ಖ್ಯಾತ ನಟ ಇರ್ಫಾನ್ ಖಾನ್ (54) ನಿಧನ

Wednesday, April 29th, 2020
irfan-khan

ಮುಂಬೈ :  ಭಾರತೀಯ ಚಿತ್ರರಂಗದ ಖ್ಯಾತ ನಟ ಇರ್ಫಾನ್ ಖಾನ್ (54) ಕರುಳಿನ ಸೋಂಕು ಕಾಣಿಸಿಕೊಂಡು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ  ಫಲಕಾರಿಯಾಗದೆ ಏಪ್ರಿಲ್ 29, 2020 ರಂದು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕೊಲೊನ್ ಇನ್‌ಫೆಕ್ಷನ್‌(ಕರುಳಿನ ಸೋಂಕು)ನಿಂದಾಗಿ ಕೋಕಿಲಬೆನ್‌ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್‌ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ದಿನಗಳ ಹಿಂದಷ್ಟೇ ಜೈಪುರದಲ್ಲಿ ಇರ್ಫಾನ್‌ ತಾಯಿ ಸಯೀದಾ ಬೇಗಂ (95) ನಿಧನರಾಗಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರು ಅಂತ್ಯಕ್ರಿಯೆಗೆ ಹೋಗಿರಲಿಲ್ಲ. ಈ ವಿಚಾರದಿಂದ ಇರ್ಫಾನ್ ಬಹಳಷ್ಟು ನೊಂದಿದ್ದರು. […]

ಲಾಕ್‌ಡೌನ್- ದುಬಾಯಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂ  

Sunday, April 26th, 2020
Vakwadi-Praveenkumar-Shetty

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ಭೌಗೋಳಿಕವಾಗಿ ತಾಂಡವವಾಡಿದ ಕೋವಿಡ್-19 ಸಾಂಕ್ರ್ರಾಮಿಕ ಮಹಾಮಾರಿ ಕೊರೋನಾದಿಂದ ಜನತೆ ತತ್ತರಿಸಿದ್ದು ಇದೀಗ ಈ ಮಹಾಮಾರಿ ಸಮಷ್ಟಿಯ ಸಮಗ್ರ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ. ವಿಶ್ವದಾದ್ಯಂತ ಲಾಕ್‌ಡೌನ್‌ನಿಂದ ಜಾಗತಿಕವಾಗಿ ವ್ಯಾಪಾರ ವಾಹಿವಟು ಸ್ತಬ್ದವಾಗಿದ್ದು ಆಥಿಕ ಶಕ್ತಿಯೇ ಕುಸಿದಿದೆ. ಕಣ್ಣಿಗೆ ಕಾಣದ ಸೂಕ್ಷ್ಮಣುಯೊಂದು ತನ್ನ ತಾಕತ್ತನ್ನೆ ಮೆರೆದು ಭೂಮಂಡಲವನ್ನೇ ಧರೆಗುರುಳಿಸಿದೆ. ಈ ಸಂಧಿಗ್ಧ ಸಮಯದಲ್ಲಿ ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂ-ಯುಎಇ ಸಕ್ರೀಯವಾಗಿದ್ದು, ಯುಎಇ […]

24 ಗಂಟೆಗಳಲ್ಲಿ ಭಾರತದಲ್ಲಿ 56 ಕೊರೋನಾ ಸೋಂಕಿತರು ಮೃತ್ಯು

Sunday, April 26th, 2020
corona

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 25 ಸಾವಿರ ಗಡಿಯತ್ತ ಸಾಗಿದ್ದು, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಶನಿವಾರ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 56 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 779ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. 24,942 ಪ್ರಕರಣಗಳ ಪೈಕಿ ಈವರೆಗೂ 5,209 ಮಂದಿ ಸೋಂಕಿತರು ಗುಣಮುಖರಾಗಿದ್ದು, […]

ಮಹಾರಾಷ್ಟ್ರದ ಪಾಲಘರನಲ್ಲಿ ಪೊಲೀಸರ ಎದುರೇ ಇಬ್ಬರು ಸಂತರ ಹತ್ಯೆ ಖಂಡನೀಯ : ರಮೇಶ ಶಿಂದೆ

Friday, April 24th, 2020
mumbai-sains-murder

ಮುಂಬೈ :  ಪಾಲಘರದಲ್ಲಿ ‘ಶ್ರೀ ಪಂಚ ದಶನಾಮ ಜುನಾ ಆಖಾಡಾ’ದ ಸಂತ ಕಲ್ಪವೃಕ್ಷಗಿರಿ ಮಹಾರಾಜ ಹಾಗೂ ಸುಶೀಲಗಿರಿ ಮಹಾರಾಜ, ಅದೇರೀತಿ ಅವರ ವಾಹನ ಚಾಲಕನನ್ನು ಹಿಂಸಾತ್ಮಕ ಜನಸಮೂಹವು ಪೊಲೀಸರ ಎದುರೇ ತೀವ್ರವಾಗಿ ಥಳಿಸಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಸಂದರ್ಭದ ಬಹಿರಂಗಗೊಂಡಿದ್ದ ಒಂದು ವಿಡಿಯೋದಲ್ಲಿ ಪೊಲೀಸರೇ ಆ ವೃದ್ಧ ಸಂತರನ್ನು ಹಿಂಸಾತ್ಮಕ ಸಮೂಹದವರಿಗೆ ಒಪ್ಪಿಸುತ್ತಿರುವ ಹಾಗೂ ಪೊಲೀಸರ ಎದುರೇ ಅವರ ಬರ್ಬರವಾಗಿ ಹತ್ಯೆಯಾಗುತ್ತಿರುವ ಭಯಾನಕ ಸತ್ಯವು ಬಹಿರಂಗವಾಗಿದೆ. ಒಂದು ವೇಳೆ ಜನರ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಪೊಲೀಸರೇ […]

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

Wednesday, April 22nd, 2020
HBL-Rao

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ (ಏಪ್ರಿಲ್ 22) ರಂದು ದೈವಾಧೀನರಾದರು. ಮೂಲತಃ ಮಂಗಳೂರಿನ ಹೆಜ್ಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ […]

ಕೃಷ್ಣಾಪುರ ನಿವಾಸಿ ಶೋಭಾ ಕುಲಾಲ್ ಓಲ್ಡ್ ಪನ್ವೆಲ್ ನಲ್ಲಿಅನಾರೋಗ್ಯದಿಂದ ನಿಧನ

Tuesday, April 21st, 2020
shobha Kulal

ಮುಂಬಯಿ : ಓಲ್ಡ್ ಪನ್ವೆಲ್ ನ ಕರಂಜಡೆ ಗ್ರಾಮದಲ್ಲಿ ವಾಸ್ತವ್ಯವಿರುವ ಶೋಭಾ ಕುಲಾಲ್ (38) ಅಲ್ಪಕಾಲದ ಅನಾರೋಗ್ಯದಿಂದ ಏಪ್ರಿಲ್ 20ರಂದು ಬೆಳಿಗ್ಗೆ ನಿಧನರಾದರು. ಶೋಭಾ ಅವರು ಮೂಲತಃ ಕೃಷ್ಣಾಪುರ ಕಾಟಿಪಳ್ಳ ದಿವಂಗತ ಲಕ್ಷ್ಮಣ್ ಕುಲಾಲ್ ಮತ್ತು ಜಾನಕಿ ಕುಲಾಲರ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿರುವರು. ಸತೀಶ್ ಸಿಂಧೆಯವರನ್ನು ವಿವಾಹವಾಗಿರುವ ಇವರು ಕೆಲವೇ ತಿಂಗಳುಗಳ ಹಿಂದೆ ಓಲ್ಡ್ ಪನ್ವೆಲ್ ನಲ್ಲಿ ವಾಸ್ತವ್ಯಕ್ಕೆ ಬಂದಿದ್ದರು. ಏಪ್ರಿಲ್ 20ರಂದು ಧಿಡೀರನೆ ಅನಾರೋಗ್ಯ ಎದುರಾಗಿರುವುದರಿಂದ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ […]

ಮುಂಬಯಿಯಲ್ಲಿ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್

Monday, April 20th, 2020
Mumbai-covid

ಮುಂಬಯಿ ; ಮಹಾಮಾರಿ ಕೊರೋನಾ ಸಾಂಕ್ರಾಂಮಿಕದ ವರದಿ ಮಾಡಲು ಹೋದ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ ಎಂದು ಬಿಎಂಸಿಯ ಆರೋಗ್ಯ ಸಮಿತಿ ಸದಸ್ಯ ಅಮೆ ಘೋಲ್ ಖಚಿತಪಡಿಸಿದ್ದಾರೆ ಪತ್ರಕರ್ತರುಗಳಿಗಾಗಿಯೇ ಏರ್ಪಡಿಸಿದ್ದ ವಿಶೇಷ ಕೋವಿಡ್ 19 ತಪಾಸಣೆಗಳ ಪರೀಕ್ಷಾ ವರದಿಗಳು ಬಂದಿದ್ದು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ವೆಭ್ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿ 53 ಮಂದಿ ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ. ಇವರಲ್ಲಿ ಹೆಚ್ಚಿನವರು ಕಸ್ತೂರ್ ಬಾ ಆಸ್ಫತ್ರೆ ಹಾಗೂ ಧಾರಾವಿ ಯಲ್ಲಿಂದ ವರದಿ ಮಾಡುತ್ತಿದ್ದರು. ಮಹಿಳಾ ವರದಿಗಾರರೊಬ್ಬರೂ ಇದರಲ್ಲಿ ಸೇರಿರಿವರು ಎಂದು ತಿಳಿದು ಬಂದಿದೆ. […]

ಉಗ್ರರ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

Saturday, April 18th, 2020
Baramulla

ಶ್ರೀನಗರ: ಉಗ್ರರು ಕೊರೋನಾ ಸಂಕಷ್ಟದ ಸಮಯದಲ್ಲೂ ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಿದ್ದಾರೆ. ಸಿಆರ್ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ತಂಡವೊಂದು ಜಮ್ಮು ಮತ್ತು ಕಾಶ್ಮೀರ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಬಳಿ ಸಿಆರ್ಪಿಎಫ್ ವಾಹನದ ಮೇಲೆ ಹಠಾತ್ತನೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ದಾಳಿ ನಡೆದ ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ರವಾನಿಸಲಾಗಿದೆ. ಇಬ್ಬರು ಅಥವಾ ಮೂವರು ಉಗ್ರರ ತಂಡ ಈ […]

ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಕೆ

Tuesday, April 14th, 2020
Narendra-modi

ನವದೆಹಲಿ: ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ಭಾರತ ಲಾಕ್ ಡೌನ್ ಮಂಗಳವಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಜನತೆಯನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ ಮೋದಿಯವರು, ನಿಮ್ಮ ಸಹಕಾರದಿಂದ ಕೊರೋನಾ ವೈರಸ್ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ […]

ಆರೋಗ್ಯವಂತರೂ ಮಾಸ್ಕ್ ಧರಿಸಬೇಕು-ಆರೋಗ್ಯ ಸಚಿವಾಲಯ

Sunday, April 5th, 2020
mask

ನವದೆಹಲಿ  : ಆರೋಗ್ಯವಂತರೂ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆಯನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ. ಮನೆಯಲ್ಲಿ ಮಾಡಲ್ಪಟ್ಟ (ಬೇಸಿಕ್‌), ಉಸಿರಾಟಕ್ಕೆ ಯೋಗ್ಯವಾಗುವಂತೆ ತಯಾರಿಸಿದ ಮಾಸ್ಕ್ ಅನ್ನು ಸೋಂಕಿನ ಲಕ್ಷಣಗಳಿಲ್ಲದ, ಆರೋಗ್ಯವಂತ ಜನರೂ ಧರಿಸಬೇಕು ಎಂದು ತಿಳಿಸಿದೆ. ಆದರೆ, ಇಂಥ ಗೃಹ ನಿರ್ಮಿತ ಮಾಸ್ಕ್ ಗಳನ್ನು ಕೋವಿಡ್ 19 ವೈರಸ್ ಸೋಂಕಿತರು, ವೈದ್ಯಕೀಯ ಸೇವೆಯಲ್ಲಿರುವವರು ಧರಿಸುವಂತಿಲ್ಲ. ಅವರು ಪಿಪಿಇ ಸುರಕ್ಷಾ ಉಡುಪಿನೊಂದಿಗೆ, ಎನ್‌- 95 ಮಾಸ್ಕ್ ಅನ್ನು ಧರಿಸಿ, ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವಾಲಯ ಹೇಳಿದೆ. ಗೃಹ […]