮೇಲೆ ಚಿತ್ತಾರದ ಚಿತ್ರಗಳನ್ನು ಬಿಡಿಸಿ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಬೀಳ್ಕೊಡಲಾಯಿತು. ವಿಕ್ರಮ್‌ ಆನೆಯ […]