ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

Thursday, January 6th, 2022
Deepthi Marla

ಬೆಂಗಳೂರು :  ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಹನಿಟ್ರ್ಯಾಪ್, ಮತಾಂತರ ಹಾಗೂ ಉಗ್ರ ಸಂಘಟನೆಯ ಒಡನಾಟವಿರುವ ಮಾಹಿತಿ ಹೊರಬಿದ್ದಿದೆ. ಮಾಜಿ ಶಾಸಕ ಇದನಬ್ಬರ ಮೊಮ್ಮಗನ ಮದುವೆ ಆದ ಬಳಿಕ ಇಸ್ಲಾಂಗೆ ಮತಾಂತರವಾಗಿದ್ದ ದೀಪ್ತಿ ಮಾರ್ಲ ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಯುವಕರನ್ನ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳಂತೆ. ಬಳಿಕ ಮತಾಂತರಗೊಂಡ ಯುವಕರನ್ನ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ‌ […]

ಯುವತಿಯರನ್ನು ಬಳಸಿ ಹನಿಟ್ರ್ಯಾಪ್, ಓರ್ವನ ಬಂಧನ

Monday, December 20th, 2021
Ranjith S

ಉಡುಪಿ : ಹಣಕ್ಕಾಗಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಎಸ್. ಹೆಂಗವಳ್ಳಿ (26) ಬಂಧಿತ ಆರೋಪಿ. ರಂಜಿತ್ ಹಣಕ್ಕಾಗಿ ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದನು ಎಂದು ವ್ಯಕ್ತಿಯೊಬ್ಬರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಡಿ.17ರಂದು ಸಂಜೆ ವೇಳೆ ಬಂಧಿಸಿದ್ದಾರೆ. ಆರೋಪಿಯನ್ನು ಡಿ.18ರಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಆರು ದಿನಗಳ ಕಾಲ […]

ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋ ತೋರಿಸಿ 30 ಲಕ್ಷ ವಸೂಲಿ – ಮೂವರ ಬಂಧನ

Monday, July 5th, 2021
Puttur Honey Trap

ಪುತ್ತೂರು : ಓರ್ವ ಯುವತಿ ಮತ್ತು ಆರು ಮಂದಿ ಯುವಕರು ಸೇರಿ ಪುತ್ತೂರಿನ ಯುವಕನೊಬ್ಬನಿಗೆ ಮಾಡಿದ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರದ ಸಂಪ್ಯ ರಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಯುವತಿಯೊಬ್ಬಳು ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರದೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದು ಕೊಂಡಿದ್ದರು. ಈ ಕುರಿತು […]

ಸೇಲ್ಸ್‌ಮ್ಯಾನ್ ಗೆ ಹನಿಟ್ರ್ಯಾಪ್, ಯುವತಿ ಬಂಧನ, ಆರು ಮಂದಿಗೆ ಹುಡುಕಾಟ

Sunday, July 4th, 2021
Honey Trap

 ಪುತ್ತೂರು : ಸೇಲ್ಸ್‌ಮ್ಯಾನ್ ಆಗಿರುವ ವ್ಯಕ್ತಿಯೊಬ್ಬ ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ  7 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25ವ.)ಎಂಬವರು ಹನಿಟ್ರ್ಯಾಪ್‌ಗೆ  ಗೊಳಗಾಗಿ  ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್‌ […]

ಐವರು ಶಾಸಕರನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಕೆಡವಿದ್ದ ಕಿಲಾಡಿಯಿಂದ ಮತ್ತೋರ್ವ ಸಚಿವರಿಗೆ 10 ಕೋಟಿ ರೂ. ಬೇಡಿಕೆ

Wednesday, November 27th, 2019
honeytrap

ಬೆಂಗಳೂರು:  ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆಯೊಡ್ಡಿ ಬಿಜೆಪಿಯ ಮಾಜಿ ಸಚಿವ ರಿಂದ  10 ಕೋಟಿ ರೂ. ಸುಲಿಗೆಗೆ ಮುಂದಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿ ರಾಘವೇಂದ್ರ ಬಂಧಿತ ಆರೋಪಿ ಇತ್ತೀಚೆಗೆ ಕೆಲಸ ತೊರೆದು ಮನೆಯಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಘವೇಂದ್ರ ತನ್ನ ಗೆಳತಿಯ ಮೂಲಕ ಹನಿಟ್ರ್ಯಾಪ್‌ಗೆ ಮಾಜಿ ಸಚಿವರೊಬ್ಬರನ್ನು ಕೆಡವಿದ್ದ. ಗೆಳತಿಯೊಂದಿಗೆ ಮಾಜಿ ಸಚಿವರು ಇರುವ ವಿಡಿಯೋ ಚಿತ್ರೀಕರಿಸಿಕೊಂಡಿದ್ದ. […]

ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಆರು ಮಂದಿಯ ಬಂಧನ

Thursday, September 29th, 2016
honey-trap

ಮಂಗಳೂರು: ಯುವತಿಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮೆನೇಜರ್‌ ಒಬ್ಬರಿಗೆ ಪಂಗನಾಮ ಹಾಕಲು ಹೋಗಿದ್ದ ಓರ್ವ ಯುವತಿ ಸೇರಿದಂತೆ ಆರು ಮಂದಿಯನ್ನು ಉರ್ವ ಹಾಗೂ ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಯುವತಿಯರನ್ನು ಬಳಸಿಕೊಂಡು ನಗರದ ಬಳ್ಳಾಲ್‌ಬಾಗ್ ನಿವಾಸಿ ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಸೆರೆ ವಿಧಿಸಿ ಆದೇಶ ನೀಡಿದೆ. ಬಂಧಿತರನ್ನು ತೃಪ್ತಿ ಕುಲಾಲ್ ಕೋಟೆಕಾರ್, ಅವಿನಾಶ್ ಕೊಣಾಜೆ, […]