ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ಅಯೋದ್ಯೆಯ ವಿವಾದಿತ ಸ್ಥಳದ ತೀರ್ಪು ಅಲಹಾಬಾದ್ ಹೈಕೋರ್ಟಿನಿಂದ ಪ್ರಕಟ

Thursday, September 30th, 2010
ಅಲಹಾಬಾದ್ ಹೈಕೋರ್ಟ್

ಲಖನೌ  : ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. 60 ವರ್ಷಗಳ ವಿವಾದಿತ 2.7 ಎಕರೆ ಭೂಮಿಯನ್ನು  ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು  ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿದೆ. ರಾಮಲಲ್ಲಾನ ವಿಗ್ರಹ ಇರುವ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು  ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, […]

ಅಯೋಧ್ಯೆಯ ಐತಿಹಾಸಿಕ ತೀರ್ಪಿಗಾಗಿ ಕಾತರಗೊಂಡ ದೇಶದ ಜನತೆ

Thursday, September 30th, 2010
ಅಯೋಧ್ಯೆಯ ಐತಿಹಾಸಿಕ ತೀರ್ಪು

ನವ ದೆಹಲಿ : ಹದಿನೆಂಟು ವರ್ಷದ ಹಿಂದೆ ನೆಲ ಸಮ ಗೊಂಡ ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಗೆ ಸಂಬಧಿಸಿದ ಪ್ರಕರಣಕ್ಕೆ ಇಂದು ಅಲಹಾಬಾದ್‌ ನ್ಯಾಯಾಲಯ ತೀರ್ಪು ನೀಡಲಿದೆ. ಈ  ಐತಿಹಾಸಿಕ ತೀರ್ಪಿಗಾಗಿ  ದೇಶದ ಜನತೆ ಕಾತರರಾಗಿದ್ದಾರೆ. ಅಲಹಾಬಾದ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಪ್ರಕಟಿಸಲಿದ್ದು,  ಈ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ನ್ಯಾಯಾಲಯದ ಆವರಣದ ಸುತ್ತಲಿನ ಪ್ರದೇಶಕ್ಕೆ ನಿರ್ಭಂಧ ಹೇರಲಾಗಿದೆ. ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿಂದಾಗಿ […]

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ತೀರ್ಪು ಸೆಪ್ಟೆಂಬರ್ 30 ಕ್ಕೆ

Tuesday, September 28th, 2010
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ

ನವದೆಹಲಿ : ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ತೀರ್ಪು ಮುಂದೂಡಲು ರಮೇಶ್ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಸೆಪ್ಟೆಂಬರ್ 30ರಂದು ಗುರುವಾರ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 24ರಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಬೇಕಿದ್ದ ತೀರ್ಪಿನ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ […]

ವೈಶಾಲಿ ಕಾಸರವಳ್ಳಿ ಅಂತಿಮ ಯಾತ್ರೆ

Tuesday, September 28th, 2010
ವೈಶಾಲಿ ಕಾಸರವಳ್ಳಿ

ಬೆಂಗಳೂರು  : ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ಪರದೆ ಮತ್ತು  ಕಿರುತೆರೆ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟಿ  ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ವೈಶಾಲಿ ಕಾಸರವಳ್ಳಿ ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸದೆ ಸೋಮವಾರ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ನಿರ್ದೇಶಕಿ, ವಸ್ತ್ರವಿನ್ಯಾಸಕಿ ನಟಿಯೂ ಆಗಿದ್ದರು, ಪತಿ, ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ, ಪುತ್ರಿ ಅನನ್ಯ ಹಾಗೂ ಪುತ್ರ ಅಪೂರ್ವ ಅವರನ್ನು ಅಗಲಿದ್ದಾರೆ. […]

ಮಂಗಳೂರಿನ ಬೀದಿಗಳಲ್ಲಿ ಮೈಸೂರು ದಸರಾ ಪ್ರಚಾರ

Monday, September 27th, 2010
ಮೈಸೂರು ದಸರಾ ಪ್ರಚಾರ

ಮಂಗಳೂರು: ಅಕ್ಟೋಬರ್ 8 ರಿಂದ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಐತಿಹಾಸಿಕ ಹಿನ್ನೆಲೆಯುಳ್ಳ ಮೈಸೂರು ದಸರಾದ ಪ್ರಚಾರ ಜಾಥಾವನ್ನು ಮಂಗಳೂರು  ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ ಚೆಂಡೆ ಬಡಿಯುವ ಮೂಲಕ ಉದ್ಘಾಟಿಸಿದರು. ಮೈಸೂರು ವಾರ್ತಾ ಇಲಾಖೆ ಹಾಗೂ ದಸರಾ ಮಹೋತ್ಸವದ ವಿಶೇಷ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1 ರವರೆಗೆ ಪ್ರಚಾರ ಜಾಥಾ ನಡೆಸಲಿದ್ದಾರೆ. ನಾಲ್ಕು ತಂಡಗಳಾದ ಚೈತನ್ಯ ಕಲಾತಂಡ, ಸ್ಪಂದನ ಮಹಿಳಾ ತಂಡ, ವಿವೇಕ ಕಲಾ ತಂಡ […]

`ವಿದ್ಯಾರ್ಥಿ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ’ ಕಾರ್ಯಗಾರ

Monday, September 27th, 2010
ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಕಾರ್ಯಗಾರ

ಮಂಗಳೂರು: ರಾಮಕೃಷ್ಣ ಮಠದ, ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸೆಪ್ಟಂಬರ್ 27 ರಿಂದ 28 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಯುವ ಶಿಕ್ಷಕರ ಕಾರ್ಯಗಾರವನ್ನು ಡಾ. ವಿಶ್ವನಾಥ್ ಉದ್ಘಾಟಿಸಿದರು. ಉದ್ಘಾಟನಾ ಬಳಿಕ ಮಾತನಾಡಿದ ಅವರು ದೇಶದ ಪ್ರಗತಿ ಆಗಬೇಕಿರುವುದು ಶಿಕ್ಷಕರಿಂದಲೇ ಅದಕ್ಕಾಗಿ ಇಂದಿನಿಂದಲೇ ತಯಾರಿ ಹೊಂದಬೇಕು. ಕೇವಲ ಮಾತೃ ಭಾಷೆಯಲ್ಲಿ ಮಾತ್ರ ಪಾಂಡಿತ್ಯ ಹೊಂದದೆ ಇತರ ಭಾಷೆಗಳಲ್ಲಿಯೂ ಹಿಡಿತವನ್ನು ಹೊಂದಿ ಯಾವುದೇ ಸನ್ನಿವೇಶಗಳನ್ನು ಎದುರಿಸುವ ಮನೋಭಾವ ಹೊಂದಿರಬೇಕು ಎಂದು ಅವರು ಹೇಳಿದರು. ಸ್ವಾಮಿ ಜಿತಕಾಮಾನಂದಜೀಯವರು `ಉತ್ತಮ […]

ಮಂಗಳೂರಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

Monday, September 27th, 2010
ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು: ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಪಣಂಬೂರ್ ಬೀಚ್  ಅಭಿವೃದ್ಧಿ ಯೋಜನಾ ಸಂಸ್ಥೆ ಹಾಗೂ ಮಂಗಳೂರು ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪ್ರವಾಸೋಧ್ಯಮ ದಿನಾಚರಣೆ 2010ನ್ನು ಇಂದು ಬೆಳಿಗ್ಗೆ ನಗರದ ಪುರಭವನದಲ್ಲಿ ಆಚರಿಸಲಾಯಿತು. ಪ್ರವಾಸೋಧ್ಯಮ ಮತ್ತು ಜೈವಿಕ ವೈವಿಧ್ಯತೆ ಎಂಬ ಸಂದೇಶದೊಂದಿಗೆ ಆಚರಿಸಲ್ಪಟ್ಟ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತೀರ ಪ್ರದೇಶವನ್ನು ಹೊಂದಿರುವ […]

ಪತ್ರಿಕಾ ಮಾರಟಕ್ಕೆ ಅಡ್ಡಿ ಪಡಿಸಿ ಅಂಗಡಿ ಜಖಂಗೊಳಿಸಿದ ದುಷ್ಕರ್ಮಿಗಳು

Monday, September 27th, 2010
Paper stall

ಮಂಗಳೂರು :  ನಗರದ ಮಿಲಾಗ್ರಿಸ್ ಬಳಿ ಟೆಲಿಫೋನ್ ಬೂತ್ ಹಾಗೂ ಪೇಪರ್ ಸ್ಟಾಲ್ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಮೆಲ್ವಿಲ್ ಪಿಂಟೋ ಎಂಬವರ ಅಂಗಡಿಗೆ ಭಾನುವಾರ ಸಂಜೆ ಆಗಮಿಸಿದ ದುಷ್ಕರ್ಮಿಗಳು ‘ಕರಾವಳಿ ಅಲೆ’ ಮಾರಾಟ ಮಾಡಬಾರದು ಎಂದು ಬೆದರಿಸಿ ಕಾಯಿನ್ ಬಾಕ್ಸ್ ಮತ್ತು ಕಪಾಟಿಗೆ ಹಾನಿ ಮಾಡಿ ‘ಕರಾವಳಿ ಅಲೆ’ಯ ಪ್ರತಿಗಳನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬೈಕ್‌ನಲ್ಲಿ ಮೂರು ಮಂದಿ ಬಂದಿದ್ದು ಒಬ್ಬಾತನ ಬಳಿ ಮಾರಕಾಯುಧ ಇತ್ತು ಎಂದು ಮೆಲ್ವಿಲ್ ಪಿಂಟೊ ತಿಳಿಸಿದ್ದಾರೆ. ಬಳಿಕ ಕಂಕನಾಡಿ ಆಸುಪಾಸಿನ […]

ಪಾಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟು ಮತ್ತು ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಬೇಕು : ಭಟ್

Saturday, September 25th, 2010
yogish Bhat

ಮಂಗಳೂರು : ಪಶ್ವಿಮವಾಹಿನಿ ಯೋಜನೆ ಕರಾವಳಿ ಜಿಲ್ಲೆಗಳಲ್ಲಿ ಹರಿಯುತ್ತಿರುವ 13 ನದಿಗಳಿಂದ ಸಮುದ್ರಕ್ಕೆ ಸುಮಾರು 2000 ಟಿ.ಎಂ.ಸಿ ಯಷ್ಟು ನೀರು ಪೋಲಾಗುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತಹ ಯೋಜನೆಗಾಗಿ 2010-11 ನೇ ಸಾಲಿನ ಅಯವ್ಯಯದಲ್ಲಿ ಅನುಷ್ಠಾನಗೊಳಿಸುಲು ಕೇಂದ್ರ ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಂಗಳೂರು ಶಾಸಕ ಯೊಗೀಶ್ ಭಟ್ ಇಂದು ನರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಅಲ್ಲಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು […]