ಹಿಂದೂಗಳನ್ನು ಅವಮಾನಿಸುವ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವನ್ನು ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿ

Friday, October 16th, 2020
laxmi bomb

ಮಂಗಳೂರು  : ದೀಪಾವಳಿಯ ಹಿನ್ನೆಲೆಯಲ್ಲಿ ನಟ ಅಕ್ಷಯ ಕುಮಾರ ಇವರ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವು ನವೆಂಬರ್ 9 ರಂದು ಪ್ರದರ್ಶನಗೊಳ್ಳಲಿದೆ. ದೀಪಾವಳಿಯ ಹಿನ್ನಲೆಯಲ್ಲಿ ಇದರ ಹೆಸರನ್ನು ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಇಡಲಾಗಿದೆ. ಆದ್ದರಿಂದ ನಮ್ಮ ಮೊದಲನೇ ಆಕ್ಷೇಪಣೆ ಈ ಚಲನಚಿತ್ರದ ಹೆಸರಿಗಿದ್ದು ಇದರಿಂದ ಕೋಟಿಗಟ್ಟಲೆ ಹಿಂದೂಗಳ ದೇವರಾಗಿರುವ ಶ್ರೀಲಕ್ಷ್ಮೀದೇವಿಯ ವಿಡಂಬನೆ ಮಾಡಲಾಗಿದೆ. ಇನ್ನೊಂದೆಡೆ ಹಿಂದೂ ದೇವತೆಗಳ ಅವಮಾನ ಮಾಡುವ ‘ಲಕ್ಷ್ಮೀ ಪಟಾಕಿ’ ಬಂದ್ ಮಾಡಲು ನಾವು ಕಳೆದ ಅನೇಕ ವರ್ಷಗಳಿಂದ ಪ್ರಬೋಧನೆ ಮಾಡುತ್ತಿರುವಾಗ, ಈ […]

ಕಮ್ಯುನಿಸ್ಟರ ಹಾಗೂ ನಕ್ಸಲ್ ಸಂಘಟನೆಗಳ ಕಾರ್ಯಕ್ರಮವನ್ನು ರದ್ದುಗೊಳಿಸಲು ಸಮಿತಿಯ ಮನವಿ

Friday, September 4th, 2020
hjjs

ಮಂಗಳೂರು :  ಗೌರಿ ಲಂಕೇಶ ಹತ್ಯೆಯ ಪ್ರಕರಣದ ಸಂಬಂಧ ಎಡಪಂಥೀಯ ವಿಚಾರಧಾರೆಯ ವಿಚಾರವಾದಿಗಳು “ನಾವು ಎದ್ದು ನಿಲ್ಲದಿದ್ದರೆ ?” ಹೆಸರಿನಡಿಯಲ್ಲಿ ದಿನಾಂಕ 5 ಸೆಪ್ಟೆಂಬರ್ ನಂದು  ಸುಮಾರು 400 ಸಮವಿಚಾರಿ ಸಂಘಟನೆಗಳು ಸೇರಿ ಆಂದೋಲನವನ್ನು ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಬಿಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಸರಕಾರವನ್ನು ಕೇಳಿಕೊಂಡಿದೆ. ಈ ಆಂದೋಲನವನ್ನು ಮೇಲ್ನೋಟಕ್ಕೆ ನೋಡಿದಾಗ ಗೌರಿ ಹತ್ಯೆಯ ಹೆಸರಿನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕಿಂತ ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸುವ ಉದ್ದೇಶವೇ ಹೆಚ್ಚು ಇದೆ ಎಂಬ ಸಂಶಯ ಮೂಡುತ್ತದೆ. ಈಗಾಗಲೇ ದಿಲ್ಲಿ ಮತ್ತು ಬೆಂಗಳೂರಿನಲ್ಲಿ […]

ಉತ್ತರಪ್ರದೇಶ : ಗೋಹತ್ಯೆಯನ್ನು ಮಾಡುವವರಿಗೆ 10 ವರ್ಷ ಶಿಕ್ಷೆ ಮತ್ತು5 ಲಕ್ಷ ರೂಪಾಯಿ ವರೆಗೆ ದಂಡ

Wednesday, June 10th, 2020
adityanath

ಮಂಗಳೂರು  : ಉತ್ತರಪ್ರದೇಶದ ‘ಯೋಗಿ ಸರ್ಕಾರ’ವು ಗೋಹತ್ಯೆಯನ್ನು ತಡೆಗಟ್ಟಲು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಅದರಂತೆ ಗೋಹತ್ಯೆಯನ್ನು ಮಾಡುವವರಿಗೆ 10 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ‘ಯೋಗಿ ಸರ್ಕಾರ’ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಅದನ್ನು ಸ್ವಾಗತಿಸಿದೆ. ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ಇರುವ ಅನಾನಸ್‌ಅನ್ನು ತಿನ್ನಲು ನೀಡಲಾಗಿತ್ತು, ಅದರಲ್ಲಿ ಗರ್ಭಿಣಿ ಆನೆ ಗಂಭೀರವಾಗಿ ಗಾಯಗೊಂಡು ದುರದೃಷ್ಟಕರವಾಗಿ ಸಾವನ್ನಪ್ಪಿತು; ಘಟನೆ ನಡೆದ ಎರಡು ದಿನಗಳು […]

ಮುಂಬೈಯಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ, ಹಿಂದೂ ಜನಜಾಗೃತಿ ಸಮಿತಿ ಖಂಡನೆ

Sunday, May 24th, 2020
shivaraja-maharaja

ಮುಂಬಯಿ  :  ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ ಹಿಂದುತ್ವವಾದಿಗಳ ಹತ್ಯಾಸರಣಿಯ ನಂತರ ಈಗ ಸಾಧುಗಳ ಹತ್ಯಾಸರಣಿ; ಇದು ಹಿಂದೂಗಳನ್ನು ಮುಗಿಸುವ ವ್ಯವಸ್ಥಿತ ಸಂಚು ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. […]

‘ಹಲಾಲ್ ಪ್ರಮಾಣಿಕೃತ ಉತ್ಪಾದನೆಗಳನ್ನು ಬಹಿಷ್ಕರಿಸಿ ! – ಹಿಂದೂ ಜನಜಾಗೃತಿ ಸಮಿತಿ

Monday, May 11th, 2020
halal

ಮಂಗಳೂರು  : ‘ಹಲಾಲ್ ಕಟ್’ ಇದು ಎಲ್ಲಾ ಮಾಂಸ ಮಾರಾಟ ಅಂಗಡಿಗಳಲ್ಲಿ ಸಾಮಾನ್ಯ ಕಾಣ ಸಿಗುವ ಬೋರ್ಡ್.  ಈ ಅರಬೀ ಪದದ ಅರ್ಥ ಇಸ್ಲಾಮ್‌ಗನುಸಾರ ಮಾನ್ಯತೆ ಪಡೆದ ಎಂದಿದೆ ! ಮೂಲತಃ ಮಾಂಸದ ವಿಷಯದಲ್ಲಿದ್ದ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣಸಂಸ್ಥೆಗಳು, ಮಾಲ್ ಹೀಗೆ ಅನೇಕ ಅಂಶಗಳಲ್ಲಿ ಕೇಳಿಬರುತ್ತಿದೆ. ಅದಕ್ಕಾಗಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ‘ಹಲಾಲ್ ಪ್ರಾಮಾಣಪತ್ರ’ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಜಾತ್ಯತೀತ ಭಾರತದಲ್ಲಿ ಸರಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ […]

ದೂರು ದಾಖಲಿಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ – ಹಿಂದೂ ಜನಜಾಗೃತಿ ಸಮಿತಿ

Sunday, May 10th, 2020
Sudhir Chaudhary

ಮಂಗಳೂರು  : ದೇಶದ ಪ್ರಧಾನಮಂತ್ರಿಯವರಿಗೆ ‘ಮೌತ ಕಾ ಸೌದಾಗರ್’ ಎಂದು ಕರೆದಾಗ ಅದಕ್ಕೆ ‘ಅಭಿವ್ಯಕ್ತಿಸ್ವಾತಂತ್ರ’ದ ಲೇಪನ ನೀಡಲಾಗುತ್ತದೆ; ಓಸಾಮಾ ಬಿನ್ ಲಾಡೆನ್‌ನಂತಹ ಅನೇಕ ಭಯೋತ್ಪಾದಕರು ಹಾಗೂ ಅವರ ಉಗ್ರ ಸಂಘಟನೆಗಳು ಸತತವಾಗಿ ಹಾಗೂ ಬಹಿರಂಗವಾಗಿ ರಕ್ತರಂಜಿತ ಜಿಹಾದ್ ಬಗ್ಗೆ ಫತ್ವಾ ತೆಗೆಯುವಾಗ ಅದು ಧರ್ಮದ ಅವಮಾನ ಆಗುವುದಿಲ್ಲ ! ಆದರೆ ಧರ್ಮದ ಹೆಸರಿನಲ್ಲಿ ಕಟ್ಟರ್‌ವಾದಿಗಳ ಜಿಹಾದ್ ಬಗ್ಗೆ ಕೇವಲ ಮಾಹಿತಿ ನೀಡಿದರೆಂದು ‘ಝೀ ನ್ಯೂಸ್’ ವಾರ್ತಾವಾಹಿನಿಯ ಸಂಪಾದಕರಾದ ಸುಧೀರ ಚೌಧರಿ ಇವರ ಮೇಲೆ ಕೇರಳದಲ್ಲಿ ದೂರು ದಾಖಲಿಸಲಾಗುತ್ತದೆ. […]

ಆದಾಯವನ್ನು ಹೆಚ್ಚಿಸಲು ಸರಕಾರಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು !

Wednesday, May 6th, 2020
ಆದಾಯವನ್ನು ಹೆಚ್ಚಿಸಲು ಸರಕಾರಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು !

ಮಂಗಳೂರು  : ಒಂದೆಡೆ ಕೊರೋನಾದ ರೋಗಾಣುವಿನ ಸೊಂಕಿನಿಂದಾಗಿ ಜನರ ಜೀವಕ್ಕೆ ಅಪಾಯವಾಗದಿರಲೆಂದು ಸರಕಾರಗಳು ಆರ್ಥಿಕ ಹಾನಿಯನ್ನು ಸಹಿಸಿಕೊಳ್ಳುತ್ತಾ ‘ಲಾಕ್‌ಡೌನ್’ನ ಧೈರ್ಯದ ಹಾಗೂ ಸ್ವಾಗತರ್ಹ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಇನ್ನೊಂದೆಡೆ ಕೇವಲ ಆದಾಯ ಹೆಚ್ಚಾಗಿಸಲು ಮದ್ಯದ ಅಂಗಡಿಯನ್ನು ತೆರೆಯುವ ನಿರ್ಣಯವನ್ನು ತೆಗೆದುಕೊಂಡಿದೆ. ಆದ್ದರಿಂದ ದೇಶದಲ್ಲಿ ಕೊರೋನಾದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಇದನ್ನು ಹೊರತು ಪಡಿಸಿ ಮದ್ಯದಿಂದಾಗಿ ಮಹಿಳೆಯರ ಮೇಲಾಗುವ ದೌರ್ಜನ್ಯ, ಮಕ್ಕಳ ಮೇಲಾಗುವ ಕುಸಂಸ್ಕಾರ ಹಾಗೂ ಲಕ್ಷಗಟ್ಟಲೆ ಸಂಸಾರ ನಾಶವಾಗಲು ಈ ನಿರ್ಣಯದ ಕಾರಣವಾಗಬಾರದು, ಅದರೊಂದಿಗೆ ಸಮಾಜದ ಸರ್ವತೋಮುಖ […]

ಮಾರ್ಚ್ 22 ರ ‘ಜನತಾ ಕರ್ಫ್ಯೂ’ಗೆ ಎಲ್ಲಾ ನಾಗರಿಕರು ಬೆಂಬಲಿಸಬೇಕು :ಹಿಂದೂ ಜನಜಾಗೃತಿ ಸಮಿತಿ

Saturday, March 21st, 2020
hjjs

ಮಂಗಳೂರು :  ದಕ್ಷಿಣ ಕನ್ನಡ – ಮಾನ್ಯ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರು ಕೋವಿಡ್-19 (ಕೊರೋನಾ ೧೯ ರೋಗಾಣು) ವಿರುದ್ಧ ಹೋರಾಡಲು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಈ ಕರೆಗೆ ಬೆಂಬಲಿಸಿ ಇಡೀ ಜಗತ್ತಿನಾದ್ಯಂತ ಇದೇ ಮೊದಲಬಾರಿ ಜನತೆಯು ರಾಷ್ಟ್ರಹಿತಕ್ಕಾಗಿ ತೆಗೆದುಕೊಂಡಿರುವ ಬಂದ್ ಆಗಿರಬಹುದು. ಈ ಉಪಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ನಾಗರಿಕರ ರಾಷ್ಟ್ರಕರ್ತವ್ಯವಾಗಿದೆ. ಕೊರೋನಾದಂತಹ ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಜನಜಾಗೃತಿಯನ್ನು ಮಾಡಲು ಹಿಂದೂ ಜನಜಾಗೃತಿ ಸಮಿತಿಯೂ […]

ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಆಂದೋಲನ ಮಂಗಳೂರು

Tuesday, February 25th, 2020
hindhu-jana-jagruti

ಮಂಗಳೂರು : ಮಂಗಳೂರು ಕ್ಲಾಕ್ ಟವರ್ ನ ಎದುರು, ಪುರಭವನದ ಹತ್ತಿರ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳು ‌ಒಂದಾಗಿ ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಿದರು. ” ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಆಂದೋಲನದಲ್ಲಿ ಹಿಂಸಾಚಾರ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಬೇಕು ” ಎಂದು ಚಂದ್ರ ಮೊಗೇರ ಹಿಂದೂ ಜನಜಾಗೃತಿ ಸಮಿತಿಯವರು ಹೇಳಿದರು. ಶ್ರೀ. ಚಂದ್ರ ಮೋಗೇರ ಇವರು ಮಾತನಾಡಿ ” ಪೌರತ್ವ ಸುಧಾರಣೆ ಕಾಯಿದೆ’ ಯ ವಿರುದ್ಧ […]

ಮಂಗಳೂರಿನಲ್ಲಿ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಆರಂಭ

Saturday, February 8th, 2020
janajagruti

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ 8 ಜನವರಿ 2020 ರಂದು ದಕ್ಷಿಣ ಜಿಲ್ಲಾ ಹಿಂದೂ ಅಧಿವೇಶನ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಗೃಹ, ಡೊಂಗರಕೇರಿ ಪ್ರಾರಂಭವಾಯಿತು. ಈ ಅಧಿವೇಶನದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ.ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ್ ಗೌಡ , ಶ್ರೀ.ಕೃಷ್ಣಮೂರ್ತಿ, ನ್ಯಾಯವಾದಿಗಳು, ಶ್ರೀ.ದಯಾನಂದ ಕತ್ತಲ್ ಸಾರ್, ಅಧ್ಯಕ್ಷರು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರು ದೀಪಪ್ರಜ್ವಲನೆ ಮಾಡಿದರು. ” ಹಿಂದೂ […]