ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸರಿಗೆ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ, 9 ಮಂದಿ ಆರೋಪಿಗಳ ಬಂಧನ

Friday, December 3rd, 2021
Gujjarakere Attack

ಮಂಗಳೂರು: ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು  ರಕ್ಷಣೆಗೆ ಧಾವಿಸಿದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ  ಮಡಿದ ಘಟನೆ ನಡೆದಿದೆ. ಈ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹಾದ್, ಅಬು ತಹರ್, ಮುಹಮ್ಮದ್ ನಾಸಿಫ್, ಆದರ್ಶ ಎಂದು ಗುರುತಿಸಲಾಗಿದ್ದು, ಒಟ್ಟು 16 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. […]

ಮಹಿಳೆಯ ಮನೆಗೆ ಅಕ್ರಮ ಪ್ರವೇಶಿಸಿ ಕೊಲೆ ಯತ್ನ, ಏಳು ಮಂದಿಯ ಬಂಧನ

Wednesday, June 2nd, 2021
Shaktinagara Attackers

ಮಂಗಳೂರು : ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿ, ಮಹಿಳೆಗೆ  ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ 9 ಮಂದಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ಉರ್ವಸ್ಟೋರ್‌ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು(19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಬಂಧಿತರು. ಬಂಧಿತರಿಂದ ಮಾರಕಾಸ್ತ್ರ ಹಾಗೂ […]

ಪೊಲೀಸರ ಲಾಠಿ ಏಟು, ನೆಲಕ್ಕುರುಳಿದ ಬೈಕು ಸವಾರನ ಮೇಲೆ ಲಾರಿ ಹರಿದು ಸಾವು, ಪೋಲೀಸರ ಮೇಲೆ ಹಲ್ಲೆ

Tuesday, March 23rd, 2021
Mysore Accident

ಮೈಸೂರು : ಹೆಲ್ಮೆಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದಿದ್ದಾಗ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಹಿಂಬದಿಯಿಂದ ಲಾರಿ ಹರಿದು ಸಾವಿಗೀಡಾಗಿರುವ ದಾರುಣ ಘಟನೆ ನಗರದ ಹೊರವಲಯದ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಎಚ್.ಡಿ.ಕೋಟೆ ಮೂಲದ ದೇವರಾಜು ಎಂದು ಗುರುತಿಸಲಾಗಿದೆ. ಈತನ ಜೊತೆ ಇದ್ದ ಸಹ ಸವಾರನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲ್ಮೆಟ್ ಹಾಕದೆ ಸಂಚರಿಸುತ್ತಿದ್ದಾಗ ಪೊಲೀಸರು ಬೈಕ್ ಸವಾರನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಸವಾರ ಬೈಕ್ ನಿಲ್ಲಿಸದಿದ್ದಾಗ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಬೈಕ್ […]

ಹೆಡ್ ಕಾನ್ಸ್ಟೆಬಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನ, ಆರೋಪಿಯ ಕಾಲಿಗೆ ಗುಂಡು

Friday, March 13th, 2020
ramesh

ರಾಮನಗರ : ಚನ್ನಪಟ್ಟಣದ ಕೆ.ಹೆಚ್.ಬಿ ಕಾಲೋನಿಯಲ್ಲಿ ಇತ್ತೀಚೆಗೆ ಮನೆಗೆ ನುಗ್ಗಿ ಸುಲಿಗೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರಮೇಶ್ ಅಲಿಯಾಸ್ ಜಾಕಿಯನ್ನು ಬಂಧಿಸಲಾಗಿದೆ. ಡಿಎಸ್ ಪಿ ಓಂ ಪ್ರಕಾಶ ನೇತೃತ್ವದಲ್ಲಿ ತನಿಖಾಧಿಕಾರಿ ವಸಂತ ಕುಮಾರ್ ರವರು ಮುಖ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾರ್ಚ್ 12ರ ರಾತ್ರಿ ಸುಮಾರು 12.45ರ ಸಮಯದಲ್ಲಿ ಆರೋಪಿ ರಮೇಶ್ ನನ್ನು ಕರೆದುಕೊಂಡು ತನಿಖಾಧಿಕಾರಿ ಸಿಬಿಐ ವಸಂತ್, ಪಿ.ಎಸ್.ಐ ಪ್ರಕಾಸ್ ಹಾಗೂ ಸಿಬ್ಬಂದಿಗಳು ತನಿಖೆಗೆ ಸಂಬಂಧಪಟ್ಟಂತೆ ಚಿಕ್ಕಾಮಳೂರು ಗ್ರಾಮಕ್ಕೆ ಹೋಗುತ್ತಿರುವಾಗ, ಆರೋಪಿಯು ಪೊಲೀಸ್ […]

ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳ ಬಂಧನ

Friday, January 17th, 2020
bengaluru

ಬೆಂಗಳೂರು : ಬೆಂಗಳೂರು ನಗರದ ಪುರಭವನದ ಬಳಿ ಕಳೆದ ಡಿ‌. 22ರಂದು ನಡೆದ‌ ಸಿಎಎ ಪರ ಸಮಾವೇಶ ಸಂದರ್ಭದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿ‌ಕ ಹಲ್ಲೆ ಪ್ರಕರಣವನ್ನು ಕಲಾಸಿಪಾಳ್ಯಂ ಪೊಲೀಸರ ತಂಡ ಯಶಸ್ವಿಯಾಗಿ ಭೇದಿಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಆರ್‌ಟಿನಗರ ನಿವಾಸಿಗಳಾದ ಇರ್ಫಾನ್ ಅಲಿಯಾಸ್ ಮುಹಮ್ಮದ್ ಇರ್ಫಾನ್ , ಸೈಯದ್ ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್, ಸನಾ, ಲಿಂಗರಾಜಪುರಂನ ಸೈಯದ್ ಸಿದಿಕಿ, ಕೆ.ಜಿ.ಹಳ್ಳಿಯ ಅಕ್ಬರ್ ಅನ್ವರ್ ಬಾಷಾ, ಶಿವಾಜಿನಗರ ಸಾದಿಕ್ ಅಮೀನ್ ಅಲಿಯಾಸ್ ಸೌಂಡ್ […]

ಪ್ರವಾಸಿಗರಿಂದ ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ

Wednesday, December 11th, 2019
Dubare

ಮಡಿಕೇರಿ : ದುಬಾರೆ ಆನೆ ಕ್ಯಾಂಪ್ ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕುಶಾಲನಗರದ ದುಬಾರೆ ಪ್ರವಾಸಿತಾಣದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರ ನೋಡಲು ಮಂಗಳೂರಿನಿಂದ ತಡವಾಗಿ ಬಸ್‌ನಲ್ಲಿ ಬಂದಿದ್ದ ಪ್ರವಾಸಿಗರ ತಂಡ ಸಾಕಾನೆ ಶಿಬಿರಕ್ಕೆ ಹೋಗಲು ಬೋಟ್ ಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕೇಳಿದ್ದಾರೆ. ಅದಕ್ಕೆ ಸಿಬ್ಬಂದಿ ಸಮಯ ಮೀರಿದ ಹಿನ್ನೆಲೆ ಬೋಟ್‌ನಲ್ಲಿ ಕರೆಯೊಯ್ಯಲು ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನುವ ಕಾರಣಕ್ಕೆ ಪ್ರವಾಸಿಗರು […]

ರಿಕ್ಷಾ ಚಾಲಕ, ಪಡೀಲ್ ನಿವಾಸಿ ಮುಖೇಶ್ ಮೇಲೆ ಹಲ್ಲೆ

Thursday, July 7th, 2016
Mukhesh

ಮಂಗಳೂರು: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಪಡೀಲ್ ಭಜರಂಗದಳದ ಸದಸ್ಯನೂ ಆಗಿರುವ ಯುವಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಫೈಸಲ್‍ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಪಡೀಲ್ ನಿವಾಸಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ರಿಕ್ಷಾದಲ್ಲಿ ಫೈಸಲ್‍ನಗರಕ್ಕೆ ಬಾಡಿಗೆಗೆ ತೆರಳಿದ್ದ. ಈ ವೇಳೆ ರಸ್ತೆಯಲ್ಲಿ ಶೇಖರಣೆಯಾಗಿದ್ದ ಕೆಸರು ನೀರು ರಸ್ತೆ ಬದಿ ನಿಂತಿದ್ದ ಯುವಕನೋರ್ವನ ಮೇಲೆ ಎರಚಿದೆ. ಇದನ್ನೇ ನೆಪವಾಗಿರಿಸಿದ ಸ್ಥಳೀಯ ಯುವಕರು ಮುಖೇಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ […]

ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಗೋವಾ ದಂಪತಿಗಳು

Saturday, November 1st, 2014
Surabhi

ಸುರತ್ಕಲ್‌ : ಗೋವಾ ಮೂಲದ ದಂಪತಿಗಳು ಸುರತ್ಕಲ್‌ ನಲ್ಲಿರುವ ಸುರಭಿ ಬ್ಯೂಟಿಪಾರ್ಲರ್‌ ಗೆ ಫೆಶಿಯಲ್‌ ಮಾಡಿಸಿ ಕೊಳ್ಳಲು ಬಂದಿದ್ದು ಆದಾದ ಬಳಿಕ ದಂಪತಿಗಳು ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಹಲ್ಲೆಗೊಳಗಾದ ಯುವತಿ ಕಾಂತೇರಿ ಧೂಮಾವತಿ ದೈವಸ್ಥಾನದ ಕಟ್ಟಡದಲ್ಲಿ ಸುರಭಿ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಅಕ್ಷತಾ (19) ಎಂದು ಗುರುತಿಸಲಾಗಿದೆ. ಫೆಶಿಯಲ್‌ ಮಾಡಿಕೊಳ್ಳಲೆಂದು ಬಂದ ಹೆಂಗಸು ಫೆಶಿಯಲ್‌ ಮಾಡಿಕೊಂಡ ಬಳಿಕ ಹಣ ಕೇಳಿದಾಗ ಆಕೆಯ ಪತಿ ಅಕ್ಷತಾ ಮೇಲೆ ರಾಡ್‌ ನಿಂದ ಹಲ್ಲೆ ನಡೆಸಿ […]

ಕಾವೂರು ಪ್ರತಿಭಟನೆಗೆ ಯಡಿಯೂರಪ್ಪ ಭೇಟಿ

Sunday, October 19th, 2014
BSY

ಮಂಗಳೂರು : ಮೂಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯಡಿಯೂರಪ್ಪ ಕಾವೂರಿನಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ನ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ ಹಲ್ಲೆ ನಡೆಸಿದ ಎಸ್‌ಐಯನ್ನು ಸರ್ಕಾರ ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಕಾವೂರು ಪೊಲೀಸ್‌ ಠಾಣೆಯೆದುರು ಶುಕ್ರವಾರ ದಿಂದ ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಅವರ ಅಮಾನತಿಗೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ಸಂಘಟನೆಯ […]

ಕೌಟುಂಬಿಕ ಆಸ್ತಿ ವಿವಾದ ; ಪಾಲಿಕೆಯ ವಾಹನ ಚಾಲಕನಿಗೆ ಮಾರಣಾಂತಿಕ ಹಲ್ಲೆ

Sunday, July 21st, 2013
MCC driver

ಮಂಗಳೂರು : ಕೌಟುಂಬಿಕ ಆಸ್ತಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾಹನ ಚಾಲಕ ಅಶೋಕನಗರದ ರೋಹಿತ್‌ (26) ಅವರನ್ನು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರೋಹಿತ್‌ ಅವರು ಬೆಳಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕರೆ ತರಲು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ ನಾಲ್ವರು ಅಪರಿಚಿತರು ಲೇಡಿಹಿಲ್‌ನಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು  ಎಂದು ಆರೋಪಿಸಲಾಗಿದೆ. ಗಾಯಾಳು ರೋಹಿತ್‌ ಅವರನ್ನು ಆಸ್ಪತ್ರೆಗೆ […]