ಜ.5 ರಂದು ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ, ಉಚಿತ ವೈದ್ಯಕೀಯ, ರಕ್ತದಾನ ಶಿಬಿರ

Friday, January 3rd, 2020
Blood-donate

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ದ.ಕ. ಜಿ.ಪಂ., ತಾ.ಪಂ. ಮತ್ತು ಮಡಪ್ಪಾಡಿ ಗ್ರಾ.ಪಂ. ಸಹಭಾಗಿತ್ವದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಜ.5 ರಂದು ಸುಳ್ಯದ ಮಡಪ್ಪಾಡಿ ಸರಕಾರಿ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಎ.ಜೆ.ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯಮತ್ತು ದಂತ ಚಿಕಿತ್ಸಾ ಶಿಬಿರ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದಿಂದ ರಕ್ತ ಗುಂಪು ವರ್ಗಿಕರಣ […]

ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ : ರಕ್ತದಾನ ಮಾಡಿ ಜೀವ ಉಳಿಸಲು ಶಾಸಕ ಅಪ್ಪಚ್ಚು ರಂಜನ್ ಕರೆ

Wednesday, November 13th, 2019
Raktha-daana

ಮಡಿಕೇರಿ : ಯುವಜನರು ಪೌಷ್ಟಿಕ ಆಹಾರ ಸೇವಿಸಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ. ಇದರಿಂದ ಬೇರೆಯವರ ಪ್ರಾಣ ಉಳಿಸುವುದಲ್ಲದೆ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರಕ್ತ ನಿದಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಕೊಡವ ಸಮಾಜ ಪೊಮ್ಮಕಡ ಒಕ್ಕೂಟ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ, ಕೊಡಗು ಸರ್ಕಾರಿ ಐ.ಟಿ.ಐ ಕಾಲೇಜು, ಕಿರಿಯ […]

ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ: ರಾಜಶೇಖರ ಹೆಬ್ಬಾರ್‌

Tuesday, December 26th, 2017
blood-donation

ಮಂಗಳೂರು: ಡಾ ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿಯ ಯುವ ರೆಡ್‌ಕ್ರಾಸ್‌ ಮತ್ತು ರೋವರ್- ರೇಂಜರ್ ವತಿಯಿಂದ ಬೆಂದೂರ್‌ವೆಲ್‌ನ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ 197ನೇ ರಕ್ತದಾನ ಶಿಬಿರವು ಜರಗಿತು. ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ ಅವರು ಅಧ್ಯಕ್ಷತೆ ವಹಿಸಿದ್ದರು. ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂದರು. ಲಯನ್ಸ್‌ ಕ್ಲಬ್‌ನ ಉಪ ಗವರ್ನರ್‌ ಕೆ. ದೇವದಾಸ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ನಾಗೇಶ್‌ ಕುಮಾರ್‌ಎನ್‌.ಜೆ., ಕಾರ್ಯದರ್ಶಿ ದೇರಣ್ಣ, […]

ವಿಟ್ಲದಲ್ಲಿ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ

Wednesday, December 20th, 2017
blood-donation

ವಿಟ್ಲ: ‘ಡಿ ಗ್ರೂಪ್ ವಿಟ್ಲ’ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಡಿ. 23ರಂದು ಬೆಳಗ್ಗೆ 9ರಿಂದ ವಿಟ್ಲದ ವಿಎಚ್ ಕಟ್ಟಡದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದ ಜೊತೆ ಸನ್ಮಾನ ಕಾರ್ಯಕ್ರಮವೂ ಜರುಗಲಿದೆ. ರಕ್ತದಾನ ಮಾಡಿದ ಎಲ್ಲ ರಕ್ತದಾನಿಗಳಿಗೂ ಶಿಬಿರಾರ್ಥ ಪತ್ರ ದೊರಕಲಿದೆ ಎಂದು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಡಿ ಗ್ರೂಪ್ ವಿಟ್ಲ ಇದರ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ಸಹಕಾರ ಮನೋಭಾವದಿಂದ ನೆಮ್ಮದಿ’

Wednesday, November 22nd, 2017
Karavalli-College

ಮಂಗಳೂರು:ವಿದ್ಯಾರ್ಥಿಗಳು ತಮ್ಮ ಪದವಿಯೊಂದಿಗೆ ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಬೇಕು.ಸಮಾಜದಲ್ಲಿ ಎಲ್ಲರೊಂದಿಗೂ ಪರಸ್ಪರ ಬೆರೆಯುವ ಸಹಕಾರ ಮನೋಭಾವ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆಯೇ ಹೊರತು ಪದವಿ ಮತ್ತು ಅಧಿಕಾರಗಳಲ್ಲ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್‌.ಎಜುಕೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಹೇಳಿದರು. ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಅಂಗವಾಗಿ ಫಾದರ್‌ ಮುಲ್ಲರ್‌ ಆಸ್ಪತ್ರೆ ರಕ್ತನಿಧಿ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನವು ದೇವರು […]

ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ: ಬಸವರಾಜ ರಾಯರೆಡ್ಡಿ

Wednesday, September 21st, 2016
basavaraja-raya-reddy

ಉಳ್ಳಾಲ: ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ, ಯೇನಪೊಯ ಫಿಸಿಯೋಥೆರಪಿ ಕಾಲೇಜು ಹಾಗೂ ಸೌತ್‌ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಸೋಮವಾರ ಯೇನಪೊಯ ಸಭಾಂಗಣದಲ್ಲಿ ನಡೆಯಿತು. ಶಿಬಿರ ಉದ್ಘಾಟಿಸಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ. ಅಪಘಾತ ಹಾಗೂ ರೋಗಗಳ ಕಾರಣದಿಂದ ರಕ್ತಕ್ಕೆ ಬಹಳ ಬೇಡಿಕೆ ಇದೆ. ರಕ್ತದಾನ ಒಂದು ಪವಿತ್ರ ಕಾರ್ಯವಾಗಿರುವುದರಿಂದ ರಕ್ತದಾನ ಶಿಬಿರಗಳ ಅಗತ್ಯತೆ ಬಹಳ […]

ಭಾಷಾಂತರ ಕಾರ್ಯ ಸುಲಭ ಸಾಧ್ಯವಲ್ಲ : ಯು.ಎಸ್.ಶೆಣೈ

Saturday, January 9th, 2016
kasargod-chinna

ಕಾಸರಗೋಡು: ಆಧುನಿಕ ಸಂದರ್ಭದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಾಹಿತ್ಯ ಕೃತಿಗಳು ಭಾಷಾಂತರಗೊಳ್ಳಬೇಕಾದ ಅಗತ್ಯವಿದೆ.ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ಭಾಷಾಂತರಗೊಂಡಾಗ ಬಹಳಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಮೂಲಭಾಷೆಯ ಸೊಗಡಿಗೆ ಧಕ್ಕೆ ಬಾರದಂತೆ, ಮೂಲಕೃತಿಯ ಆಶಯಕ್ಕೆ ಚ್ಯುತಿ ಬಾರದಂತೆ ಮುತುವರ್ಜಿವಹಿಸಬೇಕಾಗುತ್ತದೆ. ಈ ಬಗ್ಗೆ ಭಾಷಾಂತರಕಾರ ಎಚ್ಚರದಿಂದ ಭಾಷಾಂತರಿಸಬೇಕಾಗುತ್ತದೆ ಎಂದು ಖ್ಯಾತ ಸಂಘಟಕ, ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಂದಾಪುರದ ತೇಜಸ್ ಡೆವಲಪರ‍್ಸ್‌ನ ಆಶ್ರಯದಲ್ಲಿ ಹೊಟೇಲ್ ಶರೂನ್‌ನಲ್ಲಿ ಖ್ಯಾತ ನಿರ್ದೇಶಕ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ […]