ಎತ್ತಿನಹೊಳೆ ಯೋಜನೆ : ರೈತರಿಗೆ ಶೀಘ್ರದಲ್ಲೇ ಭೂ ಪರಿಹಾರ; ರಮೇಶ್‌ ಜಾರಕಿಹೊಳಿ ಭರವಸೆ

Saturday, March 14th, 2020
ramesh

ಬೆಂಗಳೂರು : ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ರೈತರಿಗೆ ಶೀಘ್ರದಲ್ಲೇ ಭೂ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭರವಸೆ ನೀಡಿದರು. ಅರಸೀಕೆರೆಯ ಜೆಡಿಎಸ್‌ ಶಾಸಕ ಕೆ.ಎನ್‌.ಶಿವಲಿಂಗೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿಉತ್ತರ ನೀಡಿದ ಸಚಿವರು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿದ್ದು ಅವರಿಗೆ ಪರಿಹಾರ ನೀಡುವುದು ಬಾಕಿ ಇದೆ. ಈ ಸಂಬಂಧ ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. […]

ಬಿಜೆಪಿ ಪಕ್ಷದಲ್ಲಿ ಉಮೇಶ್​ ಕತ್ತಿ ಬಹಳ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹ : ಸಚಿವ ರಮೇಶ್​ ಜಾರಕಿಹೊಳಿ

Friday, February 14th, 2020
ramesh-jarakiholi

ಬೆಂಗಳೂರು : ಬಿಜೆಪಿ ಪಕ್ಷದ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹ ಎಂದು ಹೇಳುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದಾರೆ. ಕಳೆದ 6 ತಿಂಗಳಿನಿಂದ ಸಿಎಂ ಬಿಎಸ್ವೈ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಪಡೆಯಲು ರಮೇಶ್ ಜಾರಕಿಹೊಳಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಈ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ಇದೀಗ ಕೊನೆಯ ಪ್ರಯತ್ನ ಎನ್ನುವಂತೆ ಉಮೇಶ್ ಕತ್ತಿ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರ ಬಳಿ ಸಚಿವ ಸ್ಥಾನಕ್ಕಾಗಿ ಲಾಬಿ […]

ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ: ಸಿಎಂ ಕುಮಾರಸ್ವಾಮಿ

Friday, December 28th, 2018
kumarswamy

ಬೆಂಗಳೂರು: ನಿಗಮ ಮಂಡಳಿ ವಿಚಾರದಲ್ಲಿ ಅಸಮಾಧಾನ ಇಲ್ಲ, ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನಾಯಕರು ನೀಡಿರುವ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದೇನೆ. ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೆಲವರು ಚರ್ಚೆ ಮಾಡುತ್ತಾರೆ. ಅದು ವಯಕ್ತಿಕ. ಅದಕ್ಕೆ ನಾನು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು. ಇನ್ನು […]

3 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಮೇಶ್ ರಾಜೀನಾಮೆ:ರಮೇಶ್ ಜಾರಕಿಹೊಳಿ

Monday, December 24th, 2018
ramesh-jarakihole

ಬೆಂಗಳೂರು: ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇನ್ನು 3 ದಿನಗಳಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ನೀಡುವುದು ಸತ್ಯ, ಇನ್ನು ಮೂರು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಜೊತೆಗೆ ಚರ್ಚೆ ನಡೆಸುವುದಿಲ್ಲ, ಹಾಗೆಯೇ ಬಿಜೆಪಿಗೂ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದು ನನಗೆ ದುಃಖ ತಂದಿದೆ: ಲಕ್ಷ್ಮಿ ಹೆಬ್ಬಾಳ್‌ ಕರ್‌

Saturday, December 22nd, 2018
laxmi-hebbalkar

ಬೆಂಗಳೂರು: ರಮೇಶ್‌ ಜಾರಕಿ ಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿರುವುದು ನನಗೆ ವೈಯಕ್ತಿಕವಾಗಿ ತುಂಬಾ ದುಃಖ ತಂದಿದೆ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ ಕರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಷ್ಠರು 22 ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದರು. ಹೈಕಮಾಂಡ್‌ ಏನು ಹೇಳುತ್ತದೆಯೋ ಅದನ್ನು ಕೇಳುವವಳು ನಾನು ,ಪಕ್ಷದ ಶಿಸ್ತಿನ ಸಿಪಾಯಿ,ಚೌಕಟ್ಟನ ಒಳಗೆ ಇರುವವಳು. ಎಂದೂ ಸಚಿವ ಹುದ್ದೆಯ ಆಕಾಂಕ್ಷಿ ಎಂದಿರಲಿಲ್ಲ ಎಂದರು. […]

ಬಿಜೆಪಿಯವರು ಸರ್ಕಾರ ರಚಿಸುವ ಹಗಲುಗನಸು ಕಾಣ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Wednesday, September 12th, 2018
malikarjun-kharge

ಬೆಂಗಳೂರು: ಬಿಜೆಪಿಯವರು ಸರ್ಕಾರ ರಚಿಸುವ ಹಗಲುಗನಸು ಕಾಣ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ನಾನು ಮಾತಾಡ್ತೀನಿ. ಯಾವ ಸಮಸ್ಯೆಯೂ ಕಂಡಿಲ್ಲ. ಸದ್ಯಕ್ಕೆ ಏನು ಗೊಂದಲಗಳಿವೆ ನನಗೂ ಇನ್ನೂ ಸರಿಯಾಗಿ ಗೊತ್ತಿಲ್ಲ. ಕೆಲವು ಮಾಧ್ಯಮಗಳಲ್ಲಿ ಈ ವಿಚಾರವನ್ನು ಅತಿಯಾಗಿ ವೈಭವೀಕರಿಸಿ ತೋರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಯಾವ ಆತಂಕವೂ ಇಲ್ಲ. ಸರಿಯಾಗಿ […]

ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದರಂತೆ ಮಾಡುತ್ತೇವೆ: ಸಚಿವ ರಮೇಶ್ ಜಾರಕಿಹೊಳಿ

Wednesday, June 27th, 2018
ramesh

ಮಂಗಳೂರು: ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಧರ್ಮಸ್ಥಳಕ್ಕೆ ಆಗಮಿಸಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಸಚಿವರು ನಮ್ಮ ನಾಯಕರನ್ನು ಭೇಟಿ ಆಗಲು ಬಂದಿದ್ದೇನೆ. ಏನು ವಿಶೇಷಯಿಲ್ಲ.ಅವರ ಆರೋಗ್ಯ ವಿಚಾರಿಸಲು ಹೋಗುತ್ತಿದ್ದೇವೆ ಎಂದರು,ನಾನು ಮತ್ತು 8 ಜನ ಶಾಸಕರು ಬಂದಿದ್ದೇವೆ. ಬಜೆಟ್ ವಿಚಾರದಲ್ಲಿ ಇರುವ ಅಸಮಾಧಾನವನ್ನು ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ ಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದರಂತೆ ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿಕೆ ನೀಡಿದ್ದಿದಾರೆ. ಅಥಣಿ ಶಾಸಕ ಮಹೇಶ್ ಕಮಟಳ್ಳಿ, […]