ಧರ್ಮಸ್ಥಳ : ಸಾಹಿತ್ಯವು ನಮ್ಮನ್ನು ಆಕರ್ಷಿಸಿ ಮನಕ್ಕೆ ಆನಂದದ ಅನುಭೂತಿ ನೀಡುವುದರೊಂದಿಗೆ ಮೌಲ್ಯವರ್ಧನೆ ಮಾಡಿ, ಜ್ಞಾನಕ್ಷಿತಿಜವನ್ನು ವಿಸ್ತರಿಸುತ್ತದೆ ಎಂದು ರಾಷ್ಟç ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೦ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಪ್ರೇಕ್ಷಕರಿದ್ದಾಗ ಉತ್ತಮ ಸಿನೆಮಾ ನಿರ್ಮಾಣವಾಗುತ್ತದೆ. ಒಳ್ಳೆಯ ಓದುಗರಿದ್ದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಮೂಡಿಬರುತ್ತವೆ. ಇದರಿಂದಾಗಿ ಕನ್ನಡ ಚಲನಚಿತ್ರ ರಂಗದ ಘನತೆ, ಗೌರವವೂ ಹೆಚ್ಚಾಗುತ್ತದೆ. ಕನ್ನಡದಲ್ಲಿರುವ ಸಾಕಷ್ಟು ಕಥೆ, […]
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಶನಿವಾರ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಭಾರಂಭಗೊಂಡಿವೆ. ದೇವಸ್ಥಾನ, ಬಸದಿ, ಬಾಹುಬಲಿ ಬೆಟ್ಟ (ರತ್ನಗಿರಿ), ಎಲ್ಲಾ ವಸತಿ ಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳೂ ಸೇರಿದಂತೆ ಕೃಷಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಹಾಗೂ ಹೈನುಗಾರಿಕೆಗೆ ಸಂಬAಧಿಸಿದ ಇನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು ಭಕ್ತರು ಹಾಗೂ […]
ಬೆಳ್ತಂಗಡಿ: ಕರ್ನಾಟಕದ ಪುಣ್ಯ ಕ್ಷೇತ್ರಗಳಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನ.19ರಿಂದ ನ.23ರ ವರೆಗೆ ನೆರವೇರಲಿದೆ. ಕಾರ್ಯಕ್ರಮಗಳು ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು ನ.19ರಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ನ. 20ರಂದು ಕರೆ ಕಟ್ಟೆ ಉತ್ಸವ, ನ. 21ರಂದು ಲಲಿತೋದ್ಯಾನ ಉತ್ಸವ ಹಾಗೂ ಲಲಿತಕಲಾ ಗೋಷ್ಠಿ, ನ.22ರಂದು […]
ಉಜಿರೆ: ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 89ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ದೇವರಿಗೆ ದೀಪ ಹಚ್ಚುವುದು ಭಾರತೀಯ ಸಂಸ್ಕೃತಿಯ ಲಕ್ಷಣವಾಗಿದೆ. ಲಕ್ಷದೀಪೋತ್ಸವ ಸಂಸ್ಕೃತಿ ಉಳಿಸುವ, ಅಜ್ಞಾನದ […]
ಉಜಿರೆ: ತ್ಯಾಗ ಮತ್ತು ಸೇವೆಯ ಮೂಲಕ ಮಾಡುವ ಸತ್ಕಾರ್ಯಗಳಿಂದ ಪುಣ್ಯ ಸಂಚಯದೊಂದಿಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ಜನರ ಪ್ರೀತಿ-ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಲಕ್ಷದೀಪೋತ್ಸವದ ಪ್ರಥಮ ದಿನವಾದ ಕಾರ್ತಿಕ ಸೋಮವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು. ಬದುಕಿನಲ್ಲಿ ಸಿಗುವ ಅನುಭವದಿಂದ ಪ್ರಗತಿ ಸಾಧ್ಯವಾಗುತ್ತದೆ. ತಾನು ಧರ್ಮಸ್ಥಳದ ವತಿಯಿಂದ ಸದಾ ಲೋಕ […]
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಸಾವಿರಕಂಬದ ಬಸದಿಯಲ್ಲಿ ಕೊರೊನಾ ನಿವಾರಣೆಯಾಗಬೇಕೆಂಬ ಉದ್ದೇಶದಿಂದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಸಂಕಲ್ಪಿಸಿದ ಲಕ್ಷದೀಪೋತ್ಸವ ಹರಕೆಯನ್ನು ಮಂಗಳವಾರ ರಾತ್ರಿ ಜರುಗಿಸಲಾಯಿತು. ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದು, ಸಂಪತ್ತು ನಷ್ಟದ ಜೊತೆಗೆ ಉದ್ಯೋಗದ ಅಸ್ಥಿರತೆ ಕಾಡಿತ್ತು. ಹಿಂದೆ ರಾಜರು ಅನಾರೋಗ್ಯಕ್ಕೀಡಾದಾಗಲೂ ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈಗ ಕೊರೊನಾಮುಕ್ತವಾಗಲು ಇಲ್ಲಿ ಲಕ್ಷದೀಪೋತ್ಸವದ ಸಂಕಲ್ಪ ನಡೆಸಲಾಗಿತ್ತು. […]
ಉಜಿರೆ: ಸಾಹಿತ್ಯ ಸಮಾಜದ ಕನ್ನಡಿಯಂತಿದ್ದು ಸಮಾಜದ ರಕ್ಷಣೆ ಮತ್ತು ಪೋಷಣೆಗೆ ಸಾಹಿತ್ಯ ಅಗತ್ಯ ಎಂದು ಬೆಂಗಳೂರಿನ ಹಿರಿಯ ವಿದ್ವಾಂಸ ಡಾ. ಎಸ್. ರಂಗನಾಥ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 88ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಕ್ಕೆ ಔಷಧೀಯ ಗುಣವೂ ಇದ್ದು ಜೀವನ ಮೌಲ್ಯಗಳ ಆಕರವಾಗಿದೆ. ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಇಲ್ಲದ ಮನುಷ್ಯ ಕೋಡು, ಬಾಲವಿಲ್ಲದ ಪ್ರಾಣಿಯಂತೆ ಆಗುತ್ತಾನೆ. ಸಾಹಿತ್ಯದಿಂದ ಸಮಾಜ ಸುಧಾರಣೆಯೊಂದಿಗೆ ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ […]
ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿಅರುವತ್ತು ವರ್ಷದ ಮಹಿಳೆಯೊಬ್ಬರು ಸುಲಲಿತ ವ್ಯವಹಾರ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಜೀವನೋಪಾಯಕ್ಕಾಗಿ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂದರ್ಭ ವ್ಯಾಪಾರದ ಪುಟ್ಟ ಅಂಗಡಿಯನ್ನು ತೆರೆದವರು ಲಲಿತಮ್ಮ. ನೆಲ್ಲಿಕಾಯಿ, ಮಾವಿನ ಮಿಡಿ, ಪೇರಳೆ ಮೊದಲಾದ ಸತ್ವಪೂರ್ಣ ಗ್ರಾಮೀಣ ಪೌಷ್ಠಿಕ ಆಹಾರಗಳು ಇವರಲ್ಲಿ ಮಿತದರದಲ್ಲಿ ಸಿಗುತ್ತವೆ. 25 ವರ್ಷಗಳ ಹಿಂದೆ ಇವರ ಗಂಡ ನಿಧನರಾದ ಬಳಿಕ ಕಾಯಕವೇ ಕೈಲಾಸ ಎಂದು ನಂಬಿ ಪುಟ್ಟಅಂಗಡಿ ಪ್ರಾರಂಭಿಸಿದ ಇವರು ಪ್ರಾಮಾಣಿಕ ವ್ಯವಹಾರ ನಡೆಸುತ್ತಾರೆ. ಅತಿಯಾದ ಲಾಭಗಳಿಸುವ ಹಂಬಲ ಈಕೆಗಿಲ್ಲ. ಎಲ್ಲಾಖರ್ಚು, […]