Blog Archive

ಬಶೀರ್‌ ಕೊಂಚ ಚೇತರಿಕೆ; ನಾಲ್ವರು ವಶಕ್ಕೆ

Saturday, January 6th, 2018
hospital

ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಬುಧವಾರ ರಾತ್ರಿ ಮಾರಕಾಯುಧಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಆಕಾಶ ಭವನದ ಬಶೀರ್‌ (48) ಅವರ ಆರೋಗ್ಯ ಸ್ಥಿತಿ ತುಸು ಚೇತರಿಕೆ ಕಂಡಿದ್ದು, ಈ ಘಟನೆ ಕುರಿತಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲ ನಾಲ್ವರು ಆರೋಪಿಗಳು ಕ್ರಿಮಿನಲ್‌ ಹಿನ್ನೆಲೆ ಯವರಾಗಿದ್ದು, ಕಳೆದ ಜುಲೈ ತಿಂಗಳಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಡ್ಯಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ನಡೆದ ಹಲ್ಲೆ ಕೃತ್ಯದಲ್ಲಿ ಭಾಗಿಯಾದವರು ಎನ್ನಲಾಗಿದೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಪಡೀಲ್‌ನವರು, […]

ಶ್ರೀಲಂಕಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾದ ಭಾರತ ಹಿಂದೂ ಸಂಘಟನೆಗಳು

Thursday, June 15th, 2017
sachidanandan

ಗೋವಾ : “ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಶೇ. 30 ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.15 ಕ್ಕೆ ಅಂದರೆ ಕೇವಲ 20 ಲಕ್ಷಕ್ಕೆ ಬಂದಿದೆ. ಮತಾಂತರವಾಗಲು ಹಿಂದೂಗಳ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳಿಗೆ ನ್ಯಾಯ ನೀಡಲು ಭಾರತದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಳತ್ವ ವಹಿಸುವುದು ಅವಶ್ಯವಾಗಿದೆ”, ಎಂದು ಭಾವನಾತ್ಮಕ ಕರೆಯನ್ನು ಶ್ರೀಲಂಕಾದ 76 ವರ್ಷದ ಮರವನಪುಲಾವೂ ಸಚ್ಚಿದಾನಂದನ್ […]

ಕ್ಷೇತ್ರದ ಸಂಸದನಾಗಿ ನನ್ನ ಜವಾಬ್ದಾರಿಯ ಪೂರ್ಣ ಅರಿವಿದೆ : ನಳಿನ್

Monday, January 2nd, 2017
mp-nalin

ಮಂಗಳೂರು : ಕಾರ್ತಿಕ್‌ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಭಾನುವಾರ ಕೊಣಾಜೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಜಿಲ್ಲೆಯ ಶಾಂತಿ ಕದಡುವ ಯಾವುದೇ ದುರುದ್ದೇಶ ನನ್ನ ಹೇಳಿಕೆಯಲ್ಲಿ ಇರಲಿಲ್ಲ. ಆದಾಗ್ಯೂ ನೋವಿನಿಂದ ಆಡಿದ ಮಾತಿನ ಭರದಲ್ಲಿ ವ್ಯಕ್ತವಾದ ಕೆಲವು ಶಬ್ದಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ವಿಷಾದ ವ್ಯಕ್ತಪಡಿಸಿzನೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ಅಮಾಯಕ ಹಿಂದೂ ಯುವಕರ ಹತ್ಯೆಯಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಕಾರ್ತಿಕ್‌ರಾಜ್ ಹತ್ಯೆ ನಡೆದು ಎರಡು ತಿಂಗಳಾದರೂ […]

ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ “ಢುಂಢಿ” ಕಾದಂಬರಿಯ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ

Friday, August 30th, 2013
Hindu Jagaran Vedike

ಮಂಗಳುರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀಗಣೇಶನ ಅಪಮಾನ ಮಾಡಿದ “ಢುಂಢಿ” ಕಾದಂಬರಿಯನ್ನು ನಿಷೇಧಿಸಿ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತು ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಆಗಸ್ಟ್ 30, ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ಸದಸ್ಯರಾದ ಸುಕನ್ಯ ಆಚಾರ್ ದಿನಾಂಕ 25.8.2013 ರಂದು ಬೆಂಗಳೂರಿನ ಸಭಾಂಗಣದಲ್ಲಿ ಯೊಗೀಶ್ ಮಾಸ್ಟರ್  ರಚಿಸಿದ  “ಢುಂಢಿ” ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. […]

ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಗೌರವಿಸುವ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಲು ಪ್ರತಿಭಟನೆ

Monday, July 8th, 2013
Hindu Jana Jagrithi Samithi protest

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಭಾಗ್ ಮಿಲ್ಖಾ ಭಾಗ್ ಚಲನಚಿತ್ರದ ಪ್ರದರ್ಶನವನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಪ್ರತಿಭಟನೆ ನಡೆಯಿತು. ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಹಾಡನ್ನು ಒಳಗೊಂಡಿರುವ ಭಾಗ್ ಮಿಲ್ಖಾ ಭಾಗ್  ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದೆ. ಇದರಲ್ಲಿ ಹಿಂದೂ ಧರ್ಮದ ಹವನದ ವಿಧಿಯನ್ನು ಭಯಾನಕ ಕೃತ್ಯದೊಂದಿಗೆ ಸೇರಿಸಲಾಗಿದ್ದು, ಚಲನಚಿತ್ರ ಮಂಡಳಿಯು ಈ ಸಿನಿಮಾವನ್ನು ಕೂಡಲೇ ರದ್ದುಗೊಳಿಸಬೇಕು ಇಲ್ಲವೇ ಈ ಹಾಡನ್ನು ಸಿನಿಮಾದಿಂದ ತೆಗೆದುಬಿಡಬೇಕು ಎಂದು ಹಿಂದೂ […]

ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಂಘರ್ಷ ಆಂದೋಲನ

Saturday, July 30th, 2011
BJP Yuva Morcha/ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಂಘರ್ಷ ಆಂದೋಲನ

ಮಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಸಂಘ ನಿಕೇತನದಲ್ಲಿ ಶುಕ್ರವಾರ ಆಯೋಜಿಸಿದ ಯುವ ಸಂಘರ್ಷ ಆಂದೋಲನವನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಪ್ರತಾಪಸಿಂಹ ನಾಯಕ್‌ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಬಿಜೆಪಿ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮತ್ತೆಮತ್ತೆ ಎದ್ದುಬಂದಿದೆ, ಸರಕಾರವನ್ನು ಉರುಳಿಸಲು ರಾಜಕೀಯ ವಿರೋಧಿಗಳ ಪ್ರಯತ್ನ ನಿರಂತರ ನಡೆಯುತ್ತಿದೆ ಎಂದರು. ಕಾರ್ಯಕರ್ತರು ಇನ್ನಷ್ಟು ಪಕ್ಷದ ಬೆಳವಣಿಗೆಯಲ್ಲಿ ಶ್ರಮವಹಿಸುವುದು ಅತ್ಯಗತ್ಯ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರವನ್ನು […]