Blog Archive

ನಾಯಕರುಗಳ ಭೇಟಿಗೆ ಹೊಸ ಶಕ್ತಿ ಕೇಂದ್ರವಾಯಿತು ಕಾವೇರಿ!

Friday, June 29th, 2018
siddaramaih

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಚಟುವಟಿಕೆ ಇದುವರೆಗೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದ ಜತೆಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ವಿಧಾನಸೌಧದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಹೊಸದೊಂದು ಶಕ್ತಿ ಕೇಂದ್ರ ರಚನೆ ಆಗಿದೆ. ಅದು ಮಾಜಿ ಸಿಎಂ ಸಿದ್ದರಾಮಯ್ಯರ ಹಾಲಿ ನಿವಾಸ ಕಾವೇರಿ. ಕಾವೇರಿ ಇದೀಗ ಸಿದ್ಧವಾಗಿರುವ ಹೊಸ ಶಕ್ತಿ ಕೇಂದ್ರ. ಇದೀಗ ಹಲವು ಶಾಸಕರು, ಕಾಂಗ್ರೆಸ್ ನಾಯಕರು ಭೇಟಿ ಮಾಡುತ್ತಿದ್ದಾರೆ. ಕಳೆದ ರಾತ್ರಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ವಾಪಾಸಾಗಿರುವ […]

ಕಾವೂರು ಕುರುಬರ ಕನಕಭವನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

Thursday, June 28th, 2018
Kavooru Kuruba

ಮಂಗಳೂರು : ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ನಗರದ ಕಾವೂರು ಶಾಂತಿ ನಗರದಲ್ಲಿ ಕುರುಬರ ಸಂಘದಿಂದ ನಿರ್ಮಿಸಲಾಗಿರುವ ಕನಕಭವನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು. ಕಾವೂರಿನಲ್ಲಿ ಕನಕ ಭವನಕ್ಕೆ ತೆರಳಿ ಕಟ್ಟಡ ವೀಕ್ಷಿಸಿ ಕುರುಬ ಸಮುದಾಯದ ಜನರ ಜತೆ ಮಾತನಾಡಿದರಲ್ಲದೆ, ಸಂಘವು ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಮಾಹಿತಿ ಪಡೆದರು. ‘‘ನಾನು ಚಿಕಿತ್ಸೆಗಾಗಿ ಬಂದಿದ್ದೆ. ಅದನ್ನು ಮುಗಿಸಿ ಹೊರಟಿರುವೆ. ಏನಾದರು ಮಾತನಾಡಲಿದ್ದರೆ ನಾನೇ ಕರೆಯುತ್ತೇನೆ’’ ಎಂದು  ಮಾಧ್ಯಮ ಪ್ರತಿನಿಧಿಗಳ  ಜೊತೆ ಹೇಳಿದರು. ಈ ಸಂದರ್ಭ […]

ಪ್ರಕೃತಿ ಚಿಕಿತ್ಸೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ, ಬೆಂಗಳೂರಿಗೆ ಪ್ರಯಾಣ

Thursday, June 28th, 2018
siddaramaiah

ಉಜಿರೆ: ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಇದೇ 16 ರಿಂದ 28ರ ವರೆಗೆ ಸಾಧಕರಾಗಿ ಶುಶ್ರೂಷೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಗುರುವಾರ ಬೆಳಿಗ್ಗೆ ಹನ್ನೊಂದು ಗಂಟೆ ವರೆಗೆ ಎಂದಿನಂತೆ ಶುಶ್ರೂಷೆ ಪಡೆದು ಬಳಿಕ ಶ್ರೀ ಸನ್ನಿಧಿ ಅತಿಥಿ ಗೃಹಕ್ಕೆ ಬಂದರು. ಅಲ್ಲಿಂದ 12 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬಂದು ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಬಳಿಕ ಶ್ರೀ ಸನ್ನಿಧಿಯಲ್ಲಿ ಭೋಜನ ಸ್ವೀಕರಿಸಿ ಮಂಗಳೂರಿಗೆ ಹೋದರು. ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ […]

ಕೋಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ

Wednesday, June 27th, 2018
malikarjun

ಬೆಂಗಳೂರು: ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದೇನೆ ಎಂದು ನವದೆಹಲಿಯಲ್ಲಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸುತ್ತೇನೆ. ವಿಡಿಯೋ ಬಗ್ಗೆ ವಿಶೇಷ ಮಾಹಿತಿ ಇಲ್ಲ. ನಾನೂ ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ತಿರುಚಿರುವ ಸಾಧ್ಯತೆ ಇದೆ. ನಿಜವಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೋ ಎಂಬ […]

ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದರಂತೆ ಮಾಡುತ್ತೇವೆ: ಸಚಿವ ರಮೇಶ್ ಜಾರಕಿಹೊಳಿ

Wednesday, June 27th, 2018
ramesh

ಮಂಗಳೂರು: ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಧರ್ಮಸ್ಥಳಕ್ಕೆ ಆಗಮಿಸಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಸಚಿವರು ನಮ್ಮ ನಾಯಕರನ್ನು ಭೇಟಿ ಆಗಲು ಬಂದಿದ್ದೇನೆ. ಏನು ವಿಶೇಷಯಿಲ್ಲ.ಅವರ ಆರೋಗ್ಯ ವಿಚಾರಿಸಲು ಹೋಗುತ್ತಿದ್ದೇವೆ ಎಂದರು,ನಾನು ಮತ್ತು 8 ಜನ ಶಾಸಕರು ಬಂದಿದ್ದೇವೆ. ಬಜೆಟ್ ವಿಚಾರದಲ್ಲಿ ಇರುವ ಅಸಮಾಧಾನವನ್ನು ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ ಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದರಂತೆ ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿಕೆ ನೀಡಿದ್ದಿದಾರೆ. ಅಥಣಿ ಶಾಸಕ ಮಹೇಶ್ ಕಮಟಳ್ಳಿ, […]

ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ…11 ದಿನಗಳಲ್ಲಿ 3 ಕೆ.ಜಿ. ತೂಕ ಇಳಿಸಿಕೊಂಡ ಸಿದ್ದರಾಮಯ್ಯ!

Wednesday, June 27th, 2018
siddaramaih

ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಯಲಯದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ದಿನಗಳಲ್ಲಿ 3 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. 12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ದಾಖಲಾಗಿರುವ ಸಿದ್ದರಾಮಯ್ಯ ಇಂದು ಕೊನೆಯ ದಿನದ ಚಿಕಿತ್ಸೆ ಪಡೆಯಲಿರುವ ಅವರು ಗುರುವಾರ ಬೆಳಗ್ಗೆ 10 ಗಂಟೆಗೆ ಚಿಕಿತ್ಸಾಲಯದಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅಲ್ಲಿಂದ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಕುಮಾರಸ್ವಾಮಿ ಕೈಗೊಂಡ ವರ್ಗಾವಣೆ ನಿರ್ಧಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ..!

Tuesday, June 26th, 2018
siddaramaih

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೈಗೊಂಡ ವರ್ಗಾವಣೆ ನಿರ್ಧಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ ಎಂದು ಎನ್ನಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೇಮಕಗೊಂಡಿದ್ದ ಅಧಿಕಾರಿಗಳನ್ನು ಕುಮಾರಸ್ವಾಮಿ ವರ್ಗಾವಣೆ ಮಾಡಿದ್ದಾರೆ. ಕೆಲವರನ್ನು ಅದಾಗಲೇ ಬೇರೆಡೆ ವರ್ಗಾಯಿಸಿದ್ದು, ಇನ್ನು ಕೆಲವರ ವರ್ಗಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದು ಸಿದ್ದರಾಮಯ್ಯಗೆ ಸಿಟ್ಟು ತಂದಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಆಪ್ತ ಅಧಿಕಾರಿಗಳಾಗಿದ್ದ ಮೂವರನ್ನು ಸಿಎಂ ಕುಮಾರಸ್ವಾಮಿ ವರ್ಗಾಯಿಸಿದ್ದಾರೆ. ಇದು ಬೇಸರಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯ […]

ಸಿದ್ದರಾಮಯ್ಯರನ್ನು ಭೇಟಿಯಾದ ವೀರೇಂದ್ರ ಹೆಗ್ಗಡೆ..!

Thursday, June 21st, 2018
siddaramaih

ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಸಾಧಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಚಿವ ಪುಟ್ಟರಾಜು ಶಾಂತಿವನಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಅವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ನಂತರ ಶಾಂತಿವನದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭ ಮಾಜಿ ಶಾಸಕ ವಸಂತ ಬಂಗೇರ, ಶಾಂತಿವನ ಟ್ರಸ್ಟಿನ […]

ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಈಗ ಶುದ್ಧ ಸಸ್ಯಹಾರಿ..!

Wednesday, June 20th, 2018
siddaramaih

ಮಂಗಳೂರು: ನಾಟಿ ಕೋಳಿ, ಬನ್ನೂರು ಮಟನ್ ಹಾಗು ಪಾಯ ಸೂಪ್ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಪ್ರಾಣ. ಮುಂಜಾನೆ ಅವರಿಗೆ ಪಾಯ ಸೂಪ್ ಬೇಕೇ ಬೇಕು. ಹೆಚ್ಚಾಗಿ ಮಾಂಸಾಹಾರಕ್ಕೆ ಒಲವು ತೋರುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪ್ಪಟ ಸಸ್ಯಹಾರಿ. ಅರೆರೆ ಇದು ಹೇಗೆ ಸಾಧ್ಯ ಎಂಬ ಕುತೂಹಲವೇ? ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿ ವನದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಈಗ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ […]

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವ ರೇವಣ್ಣ!

Tuesday, June 19th, 2018
h-d-revanna

ಮಂಗಳೂರು: ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರೇವಣ್ಣ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಜಿಲ್ಲಾ ಪ್ರವಾಸದಲ್ಲಿರುವ ರೇವಣ್ಣ ಅವರು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಚಿವ ರೇವಣ್ಣ ಅವರು ಗುಡ್ಡ ಕುಸಿತದಿಂದ ಸಮಸ್ಯೆಗಳೊಗಾದ ಚಾರ್ಮಾಡಿ ಘಾಟಿಯನ್ನು ವೀಕ್ಷಿಸಿದರು.