ಸಿಎಎ ವಿರೋಧಿ ಹೋರಾಟ ದೇಶದ ಸ್ವತಂತ್ರ್ಯ ಕಾಲದ ಚಳುವಳಿಗಳು ನೆನಪಾಗುತ್ತಿವೆ : ಮಾಜಿ ಸ್ಪೀಕರ್ ರಮೇಶ್ ಕುಮಾರ್

Friday, January 31st, 2020
ramesh-kumar

ಉಡುಪಿ : ಪ್ರಸ್ತುತ ದೇಶದಲ್ಲಿ ಎಲ್ಲಿ ನೋಡಿದರೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ಕಾಲದಲ್ಲಿ ಇದನ್ನು ನೋಡುವ ಸೌಭಾಗ್ಯ ನಮಗೆ ಸಿಕ್ಕಿರಲಿಲ್ಲ. ಆದರೆ, ಈಗ ಮೋದಿಯಿಂದಾಗಿ ಸಾಯೋ ಕಾಲಕ್ಕೆ ನಮಗೆ ಇಂತಹ ಅವಕಾಶ ಸಿಕ್ಕಿದೆ. ಇದನ್ನು ನೋಡಿದರೆ ದೇಶದ ಸ್ವತಂತ್ರ್ಯ ಕಾಲದ ಚಳುವಳಿಗಳು ನೆನಪಾಗುತ್ತಿವೆ ಇದಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿನಂದಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, “ನಮಗೆ ಕೇಸರಿ ಬಟ್ಟೆ ಕೇಸರಿ ಧ್ವಜ ನೋಡಿ ನೋಡಿ […]

ಅನರ್ಹರ ಆರೋಗ್ಯ ಸರಿಯಿಲ್ಲ, ವೈದ್ಯರ ಬಳಿ ತೋರಿಸೋದು ಒಳ್ಳೆದು : ಅನರ್ಹರಿಗೆ ಟಾಂಗ್ ಕೊಟ್ಟ ರಮೇಶ್ ಕುಮಾರ್

Wednesday, November 27th, 2019
Ramesh-Kumar

ಬೆಳಗಾವಿ : ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ. ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ. ನಾನು […]

2ನೇ ಬಾರಿಗೆ ಸ್ಪೀಕರ್‌ ಸ್ಥಾನ ಅಲಂಕರಿಸಿದ ರಮೇಶ್‌ ಕುಮಾರ್‌

Friday, May 25th, 2018
ramesh-kumar

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ ಕೆ.ಆರ್.ರಮೇಶ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆ ಕಲಾಪ ಮಧ್ಯಾಹ್ನ 12.20ರ ಸುಮಾರಿಗೆ ಆರಂಭವಾಗುತ್ತಿದ್ದಂತೆಯೇ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ […]

ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು: ರಮೇಶ್ ಕುಮಾರ್

Saturday, December 10th, 2016
D C office

ಮಂಗಳೂರು: ಕೇಂದ್ರ ಸರ್ಕಾರ ನೋಟ್‌ ಬ್ಯಾನ್ ಮಾಡಿದ ಬಳಿಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್‌ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಬಗ್ಗೆ ರಾಜ್ಯದೆಲ್ಲೆಡೆ ದೂರುಗಳು ಬಂದಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ಸಜ್ಜಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಿ ಧೋರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಪಿಎಂಡಿಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ […]

ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ: ರಮೇಶ್ ಕುಮಾರ್

Saturday, December 10th, 2016
Wenlock Hospital

ಮಂಗಳೂರು: ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ. ಕೊಡುವುದು ಇಲ್ಲವಾದರೆ ಪಡೆಯುವುದು ಅಸಾಧ್ಯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ವೈದ್ಯರು, ದಾದಿಗಳ ಅಸಡ್ಡೆ, ಅಪ್ರಾಮಾಣಿಕತೆಯ ಸೇವೆಯಿಂದ ಜೀವ ಹೋದರೆ ಕೊಲೆಗಡುಕರಾಗುತ್ತಾರೆ. ರೋಗಿಗಳ ಜೀವ ನಿಮ್ಮ ಕೈಯಲ್ಲಿದೆ. ರೋಗಿಯ ಕುಟುಂಬ ನಿಮ್ಮ ಮೇಲೆ ನಂಬಿಕೆಯಿಟ್ಟಿರುತ್ತದೆ. ಶಕ್ತಿ ಮೀರಿ ಪ್ರಾಣ ಉಳಿಸುವ ಕಾರ್ಯ ನಿಮ್ಮದು. […]

ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆ

Tuesday, February 25th, 2014
S.R.Hiremath

ಬೆಂಗಳೂರು: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಹಿರೇಮಠ ಅವರು ಪ್ರಚಾರಕ್ಕಾಗಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ರಮೇಶ್ ಕುಮಾರ್, ಈ ಸಂಬಂಧ ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಕೋರ್ಟ್ ರಮೇಶ್ ಕುಮಾರ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು, ನಾಳೆ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಮೂಲಕ ಹಿರೇಮಠ ಹಾಗೂ ರಮೇಶ್ […]

ಉದ್ಯಮಿ ರಮೇಶ್ ಕುಮಾರ್ ದಂಪತಿಗಳಿಂದ ಕುದ್ರೋಳಿ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

Wednesday, March 2nd, 2011
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

ಮಂಗಳೂರು : ಉದ್ಯಮಿ ರಮೇಶ್ ಕುಮಾರ್ ಮತ್ತು ಉರ್ಮಿಳ ರಮೇಶ್ ದಂಪತಿಗಳು ಇಂದು ಮಧ್ಯಾನ್ಹ 12.42 ರ ವೃಷಭ ಲಗ್ನದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಈ ಬೆಳ್ಳಿರಥವನ್ನು ಸಮರ್ಪಿಸಿದರು. 18.5 ಅಡಿ ಎತ್ತರ ಹಾಗೂ 8.5 ಅಡಿ ಅಗಲವಿರುವ  ಬೆಳ್ಳಿ ರಥವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರಥವನ್ನು 225ಕ.ಜಿ. ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಫೆಬ್ರವರಿ 18 ರಂದು  ಕುಂಟಾಡಿಯಿಂದ ವಿವಿಧ ವಾದ್ಯಾ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗಿತ್ತು. ಇಂದು ಮಧ್ಯಾಹ್ನ […]