ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳುತ್ತಿರುವ ಉದಯ್‌ ಕುಮಾರ್‌ ಶೆಟ್ಟಿ

Thursday, September 19th, 2024
Mahaveer-Hegde

ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳಿ ತಗಾದೆ ಮಾಡುತ್ತಿರುವ ಉದಯ್‌ ಕುಮಾರ್‌ ಶೆಟ್ಟಿಯವರೇ, ಪರಶುರಾಮನ ಮೂರ್ತಿ ಮಾಡುವ ಶಿಲ್ಪಿ GST ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ಕಳಪೆ ಕಾಮಗಾರಿಯ ಸರದಾರ ಎಂದೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಮ್ಮೆ ನಿಮ್ಮ ಹೆಸರನ್ನು […]

ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಮತ್ತು ಉಡುಪಿ ಎಸ್ಪಿ ನಡುವೆ ವಾಕ್ಸಮರ

Friday, November 24th, 2023
Udupi-KDP

ಉಡುಪಿ : ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ ನಡುವೆ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಜಟಾಪಟಿ ನಡೆದಿದೆ. ಲಾರಿ ಮುಷ್ಕರ ಮಾಡಿದ್ದ ವೇಳೆ ಪೊಲೀಸ್ ವರಿಷ್ಠಾಧಿಕಾರಿ ನೋಟಿಸ್ ನೀಡಿದ್ದು ಈ ಬಗ್ಗೆ ವಾಗ್ದಾಳಿ ನಡೇಸಿರುವ ಸುನೀಲ್ ಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ. ನಾವು ಮನೆಯಲ್ಲಿ […]

ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಮೂಲಕ ಸಾರ್ವಜನಿಕರೇ ಸಾಧಕರನ್ನು ಶಿಫಾರಸು ಮಾಡಬಹುದು- ಸುನಿಲ್ ಕುಮಾರ್

Saturday, September 25th, 2021
Sunil Kumar V

ಬೆಂಗಳೂರು :  ನವೆಂಬರ್ ಒಂದರಂದು 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಈ ಬಾರಿಯ ವಿಶೇಷವೆಂದರೆ ,ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ […]

ವಿದ್ಯುತ್ ಬಿಲ್ ನಲ್ಲಿ ಅಕ್ರಮ ,ಮೂವರ ಅಮಾನತು ಸಚಿವ- ಸುನಿಲ್ ಕುಮಾರ್

Saturday, September 4th, 2021
Sunil Kumar V

ಬೆಂಗಳೂರು :  ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ , ಈ ಮೂವರು ಅಮಾನತಿ ಗೊಳಗಾದ ಸಿಬ್ಬಂದಿ ಯಾಗಿದ್ದಾರೆ. ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ಲುಗಳನ್ನು ಮಾರ್ಪಾಟು […]

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಸುನಿಲ್‌ ಕುಮಾರ್‌ ಗೆ ಚಿನ್ನ

Wednesday, February 19th, 2020
sunil-kumar

ನವದೆಹಲಿ : ಭಾರತದ ಸುನಿಲ್‌ ಕುಮಾರ್‌ ಅವರು ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕಳೆದ 27 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ. 87 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಅವರು ಕಿರ್ಗಿಸ್ಥಾನದ ಅಜತ್‌ ಸಲಿದಿನೋವ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್‌ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. 2019ರಲ್ಲಿ ನಡೆದ ಕೂಟದಲ್ಲಿ ಫೈನಲಿಗೇರಿದ್ದ ಅವರು ಅಂತಿಮ […]

ಎಪ್ರಿಲ್ 13 ರ ಸಮಾವೇಶ ಹೊಸ‌ ಇತಿಹಾಸ‌ ನಿರ್ಮಿಸಲಿದೆ : ಸುನಿಲ್ ಕುಮಾರ್

Wednesday, April 10th, 2019
Sunil-Karkala

ಮಂಗಳೂರು: ಎಪ್ರಿಲ್ 13 ರಂದು ನಡೆಯುವ ಸಮಾವೇಶದ ಪೂರ್ವಭಾವಿ ತಯಾರಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಕಾರ್ಕಳ‌ ಶಾಸಕ ಸುನಿಲ್ ಕುಮಾರ್ ಕರಾವಳಿಯಲ್ಲಿ ಭಾಜಪಾ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ ಎಂದು ಹೇಳಿದ್ದಾರೆ . ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಮಂಗಳೂರು ನಗರ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಕಳೆದ ಬಾರಿ ನರೇಂದ್ರ ಮೋದಿ ಮಂಗಳೂರಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದಾಗ ದಾಖಲೆಯ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ […]

ಅಕ್ರಮ ಜಾನುವಾರು ಸಾಗಾಟ: ಮೂವರು ಆರೋಪಿಗಳ ಬಂಧನ

Thursday, November 15th, 2018
trnsfer

ಮಂಗಳೂರು: ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೆರ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿ, 6 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಬದಿಯಡ್ಕ ಗ್ರಾಮದ ಕಂಗನ್ನಾರಿನ ವಿನಯ್ ಕುಮಾರ್(38), ಕಣ್ಣೂರು ಜಿಲ್ಲೆಯ ತಲ್ಲೇರಿವೆಲ್ ತಾಲೂಕಿನ ಪುನೂರಿನ ಸುನಿಲ್ ಕುಮಾರ್(45), ಕಾಸರಗೋಡು ತಾಲೂಕಿನ ನೆಕ್ಕರಾಜೆ ಗ್ರಾಮದ ಚೆಂಗಳದ ಸುರೇಶ್ ಸಿ.ಎಚ್.(38) ಬಂಧಿತ ಆರೋಪಿಗಳು. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಪೆರ್ನೆ ಕಡೆಯಿಂದ ವಿಟ್ಲದ ಕಡೆಗೆ 407 ಗೂಡ್ಸ್ ಟೆಂಪೊದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ […]

ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ದೂರು

Wednesday, January 24th, 2018
karkala

ಬಂಟ್ವಾಳ: ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತ ಪ್ರಶಾಂತ ಕುಲಾಲ್‌ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಿಜೆಪಿ ನಡಿಗೆ ಗ್ರಾಮದ ಕಡೆಗೆ ಪಾದಯಾತ್ರೆಯ 9ನೇ ದಿನದ ಸಭಾ ಕಾರ್ಯಕ್ರಮ ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದಿದ್ದು, ಈ ಸಂದರ್ಭ ಸುನಿಲ್‌ಕುಮಾರ್‌ ಜನರಲ್ಲಿ ಧಾರ್ಮಿಕ ಭಾವನೆ ಕೆರಳುವಂತೆ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಚುನಾವಣೆ ರಾಜೇಶ್‌ ನಾೖಕ್‌, ರಮಾನಾಥ ರೈ ನಡುವಿನ ಚುನಾವಣೆಯಲ್ಲ. ಅಲ್ಲಾ ಮತ್ತು ರಾಮ ನಡುವಿನ ಚುನಾವಣೆ. ನೀವು ಅಲ್ಲನನ್ನು ಪ್ರೀತಿಸುವರಿಗೆ […]

ಜನವಾಸವಿಲ್ಲದ ಮನೆಯಿಂದ 840 ಲೀಟರ್ ಮದ್ಯ ವಶ ಕಾರು ಸಹಿತ ಓರ್ವ ಸೆರೆ: ಇನ್ನೋರ್ವನ ವಿರುದ್ಧ ದೂರು

Thursday, August 25th, 2016
Alcohal

ಕಾಸರಗೋಡು: ಓಣಂ ಸಮಯದಲ್ಲಿ ವಿತರಿಸಲೆಂದು ಬಚ್ಚಿಡಲಾಗಿದ್ದ ಬೃಹತ್ ಪ್ರಮಾಣದ ವಿದೇಶ ಮದ್ಯವನ್ನು ಅಬಕಾರಿ ಮತ್ತು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿದ್ದಾರೆ. ಪೊಯಿನಾಚಿ ಸಮೀಪದ ಮೈಲಾಟಿ ರಾಷ್ಟ್ರೀಯ ಹೆದ್ದಾರಿ ಜವುಳಿ ಗಿರಣಿಯ ಸಮೀಪದ ಹೌಸಿಂಗ್ ಕಾಲನಿ ಬಳಿ ಜನವಾಸ ವಿಲ್ಲದ ಹೆಂಚುಹಾಸಿದ ಮನೆಯಿಂದ ಈ ಮಾಲು ವಶಪಡಿಸಲಾಗಿದೆ. 750, 500 ಮತ್ತು 100 ಎಂ.ಎಲ್‌ನ ಒಟ್ಟು 840 ಲೀಟರ್ ಮದ್ಯ ವಶಪಡಿಸಲಾದ ಮಾಲಿನಲ್ಲಿದೆ. ಈ ಸಂಬಂಧ ಕೆ. ಸುನಿಲ್ ಕುಮಾರ್ (23) ಎಂಬಾತನನ್ನು ಸೆರೆಹಿಡಿದು ಈತ ಬಳಸುತ್ತಿದ್ದ ಕಾರನ್ನು ಕಾರ್ಯಾಚರಣೆ ನಡೆಸಿದ […]