Blog Archive

ಮಂಗಳೂರು ರಥಬೀದಿಯಲ್ಲಿ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಬಲಿ

Friday, June 7th, 2013
Auto Driver Died

ಮಂಗಳೂರು : ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಬಳಿ ರಿಕ್ಷಾ  ಚಾಲಕರೊಬ್ಬರು ದಾರಿ ಮಧ್ಯದಲ್ಲಿ ರಿಕ್ಷಾವನ್ನು ನಿಲ್ಲಿಸಿ  ಹೃದಯಾಘಾತದಿಂದ  ಸ್ಥಳದಲ್ಲೇ  ಬಿದ್ದು  ಮೃತಪಟ್ಟ ಘಟನೆ  ಇಂದು ನಡೆದಿದೆ. ಆಟೊ ರಿಕ್ಷಾದ ಚಾಲಕ ಸುರೇಶ್(43) ಮೃತಪಟ್ಟವರಾಗಿದ್ದು  ಅವರು ಮಂಗಳಾದೇವಿ ಬೋಳಾರದ ನಿವಾಸಿಯಾಗಿದ್ದಾರೆ.  ನಗರದ ವಿಶ್ವಭವನದ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಕೆ.ಎ.19ಸಿ 2373 ನೋಂದಣಿ ಸಂಖ್ಯೆಯ ಆಟೋವನ್ನು ಪಾರ್ಕ್ ಮಾಡುತ್ತಿದ್ದರು. ಇಂದು ರಥಬೀದಿಗೆ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಸಂದರ್ಭದಲ್ಲಿ  ತೀವ್ರ ತೆರನಾದ ಎದೆನೋವು ಕಾಣಿಸಿಕೊಂಡು ದಾರಿಮಧ್ಯೆಯೇ ರಿಕ್ಷಾವನ್ನು […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿಸಂಭ್ರಮದ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಮಾಪನ

Thursday, December 1st, 2011
subrahmanya champasashti

ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಸಂಭ್ರಮದಿಂದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನಡೆಯಿತು. ಬೆಳಗ್ಗೆ ಬ್ರಹ್ಮರಥದಲ್ಲಿರಿಸಲಾದ ಉತ್ಸವಮೂರ್ತಿಗೆ ದೇವಳದ ಪ್ರಧಾನ ಅರ್ಚಕ ವೆ|ಮೂ| ಬಿ. ಕೇಶವ ಜೋಗಿತ್ತಾಯ ಮತ್ತು ರಾಜೇಶ್‌ ಭಟ್‌ ಆರತಿ ಬೆಳಗಿದರು. ಸಾಲಂಕೃತ ಪಾಲಕಿಯಲ್ಲಿ ಸುಬ್ರಹ್ಮಣ್ಯ ದೇವರು ಹಾಗೂ ಉಮಾಮಹೇಶ್ವರ ದೇವರ ಉತ್ಸವಮೂರ್ತಿಯನ್ನು ಇರಿಸಿ ದೇವಳದ ಹೊರಾಂಗಣದಲ್ಲಿ ಪ್ರದಕ್ಷಿಣೆ ಬಂದು ಬಳಿಕ ಉಮಾಮಹೇಶ್ವರ ದೇವರನ್ನು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥದಲ್ಲಿರಿಸಲಾಯಿತು. ಆರತಿ ಬೆಳಗಿದ ಅನಂತರ ರಥದ ಮೇಲಿಂದ […]

ರಥಬೀದಿಯಲ್ಲಿ ರಾಮ ಮೂರ್ತಿಯ ಚಿನ್ನದ ಸರ ಕದ್ದ ಕಳ್ಳರು

Tuesday, October 4th, 2011
Rama-Mandira

ಮಂಗಳೂರು: ಮಂಗಳೂರು ರಥಬೀದಿಯ ಟೆಂಪಲ್‌ ಸ್ಕೇರ್ ನಲ್ಲಿರುವ ಶ್ರೀರಾಮ ಮಂದಿರ ದ ಕಿಟಿಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ರಾಮ ಮೂರ್ತಿಯ ಮೇಲಿದ್ದ ಒಂದುವರೆ ಪವನು ತೂಕದ ಬಂಗಾರದ ಸರವನ್ನು ಅಪಹರಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಚಿನ್ನದ ಸರದ ಬೆಲೆ ಸುಮಾರು 24,500 ರೂ ಎಂದು ಅಂದಾಜಿಸಲಾಗಿದೆ. ಸೋಮವಾರ ಬೆಳಗ್ಗೆ ಮಂದಿರದ ಬಾಗಿಲನ್ನು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂತು. ಮೆನೇಜರ್ ಮಂಗಲ್‌ದಾಸ್‌ ಗುಲ್ವಾಡಿ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಬಂದರು ಪೊಲೀಸರು ಕೇಸು […]

ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

Monday, August 29th, 2011
Yogish-Bhat/ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

ಮಂಗಳೂರು : ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌.ಯೋಗೀಶ್‌ ಭಟ್‌ ಅವರನ್ನು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಸೇವಾಂಜಲಿ ವರ್ಷದ ವ್ಯಕ್ತಿ -2011 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮಂಗಳೂರು ನಗರದ ಅಭಿವೃದ್ದಿಗೆ 150ಕೋ.ರೂ.ಅನುದಾನವನ್ನು ಒದಗಿಸು ವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದೂವರೆ ವರ್ಷದ ಕಾಲದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ.ಈ ಅವಧಿಯಲ್ಲಿ […]