ವೀಕೆಂಡ್‌ ಕರ್ಫ್ಯೂ ನಡುವೆಯೇ ವಿವಾಹ : ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹಕ್ಕೆ ಪೊಲೀಸರ ಬೆಂಬಲ

Sunday, April 25th, 2021
Tungappa Bangera

ಬೆಳ್ತಂಗಡಿ :  ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ವೀಕೆಂಡ್‌ ಕರ್ಫ್ಯೂ ಮತ್ತು ಇತರ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 25 ರ ಭಾನುವಾರ ಆಯೋಜಿಸಲಾಗಿದೆ. ಪುಂಜಾಲಕಟ್ಟೆಯ ಪೊಲೀಸ್‌ ಠಾಣೆಯ ಸಮೀಪದಲ್ಲೇ ಇನ್ನು ಈ ಕಾರ್ಯಕ್ರಮ ನಡೆಸಲಾಗಿದೆ. ನೂರಾರು ಜನರು ಸೇರಿ ಕೊರೊನಾ ಉಲ್ಲಂಘನೆ ಯಾಗುತ್ತಿದ್ದರೂ ಕೂಡಾ ಪೊಲೀಸರು ಮಧ್ಯಪ್ರವೇಶ ಮಾಡಿಲ್ಲ. ಸಾಮಾನ್ಯ ಜನರ ವಿರುದ್ದ ಪ್ರಕರಣ […]

ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸ್ವಾಗತ, ಸಂಪೂರ್ಣ ಸಹಕಾರ : ವಿಶ್ವಹಿಂದೂ ಪರಿಷದ್

Monday, February 24th, 2020
vivaaha

ಮಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿಶ್ವಹಿಂದೂ ಪರಿಷದ್ ಸ್ವಾಗತಿಸಿದ್ದು,ಈ ಕಾರ್ಯಕ್ರಮ ಯಶಸ್ವಿಗೊಳಿಸಲು ವಿಶ್ವ ಹಿಂದೂ ಪರಿಷದ್ ಸಂಪೂರ್ಣ ಸಹಕಾರ ನೀಡಲಿದೆ. ಈ ಕಾರ್ಯಕ್ರಮ ಸಾಮಾಜಿಕ ಪರಿವರ್ತನೆಗೆ ಮುನ್ನಡಿಯಾಗಿದ್ದು, ಬಡವರಿಗೆ ದೀನ ದಲಿತರಿಗೆ ಮತ್ತು ಸರಳ ವಿವಾಹವಾಗಲಿಚ್ಛಿಸುವವರಿಗೆ ಪುಣ್ಯಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹದ ಮುಖಾಂತರ ಸರಕಾರ ಸುಮಾರು ರೂಪಾಯಿ 55,000 /- ಖರ್ಚು ಮಾಡಲಿದೆ. ಈ ನಿರ್ಧಾರ ಐತಿಹಾಸಿಕವಾಗಿದ್ದು ಸಮಾಜವನ್ನು ಪರಿವರ್ತನೆ ಮಾಡಿಸುವ ಮುಖಾಂತರ […]

ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Tuesday, January 17th, 2017
mass marriage

ಉಜಿರೆ  : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 4 ರಂದು ಗುರುವಾರ ಸಾಯಂಕಾಲ 6.50ಕ್ಕೆ ಗೋಧೂಳಿ ಲಗ್ನ ಸುಮೂರ್ತದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ದಿನಾಂಕ 15-01-2017ರಂದು ಬೆಳಿಗ್ಗೆ ಉಚಿತ ಸಾಮೂಹಿಕ ವಿವಾಹಕ್ಕಾಗಿ ಪ್ರತ್ಯೇಕ ಕಚೇರಿಯನ್ನು ವಸಂತ ಮಹಲ್ನ (ಮಂಜಯ್ಯ ಹೆಗ್ಗಡೆ ಕಲಾಭವನ) ಬಲ ಭಾಗದ ಕೊಠಡಿಯಲ್ಲಿ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08256-277144 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಅಪೇಕ್ಷೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲ […]

ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ 21 ಜೋಡಿಗಳ ಸಾಮೂಹಿಕ ವಿವಾಹ

Monday, May 5th, 2014
Rosario Cathedral

ಮಂಗಳೂರು : ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ (ಎಸ್‌.ವಿ.ಪಿ.)ದ 40ನೇ ವರ್ಷದ ಸಾಮೂಹಿಕ ವಿವಾಹ ರವಿವಾರ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ 21 ಜೋಡಿಗಳು ಸತಿ ಪತಿಗಳಾಗಿ ದಾಂಪತ್ಯ ಜೀವನ ಪ್ರವೇಶಿಸಿದರು. ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ ಪರವಾಗಿ ನವ ದಂಪತಿಗಳಿಗೆ ತಲಾ 5 ಸಾವಿರ ರೂ. ಠೇವಣಿ ಪತ್ರ, ಅಡುಗೆ ಸಾಮಗ್ರಿ ಮತ್ತು ಬಟ್ಟೆ ಬರೆ ಸಹಿತ ಒಟ್ಟು 10,000 ರೂ. ಮೌಲ್ಯದ ಉಡುಗೊರೆ ನೀಡಲಾಯಿತು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| […]

ಹಯಾತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಸಾಮೂಹಿಕ ವಿವಾಹ

Monday, February 25th, 2013
Hayatul Islam Association

ಮಂಗಳೂರು : ನಗರದ ಜಮಿಯ್ಯತುಲ್ ಫಲಾಹ್ ಹಾಲ್ ನಲ್ಲಿ ಬಾನುವಾರ ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಮಂಗಳೂರು ಇದರ ವತಿಯಿಂದ ನಡೆದ ಸಾಮೂಹಿಕ ವಿವಾಹ ದಲ್ಲಿ ಆರು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.  ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್  ರವರ ನೇತೃತ್ವದಲ್ಲಿ ವಿವಾಹ ನೆರವೆರಿಲ್ಪಟ್ಟಿತು. ಕಾರ್ಯಕ್ರಮ ಉದ್ಘಾಟಿನೆಯನ್ನು ನೆರವೇರಿಸಿ ಮಾತನಾಡಿದ ಕುದ್ರೋಳಿಯ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಹಾಜಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇಂತಹ ಸರಳ ವಿವಾಹ ಪ್ರತಿಯೊಂದು ಮುಸ್ಲಿಂ ಕುಟುಂಬದಲ್ಲೂ ನಡೆಸುವ ಮೂಲಕ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುವ ಮದುವೆಗೆ […]