ಪತ್ರಿಕಾಭವನದ ಮುಂಭಾಗದಲ್ಲಿ ಉದ್ಯಾನವನ: ವೇದವ್ಯಾಸ ಕಾಮತ್

Tuesday, July 13th, 2021
Press Club VanaMahotsava1

  ಮಂಗಳೂರು: ಮಂಗಳೂರು ಪತ್ರಿಕಾ ಭವನದ ಮುಂಭಾಗದಲ್ಲಿ ಮಂಗಳೂರು ಮಹಾ ನಗರಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಉದ್ಯಾನವನ ನಿರ್ಮಾಣ ಮಾಡುವುದಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ,ಅರಣ್ಯ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಪತ್ರಿಕಾ ಭವನದ ಬಳಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರವನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ .ಈ ನಿಟ್ಟಿನಲ್ಲಿ […]

ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ ನಲ್ಲಿ ‘ವನಮಹೋತ್ಸವ’ ಸಪ್ತಾಹ

Friday, July 9th, 2021
Lourdes School

ಮನೆಗೊ೦ದು ಮರ, ಊರಿಗೊ೦ದು ವನ ಎ೦ಬ ಧ್ಯೇಯವಾಕ್ಯದೊ೦ದಿಗೆ ನಗರದ ಲೂರ್ಡ್ಸ್ ಸೆ೦ಟ್ರಲ್ ಶಾಲೆಯಲ್ಲಿ ಇತ್ತೀಚಿಗೆ ವನಮಹೋತ್ಸವ ಸಪ್ತಾಹವನ್ನು ಆಚರಿಸಲಾಯಿತು. ನಮಗೆ ಶುದ್ಧ ಗಾಳಿ ಹಾಗೂ ಸು೦ದರ ಪರಿಸರ ಇ೦ದಿನ ಅಗತ್ಯ. ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸ೦ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ, ಪರಿಸರ ಪ್ರಜ್ಞೆಯ ಅರಿವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎ೦ದು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನ ಸ೦ಚಾಲಕರಾದ ವ೦ದನೀಯ ಫಾ.ಡಾ.ಜೆ.ಬಿ. ಸಲ್ಡಾನ್ಹಾರವರು ಹೇಳಿದರು. ಅವರು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನಲ್ಲಿ ‘ವನಮಹೋತ್ಸವ ಸಪ್ತಾಹ’ದ ಕಾರ್‍ಯಕ್ರಮದಲ್ಲಿ ಗಿಡ ನೆಡುವ ಮೂಲಕ ವಿದ್ಯುಕ್ತ […]

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋತ್ಸವ

Monday, July 16th, 2018
ramakrishna-vanamahotsava

ಮಂಗಳೂರು: ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋ ತ್ಸವ ಆಚರಣೆ ಗಿಡ ನೆಡುವ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮೇಯರ್ ರಜನೀಶ್ ಮತ್ತು ಕಾರ್ಪೊರೇಟರ್ ಅಖಿಲಾ ಆಳ್ವ, ಭಾಗವಹಿಸಿದರು. ಆಶಾ ಜ್ಯೋತಿರೈ, ಜಯರಾಮ್ ಸಾಂತಾ, ಸುರೇಶ್‌ ರೈ, ಸಬಿತಾ ಶೆಟ್ಟಿ ಮತ್ತು ಹಾಸ್ಟೆಲ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಉಷಾ ಬಳ್ಳಾಲ್‌ರವರು ಸ್ವಾಗತಿಸಿ,ಜಯಲಕ್ಷ್ಮಿ ಶೆಟ್ಟಿಯ ವಂದಿಸಿದರು.

ನೆಟ್ಟ ಗಿಡಗಳ ರಕ್ಷಣೆಯೂ ನಮ್ಮ ಹೊಣೆ : ಸತ್ಯಾ ಕೆ

Saturday, June 30th, 2018
vanamahotsava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಶನಿವಾರ ಪತ್ರಿಕಾಭವನ ಆವರಣದಲ್ಲಿ ನಡೆಯಿತು. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಪತ್ರಕರ್ತೆ, ವಾರ್ತಾ ಭಾರತಿ ಪತ್ರಿಕೆಯ ವರದಿಗಾರ್ತಿ ಸತ್ಯಾ ಕೆ ಮಾತನಾಡಿ,  ಕೇವಲ ಪರಿಸದ ಬಗ್ಗೆ ಮಾತನಾಡಿದರೆ ಸಾಲದು, ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಯೂ ಇದೆ. ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬಿತ್ತುವ ಕಾರ್ಯ ಹೆಚ್ಚಾಗಿ ಆಗಬೇಕು. ಭವಿಷ್ಯದ ದೃಷ್ಟಿಯಿಂದ ಜನತೆಯನ್ನು ಎಚ್ಚರಿಸುವ ರೀತಿಯಲ್ಲಿ ಪ ರಿಸರ […]

ನೀರಿಗಾಗಿ ಅರಣ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ : ರಮಾನಾಥ ರೈ

Tuesday, July 11th, 2017
Vanamahotsava

ಮಂಗಳೂರು : ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಸೋಮವಾರ ನಗರದ ಕದ್ರಿ ಮಲ್ಲಿಕಟ್ಟೆಯ ಸರಕಾರಿ ಪ್ರವಾಸಿ ಮಂದಿರದ ಬಳಿ ನಡೆಯಿತು. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರಾಕೃತಿಕ ಅಸಮತೋಲನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ನೀರಿಗಾಗಿ ಅರಣ್ಯ ಎಂಬ ಧ್ಯೇಯ ವಾಕ್ಯದೊಂದಿಗೆ […]

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

Friday, August 7th, 2015
vidyarathna English medium school

ಉಳ್ಳಾಲ : ಪರಿಸರ ಆರೋಗ್ಯ ಪೂರ್ಣವಾಗಬೇಕಾದರೆ ಗಿಡಮರಗಳು ಅತ್ಯಗತ್ಯ. ಗಿಡಮರಗಳನ್ನು ಬೆಳೆಸಿ ಪೋಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿನ ಇಕೋ ಕ್ಲಬ್ ವತಿಯಿಂದ ಶಾಲಾ ವಠಾರದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಸಂಸ್ಥೆಯ ಕಾರ್‍ಯದರ್ಶಿ ಸೌಮ್ಯಾ.ಆರ್.ಶೆಟ್ಟಿ, ಮುಖ್ಯೋಪಧ್ಯಾಯಿನಿ ನಯೀಂ ಹಮೀದ್, ಶಿಕ್ಷಕರಾದ ನವೀನ್, ವೀಣಾ, ಪ್ರಜ್ಞಾ, ಶರಣ್ಯಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಸಸಿಗಳನ್ನು […]

ತೌಡುಗೋಳಿ ಕ್ಷೇತ್ರದಲ್ಲಿ : ವನಮಹೋತ್ಸವ – ಜೀರ್ಣೋದ್ದಾರ ಸಭೆ

Tuesday, June 16th, 2015
Vana Mahotsava

ತೌಡುಗೋಳಿ : ವನಮಹೋತ್ಸವ ಆಚರಣೆ ಕಾಟಾಚಾರಕ್ಕೆ ಮಾತ್ರ ಆಗಬಾರದು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಅಗಲೀಕರಣ ಮಾಡುವಾಗ ಮರ ಕಡಿಯುವುದು ವನ ಮಹೋತ್ಸವ ಅಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ವತಿಯಿಂದ ಭಾನುವಾರ(ಜೂನ್14)ರಂದು ನಡೆದ ಸಾರ್ವಜನಿಕ ಸಸಿ ವಿತರಣೆ, […]

ಪತ್ರಕರ್ತರ ಸಂಘ ಮತ್ತು ಅರಣ್ಯ ಸಂರಕ್ಷಣಾ ಇಲಾಖೆ ಕದ್ರಿ ಪಾರ್ಕ್ ನಲ್ಲಿ ವನಮಹೋತ್ಸವ

Saturday, August 3rd, 2013
vanamahostava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಅರಣ್ಯ ಸಂರಕ್ಷಣಾ ಇಲಾಖೆ ವತಿಯಿಂದ ನಗರದಕದ್ರಿ ಪಾರ್ಕ್ ನಲ್ಲಿ ಆಗಸ್ಟ್2 ರಂದು ಗಿಡ ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಗಿಡನೆಟ್ಟು ನೀರೆರೆಯುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿ ಲಕ್ಷವೃಕ್ಷ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದ್ದು, ಮಂಗಳೂರಿನಲ್ಲಿ ನಾಳೆ ಚಾಲನೆ ನೀಡಲಾಗುವುದು. ಇದು ರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಿರದೆ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಬೇಕಾಗಿದೆ.  ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಾ ಸಂಘದವರು ಜೊತೆಗೂಡಿ ಕೆಲಸ ಮಾಡಬೇಕಾಗಿದೆ. […]

ರೋಶನಿ ನಿಲಯದಲ್ಲಿ ಎನ್.ಎಸ್.ಎಸ್ ಘಟಕದ ವನಮಹೋತ್ಸವ ಮತ್ತು ವಾರ್ಷಿಕ ಕಾರ್ಯಕ್ರಮಗಳಿಗೆ ಚಾಲನೆ

Monday, July 8th, 2013
Roshani Nilaya NSS Programme

ಮಂಗಳೂರು : ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆ, ಎನ್.ಎಸ್.ಎಸ್ ಘಟಕದ ವತಿಯಿಂದ 2013-14ನೇ ಸಾಲಿನ ವಾರ್ಷಿಕ ಯೋಜನೆಗಳ ಉದ್ಘಾಟನೆ ಮತ್ತು ವನಮಹೋತ್ಸವ ಆಚರಣೆ ಜುಲೈ 8, ಸೋಮವಾರ ಮರಿಯಾ ಪೈವಾ ಕುಸೇರಿಯೋ ಸಭಾಂಗಣ, ರೋಶನಿ ನಿಲಯ, ಮಂಗಳೂರು ಇಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ವನಮಹೋತ್ಸವ ಮತ್ತು ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾನು […]