Blog Archive

ಸಿಎಂಗೆ ನೈತಿಕತೆ ಎಂಬುದು ಇದ್ದಲ್ಲಿ ಅಬಕಾರಿ ಸಚಿವ ಹೆಚ್.ವೈ.ಮೇಟಿ ವಿರುದ್ಧ ತಕ್ಷಣ ರಾಜೀನಾಮೆ ಪಡೆಯಬೇಕು: ಜನಾರ್ದನ ಪೂಜಾರಿ

Tuesday, December 13th, 2016
Janardana poojay

ಮಂಗಳೂರು: ಅಬಕಾರಿ ಸಚಿವ ಹೆಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಆರೋಪದಿಂದ ಕಾಂಗ್ರೆಸ್ ಪಕ್ಷಕ್ಕೆ ಕಳಂಕವಾಗಿದೆ. ಸಿಎಂಗೆ ನೈತಿಕತೆ ಎಂಬುದು ಇದ್ದಲ್ಲಿ ತಕ್ಷಣ ಅವರಿಂದ ರಾಜೀನಾಮೆ ಪಡೆಯಬೇಕು. ರಾಜೀನಾಮೆ ನೀಡಲು ಒಪ್ಪದಿದ್ದಲ್ಲಿ ಪಕ್ಷದಿಂದಲೇ ಕಿತ್ತುಹಾಕಬೇಕೆಂದು ಕಾಂಗ್ರೆಸ್‌‌ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕಳಂಕ ತರುವವರನ್ನು ಪಕ್ಷದಿಂದ ಉಚ್ಛಾಟಿಸಲಿಕ್ಕಾಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರಲು ಅನರ್ಹರು ಎಂದು ವ್ಯಂಗ್ಯವಾಡಿದ್ದಾರೆ. ಅಧಿಕಾರಿ ಭೀಮಾನಾಯ್ಕ್‌‌ ಮೇಲೆ ಕ್ರಮ ಕೈಗೊಳ್ಳದ ಸಿಎಂ, ಈಗಾಗಲೇ ತಮ್ಮ ಜ್ಞಾನವನ್ನು ಅಡವಿಟ್ಟಿದ್ದಾರೆ ಎಂದ ಅವರು, ಮಂತ್ರಿಗಳ […]

ಅನುಪಮಾ ಶೆಣೈ ಯೂ ಟರ್ನ್ : ರಾಜೀನಾಮೆ ಹಿಂಪಡೆಯಲು ಸಿಎಂಗೆ ಪತ್ರ

Monday, September 19th, 2016
anupama

ಮಂಗಳೂರು: ಕೂಡ್ಲಿಗಿ ಡಿವೈಎಸ್‌ಪಿ ಹುದ್ದೆಗೆ ನೀಡಿದ ರಾಜೀನಾಮೆ ಹಿಂಪಡೆಯುವುದಾಗಿ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಆ. 29ಕ್ಕೆ ಪತ್ರ ಬರೆಯಲಾಗಿದ್ದರೂ ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಉತ್ತರ ಬಂದಿದೆ ಎಂದು ಕೂಡ್ಲಿಗಿ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಿಳಿಸಿದ್ದಾರೆ. ಯುವ ಬ್ರಿಗೇಡ್‌ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದ “ಹೈದರಾಬಾದ್‌ ಸ್ವಾತಂತ್ರ್ಯ ಸಂಘರ್ಷ: ಹೈದರಾಬಾದ್‌ ಮುಕ್ತಿ ದಿವಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜೀನಾಮೆ ಹಿಂಪಡೆಯುವ ಕುರಿತು ಪತ್ರ ಬರೆದ ಅನಂತರ ಮುಖ್ಯಮಂತ್ರಿಯವರೇ […]

ಸಿಎಂ ಪುತ್ರ ರಾಕೇಶ್‌ ಅವರ ಅಂತಿಮ ವಿದಾಯ

Tuesday, August 2nd, 2016
Rakesh

ಮೈಸೂರು: ಅಕಾಲಿಕ ಮರಣಕ್ಕೆ ತುತ್ತಾದ ಸಿಎಂ ಪುತ್ರ ರಾಕೇಶ್‌ ಅವರ ಅಂತಿಮ ಸಂಸ್ಕಾರ ಮೈಸೂರು ತಾಲೂಕಿನ ಟಿ. ಕಾಟೂರಿನ ಫಾರಂಹೌಸ್‌ನಲ್ಲಿ ಸೋಮವಾರ ಸಂಜೆ ಹಾಲುಮತ ಸಂಪ್ರದಾಯದಂತೆ ನೆರವೇರಿತು. ದಸರಾ ವಸ್ತು ಪ್ರದರ್ಶನ ಆವರಣದಿಂದ ಫಾರಂ ಹೌಸ್‌ಗೆ ಪಾರ್ಥಿವ ಶರೀರವನ್ನು ತರಲಾಯಿತು. ಸಮಾಧಿಗೆ ಉಪ್ಪು, ವಿಭೂತಿ, ಬಿಲ್ವಪತ್ರೆ, ಅರಿಶಿಣ, ಕುಂಕುಮ ಹಾಕಿ ಪೂಜೆ ಸಲ್ಲಿಸಲಾಯಿತು. ರಾಕೇಶ್‌ ಅವರ ಬಾಯಿಗೆ ರುದ್ರಾಕ್ಷಿ ಹಾಕಲಾಯಿತು. ಅಕಾಲಿಕ ಮರಣ ಉಂಟಾಗಿರುವುದರಿಂದ ಅಷ್ಟ ದಿಕ್ಕುಗಳಿಗೂ ದಿಗ್ಬಂಧನ ಹಾಕಿ, ಮಂತ್ರಾಕ್ಷತೆ, ಅಂಕುರಾರ್ಪಣೆ ನೆರವೇರಿಸಿ ಎಂಟು ದಿಕ್ಕಿನಲ್ಲಿಯೂ […]

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ಸಹಿತ 6 ಮಂದಿಯ ದುರ್ಮರಣ

Tuesday, January 19th, 2016
Andra Accident

ಕಾಸರಗೋಡು: ಆಂಧ್ರಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮುಳ್ಳೇರಿಯಾ ಸಮೀಪದ ದೇಲಂಪಾಡಿ ಬಳಿಯ ನಿವಾಸಿಗಳಾದ ಒಂದೇ ಕುಟುಂಬದ ಐವರ ಸಹಿತ ಆಂಧ್ರ ನಿವಾಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ದೇಲಂಪಾಡಿ ಸಮೀಪದ ಊಜಮಪಾಡಿ ನಿವಾಸಿಗಳಾದ ದೇವಸ್ಯ(65),ಪತ್ನಿ ತ್ರೇಸಿ(62),ಇವರ ಪುತ್ರ ರೋಬಿನ್(38),ಪತ್ನಿ ಬಿಸ್‌ಮೋಳ್(29) ಹಾಗೂ ನಾಲ್ಕು ತಿಂಗಳ ಮಗು ಅಪಘಾತದಲ್ಲಿ ಮೃತರಾದರು.ಕಾರು ಚಾಲಕ ಆಂಧ್ರ ನಿವಾಸಿ ಪವನ್ ಎಂಬವರೂ ಘಟನೆಯಲ್ಲಿ ಮೃತರಾಗಿದ್ದಾರೆ. ಊಜಂಪಾಡಿಯ ದೇವಸ್ಯ,ಪತ್ನಿ ತ್ರೇಸಿ ಹಾಗೂ ಇವರ ಇನ್ನೋರ್ವ ಪುತ್ರ ರಿನಿಶ್ ಕಳೆದ 30 […]