ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಆಯ್ಕೆ

Tuesday, September 24th, 2019
VB-Kulamarva

ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರ ದಲ್ಲಿ ಕಾಸರಗೋಡು ಜೆ.ಪಿ. ನಗರ ಕನ್ನಡ ಗ್ರಾಮದಲ್ಲಿ ಸೆ.29ರಂದು ಬೆಳಗ್ಗೆ 9ರಿಂದ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣ ತಜ್ಞ, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಆಯ್ಕೆಯಾಗಿದ್ದಾರೆ. ವಿ.ಬಿ. ಕುಳಮರ್ವ ಅವರು ನಿವೃತ್ತ ಮುಖ್ಯ ಶಿಕ್ಷಕರು. ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಬೀದರ್‌ […]

ನ.14ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ 2019

Wednesday, July 24th, 2019
Alvas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು. ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಆಯಾ ದಿನಗಳು ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‍ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು […]

ಆಳ್ವಾಸ್ ನ ಸುಮಾರು 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ

Sunday, November 18th, 2018
ಆಳ್ವಾಸ್ ನ ಸುಮಾರು 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ

15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಗೆ ವೈಭವೋಪೇತ ತೆರೆ

Sunday, November 18th, 2018
Alvas

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಭಾನುವಾರದಂದು ವೈಭವಪೂರ್ಣವಾಗಿ ಸಮಾಪನಗೊಂಡಿತು. ಇದೇ ಸಂದರ್ಭದಲ್ಲಿ 12 ಸಾಧಕರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ “ನಾವಿಂದು ನಮ್ಮ ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ, ಅದು ಸಾರ್ಥಕ್ಯವಾಗುತ್ತಿದೆಯಾ ಎಂದು ವಿಮರ್ಶಿಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಕಾರಣ ಬ್ರಿಟೀಷರು ನಮ್ಮವರ ಅಪೇಕ್ಷೆಯ ಮೇರೆಗೆ ಇಂಗ್ಲೀಷ್ […]

ಜೀವನ ಪದ್ಧತಿಯ ಆತಂಕದ ನೆಲೆಗಳು- ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Sunday, November 18th, 2018
Narahalli Balasubrahmanya

ಮೂಡಬಿದ್ರಿ  : ಭಾರತೀಯರ ಬದುಕಿನಲ್ಲಿ ಆಧುನಿಕ ಶಿಕ್ಷಣ ತನ್ನ ಪ್ರಭಾವವನ್ನು ಅತಿಯಾಗಿ ಬೀರುತ್ತಿದೆ, ಇದರಿಂದಾಗಿ ಇಂದು ನಮ್ಮ ಸುತ್ತಲಿನ ಪರಿಸರ, ಸಂಸ್ಕೃತಿ, ಕಲೆ, ಸಾಹಿತ್ಯ ಎಲ್ಲವನ್ನೂ ಕೀಳರಿಮೆಯಿಂದ ನೋಡುವಂತಾಗಿದೆ ಎಂದು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ‘ಜೀವನ ಪದ್ಧತಿಯ ಆತಂಕದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಬದುಕಿನ ವೃತ್ತಿಯು ನಮ್ಮ ಇಡೀ ಜೀವನ ಪದ್ಧತಿಯ ಬದಲಾವಣೆಗೆ ಕಾರಣವಾಗುತ್ತಾ ಹೋಗುತ್ತದೆ. ಈ ರೀತಿಯ ಬದಲಾವಣೆ […]

ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಗೆ ಚಾಲನೆ

Friday, November 16th, 2018
alvas-nudisiri 18

ಮೂಡುಬಿದಿರೆ : ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  15ನೆ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಯನ್ನು ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮೋಹನ್ ಆಳ್ವ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಷ.ಶೆಟ್ಟರ್ ನಾಲ್ಕನೇ ಶತಮಾನದ ಆರಂಭದಲ್ಲೇ ಕನ್ನಡ ಭಾಷೆಯ ಉಗಮವಾಗಿದೆ, ಆದುದರಿಂದ ಹಲ್ಮಿಡಿ ಶಾಸನದಿಂದ ಆಯಿತು ಎನ್ನುವುದು ಅರ್ಧ ಸತ್ಯ.ಇದನ್ನು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದರು. ತೆಲುಗು […]

ಆಳ್ವಾಸ್​​ ನುಡಿಸಿರಿಗೆ ಸಮ್ಮೇಳನ ಸರ್ವಾಧ್ಯಕ್ಷರಾಗಿ ಮಲ್ಲಿಕಾ ಘಂಟಿ ಆಯ್ಕೆ

Friday, September 21st, 2018
alwas

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ 15 ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ. ಮಲ್ಲಿಕಾ ಘಂಟಿ ಮತ್ತು ಉದ್ಘಾಟಕರಾಗಿ ಡಾ. ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಈ ಬಾರಿ ‘ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು’ ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ಆಳ್ವಾಸ್ ನುಡಿಸಿರಿ-2018 ಸಮ್ಮೇಳನವು ನವೆಂಬರ್ 16, 17 ಮತ್ತು 18ರಂದು ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವಾ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ […]

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪ ಈ ನೃತ್ಯ ಗುರು ಶಾರದಾಮಣಿ!

Saturday, December 16th, 2017
sharadamani

ಮಂಗಳೂರು: ಗುರುವಿನ ವ್ಯಕ್ತಿತ್ವವನ್ನು ಶಿಷ್ಯರ ಸಾಧನೆಯಲ್ಲಿ ಕಾಣು ಎಂಬುದು ಹಿರಿಯರ ಅನುಭವದ ಮಾತು. ನೃತ್ಯ ಗುರು ಶಾರದಾಮಣಿ ಶೇಖರ್‌‌ ಈ ಲೋಕೋಕ್ತಿಗೆ ಅನ್ವರ್ಥ ನಾಮ. ಕಾರಣ ಇಲ್ಲಿದೆ. ಕಳೆದ ಮೂರು ದಶಕಗಳಲ್ಲಿ ಸನಾತನ ನಾಟ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ನೃತ್ಯಪಟುವಾಗಿ ಹೊರಹೊಮ್ಮಿದ್ದರೆ ಅದರ ಮೂಲ ಪ್ರೇರಣೆ ಶಾರದಾಮಣಿ ಶೇಖರ್‌! ಇದೀಗ ಅವರ ಶಿಷ್ಯರು ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಗುರುಗಳಾಗಿ ಮಿಂಚುತ್ತಿದ್ದಾರೆ. ಮಂಗಳೂರಿವರೇ ಆದ ಶಾರದಾಮಣಿ ಶೇಖರ್‌, ಭರತನಾಟ್ಯವನ್ನು ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ […]

ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ

Sunday, December 3rd, 2017
Dr-Alva's-interaction

ಮೂಡುಬಿದಿರೆ : ‘ಬಹುತ್ವದ ಪರಿಕಲ್ಪನೆ ಯಾವಾಗಲೂ ನನ್ನ ಆಸಕ್ತಿಯ ವಿಷಯ. ನಮ್ಮ ದೊಡ್ಡ ಜೀವನ ಬಹುತ್ವದ ನೆಲೆಯಲ್ಲಿ ಬರಬೇಕು ಎಂಬ ಆಸೆ ಇಟ್ಟುಕೊಂಡವನು ನಾನು. ಜೀವನದ ಅವಿಭಾಜ್ಯ ಅಂಗವಾಗಿ ಈ ವೈವಿಧ್ಯತೆ ಯಾವಾಗಲೂ ಇರಬೇಕು. ಅದಕ್ಕಾಗಿಯೇ ಈ ಬಾರಿಯ ನುಡಿಸಿರಿಯನ್ನು ಬಹುತ್ವದ ಪರಿಕಲ್ಪನೆಯಲ್ಲಿ ಮಾಡುತ್ತಿದ್ದೇವೆ’ ಎಂದು ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ನುಡಿಸಿರಿಯ ಮೂರನೇ ದಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಭಿಕರ ಹಲವಾರು […]

ನಮ್ಮೊಳಗಿರುವ ದೇವರನ್ನು ಹುಡುಕಿ: ಎಸ್.ಷಡಕ್ಷರಿ

Saturday, December 2nd, 2017
S-Shadakshari

ಮೂಡುಬಿದಿರೆ:‘ ನಮ್ಮೊಳಗೆ ಬಂಗಾರದ ವ್ಯಕ್ತಿತ್ವವಿದೆ. ಆದರೆ ಮನುಷ್ಯ ತನ್ನ ಸಣ್ಣತನದಿಂದಾಗಿ ಮಣ್ಣಿನ ವಿಗ್ರಹವಾಗಿದ್ದಾನೆ. ನಮ್ಮ ಉನ್ನತ ನಡವಳಿಕೆಯಿಂದ ನಮ್ಮ ಒಳಗಿರುವ ಚಿನ್ನದ ವ್ಯಕ್ತಿತ್ವ ಗೋಚರಿಸುವಂತಾಗಬೇಕು’ ಎಂದು ಎಸ್.ಷಡಕ್ಷರಿ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ನಡೆದ ‘ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ ವಿಚಾರಗೋಷ್ಠಿಯಲ್ಲಿ ಆರಾಧನಾ ದೃಷ್ಟಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ದೇವರು ನಮ್ಮಲ್ಲೇ ಇದ್ದಾನೆ. ಈ ದೇವರನ್ನು ವಿವಿಧ ಬಗೆಯಲ್ಲಿ ತಲುಪುವ, ಆರಾಧಿಸುವ ಮಾರ್ಗವನ್ನು ನಮ್ಮ ಪರಂಪರೆ ಹೇಳಿಕೊಟ್ಟಿದೆ. ವಿವಿಧ ದಾಸರು, ದೈವಭಕ್ತರು ಹಾಡಿದ ಕೀರ್ತನೆಗಳು, ರಚಿಸಿದ ಶ್ಲೋಕಗಳು ಆರಾಧನೆಗಿರುವ […]