“ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ” -ಡಾ.ಎಂ. ಮೋಹನ್ ಆಳ್ವ

Friday, March 15th, 2024
mohan-Alva

ಮಂಗಳೂರು: “ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿಗೂಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “10ನೇ ತರಗತಿಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಐಸಿಎಸ್‌ಇ […]

ಆಳ್ವಾಸ್‌ನಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನ”

Saturday, March 7th, 2020
alvas

ಮಿಜಾರು : ಸಮಾನತೆಗಾಗಿ ಮಹಿಳೆಯರು ಹೋರಾಟ ನಡೆಸಿದರೆ ಅದು ಮುರ್ಖತನವಾಗುತ್ತದೆ ಏಕೆಂದರೆ ಮಹಿಳೆಯರು ಎಲ್ಲರಿಂಗಿಂತ ಶ್ರೇಷ್ಠರು, ಅವರ ಸಾಮರ್ಥ್ಯದ ಅರಿವು ಅವರಿಗಿದ್ದರೆ ಯಾವುದೇ ಹೋರಾಟದ ಅಗತ್ಯ ಅವರಿಗಿಲ್ಲ ಎಂದು ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಳ್ವಾಸ್ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಮತ್ತು ಸೊಸೈಟಿ ಫಾರ್ ವುಮೆನ್ ರಿರ್ಸೋಸ್ ಡೆವಲಪ್‌ಮೆಂಟ್ ಜತೆಗೂಡಿ ಮಿಜಾರು ಅಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಶಕ್ತಿ […]

ಆಳ್ವಾಸ್‌ನ ವಿಭಾ, ವಿವೇಕಾನಂದದ ಶ್ರೀ ಕಾಂತ್‌ಗೆ `ಮಾಮ್ ಇನ್‌ಸ್ಪೈರ್ ಪ್ರಶಸ್ತಿ’ 

Friday, March 6th, 2020
alvas

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ `ಮೀಡಿಯ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ'(ಮಾಮ್) ವತಿಯಿಂದ ನೀಡಲಾಗುವ 2018-19ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಇಬ್ಬರು ಪ್ರತಿಭಾವಂತರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ) ಆಯ್ಕೆಯಾಗಿದ್ದಾರೆ. ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ […]

ಆಳ್ವಾಸ್ ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ವತಿಯಿಂದ ‘ಟ್ಯಾಕ್ಸೇಶನ್ ಫೆಸ್ಟ್’ ಕಾರ್ಯಕ್ರಮ

Wednesday, February 26th, 2020
alvas

ವಿದ್ಯಾಗಿರಿ : ಪ್ರತಿಯೊಬ್ಬ ಪ್ರಜೆಯೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುತ್ತಾರೆ. ಈ ತೆರಿಗೆಯಿಂದ ಬಂದ ಹಣದಿಂದಲೇ ಸರಕಾರ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಎಂದು ಸಿ.ಎ. ಆದರ್ಶ್ ಶೆಣೈ ತಿಳಿಸಿದರು. ಆಳ್ವಾಸ್ ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ವತಿಯಿಂದ ನಡೆದ ’ಟ್ಯಾಕ್ಸೇಶನ್ ಫೆಸ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಜನಸಾಮಾನ್ಯರು ಕಷ್ಟಪಟ್ಟು ದುಡಿದು ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಅದರಲ್ಲಾಗುವ ಲಾಭ ನಷ್ಟಗಳನ್ನು ಅರಿಯದೇ ಹೋಗುತ್ತಾರೆ. ಹೆಚ್ಚಿನ ಜನಸಾಮಾನ್ಯರಿಗೆ ತಾವು ಕಟ್ಟುವ ತೆರಿಗೆ ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದರ […]

ಆಳ್ವಾಸ್‌ನಲ್ಲಿ “ಓಶಿಯಾನಸ್ ಫೆಸ್ಟ್”

Tuesday, February 18th, 2020
alvas

ಮೂಡುಬಿದಿರೆ : ಫೆಸ್ಟ್‌ಗಳು ವಿದ್ಯಾರ್ಥಿ ಜೀವನದಲ್ಲಿ ತುಂಬಾ ಮುಖ್ಯವಾಗುತ್ತವೆ. ಇದು ಕೊನೆಯವರೆಗೂ ಉಳಿಯುವಂತಹ ನೆನಪು ಕೂಡ ಆಗಿರುತ್ತದೆ. ಹಾಗೇ ಅನೇಕ ರೀತಿಯ ಪ್ರತಿಭೆಗಳು ಹುಟ್ಟಲು ಮತ್ತು ಬೆಳೆಯಲು ಅದ್ಭುತ ವೇದಿಕೆಯಾಗಿರುತ್ತದೆ. ಅದೇ ರೀತಿ ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಕಾಳಜಿ ಹುಟ್ಟುವಂತಹದ್ದು ಮತ್ತು ನಾಯಕತ್ವ ಬೆಳೆಯುವುದು ಈ ರೀತಿಯ ಫೆಸ್ಟ್‌ಗಳಿಂದ ಎಂದು ಬಿಗ್‌ಬಾಸ್ 7ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯೂಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ”ಓಶಿಯಾನಸ್ ಫೆಸ್ಟ್”ನಲ್ಲಿ ಮಾತನಾಡಿದರು. ಕಾರ‍್ಯಕ್ರಮವನ್ನು […]

ಆಳ್ವಾಸ್ ವಿದ್ಯಾರ್ಥಿಗಳಿಂದ ’ಪ್ಲಾಗಿಂಗ್’

Monday, February 17th, 2020
alvas

ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಓಶಿಯನಸ್-2020 ಫೆಸ್ಟ್‌ನ ಪೂರ್ವಭಾವಿಯಾಗಿ ಆದಿತ್ಯವಾರ ಇಲ್ಲಿನ ಸ್ವರಾಜ್ಯ ಮೈದಾನದಿಂದ ಆಲಂಗಾರಿನವರೆಗಿನ ರಸ್ತೆಯ ಬದಿಯಲ್ಲಿ ವಿಶೇಷ ’ಪ್ಲಾಗಿಂಗ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನವಿಕ ವಿಭಾಗದ 150 ವಿದ್ಯಾರ್ಥಿಗಳು ಬೆಳಿಗ್ಗೆ ಏಳು ಗಂಟೆಗೆ ಸ್ವರಾಜ್ಯ ಮೈದಾನದಿಂದ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಕಸಗಳನ್ನು ಚೀಲಗಳಲ್ಲಿ ತುಂಬಿ ಸ್ವಚ್ಛಗೊಳಿಸಿದರು. ಆರೋಗ್ಯಕ್ಕಾಗಿ ಜಾಗಿಂಗ್, ಸ್ವಚ್ಛತೆಗಾಗಿ ಪ್ಲಾಗಿಂಗ್ ಎಂಬ ಘೋಷವನ್ನಿರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆ ಪುರಸಭೆಯವರು ವಿದ್ಯಾರ್ಥಿಗಳಿಗೆ ಕಸ ವಿಲೇವಾರಿಯಲ್ಲಿ ಸಹಕರಿಸಿದರು. ರೋಟರಿ ಕ್ಲಬ್ […]

ಆಳ್ವಾಸ್‌ನಲ್ಲಿ “ಡೇಟಾ ಅನಲಿಟಿಕ್ಸ್ ಅಂಡ್ ಮಷಿನ್ ಲರ್ನಿಂಗ್” ಕಾರ್ಯಾಗಾರ

Monday, February 10th, 2020
alvas

ಮಿಜಾರು : ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕದ ಜ್ಞಾನದೊಂದಿಗೆ ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ವೃದ್ದಿಸಲು ಸಹಾಯಕವಾಗುತ್ತದೆ ಎಂದು ಅಲಹಾಬಾದ್ ಐ.ಐ.ಐ.ಟಿಯ ಮಾಹಿತಿತಂತ್ರಜ್ಞಾನ ವಿಭಾಗದ ಪ್ರಾಧ್ಯಪಕ ಡಾ.ಸತೀಶ್ ಕೆ ಸಿಂಗ್ ಹೇಳಿದರು. ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿ.ಎಸ್.ಇ, ಐ.ಎಸ್.ಸಿ, ಇ,ಸಿ,ಇ ಮತ್ತು ಐ.ಐ.ಐ.ಟಿ ಅಲಹಾಬಾದ್‌ನ ಸಹಯೊಗದೊಂದಿಗೆ ನಾಲ್ಕು ವಾರಗಳ ಕಾಲ ನಡೆಯಲಿರುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಅಧಿಕ ಕಲಿಕೆಗೆ ತಮ್ಮ ಸಮಯಮನ್ನು ಮೀಸಲಾಗಿಡುವುದರೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಸಂಶೋಧನಾತ್ಮಕ […]

ಆಳ್ವಾಸ್‌ನ ವರುಣ್ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ ಮೀಟ್‌ಗೆ ಆಯ್ಕೆ

Monday, February 10th, 2020
varun

ಮಿಜಾರು : ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ ಇಂಡೋನೇಷಿಯಾದ ಬಾಲಿಯಲ್ಲಿ ಜುಲೈ 3 ರಿಂದ 6ರವರೆಗೆ ನಡೆಯಲಿರುವ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ -2020ಕ್ಕೆ ಆಯ್ಕೆಯಾಗಿದ್ದರೆ. ‘ಕ್ರಿಯಾತ್ಮಕ ಭದ್ರತಾ ಆಯಾಮಗಳಲ್ಲಿ ಶಾಂತಿಯನ್ನು ಕಾಪಾಡುವುದು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಜಾಗತಿಕ ಮಂಡಳಿಯಲ್ಲಿ ಭಾಗವಹಿಸಲು ನಾನಾ ದೇಶಗಳಿಂದ ಬಂದ 3500 ಅರ್ಜಿಗಳಲ್ಲಿ 4.33% ಜನರನ್ನು ಆಯ್ಕೆಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ವರುಣ್‌ನನ್ನು ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ […]

ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ

Thursday, January 30th, 2020
pateel

ವಿದ್ಯಾಗಿರಿ : ಅಕ್ಷರಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಕಥೆ ಅನುಭವ ಮತ್ತು ಪರಾಮರ್ಶೆಯಲ್ಲಿ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವ ಮಾಧ್ಯಮ ಎಂದು ಕಥೆಗಾರ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಜಂಟಿ ಆಶ್ರಯದಲ್ಲಿ ಆಯೋಜಿಸಿದ ’ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ-ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನುಭವದ ನವೀಕೃತ ರೂಪವೇ ಕಥೆ. ಕಥೆಗಾರನ ಅಂತರ್ಗರ್ಭದ ಎಲ್ಲಾ ಭಾವಗಳನ್ನು ಹೊರಹಾಕುವುದಕ್ಕೆ ಸಾಹಿತ್ಯದಲ್ಲಿ ಕಥೆ ಉತ್ತಮ […]

ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್ ಹಾಗೂ ಬೆಂಗಳೂರಿನ ಸಿ.ಐ.ಎಸ್ ನಡುವೆ ಒಡಂಬಡಿಕೆಗೆ ಸಹಿ

Wednesday, January 8th, 2020
alvas

ಮೂಡುಬಿದಿರೆ : ಜ್ಞಾನವೆಂಬುದು ಮುಕ್ತವಾಗಿದ್ದು ಇದು ಯಾರೊಬ್ಬರ ಆಸ್ತಿಯಲ್ಲ. ಈ ನಿಟ್ಟಿನಲ್ಲಿ ಜ್ಞಾನವನ್ನು ವೃದ್ಧಿಸುವಲ್ಲಿ ವಿಕಿಪೀಡಿಯಾ ಸಹಕಾರಿಯಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್ ಮತ್ತು ಬೆಂಗಳೂರಿನ ಸಿ.ಐ.ಎಸ್ ನಡುವೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ನಾವು ಯಾವಾಗ ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುತ್ತೆವೆಯೋ ಆಗ ಸಮಾಜ ಮುಕ್ತವಾಗುತ್ತ ಹೋಗುತ್ತದೆ. ಆದ್ದರಿಂದ ಜನರು ಜ್ಞಾನವನ್ನು ಹೆಚ್ಚಿಸಿಕೊಂಡು ಇತರರೊಂದಿಗೆ ಹಂಚಿಕೊಳ್ಳುವಲ್ಲಿ ಪ್ರವೃತ್ತರಾಗಬೇಕು. ಸಾಮಾನ್ಯಜ್ಞಾನವು […]