ನಮ್ಮ ಮಂಗಳೂರನ್ನು ಸ್ವಚ್ಛ, ಸಮೃದ್ಧ, ಸುಂದರ, ಜನಸೇಹಿ ಮಂಗಳೂರನ್ನಾಗಿ ಮಾಡೋಣ : ಸುಧೀರ್ ಶೆಟ್ಟಿ

Saturday, September 16th, 2023
Ramakrishna-Math

ಮಂಗಳೂರು : “ಮಂಗಳೂರು ನಗರವನ್ನು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ನಮಗೆ ರಾಮಕೃಷ್ಣ ಮಠದ ಮಾರ್ಗದರ್ಶನ ಅಗತ್ಯ. ಈ ಮೂಲಕ ನಮ್ಮ ಮಂಗಳೂರನ್ನು ಸ್ವಚ್ಛ, ಸಮೃದ್ಧ, ಸುಂದರ, ಜನಸೇಹಿ ಮಂಗಳೂರನ್ನಾಗಿ ಮಾಡೋಣ” ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಸುಧೀರ್ ಶೆಟ್ಟಿ ಹೇಳಿದರು. ಸ್ವಚ್ಛ ಮಂಗಳೂರು ಅಭಿಯಾನ ಪುನರಾರಂಭಿಸುವ ಬಗ್ಗೆ ಪೂರ್ವಭಾವಿ ಯೋಜನೆಗಳನ್ನು ಚರ್ಚಿಸಲು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ಗಳ ಸಭೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ […]

ಅನಂತ ಗುಣ ಸ್ವರೂಪಿ ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು – ಜಿತಕಾಮಾನಂದಜಿ ಮಹಾರಾಜ್

Friday, January 21st, 2022
Kalikamba

ಮಂಗಳೂರು : ಅನಂತ ಸ್ವರೂಪಳಾಗಿರುವ ಕಾಳಿಕಾಂಬೆಯು ಶಕ್ತಿಯ ವಿವಿಧ ರೂಪಗಳಲ್ಲಿ ಜಗತ್ತಿನಲ್ಲಿ ಗೋಚರಿಸುವಳು, ಜೀವನಕ್ಕೆ ಆಧಾರವೇ ಭಗವಂತನ ಅನುಗ್ರಹ, ನಿಜವಾದ ನೆಮ್ಮದಿ ನಮ್ಮದೇ ಅಂತರಾಳದಲ್ಲಿ ಇದೆ, ಅನಂತ ಗುಣ ಸ್ವರೂಪಿ ಭಗವಂತ, ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ-ಸಂಸ್ಕಾರ ನೀಡದಿದ್ದರೆ , ಮಕ್ಕಳನ್ನೇ ಅವಸಾನಗೊಳಿಸಿದಂತೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನುಡಿದರು. ಅವರು  ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ […]

ನಾಳೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ -2020

Saturday, January 11th, 2020
swami-vivekananda

ಮಂಗಳೂರು : ಭಾರತ ಸರ್ಕಾರ 1885ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಘೋಷಿಸಿ ರಾಷ್ಟ್ರದಾದ್ಯಂತ ಆಚರಿಸುತ್ತಿಸುತ್ತಾ ಬರುತ್ತಿದೆ. ಯುವಜನತೆಗಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಮಂಗಳೂರು ರಾಮಕೃಷ್ಣ ಮಿಷನ್ ರಾಷ್ಟ್ರೀಯ ಯುವ ದಿನಾಚರಣೆಯನ್ನು ಜನವರಿ 12, ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30 ರಿಂದ ಅಪರಾಹ್ನ 2.00ಗಂಟೆಯವರೆಗೆ ಜರುಗುವ ಈ ಕಾರ್ಯಕ್ರಮವನ್ನು ಮಂಗಳೂರು ನಗರದ ಪೋಲಿಸ್ ಆಯುಕ್ತ ಡಾ. ಪಿ ಎಸ್ ಹರ್ಷಾ ಅವರು ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ. ರಾಜಶೇಖರ್ ಹೆಬ್ಬಾರ್ ಪ್ರಾಚಾರ್ಯರು ಸರ್ಕಾರಿ […]

ಸ್ವಚ್ಛ ಭಾರತ್ ಜಾಗೃತಿ ಜಾಥಾಕ್ಕೆ ಬಾಲಿವುಡ್ ನಟ ನಾನಾ ಪಾಟೇಕರ್ ಚಾಲನೆ

Monday, February 13th, 2017
Nana-Patekar

ಮಂಗಳೂರು: ನಗರದಲ್ಲಿ ರಾಮಕೃಷ್ಣ ಮಠ ಹಮ್ಮಿಕೊಂಡ ಸ್ವಚ್ಛ ಭಾರತ್ ಜಾಗೃತಿ ಜಾಥಾಕ್ಕೆ ಬಾಲಿವುಡ್ ನಟ ನಾನಾ ಪಾಟೇಕರ್ ಚಾಲನೆ ನೀಡಿದರು. ನಗರದ ಹಂಪನಕಟ್ಟೆಯಲ್ಲಿ ಮನುಷ್ಯನ ಚಿತ್ರ ತುಂಬುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ಸ್ವಾಮೀಜಿಗಳೊಂದಿಗೆ ನಟ ಪಾಟೇಕರ್ ಹೆಜ್ಜೆ ಹಾಕಿದರು. ಈ ವೇಳೆ ಮಾತನಾಡಿದ ಪಾಟೇಕರ್, ಸ್ವಚ್ಛತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ಸ್ವಚ್ಛತೆಗಾಗಿ ಅಭಿಯಾನ ನಡೆಸುವ ಪರಿಸ್ಥಿತಿ ಬಂದಿರುವುದು ಖೇದಕರ ಎಂದು ಹೇಳಿದರು

ಸ್ವಾಮಿ ವಿವೇಕಾಂದರ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನಿನಲ್ಲಿ ‘ಭಾರತ್‌ ಜಾಗೋ ದೌಡ್‌’ ಕಾರ್ಯಕ್ರಮ

Thursday, September 12th, 2013
ಸ್ವಾಮಿ ವಿವೇಕಾಂದರ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನಿನಲ್ಲಿ ‘ಭಾರತ್‌ ಜಾಗೋ ದೌಡ್‌’ ಕಾರ್ಯಕ್ರಮ

ಮಂಗಳೂರು : ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಅಂಗವಾಗಿ ಹಾಗೂ 1893ರ ಸೆ. 11ರಂದು ಅಮೆರಿಕಾದ ಚಿಕಾಗೋದಲ್ಲಿ ಸ್ವಾಮೀಜಿಯವರು ಮಾಡಿದ ಭಾಷಣದ ನೆನಪಿಗಾಗಿ ಸ್ವಾಮಿ ವಿವೇಕಾಂದರ 150ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನಿನಲ್ಲಿ   ‘ಭಾರತ್‌ ಜಾಗೋ ದೌಡ್‌’ ಕಾರ್ಯಕ್ರಮ ಬುಧವಾರ  ನಡೆಯಿತು. ನಗರದ ಜ್ಯೋತಿವೃತ್ತದಿಂದ ಕೇಂದ್ರ ಮೈದಾನಿನವರೆಗೆ ‘ಭಾರತ್‌ ಜಾಗೋ ದೌಡ್‌’ (ಭಾರತಕ್ಕಾಗಿ ಓಟ) ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಓಟಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ […]

ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ನಡೆದ ಬೃಹತ್ ಮೆರವಣಿಗೆ

Monday, January 14th, 2013
ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ  ನಡೆದ ಬೃಹತ್ ಮೆರವಣಿಗೆ

ಮಂಗಳೂರು : ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ಶನಿವಾರ ನಗರದ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಮೆರವಣಿಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಮಠ ಮಂಗಳೂರು, ದ.ಕ.ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೆಹರೂ ಮೈದಾನದ ಮೂಲಕ ನಡೆದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು […]

`ವಿದ್ಯಾರ್ಥಿ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ’ ಕಾರ್ಯಗಾರ

Monday, September 27th, 2010
ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಕಾರ್ಯಗಾರ

ಮಂಗಳೂರು: ರಾಮಕೃಷ್ಣ ಮಠದ, ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸೆಪ್ಟಂಬರ್ 27 ರಿಂದ 28 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಯುವ ಶಿಕ್ಷಕರ ಕಾರ್ಯಗಾರವನ್ನು ಡಾ. ವಿಶ್ವನಾಥ್ ಉದ್ಘಾಟಿಸಿದರು. ಉದ್ಘಾಟನಾ ಬಳಿಕ ಮಾತನಾಡಿದ ಅವರು ದೇಶದ ಪ್ರಗತಿ ಆಗಬೇಕಿರುವುದು ಶಿಕ್ಷಕರಿಂದಲೇ ಅದಕ್ಕಾಗಿ ಇಂದಿನಿಂದಲೇ ತಯಾರಿ ಹೊಂದಬೇಕು. ಕೇವಲ ಮಾತೃ ಭಾಷೆಯಲ್ಲಿ ಮಾತ್ರ ಪಾಂಡಿತ್ಯ ಹೊಂದದೆ ಇತರ ಭಾಷೆಗಳಲ್ಲಿಯೂ ಹಿಡಿತವನ್ನು ಹೊಂದಿ ಯಾವುದೇ ಸನ್ನಿವೇಶಗಳನ್ನು ಎದುರಿಸುವ ಮನೋಭಾವ ಹೊಂದಿರಬೇಕು ಎಂದು ಅವರು ಹೇಳಿದರು. ಸ್ವಾಮಿ ಜಿತಕಾಮಾನಂದಜೀಯವರು `ಉತ್ತಮ […]