ಕೇಸರಿ ಬಟ್ಟೆ ಬಗ್ಗೆ ಟೀಕಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ

Tuesday, December 31st, 2019
yogi-adhithyanath

ಲಕ್ನೋ : ಕೇಸರಿ ಬಟ್ಟೆ ಯೋಗಿ ಆದಿತ್ಯನಾಥ್ ಅವರ ಸ್ವತ್ತಲ್ಲ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ‘ನಾನು ಎಲ್ಲವನ್ನೂ ತ್ಯಾಗ ಮಾಡಿಯೇ ಸಾರ್ವಜನಿಕ ಸೇವೆಗೆ ಬಂದವನು’ ಎಂದು ಹೇಳಿದ್ದಾರೆ. ಸಿಎಎ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಲಕ್ನೋ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವಾಗ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದರು. ಸಿಎಂ ಯೋಗಿ […]

ರಾಮ ರಾಜ್ಯ ನಿರ್ಮಾಣಕ್ಕಾಗಿ ಬಿಜೆಪಿ ಗೆಲ್ಲಿಸಿ: ಯೋಗಿ ಆದಿತ್ಯನಾಥ್‌

Thursday, May 10th, 2018
yogi-adithyanath

ಸುಳ್ಯ: ಸುಳ್ಯ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಸಂಜೆ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಬೃಹತ್‌ ಚುನಾವಣಾ ಪ್ರಚಾರ ಸಭೆ ನಡೆಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತನಾಡಿ, ಕರ್ನಾಟಕದಲ್ಲಿ ಗೂಂಡಾಗಿರಿ, ಗೋಹತ್ಯೆ, ಅಸುರಕ್ಷತೆ, ಜೆಹಾದಿ ಕೃತ್ಯಗಳನ್ನು ಮಟ್ಟ ಹಾಕಿ ಆದರ್ಶದ ಆಳ್ವಿಕೆಯ ಪ್ರತೀಕವಾಗಿರುವ ರಾಮರಾಜ್ಯ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದ ಅವರು, ಧರ್ಮ, ಜಾತಿ ವಿಘಟನೆಯ ಮೂಲಕ ಸಮಾಜವನ್ನು ಒಡೆಯುವ ಕಾಂಗ್ರೆಸ್‌ ಸರಕಾರವನ್ನು ಕಿತ್ತೂಗೆಯುವಂತೆ ಅವರು ಮನವಿ ಮಾಡಿದರು. ದ.ಕ. ಜಿಲ್ಲಾ […]

‘ಕಾಂಗ್ರೆಸ್ ಅಧಿಕಾರಕ್ಕೇರಿದರೆ ರಾಜ್ಯದಲ್ಲಿ ಜಿಹಾದಿ, ಗೂಂಡಾ ಕೇಂದ್ರ’: ಯೋಗಿ ಆದಿತ್ಯನಾಥ್

Wednesday, May 9th, 2018
yogi-2

ಮಂಗಳೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಮತ್ತೆ ಜಿಹಾದಿ, ಗೂಂಡಾ ಹಾಗೂ ಮಾಫಿಯಾಗಳ ಕೇಂದ್ರವನ್ನಾಗಿ ಮಾಡಲಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಮಂಗಳವಾರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.”ಸಿದ್ಧರಾಮಯ್ಯರಿಗೆ ನಾನು ರಾಜ್ಯಕ್ಕೆ ಬರುವುದು ಇಷ್ಟವಿಲ್ಲ. ನನ್ನ ಪ್ರಚಾರ ಕಾರ್ಯವನ್ನು ವಿರೋಧಿಸುತ್ತಾರೆ. ಸಿದ್ಧರಾಮಯ್ಯ ಜಾತಿ-ಜಾತಿಗಳನ್ನು […]

ನಾನೇ ನಿಜವಾದ ಹಿಂದೂ, ಶಾ ಅಲ್ಲ: ಸಿಎಂ

Saturday, April 21st, 2018
siddaramaih-files

ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಿಂದೂವಲ್ಲ. ನಾನೇ ನಿಜವಾದ ಹಿಂದೂ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಪ್ರತಿ ಪಾದಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು,ಅಮಿತ್‌ ಶಾ ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ ಅಹಿಂದು ಅಂತಾರೆ, ಆದರೆ ಅಮಿತ್‌ ಶಾ ಹಿಂದೂವೇ ಅಲ್ಲ. ಅವರು ಜೈನರು.ಅವರು ಹಿಂದೂ ವೈಷ್ಣವ ಅನ್ನುವುದೆಲ್ಲ ಸುಳ್ಳು. ಬೇಕಿದ್ದರೆ ದಾಖಲೆ ತೆಗಿಸಿ ನೋಡಿ. ಇವರೆಲ್ಲರಿಗಿಂತ ನಾನು ಬೆಟರ್‌ ಹಿಂದೂ. ನನಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳಲ್ಲಿ ನಂಬಿಕೆ […]

ಯೋಗಿ ವಿರುದ್ಧ ಹೇಳಿಕೆ ಖಂಡಿಸಿ ಗುಂಡೂರಾವ್‌ಗೆ ಚಪ್ಪಲಿ ಪಾರ್ಸೆಲ್‌ ಮಾಡಿದ ಬಿಜೆಪಿ!

Monday, April 16th, 2018
yogi-adithyanath

ಮಂಗಳೂರು: ಯೋಗಿ ಆದಿತ್ಯನಾಥ್ ವಿರುದ್ಧ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಹಳೆ ಚಪ್ಪಲಿಗಳನ್ನು ಕೋರಿಯರ್ ಮೂಲಕ ಪಾರ್ಸೆಲ್ ಮಾಡಿದ್ದಾರೆ. ದಿನೇಶ್ ಗುಂಡೂರಾವ್‌ಗೆ ಚಪ್ಪಲಿ‌ ಪಾರ್ಸೆಲ್ ಮಾಡಿದ ಬಿಜೆಪಿ ಯುವ ಮೋರ್ಚಾ ವಿನೂತನವಾಗಿ ಪ್ರತಿಭಟನೆ ನಡೆಸಿತು. ದ.ಕ. ಜಿಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ದಿನೇಶ್ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕನ ವಿರುದ್ಧ ದೂರು ನೀಡಲು ಹೋದ್ರೆ ಸಿಎಂ ಯೋಗಿ ದೂರ ತಳ್ಳಿದರು: ವ್ಯಕ್ತಿಯ ಆರೋಪ

Wednesday, April 4th, 2018
yogi-adithyanath

ಗೋರಖ್‌‌ಪುರ್‌: ಶಾಸಕರೊಬ್ಬರ ವಿರುದ್ಧ ದೂರು ಕೊಡಲು ಹೋದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌‌ ನನ್ನನ್ನು ದೂರ ತಳ್ಳಿದ್ದಾರೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ. ಆಯೂಶ್‌ ಸಿಂಘಾಲ್‌ ಎಂಬಾತ ಇಂತಹ ಆರೋಪ ಮಾಡಿದ್ದು, ಗೋರಖ್‌‌ಪುರ್‌ನಲ್ಲಿ ನಡೆಯುತ್ತಿದ್ದ ‘ಜನತಾ ದರ್ಬಾರ್‌’ನಲ್ಲಿ ಸಿಎಂ ಯೋಗಿ ಆದಿತ್ಯನಾಥ್‌‌ ಅವರು ನನ್ನ ದೂರ ನೂಕಿದರು ಎಂದು ಸಿಂಘಾಲ್‌ ಹೇಳಿದ್ದಾರೆ. ಶಾಸಕ ಅಮನ್‌ಮಣಿ ತ್ರಿಪಾಠಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಈ ಸಂಬಂಧ ಯೋಗಿ ಸಿಎಂ ಆದಿತ್ಯನಾಥ್‌‌ ಅವರ ಮೊರೆ ಹೋಗಿ, ನಾನು ದಾಖಲೆ ಪತ್ರಗಳನ್ನು ಕೊಟ್ಟು […]

ಚುನಾವಣೆ ಕಣಕ್ಕೆ ಧುಮುಕುವುದಾಗಿ ಘೋಷಣೆ ಮಾಡಿದ ಮಠಾಧೀಶರು!

Saturday, March 10th, 2018
election

ಉಡುಪಿ: ರಾಜ್ಯದಲ್ಲಿ ಚುನಾವಣೆ ಕಾವು ಏರಿರುವಾಗಲೇ ಮಠಾಧೀಶರು ಕೂಡ ಚುನಾವಣಾ ಕಣಕ್ಕೆ ಧುಮುಕಲು ಮುಂದಾಗಿದ್ದಾರೆ. ಹೌದು, ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಅವಕಾಶ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಇಳಿಯುತ್ತೇನೆ ಎಂದು ಸ್ವಾಮೀಜಿ ಘೋಷಿಸಿದ್ದಾರೆ. ಜನಪ್ರತಿನಿಧಿಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡಲು ನಿರ್ಧರಿಸಿದ್ದೇನೆ. ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದೇನಿಲ್ಲ. ಯೋಗಿ ಆದಿತ್ಯನಾಥ್ ನನ್ನ ರೋಲ್ ಮಾಡೆಲ್ ಇದ್ದ […]

ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸಬೇಕು: ಯೋಗಿ ಆದಿತ್ಯನಾಥ್‌

Wednesday, March 7th, 2018
karnataka

ಮಂಗಳೂರು: ಪೂರ್ವ, ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಕಾಂಗ್ರೆಸ್‌ ಪಕ್ಷ ಧೂಳೀಪಟಗೊಂಡಿದೆ. ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸಬೇಕು ಎಂದು ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು. ನಗರದ ಕೇಂದ್ರ ಮೈದಾನದಲ್ಲಿ ಮಂಗಳವಾರ ಜರಗಿದ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕರ್ನಾಟಕದಲ್ಲಿ ಅಭದ್ರತೆ, ಅರಾಜ ಕತೆಯ ವಾತಾವರಣ ನೆಲೆಸಿದೆ. ಅಭಿವೃದ್ಧಿ ಸ್ಥಗಿತ ಗೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಸರಕಾರದ ಕೃಪಾಶೀರ್ವಾದದೊಂದಿಗೆ […]

ನಾವು ನಿಜವಾದ ರಾಮ ಭಕ್ತರು: ರಮಾನಾಥ ರೈ

Wednesday, March 7th, 2018
ramanath-rai

ಮಂಗಳೂರು: ಸುರಕ್ಷಾ ಯಾತ್ರೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಜನ ದಡ್ಡರೆಂದು ತಿಳಿದಿದ್ದಾರೆ. ಆದ್ರೆ ಈ ರಾಜ್ಯದ ಸಾಮರಸ್ಯ ಶಕ್ತಿಯೇ ಜನರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಅನ್ನುತ್ತಾರೆ. ನಾವು ಈ ರಾಜ್ಯದಲ್ಲಿ ಹಸಿವು ಮುಕ್ತ, ಋಣಮುಕ್ತ ಕಾರ್ಯಕ್ರಮ ಮಾಡಿದ್ದೇವೆ ಎಂದು ಸಚಿವರು ಹೇಳಿದರು. ಜಿಲ್ಲೆಯ ಯಾರಿಂದ ಸಾಮರಸ್ಯಕ್ಕೆ ತೊಡಕು ಎಂಬುದಕ್ಕೆ‌ ಅಂಗೈ ಹುಣ್ಣಿಗೆ‌ ಕನ್ನಡಿ ಬೇಕಿಲ್ಲ. ಜನಸುರಕ್ಷಾ ಯಾತ್ರೆ ಮಾಡಲು ಯಾವ ನೈತಿಕತೆ ಇದೆ. ಮಾನ-ಮರ್ಯಾದೆ […]

ನಾನು ಹಿಂದೂ ಭಕ್ತ… ಈದ್‌‌ ಯಾಕೆ ಆಚರಿಸಬೇಕು?: ಯೋಗಿ ಆದಿತ್ಯನಾಥ್‌

Wednesday, March 7th, 2018
uttar-pradesh

ಲಕ್ನೋ: ನಾನು ಒಬ್ಬ ಹಿಂದೂ ಭಕ್ತ… ನಮ್ಮ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದ್ದು, ನಾನು ಈದ್‌ ಹಬ್ಬ ಯಾಕೆ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್‌, “ನಾನು ಹಿಂದೂ ಧರ್ಮದವನಾಗಿದ್ದು, ಹೀಗಾಗಿ ಈದ್‌ ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ… ಇಷ್ಟಕ್ಕೂ ನಾನು ಏಕೆ ಈದ್ ಆಚರಿಸಬೇಕು? ಎಂದಿದ್ದಾರೆ. ಇದೇ ವೇಳೆ ಅವರು […]