ಸುಬ್ರಹ್ಮಣ್ಯದಲ್ಲಿ ಕೆಂಬಣ್ಣಕ್ಕೆ ತಿರುಗಿ ತುಂಬಿ ಹರಿಯುತ್ತಿರುವ ಕಲ್ಮಕಾರು ಹೊಳೆ

Saturday, August 10th, 2019
subramanya

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಹಲವು ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಕಲ್ಮಕಾರು ಭಾಗದಲ್ಲಿ ಬರೆ ಜರಿದು ಮನೆಗೆ ಹಾನಿಯಾಗಿದೆ. ಪ್ರವಾಹಕ್ಕೆ ಕುಮಾರಧಾರಾ ಸ್ನಾನಘಟ್ಟ ಶುಕ್ರವಾರವೂ ಸಂಪೂರ್ಣ ಮುಳುಗಡೆಗೊಂಡಿತ್ತು. ಗುರುವಾರ ಮುಳುಗಡೆಗೊಂಡಿದ್ದ ಪಕ್ಕದ ದರ್ಪಣ ತೀರ್ಥ ನದಿಯ ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ಸೇತುವೆ ರಾತ್ರಿ ಸಂಚಾರಕ್ಕೆ ಮುಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಮುಳುಗಡೆಗೊಂಡಿದೆ. ಪಕ್ಕದಲ್ಲಿ ನದಿಯ ನೆರೆ ನೀರು ರಸ್ತೆಗೆ ಹರಿದು ಸಂಚಾರ ವ್ಯತ್ಯಯಗೊಂಡಿತು. ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು […]

ಬೆಳ್ತಂಗಡಿ : 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನೂರಾರು ಮನೆಗಳು ಜಲಾವೃತ

Saturday, August 10th, 2019
netravati

ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು. ಲಾೖಲ, […]

ಪುತ್ತೂರು ಮೂಲದ ಯುವತಿ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ

Saturday, August 10th, 2019
Gajaneeshwari

ಮಂಗಳೂರು  : ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ಶುಕ್ರವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಇಲ್ಲಿಗೆ ಸಮೀಪದ ಸೋಮೇಶ್ವರದಲ್ಲಿ ಶವ ಪತ್ತೆಯಾಗಿದೆ. ಪುತ್ತೂರು ಮೂಲದ ನಿವೇದಿತಾ ಗಜನೇಶ್ವರಿ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ನಿವೇದಿತಾ ಗಜನೇಶ್ವರಿ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಹಾರಿದ್ದರು. ರಾತ್ರಿಯೇ ರಕ್ಷಣಾ ಪಡೆಗಳು ಹುಡುಕುವ ಕಾರ್ಯಾಚರಣೆ ನಡೆಸಿದ್ದವು. ಇಂದು ಬೆಳಿಗ್ಗೆ ಸೋಮೇಶ್ವರ‌ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿತ್ತು. ಈಕೆ ಸೇತುವೆ ಬಳಿ ತನ್ನ ಬ್ಯಾಗ್, […]

ಭಾರಿ ಮಳೆ ಹೊರನಾಡು – ಕಳಸ ರಸ್ತೆ ಕುಸಿತ

Saturday, August 10th, 2019
Horanadu

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾ ನದಿ ಸೇರಿದಂತೆ ಅದರ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಹೊರನಾಡು – ಕಳಸ ಮಧ್ಯ ಭಾಗದಲ್ಲಿ ರಸ್ತೆ ಕುಸಿತವಾಗಿದ್ದು ಸಂಚಾರ ಸ್ಥಗಿತವಾಗಿದೆ. ಭದ್ರೆಯ ಉಪ ನದಿ ರಭಸದಿಂದ ಹರಿಯುತ್ತಿದ್ದು, ಜನರು ನೋಡ-ನೋಡುತ್ತಿದ್ದಂತೆ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿನಿಂದ 2 ಕಿ.ಮೀ ಅಂತರದಲ್ಲಿ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿಗೆ ಸಂಪರ್ಕಿಸುವ ಎಲ್ಲಾ ಮಾರ್ಗ ಬಂದ್ ಆಗಿರುವ ಪರಿಣಾಮ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯವಾಗಿದೆ. ಕಳೆದ ತಿಂಗಳು ಮಳೆಗಾಗಿ‌ ಅನ್ನಪೂರ್ಣೇಶ್ವರಿಗೆ ಪರ್ಜನ್ಯ ಜಪ‌ ಮಾಡಲಾಗಿತ್ತು. ಭದ್ರಾ ನದಿ […]

ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ

Friday, August 9th, 2019
CPC

ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ಅವರು ಶುಕ್ರವಾರ ಸಂಜೆ ಅಧಿಕಾರ ಸ್ವೀಕಾರ ಮಾಡಿದರು. ದ.ಕ. ಜಿಲ್ಲೆಯ ಜನತೆ ಕಾನೂನು ಮೀರುವವರಲ್ಲ. ಅಧಿಕಾರವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸುವೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕಾಳಜಿ ವಹಿಸುವುದಾಗಿ ಡಾ.ಪಿ.ಎಸ್.ಹರ್ಷ ಹೇಳಿದರು. ಜನಸಂಖ್ಯೆಗೆ ಅನುಗುಣ ಪೊಲೀಸರಿಲ್ಲ, ನಾವು ಶಕ್ತಿ ಮೀರಿ ಜನರ ರಕ್ಷಣೆ ಮುಂದಾಗುತ್ತೇವೆ. ಜನಪರ ಸೇವೆಗಾಗಿ ತಂಡದ ಪರವಾಗಿ ನಿಲ್ಲುತ್ತೇವೆ. ಜನಪ್ರತಿನಿಧಿ, ಸಮುದಾಯಗಳ ನಾಯಕರ, ಜನರ ಸಹಕಾರ ಕೇಳುವೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ತರುತ್ತೇವೆ ಎಂದು ಹೇಳಿದರು. ಈ ಸಂದರ್ಭ […]

ಮಂಗಳೂರು: ಅಧಿಕೃತ ಜಾನುವಾರು ಸಾಗಾಟಕ್ಕೆ ಆ್ಯಪ್

Friday, August 9th, 2019
police phone in

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಧಿಕಾರಿಯವರು ಅಧಿಕೃತ ಜಾನುವಾರು ಸಾಗಾಟ ವ್ಯವಸ್ಥೆಗಾಗಿ ಆ್ಯಪೊಂದನ್ನು ಅಭಿವೃದ್ಧಿ ಮಾಡಿದ್ದಾರೆ. ಜಾನುವಾರು ಸಾಗಾಟ ಮಾಡುವವರು ಈ ಆ್ಯಪ್ ಮುಖಾಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ನಾವು ಸಾಗಾಟಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಹನುಮಂತರಾಯ ಹೇಳಿದರು. ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಜಾನುವಾರು ಸಾಗಾಟಕ್ಕೆ ಕಡಿವಾಣ […]

ನೆರೆಯಲ್ಲಿ ಕೊಚ್ಚಿಹೋದ ಬೆಳ್ತಂಗಡಿ ಕಡಿರುದ್ಯಾವರ ಕುಕ್ಕಾವು ಸೇತುವೆ

Friday, August 9th, 2019
Kukkavu-bridge

ಮಂಗಳೂರು : ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮವಾಗಿ ಸೋಮಂತಡ್ಕ- ಕಾಜೂರು ಸಂಪರ್ಕ ರಸ್ತೆ ಕಡಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 7 ಮನೆಗಳು ಕುಸಿದಿದೆ. ಬೆಳ್ತಂಗಡಿ ತಾಲೂಕಿನ ಕಾಜೂರು- ಕೊಲ್ಲಿ, ಮಲವಂತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಾಯದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಿದ್ದಾರೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ […]

ಉಡುಪಿ ತಾಲೂಕು ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ

Friday, August 9th, 2019
Udupi-TP

ಉಡುಪಿ, : ಉಡುಪಿ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ನೀತಾ ಗುರುರಾಜ್ ಪೂಜಾರಿ ಹಾಗೂ ಭುಜಂಗ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ಉಪವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಅವರು ಚುನಾವಣಾಧಿಕಾರಿಯಾಗಿ ಉಡುಪಿ ತಾಪಂನಲ್ಲಿ ಈ ಆಯ್ಕೆ ನಡೆಯಿತು. 41 ಸದಸ್ಯ ಬಲದ ಉಡುಪಿ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 27 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತವನ್ನು ಹೊಂದಿದೆ. 2016ರ ಮೇ 26ರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ನಳಿನಿ ಪ್ರದೀಪ್ ರಾವ್ ಹಾಗೂ ರಾಜೇಂದ್ರ ಪಿ.ಪಂದಬೆಟ್ಟು ಅವರು […]

ಸುಳ್ಯ : ಕಟ್ಟಡದಿಂದ ಬಿದ್ದು ಮೇಸ್ತ್ರಿ ಮೃತ್ಯು

Friday, August 9th, 2019
Ali

ಮಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರೊಬ್ಬರು ಕಟ್ಟಡದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ದಕ್ಷಿಣ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಹಾಸನ ಮೂಲದ ಪಳ್ಳಿಮಜಲು ನಿವಾಸಿ ಅಲಿ ಮೃತಪಟ್ಟ ದುರ್ದೈವಿ. ಮೇಸ್ತ್ರಿ ಕೆಲಸದ ಗುತ್ತಿಗೆ ನಿರ್ವಹಿಸುತ್ತಿದ್ದ ಅಲಿ ಕೆಲಸ ಮಾಡುತ್ತಿದ್ದ ವೇಳೆಗೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ‌. ಪರಿಣಾಮ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ

ಜಮ್ಮು ಮತ್ತು ಕಾಶ್ಮೀರ ಇನ್ನು ಕೇಂದ್ರಾಡಳಿತ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಘೋಷಣೆ

Thursday, August 8th, 2019
Modi

ನವದೆಹಲಿ  : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ನಾನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕೆಲವು ವಿಷಯಗಳು ಜೀವಂತವಿರುವವರೆಗೂ ಅವು ಎಂದಿಗೂ ಬದಲಾಗುವುದಿಲ್ಲ ಅಥವಾ ದೂರ ಹೋಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 370 ನೇ ವಿಧಿ ಇದೇ ರೀತಿಯದಾಗಿತ್ತು.” ಎಂದು ಪ್ರಧಾನಿ ಹೇಳಿದರು. “ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, […]