ನಮ್ಮನ್ನು ನಿರ್ವಹಿಸಿಕೊಂಡರೆ ಒತ್ತಡ ನಿರ್ವಹಣೆಯ ಪ್ರಶ್ನೆಯಿಲ್ಲ: ಮಮತಾ ಆಚಾರ್

Saturday, December 11th, 2021
mamatha-achar

ಮಂಗಳೂರು: ನಾವು ಒತ್ತಡವನ್ನು ನಿರ್ವಹಿಸುವ ಬದಲು  ನಮ್ಮನ್ನು ನಾವು ಚೆನ್ನಾಗಿ ನಿರ್ವಹಿಸಿಕೊಂಡರೆ ಒತ್ತಡದ ಸಮಸ್ಯೆಯೇ ಉದ್ಭವವಾಗುವುದಿಲ್ಲ, ಎಂದು ಖ್ಯಾತ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಆಚಾರ್ ಅಭಿಪ್ರಾಯಪಟ್ಟರು. ನಗರದ  ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುದ್ಧ ಗಾಳಿ, ಉತ್ತಮ ಆಹಾರ, ಸಾಕಷ್ಟು ನೀರು, ಧ್ಯಾನ, ವ್ಯಾಯಾಮ, ಸಮಯ ನಿರ್ವಹಣೆ ನಮ್ಮನ್ನು ಒತ್ತಡದಿಂದ ದೂರವಿಡಬಲ್ಲವು. ಮುಕ್ತವಾಗಿ ಮಾತನಾಡಬಹುದಾದ ಹಳೆಯ ಸ್ನೇಹಿತರು, ಹವ್ಯಾಸಗಳೂ ನಮಗೆ ನೆರವಾಗಬಲ್ಲವು. “ಮನಸ್ಸು ಹರಿಯುವ ನೀರಿನಂತೆ […]

ವಿವಿ ಕಾಲೇಜು: ನ್ಯಾಕ್‌ ವರದಿ ಕುರಿತ ಕಾರ್ಯಾಗಾರ ಸಂಪನ್ನ

Saturday, July 17th, 2021
naik

ಮಂಗಳೂರು: ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಗೆ ಸಲ್ಲಿಸಬೇಕಾದ ಸ್ವ-ಅಧ್ಯಯನ ವರದಿ ಕುರಿತಂತೆ ಪ್ರಾಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ರವೀಂದ್ರ ಕಲಾಭವನದಲ್ಲಿ ಶುಕ್ರವಾರ ಆಯೋಜಿಸಿತ್ತು. ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜು ನ್ಯಾಕ್‌ ಮಾನ್ಯತೆ ಪಡೆಯಲು ಶ್ರಮಿಸಿದವರನ್ನು ನೆನಪಿಸಿಕೊಂಡರಲ್ಲದೆ, ಪಡೆದಿರುವ ʼಎʼ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ, ಎಂದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯ ನ್ಯಾಕ್‌ ವಿಶೇಷಾಧಿಕಾರಿಗಳಾದ […]

ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

Tuesday, August 6th, 2013
ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಬಿಲ್ಲವರ ಮಹಿಳಾ ಸಂಘ ಕುದ್ರೋಳಿ ಇವರ ಸಹಯೋಗದೊಂದಿಗೆ ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ಆಗಸ್ಟ್ 4 ರಂದು ಆಟಿದ ತಮ್ಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃಧ್ದಿ ಸಚಿವ ವಿನಯಕುಮಾರ್ ಸೊರಕೆಯವರು ನೆರವೇರಿಸಿದರು. ನಂತರ ಅವರು ಮಾತಾಡಿ ಇಂದು ತುಳುನಾಡಿನ ಸಂಪ್ರಾದಾಯ ಆಚರಣೆಗಳು ಮರೆಯಾಗುತ್ತಿದ್ದು ಅದನ್ನು ರಕ್ಷಿಸುವ ಕೆಲಸವಾಗಬೇಕು, ಜನತೆ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದು ಹಳ್ಳಿಭಾಗದ ಆಚರಣೆಗಳು ಮರೆಯಾಗುತ್ತಿವೆ ಎಂದರು. ಇಂತಹ ಅಟಿಯ ಕಾರ್ಯಕ್ರಮಗಳು ನಗರದ ಜನತೆಗೆ ತುಳುನಾಡಿನ […]

ಮಂಗಳೂರು : ರವೀಂದ್ರ ಕಲಾಭವನದಲ್ಲಿ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

Saturday, March 9th, 2013
Vidyarhi sahitya sammelana

ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿಶ್ವ ವಿದ್ಯಾನಿಲಯ ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾರ್ಚ್ 9 -ಶನಿವಾರ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿದರು.  ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಜಾತಿ ಧರ್ಮದ ಬಗೆಗೆ ತಪ್ಪು ಸಂದೇಶವನ್ನು […]

ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿನ ವಿಧಾನ ಸಭೆ-60 ಛಾಯಾಚಿತ್ರ ಪ್ರದರ್ಶನ

Saturday, December 8th, 2012
Karnataka Vidhana Sabha 60

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಡಿಸೆಂಬರ್ 7 ರಂದು ವಿಧಾನ ಸೌಧದ ಅಪರೂಪದ ಛಾಯಾಚಿತ್ರಗಳ ಛಾಯಾಚಿತ್ರ ಪ್ರದರ್ಶನ ವಿಧಾನ ಸಭೆ-60 ನಡೆಯಿತು. ರಾಜ್ಯ ವಿಧಾನ ಸಭೆಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಧಾನಸೌಧ ನಿರ್ಮಾಣದಿಂದ ಹಿಡಿದು, ವಿವಿಧ ಹಂತದ ಕಾಮಗಾರಿಗಳ ಛಾಯಾಚಿತ್ರಗಳು, ವಿಧಾನ ಸೌಧ ನಿರ್ಮಾಣದ ಕಾರ್ಯನೆರವೇರಿಸಿದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ರಿಂದ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿನ ಛಾಯಾಚಿತ್ರಗಳು […]

ಇಕೋಲಾರ್ಟ್ 2010 ಪ್ರದರ್ಶನ

Saturday, August 21st, 2010
ಇಕೋಲಾರ್ಟ್ 2010 ಪ್ರದರ್ಶನ

ಮಂಗಳೂರು : ಇಕೋಲಾರ್ಟ್-2010, ಪ್ರಕೃತಿ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಕುರಿತು ಚಿತ್ರಕಲಾ ಪ್ರದರ್ಶನ ಮತ್ತು ಸಿನಿಮಾ ಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಜಿ ಪಾವಂಜಿ ಚೇರ್ ಇನ್ ಫೈನ್ ಆರ್ಟ್ಸ್, ಬ್ರಿಟೀಷ್ ಕೌನ್ಸಿಲ್, ಚೆನೈ ಅಸೋಸಿಯೇಶನ್ ಆಫ್ ಬ್ರಿಟೀಷ್ ಸ್ಕಾಲರ್ಸ್ ಆರ್ಟಿಸ್ಟ್ ಕಂಬೈನ್ ಸಯನ್ಸ್ ಪೋರಮ್, ವಿಶ್ವವಿದ್ಯಾನಿಲಯ ಕಾಲೇಜಿನ ಸಹಬಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ಶಿವಶಂಕರ ಮೂರ್ತಿಯವರು, ಕಂಚದಲ್ಲಿ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]