ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ

Wednesday, December 22nd, 2021
periya-convocation

ಕಾಸರಗೋಡು : ಶಾಲಾ-ಕಾಲೇಜುಗಳು ದೇಶದ ಭವಿಷ್ಯ ರೂಪಿಸುವ ವೇದಿಕೆಗಳಾಗಿದ್ದು, ಜ್ಞಾನದಿಂದ ಬೆಳಗುವ ಶ್ರೀ ನಾರಾಯಣ ಗುರುಗಳ ವಚನಗಳು ಎಲ್ಲರಿಗೂ ಸ್ಫೂರ್ತಿ ಎಂದ ಅವರು ತಮ್ಮ ಭಾಷಣದಲ್ಲಿ ಕೇರಳದ ಸಾಕ್ಷರತೆ, ಶಿಕ್ಷಣ ಮತ್ತು ಮಹಿಳಾ ಶಿಕ್ಷಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದರು. ಮಂಗಳವಾರ ಪೆರಿಯ ತೇಜಸ್ವಿನಿ ಹಿಲ್ಸ್‌ನಲ್ಲಿ ನಡೆದ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಶ್ರೀ ನಾರಾಯಣ ಗುರುಗಳ ‘ಮಹಾ ಕವಿ ವಲ್ಲತ್ತೋಳ್ ಅವರಿಂದ ಜ್ಞಾನೋದಯ’ ತಾಯಿಯ ವಂದನೆಗಳು ಎಂಬ ಕವಿತೆಯನ್ನು ಪ್ರಸ್ತಾಪಿಸಿದರು. ಕೋವಿಡ್ ಆರಂಭದಲ್ಲಿ ಕಳೆದ […]

ರಾಷ್ಟ್ರಪತಿಗಳಿಗೆ ರಾಮಾಯಣ ದರ್ಶನಂ ಮತ್ತು ಪರ್ವ ಕಾದಂಬರಿ ಕೊಡುಗೆ ನೀಡಿದ ಸಚಿವ ಸುನಿಲ್ ಕುಮಾರ್

Wednesday, October 6th, 2021
Ramayana Darshana

ಬೆಂಗಳೂರು : ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಬೆಂಗಳೂರಿನ ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸುನಿಲ್ ಕುಮಾರ್ ಅವರು ಕುವೆಂಪು ಅವರ” ಶ್ರೀ ರಾಮಾಯಣ ದರ್ಶನಂ” ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್ಎಲ್ ಭೈರಪ್ಪ ಅವರ ,”ಪರ್ವ” ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು.

ರಾಷ್ಟ್ರಪತಿ ಭವನದ ವಸತಿ ಗೃಹದಲ್ಲಿ ಶವವಾಗಿ ಉದ್ಯೋಗಿ ಮೃತದೇಹ ಪತ್ತೆ

Friday, June 8th, 2018
raj-bhavan

ನವದೆಹಲಿ: ರಾಷ್ಟ್ರಪತಿ ಭವನದ ಕೆಲಸಗಾರರ ವಸತಿಗೃಹದಲ್ಲಿ ಉದ್ಯೋಗಿಯೊಬ್ಬನ ಶವ ಪತ್ತೆಯಾಗಿದ್ದು, ಆತ ರಾಷ್ಟ್ರಪತಿ ಭವನದಲ್ಲಿ 4ನೇ ದರ್ಜೆಯ ಕೆಲಸಗಾರನಾಗಿದ್ದ ಎಂದು ತಿಳಿದು ಬಂದಿದೆ. ಮೃತನನ್ನು ತ್ರಿಲೋಕಚಂದ್ರ ಎಂದು ಗುರುತಿಸಲಾಗಿದೆ. ಆತ ಕೆಲ ಸಮಯದಿಂದ ಅನಾರೋಗ್ಯ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ. ಬಂದಿದೆ. ಆತನ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಒಳಗಿಂದ ಹಾಕಲಾಗಿದ್ದ ಚಿಲಕ ಒಡೆದು ಕೋಣೆಯ ಕದ ತೆಗೆದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು […]

ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

Tuesday, February 20th, 2018
kambala

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ. ರಾಷ್ಟ್ರಪತಿಗಳು ಸಹಿ ಹಾಕಿರುವ ಹಿನ್ನೆಲೆಯಲ್ಲಿ ಕರಾವಳಿಗರಲ್ಲಿ ಹರ್ಷ ವ್ಯಕ್ತವಾಗಿದೆ. ಕಂಬಳ ಕ್ರೀಡೆ ಉಳಿವಿಗೆ ಕಂಬಳ ಸಮಿತಿ ನಡೆಸಿದ ಅವಿರತ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಸಿಕ್ಕಿರುವುದಕ್ಕೆ ಕಂಬಳ ಸಮಿತಿ ಅಧ್ಯಕ್ಷ ಬಾರ್ಕುರು ಶಾಂತರಾಮ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಂಬಳ ಕ್ರೀಡೆ ಅಭಿಮಾನಿ ಮಂಗಳೂರಿನ ಗಿರೀಶ್ […]

ಸಿಂಧೂರಿ ವರ್ಗಾವಣೆ ವಿರೋಧಿಸಿ ದೇವೇಗೌಡರಿಂದ ರಾಷ್ಟ್ರಪತಿಗೆ ಪತ್ರ : ಸಿಎಂ

Tuesday, January 23rd, 2018
rohini

ಮೈಸೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿರುವುದು ನನಗೆ ಗೊತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾಗದೆ ವರ್ಗಾವಣೆಗೆ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ? ಇದು ಹಸ್ತಕ್ಷೇಪವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇಂದು ಎರಡು ದಿನಗಳ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಅವರು, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಸನ ಜಿಲ್ಲಾಧಿಕಾರಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿರುವುದು ನನಗೆ […]

ಕರಾವಳಿಯ ಕಂಬಳಕ್ಕೆ ಗ್ರೀನ್ ಸಿಗ್ನಲ್

Friday, November 10th, 2017
kambala

ಮಂಗಳೂರು:ರಾಷ್ಟ್ರಪತಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಕರಾವಳಿ ಭಾಗದ ಜನರ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಈ ಋತುವಿನ ಮೊದಲ ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಕಂಬಳದ ವೇಳೆ ಓಡುವ ಕೋಣಗಳು 140 ರಿಂದ 160 ಮೀಟರ್ ದೂರವನ್ನು 12 ರಿಂದ 13 ಸೆಕೆಂಡುಗಳಲ್ಲಿ ಕ್ರಮಿಸಲಿವೆ 2014ರಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳಕ್ಕೆ ಮತ್ತೆ ರಾಜ್ಯ ಸರ್ಕಾರದ ಮಸೂದೆಯ ಬೆಂಬಲ ಸಿಕ್ಕಿದ್ದರಿಂದ ಈ ವರ್ಷ ಕಂಬಳ ಮತ್ತಷ್ಟು ರೋಚಕತೆಯಿಂದ ನಡೆಯಲಿದೆ. ನವೆಂಬರ್ 11 ಮತ್ತು 12 ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಕೋಟಿ […]

ಆಂಧ್ರ ವಿಭಜನೆ ಅಧಿಕೃತ, ಜೂ.2 ತೆಲಂಗಾಣ ಉದಯ ದಿನ

Wednesday, March 5th, 2014
Sampath

ನವದೆಹಲಿ: ತೆಲಂಗಾಣ ರಾಜ್ಯ ರಚನೆ ಈಗ ಅಧಿಕೃತವಾಗಿದ್ದು, ಜೂ.2 ತೆಲಂಗಾಣ ಉದಯ ದಿನ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರೊಂದಿಗೆ ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ತೆಲಂಗಾಣ ರಾಜ್ಯ ರಚನೆ ಮಸೂದೆ ರಾಜ್ಯಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ಮಾರ್ಚ್ 1ರಂದು ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕಿದ್ದರು. ಇದಾದ ಬಳಿಕ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವಾಲಯ, ಆಂಧ್ರಪ್ರದೇಶ ವಿಭಜನೆ ಕಾಯ್ದೆ 2014ರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಜೂನ್ 2 ತೆಲಂಗಾಣ ದಿನವನ್ನಾಗಿ ಘೋಷಿಸಿದೆ. […]

ದೇಶದ 13ನೇ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ

Thursday, July 26th, 2012
Pranab Mukherjee

ಹೊಸದಿಲ್ಲಿ : ಪ್ರಣಬ್ ಮುಖರ್ಜಿಯವರು  ಬುಧವಾರ ಪೂರ್ವಾಹ್ನ 11.38ಕ್ಕೆ ಸರಿಯಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದೇಶದ 13 ನೇ ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್  ಹಾಲ್ ನಲ್ಲಿ  ಸುಪ್ರೀಮ್  ಕೋರ್ಟಿನ  ಮೂಖ್ಯ ನ್ಯಾಯಧೀಶರಾದ ಎಸ್‌.ಎಚ್‌. ಕಪಾಡಿಯಾ ರವರು ಪ್ರಣ್ ಬ್ ಮುಖರ್ಜಿ  ಯವರಿಗೆ  ಪ್ರಮಾಣ ವಚನ ಬೋಧಿಸಿದರು. ಈ ಸಂದಭ೯ದಲ್ಲಿ  ಉಪರರಾಷ್ಟ್ರಪತಿ ಹಮೀದ್  ಅನ್ಸಾರಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಲೋಕಸಭಾ ಸ್ಪೀಕರ್ ಮೀರಾ ಕುಮಾರ್‌, ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಹಾಗೂ ಕೇಂದ್ರದ  ಸಚಿವರು, ವಿರೋದ ಪಕ್ಶದ […]