ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾಸ್ತು ಶಿಲ್ಪಿ ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್‌ರಿಂದ ವಿಚಾರ ಸಂಕಿರಣ

Tuesday, March 3rd, 2020
Srinivas-Institute-of-Techn

ಮಂಗಳೂರು : ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾದಲ್ಲಿ 3 ದಿನಗಳ ಸಾಂಸ್ಕೃತಿಕ ಉತ್ಸವ ಆರ್ಕಿಹೋಲಿಕ್ಸ್ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ಶಿಲ್ಪಿ ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್ ಮತ್ತು ಸಿಸಿಬಿಎ ವಿನ್ಯಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಂಪ್ರಸಾದ್ ಅಕ್ಕಿಸೆತಿ ಇವರುಗಳು ಆಗಮಿಸಿದ್ದರು. ಬೆಳಿಗ್ಗೆ ಉದ್ಘಾಟನಾ ಸಮಾರಂಭದ ನಂತರ ಮುಖ್ಯ ಅತಿಥಿಗಳು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವಾಸ್ತುಶಿಲ್ಪ ವಿಷಯದ ಬಗ್ಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ […]

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ- ಮತದಾನ ಜಾಗೃತಿಗಾಗಿ ಜಾಥಾ

Saturday, April 13th, 2019
Srinivasa College

ಮಂಗಳೂರು : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಳಚ್ಚಿಲ್ ಹಾಗೂ ಎಸ್‌ವಿಇಇಪಿ ಸಮಿತಿಯ ಸಹಯೋಗದೊಂದಿಗೆ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಜನ ಸಾಮಾನ್ಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಲ್ಲಿ ಮಾನವ ಸರಪಳಿ ಹಾಗೂ ಜಾಥಾ ಕಾರ್ಯಕ್ರಮವನ್ನು ವಳಚ್ಚಿಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಸ್ವೀಪ್ ಘಟಕದ ಸಂಯೋಜಕರಾದ ಡಾ| ಅನಂತ ಕುಲಕರ್ಣಿಯವರು ಸ್ವಾಗತಿಸಿದರು. ಬಲವಾದ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಕೇಂದ್ರಕ್ಕೆ ತೆರಳಿ […]

’ಮೌಲ್ಯಾಧಾರಿತ ಶಿಕ್ಷಣವು ಯಶಸ್ಸಿನ ರಹದಾರಿ’: ಶ್ರೀ. ಉಲ್ಲಾಸ್ ಕೊಟ್ಟಾರಿ

Saturday, September 8th, 2018
Srinivas college

ಮಂಗಳೂರು  : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗದ ಘಟಕ ಆಸ್ಕೀ (ASCEE) ಇದರ ಉದ್ಘಾಟನಾ ಸಮಾರಂಭವು ಸಪ್ಟೆಂಬರ್8 ರಂದು ಜರುಗಿತು. ಮುಖ್ಯ ಅತಿಥಿಯಾಗಿ ಮಂಗಳೂರು ನೊವಿಗೊ ಸೊಲ್ಯುಷನ್ಸ್‌ನ ಪ್ರೋಗ್ರಾಮರ್ ಅನಾಲಿಸ್ಟ್ ಆಗಿರುವ ಶ್ರೀ. ಉಲ್ಲಾಸ ಕೊಟ್ಟಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ. ಉಲ್ಲಾಸ ಕೊಟ್ಟಾರಿ ರವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೈನಂದಿನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅಧಿಕ ಪರಿಶ್ರಮದ ಸದೃಢ ಮನೋಭಾವ ಅಳವಡಿಸಿಕೊಂಡಲ್ಲಿ ಯಶಸ್ಸಿನ ಶಿಖರವನ್ನೇರುವುದು ಖಚಿತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು […]

ಜ್ಞಾನಾರ್ಜನೆಯೊಂದಿಗೆ ಜ್ಞಾನಪ್ರಸರಣೆ ಅತ್ಯಂತ ಶ್ರೇಷ್ಠ ಕಾಯಕ :ರೆ. ಫಾ. ವಿಜಯ ಲೋಬೋ

Friday, November 3rd, 2017
shrinivas collage

ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರಿನ ಆವರಣದಲ್ಲಿ ಒಂದು ದಿನದ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೋತ್ಸವವನ್ನು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ವಿಜಯ ಲೋಬೋ ಅವರು ಈ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ದ್ಯೆನಂದಿನ ಪಠ್ಯಕ್ರಮ ಅಧ್ಯಯನದೊಂದಿಗೆ ಸ್ಪಯಂಶಿಸ್ತನ್ನು ಅಳವಡಿಸಿಕೊಂಡು ತಾವು ಪಡೆದ ಜ್ಞಾನವನ್ನು ಇತರರಿಗೆ ಪಸರಿಸುವ ಜವಬ್ಧಾರಿಯನ್ನು ನೆನಪಿಸಿದರು. ಸಂಸ್ಥೆಯು ಕೊಡಮಾಡಿದ ಸುಸಜ್ಜಿತ ಪ್ರಯೋಗಾಲಯಗಳ ಬಗ್ಗೆ ಪ್ರಶಂಸಿಸುತ್ತಾ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. […]

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿ ಸಂಘ ಉದ್ಘಾಟನೆ

Friday, October 13th, 2017
srinivas institute

ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭವು ಅಕ್ಟೋಬರ್ 12 ರಂದು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಮುಖ್ಯ ಅತಿಥಿಯಾಗಿ, ಮಂಗಳೂರಿನ, ಪದ್ವ ಕಾಲೇಜು ನಂತೂರು, ಇಲ್ಲಿಯ ಪ್ರಾಂಶುಪಾಲರಾದ ಫಾ| ಆಲ್ವಿನ್ ಸೆರಾವೊ, ರವರು ಆಗಮಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು. ಸಮತೋಲನವಾದ ಜೀವನವನ್ನು ನಡೆಸಲು, ಇಂತಹ ವಿದ್ಯಾರ್ಥಿ ಸಂಘಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ವಿದ್ಯಾರ್ಥಿ ಸಂಘದ ಅದ್ಯಕ್ಷನಾದ ವಿಜೇತ್ ಕುಮಾರ್ ರೈ ನೆರೆದವರನ್ನು ಸ್ವಾಗತಿಸಿದರು. ದೀಪ ಬೆಳಗುವುದರ ಮೂಲಕ ಆರಂಭವಾದ ಕಾರ್ಯಕ್ರಮವು ಸಂಘದ ಶಿಕ್ಷಕ ಸಲಹೆಗಾರರಾದ […]