ಅಧಿಕ ಅಥವಾ ‘ಪುರುಷೋತ್ತಮ ಮಾಸದ ಮಹತ್ವ

Tuesday, September 15th, 2020
prajaksha

‘ಈ ವರ್ಷ 18.9.2020 ರಿಂದ 16.10.2020 ಈ ಕಾಲಾವಧಿಯಲ್ಲಿ ಅಧಿಕ ಮಾಸವಿದೆ. ಈ ಅಧಿಕ ಮಾಸ ‘ಅಧಿಕ ಆಶ್ವಯುಜ ಮಾಸವಾಗಿದೆ. ಅಧಿಕ ಮಾಸಕ್ಕೆ ಮುಂದಿನ ಮಾಸದ ಹೆಸರನ್ನು ಕೊಡುತ್ತಾರೆ, ಉದಾ. ಆಶ್ವಯುಜ ಮಾಸದ ಮೊದಲು ಬರುವ ಅಧಿಕ ಮಾಸಕ್ಕೆ ‘ಆಶ್ವಯುಜ ಅಧಿಕ ಮಾಸ ಎಂದು ಕರೆಯಲಾಗುತ್ತದೆ ಮತ್ತು ತದನಂತರ ಬರುವ ಮಾಸಕ್ಕೆ ‘ನಿಜ ಆಶ್ವಯುಜ ಮಾಸ ಎನ್ನುತ್ತಾರೆ. ಅಧಿಕ ಮಾಸ ಒಂದು ದೊಡ್ಡ ಹಬ್ಬದಂತೆ ಇರುತ್ತದೆ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಮತ್ತು ‘ಅಧಿಕ […]

‘ಕೊರೋನಾ ದಂತಹ ಆಪತ್ಕಾಲದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ರಾತ್ರಿ 12 ಗಂಟೆಗೆ ಹೇಗೆ ಮಾಡಬೇಕು ?

Tuesday, August 11th, 2020
krishnanshtami

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ […]

ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಪ್ರತಿಯೊಬ್ಬರು ಸಕ್ಷಮರಾಗುವುದು ಆವಶ್ಯಕವಾಗಿದೆ ! – ಪೂ. ರಮಾನಂದ ಗೌಡ

Sunday, July 5th, 2020
Guru poornima

ಮಂಗಳೂರು :  ‘ಕೊರೋನಾ ಮಹಾಮಾರಿಯ ಹಾವಳಿ ಮುಗಿದ ನಂತರ ಜೀವನ ಕೂಡಲೇ ಮುಂಚಿ ನಂತಾಗುವುದು’, ಎಂಬ ಭ್ರಮೆಯಲ್ಲಿರದೇ ಜನರು ವಾಸ್ತವಿಕತೆಯನ್ನು ಎದುರಿಸಬೇಕು. ಇಂದು ಪ್ರಗತಿ ಹೊಂದಿದ ಅಮೇರಿಕಾ ಸಹಿತ ಅನೇಕ ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದೆ. ಅನೇಕ ತಜ್ಞರು ಮುಂದೆ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಇವುಗಳು ಎದುರಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಚೀನಾದ ವಿಸ್ತಾರವಾದ ಮತ್ತು ಪಾಕಿಸ್ತಾನದ ಜಿಹಾದಿ ಭಯೋತ್ಪಾದನೆಯು ಭಾರತದ ಮೇಲೆ ಯುದ್ಧ ಸಾರಲು ಪ್ರಯತ್ನಿಸುತ್ತಿದೆ. ಅನೇಕ ಮುಸಲ್ಮಾನ ರಾಷ್ಟ್ರಗಳಲ್ಲಿ ಗೃಹಯುದ್ಧಗಳು ನಡೆಯುತ್ತಿವೆ. ರಾಜಧಾನಿ ದೆಹಲಿಯಲ್ಲಿ ನಿರಂತರ […]

ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು ಬೇಗನೇ ಜಾಗೃತವಾಗುವುದು

Tuesday, June 30th, 2020
Guru Poornima

ಅ.ಅರ್ಥ ಕೃಪೆ ಶಬ್ದವು ‘ಕೃಪ್’ ಧಾತುವಿನಿಂದ ನಿರ್ಮಾಣವಾಗಿದೆ. ‘ಕೃಪ್’ ಎಂದರೆ ದಯೆ ತೋರಿಸುವುದು ಮತ್ತು ಕೃಪೆ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ. ಆ.ಮಹತ್ವ ಬೇರೆಬೇರೆ ಯೋಗಮಾರ್ಗಗಳಿಂದ ಸಾಧನೆ ಮಾಡುವುದರಲ್ಲಿ ಅನೇಕ ವರ್ಷಗಳನ್ನು ವ್ಯರ್ಥಗೊಳಿಸದೇ, ಅಂದರೆ ಈ ಎಲ್ಲಾ ಮಾರ್ಗಗಳನ್ನು ಬದಿಗಿರಿಸಿ, ಗುರುಕೃಪೆಯನ್ನು ಬೇಗನೇ ಹೇಗೆ ಪಡೆಯುವುದು ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದುದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು […]

ಜೂನ್ 5 ರಂದು ವಟಪೂರ್ಣಿಮೆ: ಅದರ ಮಹತ್ವ ಹಾಗೂ ಆ ವ್ರತವನ್ನು ಹೇಗೆ ಆಚರಿಸಬೇಕು ?

Thursday, June 4th, 2020
vata poornima

ಪತಿಗೆ ದೀರ್ಘಾಯುಷ್ಯ ಲಭಿಸಬೇಕೆಂದು ಹಾಗೂ ಏಳು ಜನ್ಮವೂ ಅವರ ಪ್ರಾಪ್ತಿಗಾಗಿ ಹಿಂದೂ ಸ್ತ್ರೀಯರು ವಟಪೂರ್ಣಿಮೆಯ ವ್ರತವನ್ನು ಮಾಡುತ್ತಾರೆ. ಶಾಸ್ತ್ರಚರ್ಚೆಯಲ್ಲಿ ಯಮನನ್ನು ಸೋಲಿಸಿ ಹರಣವಾದ ಅವಳ ಪತಿಯ ಪ್ರಾಣವನ್ನು ಹಿಂದೆ ಪಡೆಯುವ ಸಾವಿತ್ರಿಯ ಪಾತಿವ್ರತ್ಯದ ಪ್ರತೀಕವೆಂದು ಈ ವ್ರತವನ್ನು ಮಾಡಲಾಗುತ್ತದೆ. ಸಾವಿತ್ರಿ ಮತ್ತು ಯಮನ ಸಂಭಾಷಣೆಯು ವಟವೃಕ್ಷದ ಕೆಳಗೆ ಆದುದರಿಂದ ಆ ದಿನ ವಟವೃಕ್ಷಕ್ಕೆ ಮಹತ್ವ ಲಭಿಸಿತು. ವಟವೃಕ್ಷ ಹಾಗೂ ವಟಪೂರ್ಣಿಮೆಯ ಮಹತ್ವವು ಸನಾತನ ಸಂಸ್ಥೆಯ ವತಿಯಿಂದ ಸಂಕಲನ ಮಾಡಿದ ಈ ಲೇಖನದಿಂದ ತಿಳಿದುಕೊಳ್ಳೋಣ. ಅದರೊಂದಿಗೆ ಸದ್ಯ ಕೊರೋನಾದಿಂದಾಗಿ […]

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನಕ್ಕೆ ಶಾಸಕರಾದ ವೇದವ್ಯಾಸ ಕಾಮತ್ ಭೇಟಿ

Monday, February 24th, 2020
sanatana

ಮಂಗಳೂರು : ಮಹಾಶಿವರಾತ್ರಿಯ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಮಂಗಳೂರು ಸಹಿತ ಪುತ್ತೂರು, ಸುಳ್ಯ, ಉಜಿರೆ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಸುಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಶಾಸಕರಾದ ಶ್ರೀ. ವೇದವ್ಯಾಸ ಕಾಮತ್ ಇವರು ಭೇಟಿ ನೀಡಿದರು. ಗ್ರಂಥ ಪ್ರದರ್ಶನಿಯನ್ನು ವೀಕ್ಷಿಸಿದ ಶ್ರೀ. ವೇದವ್ಯಾಸ ಕಾಮತ್ ಇವರು ಅಧ್ಯಾತ್ಮ ಪ್ರಸಾರ ಮಾಡಲು ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ಈ ಗ್ರಂಥ ಪ್ರದರ್ಶನಿಗೆ ಅನೇಕ ಜಿಜ್ಞಾಸುಗಳು ಭೇಟಿ […]

ಪವರ್ ಟಿವಿಯ ವರದಿಗಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸನಾತನ ಸಂಸ್ಥೆ ಒತ್ತಾಯ

Tuesday, January 28th, 2020
sanatana

ಮಂಗಳೂರು : ದಿನಾಂಕ 23.1.2020 ರಂದು ಪವರ ಟಿವಿಯು “ಬಾಂಬ್ ಶರಣಗತಿ” ಕನ್ನಡ ವಾರ್ತಾ ವಾಹಿನಿಯ ಕಾರ್ಯಕ್ರಮದ ವರದಿಯಲ್ಲಿ ಮಂಗಳೂರು ವಿಮಾನನಿಲ್ದಾಣ ದಲ್ಲಿ ಸಜೀವ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಇವನಿಗೆ ಸನಾತ‌ನ ಸಂಸ್ಥೆಯ ಲಿಂಕ್ ಇದೆ. ಮಂಗಳೂರು ಬಾಂಬ್ ಪ್ರಕರಣದ ಹಿಂದೆ ಸನಾತನ ಸಂಸ್ಥೆಯ ಕೈವಾಡ ಇರುವ ಬಗ್ಗೆ ಪವರ ಟಿವಿ ಬ್ರೇಕಿಂಗ್ ವರದಿಯನ್ನು ನಿರಂತರವಾಗಿ ಪ್ರಸಾರ ಮಾಡಿತ್ತು. ಇದು ಶುದ್ದ ಸುಳ್ಳಾಗಿದೆ. ಆದಿತ್ಯರಾವ ಮತ್ತು‌ ಸನಾತನ ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ. ಸನಾತನ […]

ಸನಾತನ ಸಂಸ್ಥೆ ಮಂಗಳೂರು ವತಿಯಿಂದ ಉಚಿತ ದಂತ ತಪಾಸಣೆ ಶಿಬಿರ

Monday, November 25th, 2019
dental

ಮಂಗಳೂರು  : ಎಯ್ಯಾಡಿಯಲ್ಲಿರುವ ರಾಮಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನಾತನ ಸಂಸ್ಥೆ ಮಂಗಳೂರು, ಇದರ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರವನ್ನು ಅಯೋಜಿಸಲಾಯಿತು. ಡಾ ರಮ್ಯಾ ಇವರು ಶಾಲೆಯ ವಿದ್ಯಾರ್ಥಿಯರಿಗೆ ದಂತ ತಪಾಸಣೆಯನ್ನು ಮಾಡಿದರು. ಕಾರ್ಯಕರ್ತರಾದ ಕು.ಭವ್ಯಾ ನಾಯ್ಕ್, ಶ್ರೀ ಉಮೇಶ್ ಆಚಾರ್ಯ ಇವರು ಉಪಸ್ಥಿತರಿದ್ದರು.

ಭಾವಪೂರ್ಣ ‘ಗುರುಪೂರ್ಣಿಮಾ’ ಮಹೋತ್ಸವ

Wednesday, July 17th, 2019
sanathana

ಮಂಗಳೂರು : ಗುರುಗಳ ಸ್ಥೂಲ ದೇಹ ಅಂದರೆ ವ್ಯಷ್ಟಿ ರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ. ಗುರುಕಾರ್ಯದ ಕಕ್ಷೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಸಮಾಜ, ರಾಷ್ಟ್ರ ಹಾಗೂ ಧರ್ಮದ ಉತ್ಥಾನದ ತನಕ ವ್ಯಾಪಿಸಿರುತ್ತದೆ.  ವೈಯಕ್ತಿಕ ಉದ್ಧಾರಕ್ಕಿಂತ ಸಮಷ್ಟಿ ಉತ್ಕರ್ಷಕ್ಕಾಗಿ ಕಾರ್ಯವನ್ನು ಮಾಡುವವರ ಮೇಲೆ ಗುರುಕೃಪೆ ಹೆಚ್ಚಾಗುತ್ತದೆ. ಧರ್ಮಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವು ವ್ಯಕ್ತಿ, ಸಮಾಜ, ರಾಷ್ಟ್ರ ಹಾಗೂ ಧರ್ಮ ಇವೆಲ್ಲದರ ಉತ್ಕರ್ಷವನ್ನು ಸಾಧಿಸುವ ಹಾಗೂ ಕಾಲಾನುಸಾರ ಆವಶ್ಯಕ ಗುರುಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಸ್ವಕ್ಷಮತೆಯಂತೆ […]

ಗುರು-ಶಿಷ್ಯ ಪರಂಪರೆ ಜಗತ್ತಿಗೇ ಹಿಂದೂ ಧರ್ಮ ನೀಡಿದ ಅಮೂಲ್ಯ ಕೊಡುಗೆ

Monday, July 30th, 2018
Gurupurnime

ಮಂಗಳೂರು : ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಗುರುಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಶ್ರೀ. ವೇಣು ಗೋಪಾಲ ರಾಮ ಮತ್ತು ಸೌ. ಪರಮೇಶ್ವರಿ ಇವರು ಮಾಡಿದರು. ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ ಭಕ್ತರಾಜ ಮಹಾರಾಜರ ಪ್ರತಿಮೆಗೆ ಆರತಿ ಬೆಳಗಲಾಯಿತು. ಗುರುಪೂಜೆಯ ಪೌರೋಹಿತ್ಯವನ್ನು […]