Blog Archive

ವಿದ್ಯಾರ್ಥಿ ಸಿರಿ ಮನುಷ್ಯತ್ವದ ರೂಪದಲ್ಲಿಯೂ ಸಾಕಾರಗೊಳ್ಳಬೇಕು: ವಿನಯ ಪ್ರಸಾದ್​​

Friday, November 16th, 2018
vinaya-prasad

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಯುವ ಆಳ್ವಾಸ್ ವಿದ್ಯಾರ್ಥಿ ಸಿರಿ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನು ಹಿರಿಯ ನಟಿ ವಿನಯ ಪ್ರಸಾದ್ ಇಂದು ಬೆಳಗ್ಗೆ ಮೂಡುಬಿದಿರೆಯಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಸಿರಿ ಅಂದರೆ ಬರೀ ಮಾರ್ಕ್ಸ್ ಮಟ್ಟಿಗೆ ಮಾತ್ರ ಅಲ್ಲ. ಮನುಷ್ಯತ್ವದ ರೂಪದಲ್ಲಿ ಕೂಡಾ ಅದು ಸಾಕಾರಗೊಳ್ಳಬೇಕು. ಮನೆಗೆ ಉಪಕಾರಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವ, ನುಡಿಸಿರಿಯ ಆಯೋಜನೆಯ ಬಗ್ಗೆ ಮಾತನಾಡಿದರು. ಕಾಸರಗೋಡಿನ ಚಿನ್ಮಯ […]

ಮಳೆಯ ತೀವ್ರತೆಯಿಂದ ಇಂದೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಣೆ..!

Tuesday, August 14th, 2018
heavy-rain

ಮಂಗಳೂರು: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ಇಂದೂ ಕೂಡ ರಜೆ ಘೋಷಿಸಲಾಗಿದೆ. ವರ್ಷಧಾರೆಗೆ ಕರಾವಳಿಯ ಜನ ನಲುಗಿ ಹೋಗಿದ್ದಾರೆ.ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ಮಳೆಯ ತೀವ್ರತೆಯಿಂದ ಇಂದೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳು ತುಂಬಿ ಹಲವೆಡೆ ನೆರೆ ಕಾಣಿಸಿಕೊಂಡಿದೆ.

ದಂತ ವೈದ್ಯ ವಿದ್ಯಾರ್ಥಿಗಳ ಶಿಕ್ಷಣ ಪ್ರೇಮ

Wednesday, November 29th, 2017
students-education

ಸುರತ್ಕಲ್‌ : ಮುಕ್ಕದಲ್ಲಿರುವ ಶ್ರೀನಿವಾಸ್‌ ದಂತ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸರಕಾರಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾರ್ಯಕ್ರಮದ ಮೂಲಕ ಸಹಾಯ ಹಸ್ತ ಚಾಚಿದ್ದು, ಸ್ವಂತ ಖರ್ಚಿನಿಂದ 92 ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಿದ್ದಾರೆ. ಮಕ್ಕಳ ದಿನಾಚರಣೆಯಂದು ವಿದ್ಯಾರ್ಥಿಗಳು ಆಹಾರ ಖಾದ್ಯ ತಯಾರಿಸಿ ಅದನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದ್ದರು. ಉಳಿದ ಹಣದಿಂದ ಚೇಳಾಯಿರಿನ ಕಳವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಂಗಳವಾರ ಶಾಲಾ ಬ್ಯಾಗ್‌ ವಿತರಿಸಿದರು. ಶ್ರೀನಿವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ […]

ಫಾದರ್ ಮುಲ್ಲರ್ ಕಾಲೇಜಿನ ವಿದ್ಯಾರ್ಥಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ

Tuesday, August 1st, 2017
Fr Mullers Student

ಮಂಗಳೂರು : ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಅಂತಿಮ ವರ್ಷದ ಎಂಡಿ ವಿದ್ಯಾರ್ಥಿ ಎಚ್.ಕೆ.ಪ್ರಸಾದ್(28) ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಜುಲೈ 29, ಶನಿವಾರ ನಡೆದಿರಬಹುದೆಂದು ಶಂಕಿಸಲಾಗಿದೆ. ಹಾಸ್ಟೆಲ್ ಕೊಠಡಿಯಲ್ಲಿ ಒಬ್ಬನೇ ವಾಸಿಸುತ್ತಿದ್ದ ದಾವಣಗೆರೆ ಮೂಲದ ಪ್ರಸಾದ್, ಜುಲೈ 29 ರ ರಾತ್ರಿ ಬ್ಲೇಡಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಜುಲೈ 30 ರ ಬೆಳಿಗ್ಗೆ ಆತನ ತಂದೆ-ತಾಯಿ ಹಲವು ಬಾರಿ ಫೋನ್ ಮಾಡಿದರೂ ಆತ ಫೋನ್ ರಿಸೀವ್ ಮಾಡದಿದ್ದಾಗ ಭಯಗೊಂಡ ತಂದೆ ತಾಯಿ […]

ಹಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿ ಅಪಹರಣ

Friday, October 14th, 2011
Medical-Student Kidnap

ಉಳ್ಳಾಲ: ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಹಣಕ್ಕಾಗಿ ಬುಧವಾರ ತಡರಾತ್ರಿ ಅಪಹರಣ ನಡೆಸಿದ್ದು, ಗುರುವಾರ ಮುಂಜಾನೆ ಕೇರಳದ ಮಂಜೇಶ್ವರದ ಉದ್ಯಾವರದ ಬಳಿ ಜಖಂಗೊಳಿಸಿ ಬಿಟ್ಟಿದ್ದಾರೆ.   ದೇರಳಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪ್ಲೆಕ್ಸ್‌ ಒಂದರಿಂದ ವಿದ್ಯಾರ್ಥಿಯನ್ನು ಅಪಹರಿಸಲಾಗಿದ್ದು ಹಣಕ್ಕಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಕಾಲೇಜಿನ ಎದುರಿಗಿರುವ ಫ್ಲಾಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ವಿದ್ಯಾರ್ಥಿಯನ್ನು ಕೇರಳದ ತ್ರಿಶೂರ್‌ ನಿವಾಸಿ ಮಹಮ್ಮದ್‌ ನೆಬಿಲ್‌(23) ಎಂದು ಗುರುತಿಸಲಾಗಿದೆ. ನೆಬಿಲ್‌ನ ತಂದೆ ತಾಯಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಾಂಪ್ಲೆಕ್ಸ್‌ ನ ಣಕಾಸಿನ ವ್ಯವಹಾರ ನೆಬಿಲ್‌ […]

ಮಾನವ ಹಕ್ಕುಗಳು ಹಾಗೂ ಭಾರತದ ಸವಾಲುಗಳು ಕುರಿತ ರಾಷ್ಟ್ರೀಯ ಕಾರ್ಯಾಗಾರ

Saturday, September 24th, 2011
M Veerappa Moily

ಮಂಗಳೂರು: ಸೈಂಟ್‌ ಆಗ್ನೆಸ್‌ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕು ಶಿಕ್ಷಣ ಘಟಕದ ವತಿಯಿಂದ ‘ಮಾನವ ಹಕ್ಕುಗಳು-ಬದಲಾದ ಒಲವುಗಳು ಹಾಗೂ ಭಾರತದ ಸವಾಲುಗಳು’ ವಿಷಯದ ಕುರಿತು ನಗರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ನಡುವೆ ಏಕತೆ, ರಾಷ್ಟ್ರೀಯ ಭಾವೈಕ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಮಸೂದೆ ಜಾರಿಗೊಳಿಸಲು ಉದ್ದೇಶಿಸಿದೆ,.ರಾಜ್ಯ ಸರಕಾರಗಳು […]

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

Tuesday, January 25th, 2011
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಆಯೋಜಿಸಿದ 22ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು.  ಕಾರ್ಯಕ್ರಮವನ್ನು ಮಾಹೆ ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಅಫಘಾತಗಳನ್ನು ಕಡಿಮೆ ಮಾಡಬಹುದು, ವಿದ್ಯಾರ್ಥಿಗಳಿಗೆ  ಈ  ಬಗ್ಗೆ  ಶಾಲೆಯಲ್ಲಿ ಶಿಕ್ಷಣ ನೀಡುವುದರಿಂದಲೂ ಅಫಘಾತಗಳ ಬಗ್ಗೆ ಹೆಚ್ಚಿನ ಅರಿವು […]

ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮೊಳಹಳ್ಳಿ ಶಿವರಾವ್ ಪುರಸ್ಕಾರ

Tuesday, November 2nd, 2010
ದಿ| ಮೊಳಹಳ್ಳಿ ಶಿವರಾವ್ ಸ್ಮರಣಾರ್ಥಕ

ಮಂಗಳೂರು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಹಕಾರಿ ಪಿತಾಮಹ ದಿ| ಮೊಳಹಳ್ಳಿ ಶಿವರಾವ್ ಸ್ಮರಣಾರ್ಥಕ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಇಂದು ಸಂಜೆ ನಡೆಯಿತು. ಪ್ರತಿಭಾನಿವಿತರನ್ನು ರೆ| ಪಾ| ಜೋಸೆಫ್ ರೊಡ್ರಿಗಸ್ ಎಸ್. ಜೆ. ಶಾಲು ಹೊದಿಸಿ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಿ […]