ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು

Thursday, December 14th, 2023
ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ 29ನೇ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವಿರಾಸತ್ ಅನ್ನು ಗುರುವಾರ ಸಂಜೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. […]

ಇಂದಿನಿಂದ 3 ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ

Tuesday, November 5th, 2019
KSSAP

ಮಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ನವೆಂಬರ್ 5 ಮಂಗಳವಾರದಿಂದ ನವೆಂಬರ್ 7ರ ತನಕ ಮೂರು ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಗಡಿನಾಡು ಸಂಸ್ಕೃತಿ ಉತ್ಸವ ಉದ್ಘಾಟನೆಯನ್ನು ನವೆಂಬರ್ 5ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಮುಖ್ಯಕಾರ್ಯನಿರ್ವಹಣಾಧಕಾರಿ ಡಾ. ಆರ್. ಸೆಲ್ವಮಣಿ ನೆರವೇರಿಸಲಿದ್ದಾರೆ. ಗಡಿನಾಡು ಸಂಸ್ಕೃತಿ ಉತ್ಸವ ಅಂಗವಾಗಿ ಮೂರು ದಿನಗಳ ಕಾಲ ಪ್ರತಿದಿನ […]

ಧರ್ಮಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

Sunday, February 10th, 2019
Masthakabhisheka Culture

ಧರ್ಮಸ್ಥಳ : ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸದಾ ಸಮರ್ಪಕವಾಗಿ ಮಾಡುತ್ತಿರುವ ಪುಣ್ಯ ಪುರುಷ ಎಂದು ಸಚಿವೆ ಜಯಮಾಲಾ ಹೇಳಿದರು. ಧರ್ಮಸ್ಥಳದಲ್ಲಿ ಶನಿವಾರ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರತ್ನಗಿರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಟರಾಜನ ಮೂರ್ತಿಯನ್ನು ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಅವರಿಗೆ ನೀಡುವ ಮೂಲಕ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಕಳದಿಂದ ಧರ್ಮಸ್ಥಳಕ್ಕೆ ಬಾಹುಬಲಿ ಮೂರ್ತಿ ಸಾಗಾಣಿಕೆ ಮಾಡುವ […]

ಸೂರಜ್‌ ಕಲಾಸಿರಿಯಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

Saturday, December 23rd, 2017
Suraj Kalasiri

ಕೊಣಾಜೆ : ಸೂರಜ್‌ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮುಡಿಪುವಿನಲ್ಲಿ ನಡೆಯುತ್ತಿರುವ ಸಮೃದ್ಧ ಭಾರತ ಸಂಸ್ಕೃತಿ ಪರಿಕಲ್ಪನೆಯ ‘ಸೂರಜ್‌ ಕಲಾಸಿರಿ-2017’ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಶುಕ್ರವಾರ ವಿವಿಧ ಕಲಾ ಪ್ರಕಾರಗಳು ಪ್ರಸ್ತುತಗೊಂಡವು. ಸೂರಜ್‌ ಶಿಕ್ಷಣ ಸಂಸ್ಥೆ ಸೇರಿದಂತೆ ನೆರೆಯ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಕಲಾ ಪ್ರೇಮಿಗಳು ಕಲಾಸಿರಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಸ್ವಾದಿಸಿದರು. ಬೆಳಗ್ಗೆ ನಡೆದ ವಿಚಾರಗೋಷ್ಠಿಯ ಬಳಿಕ ಕೊಡಗು ಜಿಲ್ಲೆಯಿಂದ ಆಗಮಿಸಿದ ಮುದ್ದಪ್ಪ ಮತ್ತು ಅವರ ಸಂಗಡಿಗರಿಂದ ಹುತ್ತರಿ […]

ಪುರಭವನದ ಬಾಡಿಗೆ ಶೇ. 50ರಷ್ಟು ಕಡಿತ, ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ

Thursday, June 29th, 2017
MCC

ಮಂಗಳೂರು : ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನದ ಬಾಡಿಗೆಯನ್ನು ಪರಿಷ್ಕರಿಸಬೇಕೆಂಬ ಕಲಾವಿದರ ಬೇಡಿಕೆಗೆ ಮಣಿದ ಮೇಯರ್  ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನದ ಮುಂಗಡ ಹಾಗೂ ಬಾಡಿಗೆ ದರವನ್ನು ಭಾರೀ ಕಡಿತಗೊಳಿಸುವ ಮೂಲಕ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದರು. ಆದರೆ ಮೇಯರ್ ಅವರ ಈ ನಿರ್ಧಾರದಿಂದ ಆಡಳಿತ ಪಕ್ಷದ ಸದಸ್ಯರ ಗದ್ದಲ ಹಾಗೂ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಸಭಾ ತ್ಯಾಗ ಮಾಡಿದರು. ‘ಪುರಭವನದ ದರವನ್ನು ಕಡಿಮೆ ಮಾಡುವಂತೆ ಜೂನ್ 17ರಂದು […]

ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆ

Thursday, September 29th, 2016
alwas-nudisiri

ಮಂಗಳೂರು :ಈ ಬಾರಿ ‘ಕರ್ನಾಟಕ ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಜರಗುವ `ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಸಂಸ್ಕೃತ ಭಾಷಾ ಪ್ರಾಧ್ಯಾಪಕಿಯಾಗಿರುವ ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆಯಾಗಿದ್ದು, ಸಾಹಿತಿ ಡಾ. ಜಯಂತ ಗೌರೀಶ ಕಾಯ್ಕಿಣಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈ ಕುರಿತು ತಿಳಿಸಿದ್ದಾರೆ. ನಿರಂತರ ಆಳ್ವಾಸ್ ನುಡಿಸಿರಿ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು 13ನೇ ವರ್ಷಕ್ಕೆ […]

ಕಲಾ ರಸಿಕರನ್ನು ತನ್ಮಯಗೊಳಿಸಿದ ಆಳ್ವಾಸ್‌ ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

Saturday, November 17th, 2012
Alvas Nudisiri

ಮೂಡಬಿದಿರೆ :ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಯ ಮೊದಲದಿನವಾದ ಶುಕ್ರವಾರ ಸಂಜೆ ವಿದ್ಯಾಗಿರಿ ಸುಂದರಿ ಆನಂದ್ ಆಳ್ವ ಅವರಣದಲ್ಲಿ 5 ವೇದಿಕೆಯಲ್ಲಿ ಏಕಕಾಲದಲ್ಲಿ ನಡೆದ ನೃತ್ಯ-ಗಾನ ವೈಭವ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. 5 ವೇದಿಕೆಗಳಲ್ಲಿ ಒಂದಾದ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ನಡೆದ ವಂದೇ ಮಾತರಂ ನೃತ್ಯ ರೂಪಕವು ಭಾರತೀಯರ ಏಕತೆಯ ಮಂತ್ರ ಮತ್ತು ಈ ಏಕತೆಯನ್ನು ಮುರಿಯಲು ಬ್ರಿಟಿಷರು ಮಾಡಿದ ಕುತಂತ್ರಗಳನ್ನು ಮನೋಜ್ಞವಾಗಿ ಬಿಂಬಿಸಿತು. ಚಂದ್ರಶೇಖರ್ ಕೆ.ಎಸ್ […]