ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

Wednesday, April 22nd, 2020
HBL-Rao

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ (ಏಪ್ರಿಲ್ 22) ರಂದು ದೈವಾಧೀನರಾದರು. ಮೂಲತಃ ಮಂಗಳೂರಿನ ಹೆಜ್ಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ […]

ಕೃಷ್ಣಾಪುರ ನಿವಾಸಿ ಶೋಭಾ ಕುಲಾಲ್ ಓಲ್ಡ್ ಪನ್ವೆಲ್ ನಲ್ಲಿಅನಾರೋಗ್ಯದಿಂದ ನಿಧನ

Tuesday, April 21st, 2020
shobha Kulal

ಮುಂಬಯಿ : ಓಲ್ಡ್ ಪನ್ವೆಲ್ ನ ಕರಂಜಡೆ ಗ್ರಾಮದಲ್ಲಿ ವಾಸ್ತವ್ಯವಿರುವ ಶೋಭಾ ಕುಲಾಲ್ (38) ಅಲ್ಪಕಾಲದ ಅನಾರೋಗ್ಯದಿಂದ ಏಪ್ರಿಲ್ 20ರಂದು ಬೆಳಿಗ್ಗೆ ನಿಧನರಾದರು. ಶೋಭಾ ಅವರು ಮೂಲತಃ ಕೃಷ್ಣಾಪುರ ಕಾಟಿಪಳ್ಳ ದಿವಂಗತ ಲಕ್ಷ್ಮಣ್ ಕುಲಾಲ್ ಮತ್ತು ಜಾನಕಿ ಕುಲಾಲರ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿರುವರು. ಸತೀಶ್ ಸಿಂಧೆಯವರನ್ನು ವಿವಾಹವಾಗಿರುವ ಇವರು ಕೆಲವೇ ತಿಂಗಳುಗಳ ಹಿಂದೆ ಓಲ್ಡ್ ಪನ್ವೆಲ್ ನಲ್ಲಿ ವಾಸ್ತವ್ಯಕ್ಕೆ ಬಂದಿದ್ದರು. ಏಪ್ರಿಲ್ 20ರಂದು ಧಿಡೀರನೆ ಅನಾರೋಗ್ಯ ಎದುರಾಗಿರುವುದರಿಂದ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ […]

ಮುಂಬಯಿಯಲ್ಲಿ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್

Monday, April 20th, 2020
Mumbai-covid

ಮುಂಬಯಿ ; ಮಹಾಮಾರಿ ಕೊರೋನಾ ಸಾಂಕ್ರಾಂಮಿಕದ ವರದಿ ಮಾಡಲು ಹೋದ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ ಎಂದು ಬಿಎಂಸಿಯ ಆರೋಗ್ಯ ಸಮಿತಿ ಸದಸ್ಯ ಅಮೆ ಘೋಲ್ ಖಚಿತಪಡಿಸಿದ್ದಾರೆ ಪತ್ರಕರ್ತರುಗಳಿಗಾಗಿಯೇ ಏರ್ಪಡಿಸಿದ್ದ ವಿಶೇಷ ಕೋವಿಡ್ 19 ತಪಾಸಣೆಗಳ ಪರೀಕ್ಷಾ ವರದಿಗಳು ಬಂದಿದ್ದು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ವೆಭ್ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿ 53 ಮಂದಿ ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ. ಇವರಲ್ಲಿ ಹೆಚ್ಚಿನವರು ಕಸ್ತೂರ್ ಬಾ ಆಸ್ಫತ್ರೆ ಹಾಗೂ ಧಾರಾವಿ ಯಲ್ಲಿಂದ ವರದಿ ಮಾಡುತ್ತಿದ್ದರು. ಮಹಿಳಾ ವರದಿಗಾರರೊಬ್ಬರೂ ಇದರಲ್ಲಿ ಸೇರಿರಿವರು ಎಂದು ತಿಳಿದು ಬಂದಿದೆ. […]

ಉಗ್ರರ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

Saturday, April 18th, 2020
Baramulla

ಶ್ರೀನಗರ: ಉಗ್ರರು ಕೊರೋನಾ ಸಂಕಷ್ಟದ ಸಮಯದಲ್ಲೂ ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಿದ್ದಾರೆ. ಸಿಆರ್ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ತಂಡವೊಂದು ಜಮ್ಮು ಮತ್ತು ಕಾಶ್ಮೀರ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಬಳಿ ಸಿಆರ್ಪಿಎಫ್ ವಾಹನದ ಮೇಲೆ ಹಠಾತ್ತನೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ದಾಳಿ ನಡೆದ ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ರವಾನಿಸಲಾಗಿದೆ. ಇಬ್ಬರು ಅಥವಾ ಮೂವರು ಉಗ್ರರ ತಂಡ ಈ […]

ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಕೆ

Tuesday, April 14th, 2020
Narendra-modi

ನವದೆಹಲಿ: ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ಭಾರತ ಲಾಕ್ ಡೌನ್ ಮಂಗಳವಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಜನತೆಯನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ ಮೋದಿಯವರು, ನಿಮ್ಮ ಸಹಕಾರದಿಂದ ಕೊರೋನಾ ವೈರಸ್ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ […]

ಆರೋಗ್ಯವಂತರೂ ಮಾಸ್ಕ್ ಧರಿಸಬೇಕು-ಆರೋಗ್ಯ ಸಚಿವಾಲಯ

Sunday, April 5th, 2020
mask

ನವದೆಹಲಿ  : ಆರೋಗ್ಯವಂತರೂ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆಯನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ. ಮನೆಯಲ್ಲಿ ಮಾಡಲ್ಪಟ್ಟ (ಬೇಸಿಕ್‌), ಉಸಿರಾಟಕ್ಕೆ ಯೋಗ್ಯವಾಗುವಂತೆ ತಯಾರಿಸಿದ ಮಾಸ್ಕ್ ಅನ್ನು ಸೋಂಕಿನ ಲಕ್ಷಣಗಳಿಲ್ಲದ, ಆರೋಗ್ಯವಂತ ಜನರೂ ಧರಿಸಬೇಕು ಎಂದು ತಿಳಿಸಿದೆ. ಆದರೆ, ಇಂಥ ಗೃಹ ನಿರ್ಮಿತ ಮಾಸ್ಕ್ ಗಳನ್ನು ಕೋವಿಡ್ 19 ವೈರಸ್ ಸೋಂಕಿತರು, ವೈದ್ಯಕೀಯ ಸೇವೆಯಲ್ಲಿರುವವರು ಧರಿಸುವಂತಿಲ್ಲ. ಅವರು ಪಿಪಿಇ ಸುರಕ್ಷಾ ಉಡುಪಿನೊಂದಿಗೆ, ಎನ್‌- 95 ಮಾಸ್ಕ್ ಅನ್ನು ಧರಿಸಿ, ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವಾಲಯ ಹೇಳಿದೆ. ಗೃಹ […]

‘ವೆಲ್ ಕಂ ಟು ಇಂಡಿಯಾ ಕೋವಿಡ್ ವೈರಸ್’ ಎಂದು ಟಿಕ್ ಟಾಕ್ ವಿಡಿಯೋ ಮಾಡಿದ ವ್ಯಕ್ತಿಯ ಬಂಧನ

Saturday, April 4th, 2020
sayyad

ಮಹಾರಾಷ್ಟ್ರ:  ಟಿಕ್ ಟಾಕ್ ದ ವಿಡಿಯೋ ಮೂಲಕ ಕೋವಿಡ್ 19 ವೈರಸ್ ಬಗ್ಗೆ ವಿಕೃತಿ ಮೆರೆದ 40 ವರ್ಷದ ವ್ಯಕ್ತಿಯೊಬ್ಬನನ್ನು ನಾಶಿಕ್ ಗ್ರಾಮಾಂತರ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಾಲೆಗಾಂವ್ ನಿವಾಸಿ ಸಯ್ಯದ್ ಜಮೀಲ್ ಬಾಬು ಎಂದು ಗುರುತಿಸಲಾಗಿದೆ. ಈತ ಟಿಕ್ ಟಾಕ್ ನಲ್ಲಿ ‘ವೆಲ್ ಕಂ ಟು ಇಂಡಿಯಾ ಕೊರೊನಾ’ ಎಂಬ ಟೈಟಲ್ ಕೊಟ್ಟು ತಾನು ವಿಕೃತಿ ಮೆರೆಯುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ. ಆ ವಿಡಿಯೋದಲ್ಲಿ ಸಯ್ಯದ್ ನೋಟುಗಳನ್ನು ನೆಕ್ಕುತ್ತಾ, ಮೂಗನ್ನು […]

ಕೊರೋನಾ’ ಹರಡಲು ಸಹಾಯ ಮಾಡುವ ‘ತಬಲಿಗಿ ಜಮಾತ’ ನಂತಹ ಸಂಘಟನೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಿರಿ !

Thursday, April 2nd, 2020
Ramesha Sinde

ಪಣಜಿ  : ಕೊರೋನಾ ರೋಗಾಣುವಿನಿಂದಾಗಿ ಜಾಗತಿಕ ಮಟ್ಟದಲ್ಲಿ 47 ಸಾವಿರಕ್ಕಿಂತಲೂ ಹೆಚ್ಚು ಜನರ ಮೃತಪಟ್ಟಿದ್ದು 9 ಲಕ್ಷದ 40 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ತಗಲಿದೆ. ಭಾರತದಲ್ಲಿ ಈ ಮಹಾಮಾರಿ ಹರಡದಿರಲೆಂದು ಸರಕಾರ ‘ಜನತಾ ಕರ್ಫ್ಯೂ’, ಗುಂಪುನಿಷೇಧ, ‘ಲಾಕ್‌ಡೌನ್’, ಸಂಚಾರನಿಷೇಧ ಇತ್ಯಾದಿ ವಿವಿಧ ಉಪಾಯೋಜನೆಗಳನ್ನು ಮಾಡುತ್ತಾ ದೇಶಾದ್ಯಂತ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಿದೆ. ಹೀಗಿರುವಾಗ ಈಗಲೂ ದೇಶದಾದ್ಯಂತ ಅನೇಕ ಮಸೀದಿ, ಸಭಾಗೃಹ, ಕಟ್ಟಡದ ಮೇಲ್ಛಾವಣಿ ಇಂತಹ ಸ್ಥಳಗಳಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ದೊಡ್ಡ ಮಟ್ಟದಲ್ಲಿ ಒಟ್ಟಿಗೆ ಸೇರಿ ನಮಾಜು ಪಠಿಸುತ್ತಿರುವ […]

ಕೊರೋನಾ ಹಾವಳಿ – ಜನನಿಬಿಡ ಪ್ರದೇಶಗಳಲ್ಲಿ ಇದೀಗ ಜಾನುವಾರು, ನವಿಲುಗಳು

Thursday, April 2nd, 2020
mumbai

(ವರದಿ : ಈಶ್ವರ ಎಂ. ಐಲ್ ) ಮುಂಬಯಿ : ಕೊರೋನಾದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಮುಂಬಯಿ ಪರಿಸರದಲ್ಲಿ ಹೊರಗೆ ಹೋಗುತ್ತಿರುವ ಡಾಕ್ಟರ್ ಗಳು, ನರ್ಶ್ ಗಳು, ಪೋಲೀಸರು ಮಾತ್ರವಲ್ಲದ ಅಗತ್ಯ ಸಾಮಾನುಗಳನ್ನು ಪೂರೈಸುವ ಜನರು ಹಾಗೂ ಕೆಲವು ಸರಕಾರಿ ನೌಕರರುಗಳು ಮಾತ್ರ ಕಾಣಬಹುದು. ಆದರೆ ಮನೆಯಲ್ಲಿನ ದೈನಂದಿನ ಉಪಯೋಗಿಸುವ ಸಾಮಾಗ್ರಿಗಳು ಈಗಾಗಲೇ ಮುಗಿದಿದ್ದು ಕೆಲವರು ಮಾರು ಕಟ್ಟೆಗೆ ಹೋಗಲೇ ಬೆಕಾಗಿದ್ದು ಮುಂಬಯಿಯ ಕೆಲವು ತರಕಾರಿ ಮಾರುಕಟ್ಟೆಗಳು ಕೆಲವೊಮ್ಮೆ ತೆರೆದಿಟ್ಟಲ್ಲಿ ಜನರು ಅಂತರವನ್ನು ಲೆಕ್ಕಿಸದೆ ಒಂದೆಡೆ ಸೇರಿ […]

ಪ್ರಾಣಿ ಪಕ್ಷಿಗಳಿಗೆ ಜೀವತುಂಬುವ ಐಐಟಿಸಿ ನಿರ್ದೇಶಕಿ ರೀನಾ ವಿ. ಉರ್ವಾಳ್

Thursday, April 2nd, 2020
Reena-Vikrant-Urwal

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ಕೊರೋನಾ ಮುಕ್ತ ರಾಷ್ಟ್ರದ ಉದ್ದೇಶವನ್ನಿರಿಸಿ ಕೊರೋನಾ ಸೋಂಕಿತರಿಂದ ರಕ್ಷಿಸಲು ಸಾಮಾಜಿಕ ಅಂತರ ಕಾಪಾಡಲು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆ ನಿಮಿತ್ತ ಸರಕಾರಗಳು ಲಾಕ್‌ಡೌನ್ ಜಾರಿ ತಂದ ಹಿನ್ನಲೆಯಲ್ಲಿ ಯಾವೊತ್ತೂ ನಿದ್ರಿಸದ ಮಹಾನಗದ ಎಂದೇ ಹೆಸರಾಂತ ಬೃಹನ್ಮುಂಬಯಿ ಈ ಹಿಂದೆ ಎಂದೆಂದೂ ದಿನಪೂರ್ತಿ ಬಂದ್ ಕಾಣದಿದ್ದು, ಈಗ ಸದ್ದಿಲ್ಲದೆ ಸ್ಮಶನಾ ಮೌನವಾಗಿದೆ. ಜನದಟ್ಟಣೆ, ವಿಮಾನ, ರೈಲು, ವಾಹನಗಳ ಸದ್ದಿನ ಮಧ್ಯೆಯೂ ಹಗಳಿರುಲು ಬೀದಿಗಳನ್ನು ಸುತ್ತಾಡಿ ತನ್ನ […]