ದ.ಕ. ಸಹಕಾರಿ ನೌಕರರ ಸಹಕಾರ ಸಂಘ ನಿ. ಮಂಗಳೂರು ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ದಿನಾಂಕ 01.12.2019

Sunday, December 1st, 2019
Co-op workers sangha

ಲಿಂಗತ್ವ ಹಕ್ಕುಗಳ ರಕ್ಷಣಾ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Friday, November 29th, 2019
transgenders

ಮಂಗಳೂರು : ಕೇಂದ್ರ ಸರಕಾರವು ಜಾರಿಗೊಳಿಸಿರುವ ” ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ  ರಕ್ಷಣಾ ಮಸೂದೆ 2019 ” ಲಿಂಗತ್ವ ಅಲ್ಪಸಂಖ್ಯಾತರು ವಿರೋಧಿಸಿದ್ದು ಈ ಮಸೂದೆಯನ್ನು ರಾಷ್ಟ್ರ ಪತಿಗಳು ಅಂಗೀಕರಿಸಬಾರದು ಎಂದು ನವಸಹಜ ಸಮುದಾಯ ಸಂಘಟನೆ ಪದವು ಮಂಗಳೂರು ಇವರು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಈ ಮಸೂದೆಯನ್ನು ಜಾರಿಗೊಳಿಸುವ ಮುನ್ನ ಲಿಂಗತ್ವ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ಪಡೆಯದೇ ಜಾರಿಗೊಳಿಸಿರುವುದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಪ್ತ್ರತಿಭಟನೆಯಲ್ಲಿ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. […]

ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ : ಶ್ರೀಕಾಂತ್‌, ಸೌರಭ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ

Friday, November 29th, 2019
Srikanth

ಲಕ್ನೋ : “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌” ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್‌ ಮತ್ತು ಸೌರಭ್‌ ವರ್ಮ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಲಕ್ಷ್ಯ ಸೇನ್‌ ಪರಾಭವಗೊಂಡಿದ್ದಾರೆ. ವನಿತಾ ಡಬಲ್ಸ್‌ ನಲ್ಲಿ ಯುವ ಆಟಗಾರ್ತಿಯರಾದ ಶಿಮ್ರಾನ್‌ ಶಿಂಗಿ-ರಿತಿಕಾ ಠಾಕರ್‌ ಕೂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 3ನೇ ಶ್ರೇಯಾಂಕಿತ ಕೆ. ಶ್ರಿಕಾಂತ್‌ ತಮ್ಮದೇ ದೇಶದ ಪಿ.ಕಶ್ಯಪ್‌ ವಿರುದ್ಧ ಭಾರೀ ಹೋರಾಟ ನಡೆಸಿ 18-21, 22-20, 21-16 ಅಂತರದಿಂದ ಗೆದ್ದು ಮುನ್ನಡೆದರು. […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಉದ್ಘಾಟನೆ

Tuesday, November 26th, 2019
laksha-deepotsava

ಧರ್ಮಸ್ಥಳ :ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ – ಇದೇಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ೮೭ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಒಳ್ಳೆಯ ವರ್ತನೆಯನ್ನು ಹೊಂದಿದಾಗ ಮಾತ್ರಇತರರೂ ಒಳ್ಳೆಯ ವ್ಯಕ್ತಿಗಳಾಗಿ ರೂಪಿಗೊಳ್ಳಲು ನಾವು ಆದರ್ಶ ವ್ಯಕ್ತಿಗಳಾಗಿ ನಮ್ಮ ವರ್ತನೆಯಿಂದ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.ಧರ್ಮ ಮತ್ತುಕರ್ತವ್ಯದಲ್ಲಿ ನಿವೃತ್ತಿಎಂಬುದುಇಲ್ಲ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಮಾನವನೇ ಮಾಧವನಾಗಬಲ್ಲ ಎಂದುಅವರು ಹೇಳಿದರು. […]

ಆಳ್ವಾಸ್ ಬ್ಲಂಡ್ ಬ್ಯಾಂಕ್ ಕಾರ್ಯಾಗಾರ

Saturday, November 23rd, 2019
Alvas

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‌ನ ಭಾಗವಾಗಿರುವ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್‌ನಿಂದ ಒಂದು ದಿನದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ವಾಯು ಸೇನೆಯ ಅಧಿಕಾರಿ ರಾಹುಲ್ ಶಿಂಧೆ ರಕ್ತದಾನ ಒಂದು ಉತ್ತಮ ಸಾಮಾಜಿಕ ಸೇವಾ ಕೈಂಕರ್ಯ ಎಂದರು. ಭಾರತದ ಅಂಗಾಂಗ ದಾನ ಸಂಸ್ಥೆ(ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್)ಯ ಅಧ್ಯಕ್ಷ ಲಾಲ್ ಗೊಯೆಲ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ […]

ಎಸ್.ಡಿ .ಎಂ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ದೀಕ್ಷಾ ವಿ. ಗೆ ಪ್ರಥಮ ರ‍್ಯಾಂಕ್‌

Friday, November 22nd, 2019
deekshaV

ಮಂಗಳೂರು : ಎಸ್.ಡಿ .ಎಂ ಕಾಲೇಜಿನ ವಿವಿದ್ಯಾರ್ಥಿನಿ  ದೀಕ್ಷಾ ವಿ. ಗೆ ಬ್ಯಾಚುರಲ್ ಆಪ್ ಬುಸಿನೆಸ್ ಮೆನೇಜ್ ಮೆಂಟಿನಲ್ಲಿ 93.06 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಬಂದಿರುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ 2019 ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಪ್ರಸ್ತುತ ಚಾರ್ಟೆಡ್‌ ಅಕೌಟಂಟ್‌ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಮಮಂದಿರ ತೀರ್ಪು : ಪ್ರಚೋದನಕಾರಿ ಭಿತ್ತಿ ಪತ್ರ ಹಂಚಿದ ಸಂಘಟನೆ ; ದೂರು ದಾಖಲು

Wednesday, November 20th, 2019
pfi

ಮಡಿಕೇರಿ:  ಬಾಬ್ರಿ ಮಸೀದಿ ವಿವಾದಕ್ಕೆ ಸಂಭಂಧಿಸಿದಂತೆ ಕಳೆದ ನವೆಂಬರ್‌ 10 ರಂದು ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪನ್ನು ನೀಡಿದ್ದು ದೇಶಾದ್ಯಂತ ಈ ತೀರ್ಪು ವಿವಿಧ ಧಾರ್ಮಿಕ ಮುಖಂಡರಿಂದ ಶ್ಲಾಘನೆಗೆ ಒಳಗಾಗಿದೆ. ದೇಶದಲ್ಲಿ ಕೋಮು ಸೌಹಅರ್ದತೆಯನ್ನು ಬೆಸೆಯುವ ತೀರ್ಪು ಎಂದು ಮೆಚ್ಚುಗೆಗೆ ಪಾತ್ರವಾಗಿರುವುದು ದೇಶಾದ್ಯಂತ ಎಲ್ಲೂ ಒಂದೂ ಅಹಿತಕರ ಘಟನೆ ನಡೆಯದಿರುವುದೇ ಸಾಕ್ಷಿಯಾಗಿದೆ. ಸುಂಟಿಕೊಪ್ಪದಲ್ಲಿ ಸಂಘಟನೆಯೊಂದು ಸಮಾಜದ ಶಾಂತಿ ಕದಡುವ ಉದ್ದೇಶದಿಂದ ತೀರ್ಪನ್ನು ವಿರೋದಿಸುವಂತೆ ಕರೆ ನೀಡಿದೆ. ಕರಪತ್ರದ ಮೂಲಕ ಮಾಡಿರುವ ಮನವಿಯಲ್ಲಿ ಬಾಬ್ರಿ ಮಸೀದಿ ತೀರ್ಪಿನಲ್ಲಿ ನ್ಯಾಯವನ್ನು […]

ಮದುವೆ ಸಮಾರಂಭದ ವೇಳೆ ಕಾಂಗ್ರೆಸ್​​ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಬಂಧನ

Monday, November 18th, 2019
Gowsiya-Nagara

ಮೈಸೂರು : ಭಾನುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಹಿಂಭಾಗವಿರುವ ಕಲ್ಯಾಣ ಮಂಟಪವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಊಟ ಮಾಡಿ ನಂತರ ಸಮಾರಂಭದ ಹಾಲ್ಗೆ ಬಂದು ಸ್ನೇಹಿತರೊಂದಿಗೆ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೇ ವೇಳೆ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ ಯುವಕನೋರ್ವ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ನಿಧಾನವಾಗಿ ಬಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ […]

ಇಂದಿನ ರಾಶಿ ಫಲ : ಮಕರ ರಾಶಿಗೆ ಉದ್ಯೋಗದಲ್ಲಿ ಸಮಸ್ಯೆಗಳು ಸೃಷ್ಟಿ ಆಗಲಿದೆ, ಜಾಗ್ರತೆ ವಹಿಸಿ

Friday, November 15th, 2019
durgaparameshwari

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಮೃಗಶಿರ ಋತು : ಶರದ್ ರಾಹುಕಾಲ 10:38 – 12:04 ಗುಳಿಕ ಕಾಲ 07:45 – 09:12 ಸೂರ್ಯೋದಯ 06:19:10 ಸೂರ್ಯಾಸ್ತ 17:48:50 ತಿಥಿ : ತೃತೀಯ ಪಕ್ಷ : ಕೃಷ್ಣ ಮೇಷ ರಾಶಿ ಕುಟುಂಬಸ್ಥರ ಹಾಗೂ ಬಾಳಸಂಗಾತಿಯ […]

ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರ ಬಂಧನ

Tuesday, November 12th, 2019
kolkata

ಕೋಲ್ಕತ್ತಾ : ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಡಿಆರ್‌ಐ ಅಧಿಕಾರಿಗಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 10 ಕೋಟಿ ರೂ. ಮೌಲ್ಯದ 25.79 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಇಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಸಿಲಿಗುರಿ ಹಾಗೂ ಹೌರಾ ನಗರದಲ್ಲಿ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಅಕ್ಟೋಬರ್ […]