ಕರಾವಳಿಯ ದೇವಸ್ಥಾನಗಳಲ್ಲಿ ಸೂರ್ಯಗ್ರಹಣದ ಬಳಿಕ ವಿಶೇಷ ಪೂಜೆ ಪುನಸ್ಕಾರ

Sunday, June 21st, 2020
solar-eclips

ಮಂಗಳೂರು :  ಭಾನುವಾರ ಸೂರ್ಯಗ್ರಹಣದ ಬಳಿಕ ಕರಾವಳಿಯ ದೇವಸ್ಥಾನಗಳಲ್ಲಿ ಶುದ್ಧತೆ ಆರಂಭವಾಗಿದೆ. ಗ್ರಹಣ ಮೋಕ್ಷದ ನಂತರ ದೇವಸ್ಥಾನಗಳನ್ನು ಶುಚಿಗೊಳಿಸಿ, ಬಳಿಕ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಇಂದು ಬೆಳಗ್ಗೆ 10 ಗಂಟೆ 04 ನಿಮಿಷಕ್ಕೆ ಗ್ರಹಣ ಪ್ರಾರಂಭವಾಗಿದ್ದು, ಮಧ್ಯಾಹ್ನ 1.22ಕ್ಕೆ ಮುಕ್ತಾಯಗೊಂಡಿದೆ. ಇದು ಖಂಡಗ್ರಾಸ ಗ್ರಹಣವಾಗಿದ್ದು, ಉತ್ತರ ಭಾರತದ ಕೆಲವು ಪ್ರದೇಶಗಳು ಮತ್ತು ಕರ್ನಾಟಕದಲ್ಲಿ ಈ ಅಪೂರ್ವ ಖಗೋಳ ವಿದ್ಯಮಾನ ಶೇ. 45 ರಷ್ಟು ಗೋಚರಿಸಿದೆ. ಕರಾವಳಿಯ ಹಲವೆಡೆ ಕೆಲ ಕಾಲ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯಗ್ರಹಣ […]

ಭಾರತದಲ್ಲಿ ಕಾಣಿಸುವ ಸೂರ್ಯಗ್ರಹಣ, ಈ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಾಶಿಗಳಿಗನುಸಾರ ದೊರಕುವ ಫಲ

Saturday, June 20th, 2020
solar-eclipes

‘ಜ್ಯೇಷ್ಠ ಅಮಾವಾಸ್ಯೆ, 21.06.2020, ರವಿವಾರದಂದು ಭಾರತದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ ‘ಕಂಕಣಾಕೃತಿ’ ಸೂರ್ಯಗ್ರಹಣವು ಕಾಣಿಸಲಿದ್ದು ಉಳಿದ ಸಂಪೂರ್ಣ ಭಾರತದಲ್ಲಿ ‘ಖಂಡಗ್ರಾಸ ಸೂರ್ಯ ಗ್ರಹಣವು ಕಾಣಿಸಲಿದೆ. ಸೂರ್ಯ ಹಾಗೂ ಪೃಥ್ವಿಯ ನಡುವೆ ಚಂದ್ರನು ಬಂದು ಚಂದ್ರನ ನೆರಳು ಪೃಥ್ವಿಯ ಮೇಲೆ ಬೀಳುತ್ತದೆ. ಅದು ಯಾವ ಭಾಗದ ಮೇಲೆ ಬೀಳುತ್ತದೆ ಮತ್ತು ಎಷ್ಟು ಸಮಯ ಬೀಳುತ್ತದೆ, ಅಷ್ಟು ಸಮಯ ಚಂದ್ರಬಿಂಬದಿಂದಾಗಿ ಸೂರ್ಯಬಿಂಬವು ಮುಚ್ಚಿದಂತೆ ಕಾಣಿಸುತ್ತದೆ. ಸೂರ್ಯಬಿಂಬವು (ಸೂರ್ಯನು) ಸಂಪೂರ್ಣ ಕಾಣದಂತಾದರೆ, […]

ಜೂನ್ 21 ಖಂಡಗ್ರಾಸ ಚೂಡಮಣಿ ಸೂರ್ಯಗ್ರಹಣ, ಯಾವರಾಶಿಯವರಿಗೆ ಕಷ್ಟ, ಏನು ಮಾಡಬೇಕು

Sunday, June 14th, 2020
solar-eclips

ಮಂಗಳೂರು : ಜೂನ್ 21 ರವಿವಾರ ಗೋಚರಿಸಲಿರುವ ಕಂಕಣ ಗ್ರಹಣ ಆಫ್ರಿಕಾಖಂಡದ ಕೊಂಗೊ(RC) ದಿಂದ ಪ್ರಾರಂಭವಾಗಿ ಕೊಂಗೊ (DRC) , ಸೂಡಾನ್, ಇಥಿಯೋಪಿಯಾ , ಸೌದಿ ಅರೇಬಿಯಾ , ಪಾಕಿಸ್ತಾನದ ಬಲೂಚಿ , ಸಿಂದ್ ಪಂಜಾಬ್ , ಉತ್ತರ ಭಾರತದ‌ ಕೆಲವು ಪ್ರಾಂತ್ಯಗಳು , ಟಿಬೇಟ್, ಚೀನಾ , ತೈವಾನ್ ಮೂಲಕ ಹಾದು ಹೋಗುವುದು. ಇದು  2020ರ ವರ್ಷದ ಮೊದಲ ಸೂರ್ಯಗ್ರಹಣ. ಈ ಸಮಯದಲ್ಲಿ ಸೂರ್ಯನು ಪ್ರಕಾಶಮಾನವಾದ ಉಂಗುರದಂತೆ ಕಾಣುತ್ತಾನೆ.  ಪ್ರತಿ 18 ವರ್ಷಗಳಿಗೊಮ್ಮೆ ಈ ರೀತಿಯ ಸೂರ್ಯಗ್ರಹಣ ಕಾಣಿಸಿಕೊಳ್ಳುವುದೆಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಸೂರ್ಯಗ್ರಹಣವು […]

ಸೂರ್ಯಗ್ರಹಣ : ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕಕಲ್ಯಾಣಾರ್ಥ ಮಂತ್ರ ಪಠನ; ಭಜನೆ

Friday, December 27th, 2019
Kadri

ಮಂಗಳೂರು : ಡಿಸೆಂಬರ್ 26 ರಂದು ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದೊಂದಿಗೆ ಕಂಕಣ ಸೂರ್ಯಗ್ರಹಣದ ಪ್ರಯುಕ್ತ, ಲೋಕಕಲ್ಯಾಣಾರ್ಥ ಸುಭಿಕ್ಷೆಗಾಗಿ ಸಾಮೂಹಿಕ ರುದ್ರಪಾರಾಯಣ, ವಿಷ್ಣು ಸಹಸ್ರನಾಮ ಪಠನ, ಹಾಗು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ವೇ.ಮೂ.ಡಾ.ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅಡಿಗ, ವಿದ್ವಾನ್ ರವಿ ಅಡಿಗ, ಕೃಷ್ಣ ಅಡಿಗ, ಗಣೇಶ ಹೆಬ್ಬಾರ್ ಕದ್ರಿ, ಡಾ.ಪ್ರಕಾಶ್‌ಕೃಷ್ಣ, ಸುಧಾಕರ ರಾವ್ ಪೇಜಾವರ, ಪ್ರಭಾಕರ […]

ಜ.ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳಿಂದ ಸೂರ್ಯಗ್ರಹಣ ವೀಕ್ಷಣೆ : ಇಸ್ರೋ ತಂಡದಿಂದ ವಿವರಣೆ

Thursday, December 26th, 2019
thimmayya-school

ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇಸ್ರೋ ತಂಡದವರೊಂದಿಗೆ ಕಂಕಣ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಿದರು. ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಇಸ್ರೋ ತಂಡದ ಅನುಜ್ ಜಗತಾಪ್, ಭಾನುತೇಜ ಹಾಗೂ ಪ್ರಫುಲ್ ಹೆಚ್.ರಾಯ್ ಅವರುಗಳು ಪ್ರಕೃತಿಯ ವಿಸ್ಮಯವಾದ ಸೂರ್ಯಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಅಲ್ಲದೆ, ನೀರಿನ ಸಹಾಯದಿಂದ ರಾಕೆಟ್ ಉಡಾವಣೆಯ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಿದರು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆದವು. ಅಪರಾಹ್ನ ನಡೆದ […]