ಹಿಂದೂ ದೇವರು ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾಯದರ್ಶಿ ಮನೆ ಮೇಲೆ ಆಯಿಲ್ ದಾಳಿ

Sunday, June 19th, 2022
oil-attack

ಪುತ್ತೂರು : ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ `ಸಂಡೇ ಅಂಕಲ್ಸ್ ಆರ್ ಮಂಡೇ ನಸ್ಸ್’ಎಂಬ ಕಾರ್ಯಕ್ರಮ ದಲ್ಲಿ ರಾಜ್ಯ ಕಾಂಗ್ರೆಸ್ʼನ ಐಟಿ ಸೆಲ್ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾಯದರ್ಶಿಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ ಅವರು ಹಿಂದೂ ದೇವರು ದೇವತೆಗಳ ಮೇಲೆ ಅಶ್ಲೀಲವಾಗಿ ಮಾತನಾಡಿದ ಬೆನ್ನಲ್ಲೇ ಅವರ ಮನೆಗೆ ತಂಡವೊಂದು ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಮುರಿದು ಹಾಗೂ ಮನೆಗೆ ಆಯಿಲ್ ಸುರಿದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಪುತ್ತೂರಿನ […]

ಹಿಜಾಬ್ ವಿವಾದದ ನಂತರ, ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್

Saturday, February 12th, 2022
nawaz

ಮಂಗಳೂರು: ಹಿಜಾಬ್ ವಿವಾದದ ನಂತರ ಕಡಬ ತಾಲೂಕಿನ ಅಂಕತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಫೆಬ್ರುವರಿ 4 ರಂದು ತರಗತಿಯೊಳಗೆ ನಮಾಜ್ ಮಾಡಿದ್ದರು. ಆ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಸ್ಥಳೀಯ ನಿವಾಸಿಗಳು ಅದನ್ನು ವಿರೋಧಿಸಿದರು. ಮಾಹಿತಿ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಶಾಲೆಗೆ ಭೇಟಿ […]

ಸರಕಾರೀ ಬಸ್ಸಲ್ಲಿ ಕೋಳಿಗೂ ಟಿಕೆಟ್ ವಿಧಿಸಿದ ಕಂಡಕ್ಟರ್

Wednesday, September 1st, 2021
chicken-ticket

ಚಿಕ್ಕಬಳ್ಳಾಪುರ : ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್ ಪ್ರಯಾಣಿಕರೊಬ್ಬರು ಕೋಂಡೊಯ್ಯುತ್ತಿದ್ದ ಕೋಳಿಗೂ ಟಿಕೆಟ್ ವಿಧಿಸಿದರು. ಪ್ರಯಾಣಿಕರಿಗೆ ಅನ್ವಯವಾಗುವ ದರವನ್ನು ಕೋಳಿಗೂ ವಿಧಿಸಿದರು. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಗುರೇಬಂಡೆ ತಾಲೂಕಿನ ಸೋಮೇಶ್ವರಕ್ಕೆ ಪೆರೇಸಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗುತ್ತಿದ್ದರು. ಅವನ ಕೈಯಲ್ಲಿ ಸ್ಥಳೀಯ ತಳಿಯ ಕೋಳಿ ಕೂಡ ಇತ್ತು. ಕೋಳಿಗೆ ಸಂಬಂಧಿಸಿದಂತೆ ಕಂಡಕ್ಟರ್ ಐದು ರೂಪಾಯಿ ಟಿಕೆಟ್ ನೀಡಿದರು. ಟಿಕೆಟ್ ಪಡೆದ ಮಾಲೀಕರು ಕೋಳಿ ಯನ್ನು ಸೀಟಿನ ಮೇಲೆ ಕೂರಿಸಿದರು. ಆ ಸೀಟನ್ನು ಬಿಟ್ಟು […]

ಎರೆಡಲ ಪನೆರೆ ಪೋವೊಡ್ಚಿ, ಪೊಸ ಟೀಮು ಮಲ್ಪುವ : ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್

Monday, July 19th, 2021
nalin kumar kateel

ಮಂಗಳೂರು  :  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಅವರು, ” ಆ ಧ್ವನಿ ನನ್ನದಲ್ಲ, ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಆಡಿಯೋದಲ್ಲಿ ತುಳುವಿನಲ್ಲಿ ‘ಎರೆಡಲ ಪನೆರೆ ಪೋವೊಡ್ಚಿ.  ಈಶ್ವರಪ್ಪ , ಜಗದೀಶ್ ಶೆಟ್ಟರ್ ಟೀಮುನೇ ದೆಪ್ಪುವ, ಪೊಸ ಟೀಮು ಮಲ್ಪುವ, ಇತ್ತೇ ಪುರ ನಮ್ಮ ಕೈಟ್ ಉಂಡು, ಮೂಜಿ ಪುದರ್ ವುಂಡು ಎಂದು […]

ವಿ ಹೆಚ್ ಪಿ ಮುಖಂಡನ ವಿರುದ್ಧ ಅವಹೇಳನ : ನಾಲ್ವರ ಬಂಧನ

Wednesday, June 2nd, 2021
sharan case

ಮಂಗಳೂರು :  ವಾಟ್ಸ್ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ದುರ್ಗಾವಾಹಿನಿ ಸಂಘಟನೆಯ ಬಗ್ಗೆ ಅವಹೇಳನಕಾರಿ ಸಂದೇಶವನ್ನು ರವಾನಿಸಿರುವ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಸುಳ್ಯ ಕಸಬಾ ತಾಲೂಕಿನ ಭವಾನಿ ಶಂಕರ್ (32), ಬಜಾಲ್‌ನ ನೌಶಾದ್ (27), ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38), ಹಾಗೂ ಮೂಡಬಿದ್ರೆಯ ಜಯಕುಮಾರ್ (33) ಎಂದು ಗುರುತಿಸಲಾಗಿದೆ. ಬಂಧಿತರು ತಮಗೆ ಬಂದಿದ್ದ ಸಂದೇಶವನ್ನು ಇತರ ಗ್ರೂಪ್ ಹಾಗೂ ಸ್ನೇಹಿತರಿಗೆ ಪಾರ್ವಾಡ್ ಮಾಡಿದ್ದಾರೆ. ಈ ಸಂದೇಶದ ಮೂಲ, […]

ಬೆಂಗಳೂರು: ಭೂಕಬಳಿಕೆ ಆರೋಪಕ್ಕೆ ಬಗ್ಗೆ ಉಪ್ಪಿ ಸ್ಪಷ್ಟನೆ: ಡೌಟಿದ್ರೆ ಬಂದು ಪರಿಶೀಲಿಸಿ

Wednesday, May 26th, 2021
Upendara

ಬೆಂಗಳೂರು: ಲಾಕ್ ಡೌನ್ ವೇಳೆ ಚಲನಚಿತ್ರ ಕಾರ್ಮಿಕರು ಹಾಗೂ ಬಡ ಕಲಾವಿದರ ನೆರವಿಗೆ ನಿಂತಿರುವ ನಟ ಉಪೇಂದ್ರ ಸದ್ಯ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ನಟ ಉಪೇಂದ್ರ ಕೃಷಿ ಭೂಮಿ ಒತ್ತುವರಿ ಮಾಡಿದ ರುಪ್ಪೀಸ್ ಎಂಬ ಹೆಸರಿನ ರೆಸಾರ್ಟ್ ಮಾಲೀಕರಾಗಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಉಪೇಂದ್ರ, ದಯವಿಟ್ಟು ಆರೋಪ ಮಾಡುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ ಎಂದಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ವಿಲೇಜ್ ಎಂಬ […]

ಕೊರೋನಾ ಮಹಾಮಾರಿಯ ಭಯ ಮತ್ತು ಚಿಂತೆಯನ್ನು ದೂರಮಾಡಲು ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

Saturday, May 22nd, 2021
dyana

ಇಂದು ಇಡೀ ದೇಶ ಕೊರೋನಾ ಮಹಾಮಾರಿಯ 2ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ, ನಿರಾಶೆ, ಆತ್ಮಹತ್ಯೆಯ ವಿಚಾರಗಳು ಇಂದು ಹೆಚ್ಚಾಗಿದೆ. ಪರಿಣಾಮವಾಗಿ ಕೊರೋನಾ ಸೋಂಕಿನ ಜೊತೆಗೆ ಅದರ ಭಯದಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರ […]

ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿ ಕಿಡಿಗೇಡಿಗಳು, ದೂರು

Wednesday, April 28th, 2021
Prabhakara Bhat

ಬಂಟ್ವಾಳ:  ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ಕುರಿತು ಅವಹೇಳಕಾರಿ ವೀಡಿಯೋವೊಂದನ್ನು ಸೃಷ್ಟಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಭಜರಂಗದಳದ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದಾರೆ. ಯಾವುದೋ ಆ್ಯಪ್‌ನ ಸಹಾಯದಿಂದ ಹಿಂದಿ ಹಾಡಿಗೆ ಅವರ ಮುಖದ ಮೂಲಕ ಅಭಿನಯ ಮಾಡುವ ರೀತಿಯಲ್ಲಿ ವಿಡಿಯೋದಲ್ಲಿ ಚಿತ್ರಿಸಲಾಗಿದೆ ಎಂದು ದೂರು ನೀಡಲಾಗಿದೆ.

ಇಬ್ಬರು ಯುವತಿಯರನ್ನಿಟ್ಟು ಕೊಂಡು ಪುರುಷರನ್ನು ಮನೆಗೆ ಆಹ್ವಾನಿಸಿ ದೋಚುತ್ತಿದ್ದ ತಂಡದ ಬಂಧನ

Monday, January 18th, 2021
Honeytrap

ಮಂಗಳೂರು : ಇಬ್ಬರು ಯುವತಿಯರನ್ನಿಟ್ಟು ಕೊಂಡು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಮನೆಗೆ ಆಹ್ವಾನಿಸಿ ಬ್ಲಾಕ್‌ಮೇಲ್ ಮಾಡಿ ಹಣ ದೋಚುತ್ತಿದ್ದ ಹನಿಟ್ರಾಪ್ ಜಾಲವೊಂದನ್ನು ಸುರತ್ಕಲ್ ಪೊಲೀಸರು ಬೇಧಿಸಿದ್ದಾರೆ. ಜಾಲದ ಆರೋಪಿಗಳಾದ ರೇಶ್ಮಾ ಯಾನೆ ನೀಮಾ (32), ಇಕ್ಲಾಬ್ ಮುಹಮ್ಮದ್ ಯಾನೆ ಇಕ್ಬಾಲ್(35), ಝೀನ್ ಯಾನೆ ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಝಿಫ್(34) ಎಂಬವರು ಬಂಧಿತರು. ಇನ್ನೂ ನಾಲ್ಕೈದು ಆರೋಪಿಗಳು ಈ ಜಾಲದಲ್ಲಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು […]

ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಗೆ ವಂಚನೆ

Friday, November 20th, 2020
Jyotishi

ಪುತ್ತೂರು :  ನಕಲಿ ಜ್ಯೋತಿಷಿಯೊಬ್ಬ ಜನರಿಂದ ಹಣ  ಪಡೆದು ವಂಚಿಸಿದ  ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಂಡ್ಯದ  ವ್ಯಕ್ತಿ  ಜ್ಯೋತಿಷಿಯಂತೆ ನಟಿಸಿದನ್ನು ಹಲವಾರು  ಮಂದಿ ನಂಬಿದ್ದರು.  ಹಣ ಕೊಟ್ಟ ಬಳಿಕ ಅವರಿಗೆ ಮೋಸದ ಅರಿವಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಜ್ಯೋತಿಷಿ ಹಲವಾರು ಜನರಿಂದ ಹಣ ತೆಗೆದುಕೊಂಡು ವಂಚನೆ ಮಾಡಿದ್ದರಿಂದ , ಅವರು ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ನಕಲಿ ಜ್ಯೋತಿಷಿ ಗೂಗಲ್‌ ಪೇ ಮೂಲಕ ಹಣವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ. ವಿಡಿಯೋ  ವೈರಲ್ ಆಗುತ್ತಿದ್ದಂತೆ ಜ್ಯೋತಿಷಿ ಗೂಗಲ್‌ ಪೇ […]