ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರ ತುಳು ಕಥೆಗಳ ಕೃತಿ ಬಿಡುಗಡೆ

Thursday, January 4th, 2024
Raghunath Vorkady

ಮಂಗಳೂರು: ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರು ಬರೆದು, ಆಕೃತಿ ಆಶಯ ಪಬ್ಲಿಕೇಶನ್ಸ್‌ನಿಂದ ಪ್ರಕಟಿಸಿರುವ ‘ದೇವಕಿ ಬೈದ್ಯೆದಿ ಪಂಡ್‌ನ ಜನಪದ ಕತೆಕುಲು- ಸೂರ್ಯೆ ಚಂದ್ರೆ ಸಿರಿ’ ಎಂಬ ತುಳು ಕಥೆಗಳ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಗುರುವಾರ ಬಿಡುಗಡೆಗೊಳಿಸಿದರು. ಭತ್ತದ ಬಗೆಗಿನ ತುಳುನಾಡಿನ ನಂಬಿಕೆ, ಆರಾಧನಾ ಭಾವ ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ವಿಷಯಗಳು ಕೃತಿಗಳ ರೂಪದಲ್ಲಿ ಮೂಡಿಬಂದಾಗ ಅದು ಇತಿಹಾಸವಾಗಿ ಮುಂದಿನ ಜನಾಂಗಕ್ಕೂ ತಿಳಿಯಲ್ಪಡುತ್ತದೆ. […]

ಬೈಕ್ ಗಳ ನಡುವೆ ಡಿಕ್ಕಿ : ಗಾಯಗೊಂಡಿದ್ದ ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕ ಮೃತ್ಯು

Wednesday, March 16th, 2022
Nagappa

ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ನಿವೃತ್ತ ಅಧ್ಯಾಪಕರೋರ್ವರು ಬುಧವಾರ ಮೃತ ಪಟ್ಟಿದ್ದಾರೆ. ವರ್ಕಾಡಿ ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟವರು. ಅವರು ಕೊಡ್ಲ ಮೊಗರು ವಾಣಿ ವಿಜಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕರಾಗಿದ್ದರು. ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿದ್ದರು. ಫೆ. 28ರಂದು ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಅಪಘಾತ ನಡೆದು ಗಂಭೀರ ಗಾಯಗೊಂಡಿದ್ದರು

ಸಾಮಾನ್ಯ ಯುವತಿಯೊಬ್ಬಳು ಪಂಚಾಯತ್ ಅಧ್ಯಕ್ಷೆಯಾದಾಗ..

Friday, January 1st, 2021
Bharati

ಬಂಟ್ವಾಳ : ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಮಹಿಳಾ ಸಬಲೀಕರಣವೆಂಬುದು ಸಾಮಾನ್ಯ ವಿಷಯವಲ್ಲ. ಮಹಿಳೆ ಅಬಲೆಯಲ್ಲ,ಸಬಲೆ ಎಂದು ಎಷ್ಟೇ ಬೀಗಿದರೂ ಅವರಿಗೆ ಸಿಗಬೇಕಾದ ಅವಕಾಶಗಳನ್ನು ಸರಿಯಾಗಿ ನೀಡಿದರೆ ಮಾತ್ರ ಎಂತಹ ಕ್ಷೇತ್ರದಲ್ಲೂ ಮಿಂಚಬಲ್ಲರು ಎಂಬುದಕ್ಕೆ ಕೇರಳದ ತಾಜಾ ಉದಾಹರಣೆಗಳು ನಮ್ಮ ಮುಂದಿದೆ.ಈಗಾಗಲೇ ಎಳೆಯ ಪ್ರಾಯದ ಯುವತಿಯರು ಕೇರಳದ ರಾಜದಾನಿಯ ಮೇಯರ್ ಹುದ್ದೆಯಿಂದ ಹಿಡಿದು ಪಂಚಾಯತ್ ಅಧ್ಯಕ್ಷೆಯವರೆಗೆ ಹಲವಾರು ಮಂದಿ ಆಯ್ಕೆಯಾಗಿರುವುದು ಮಹಿಳಾ ಸಮುದಾಯಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಗಡಿನಾಡ ಪ್ರದೇಶವಾದ ಮಂಜೇಶ್ವರದ ವರ್ಕಾಡಿ ಯಲ್ಲೂ ಅಂತಹ ಘಟನೆ […]

ಕಾಸರಗೋಡು ನಗರಸಭೆ : ಎಲ್‌ಡಿಎಫ್ 21, ಬಿಜೆಪಿ 14 ಸ್ಥಾನಗಳಲ್ಲಿ ಜಯ

Thursday, December 17th, 2020
Kasaragod Election

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಸರಗೋಡು, ಕಾಂಞಂ ಗಾಡ್‌, ನೀಲೇಶ್ವರ ನಗರಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದಿದೆ. ಕಾಸರಗೋಡು ನಗರಸಭೆಯು ಐಕ್ಯರಂಗದ ಪಾಲಾದರೆ, ಕಾಂಞಂಗಾಡ್‌, ನೀಲೇಶ್ವರ ನಗರ ಸಭೆಯಲ್ಲಿ ಮತ್ತೆ ಎಲ್‌ಡಿಎಫ್‌ ಅಧಿಕಾರಕ್ಕೇರಿದೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ನ 15 ಸ್ಥಾನಗಳ ಪೈಕಿ  ಬಿಜೆಪಿ 6, ಯುಡಿಫ್ 6, ಎಲ್ ಡಿ ಎಫ್ 2 ಮತ್ತು ಎಲ್ ಡಿ ಎಫ್ ಬೆಂಬಲಿತ 1 ಅಭ್ಯರ್ಥಿ ಜಯಗಳಿಸಿದ್ದಾರೆ. ಮಂಜೇಶ್ವರ ಬ್ಲಾಕ್  ಸಂಭಂದಿಸಿದಂತೆ  ಜಿಲ್ಲಾ ಪಂಚಾಯತ್ ನ  4 ಸ್ಥಾನಗಳ ಪೈಕಿ, ಬಿಜೆಪಿ 1, ಯುಡಿಎಫ್ 3 ಅಭ್ಯರ್ಥಿಗಳು […]

ಸ್ಥಳೀಯ ಸಂಸ್ಥೆ ಚುನಾವಣೆ : ವರ್ಕಾಡಿ 3ನೇ ಡಿವಿಷನ್ ನಲ್ಲಿ ಬಿರುಸಿನ ಪ್ರಚಾರ

Tuesday, December 8th, 2020
Ananda Tachire

ವರ್ಕಾಡಿ :  ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಸಿದ್ದತೆಗಳು ಬಿರುಸಿನಿಂದ ಸಾಗಿದ್ದು ಡಿಸೆಂಬರ್ 14 ರಂದು ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ತ್ರೀ ಸ್ತರಗಳಲ್ಲಿ ಚುನಾವಣೆ ನಡೆಯಲಿದೆ. ವರ್ಕಾಡಿ 3ನೇ ಡಿವಿಷನ್ ನಲ್ಲಿ ಈ ಬಾರಿ ತೀವ್ರ ಪೈಪೋಟಿ ಇದ್ದು ಬ್ಲಾಕ್ ಪಂಚಾಯತ್ ನಲ್ಲಿ ಮುಸ್ಲಿಂ ಲೀಗ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. ಜಿಲ್ಲಾ ಪಂಚಾಯತ್ ನಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. 2015 ರಲ್ಲಿ ನಡೆದ ಸ್ಥಳೀಯ ಸಂಸ್ಥೆ […]

ಕರ್ನಾಟಕ ಗಡಿಭಾಗದ ವರ್ಕಾಡಿಯಲ್ಲಿ ಕೊರೋನಾ, ಕಾಸರಗೋಡಿನಲ್ಲಿ ರವಿವಾರ ಐವರು ಸೋಂಕಿತರು

Sunday, May 24th, 2020
Kerala corona

ಕಾಸರಗೋಡು :  ರವಿವಾರದಂದು ಕಾಸರಗೋಡು ಜಿಲ್ಲೆಯಲ್ಲಿ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ನಡುವೆ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರ ದಿಂದ ಆಗಮಿಸಿದವರಾಗಿದ್ದಾರೆ. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಕೆ ನಿವಾಸಿಗಳು ಹಾಗೂ 60 ವರ್ಷದ ವರ್ಕಾಡಿ ಗ್ರಾಮದ ಕೆದಂಬಾಡಿ ನಿವಾಸಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ರವಿವಾರ ಸೋಂಕು ದೃಢಪಟ್ಟವರೆಲ್ಲರೂ ಪುರುಷರಾಗಿದ್ದಾರೆ. ಭಾನುವಾರ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. […]

ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದರ ಹಿಂದೆ ಸತ್ಯವಿದೆ-ದಯಾನಂದ ಕತ್ತಲ್ಸಾರ್

Monday, April 14th, 2014
Sri Devi Temple Thoudugoli

ಮಂಗಳೂರು : ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದು ಯಾಕೆಂಬ ಹಲವರ ಪ್ರಶ್ನೆಗಳಿಗೆ ಅಣು ರೇಣು ತೃಣ ಕಾಷ್ಠ ಜಂಗಮ ಸ್ಥಾವರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂಬ ಸತ್ಯದಡಿಯಲ್ಲಿ ನಾವು ಬದುಕುತ್ತೇವೆ ಎಂಬ ಅರಿವಾಗಬೇಕು ಎಂದು ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್ಸಾರ್ ಅಭಿಪ್ರಾಯಪಟ್ಟರು. ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಷು ವಿಶೇಷ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. […]