ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್ ನಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

Wednesday, June 29th, 2022
Namo Moyar

ಮುಂಬಯಿ : ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಸಂದರ್ಭದಲ್ಲಿ, ಜೂನ್ 12 ಮತ್ತು 17 ರಂದು ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್ ನ ಸದಸ್ಯರು 140 ಕ್ಕೂ ಅಧಿಕ ನಿರ್ಗತಿಕ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ಮೀರಾ ರೋಡ್ ಮತ್ತು ನಾಲಾಸೋಪರ ಪ್ರದೇಶದಲ್ಲಿ ವಿತರಿಸಿದರು. ಶಾಲೆ ಪ್ರಾರಂಭವಾಗುವುದರಿಂದ ಈ ಮಕ್ಕಳಿಗೆ ಮೂಲಭೂತ ಶಾಲಾ ಕಿಟ್‌ಗಳ ಅಗತ್ಯವಿತ್ತು. ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ವಿತರಿಸುವ ಉತ್ತಮ ಕಾರ್ಯವನ್ನು ನಡೆಸಿದ್ದೇವೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ನಮೋ […]

ಬಂಟರ ಸಂಘ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಅಂತರಾಷ್ಚ್ರೀಯ ಯೋಗ ದಿನಾಚರಣೆ

Wednesday, June 22nd, 2022
Mumbai Yoga

ಮುಂಬಯಿ : ಯೋಗ ಋಷಿ ಮುನಿಗಳ ಕಾಲದಿಂದಲೇ ನಡೆದುಕೊಂಡು ಬಂದಿದೆ. ಅದೇಷ್ಟೋ ರೋಗಗಳ ನಿವಾರಣೆಗೆ ಯೋಗ ಪೂರಕವಾಗಿದೆ. ಇಂದಿನ ಜೀವನ ಶೈಲಿಯಲ್ಲಿ ಶಾರೀರಿಕವಾಗಿ ಉತ್ತಮ ಜೀವನವನ್ನು ಸಾಗಿಸಲು ಯೋಗ ಅತೀ ಅಗತ್ಯ ಎಂದು ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆಯವರು ನುಡಿದರು. ಜೂ. 21ರಂದು ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಕಾಂದಿವಲಿ ಪಶ್ಚಿಮದ ಪವನ್ ಧಾಮ್ ಸಮೀಪದ ಮಹಿಳಾ ಆಧಾರ್ ಭವನದಲ್ಲಿ ನಡೆದ 8ನೇ […]

ಆನ್‌ಲೈನ್ ಗೇಮ್ ಪಬ್ಜಿ ಆಡಲು ಬಿಡಲಿಲ್ಲ ಎಂದು ಅಮ್ಮನನ್ನು ಗುಂಡಿಟ್ಟು ಕೊಂದ 16 ವರ್ಷದ ಬಾಲಕ

Thursday, June 9th, 2022
pubg

ಲಕ್ನೋ: ಆನ್‌ಲೈನ್ ಗೇಮ್ ಪಬ್ಜಿ ಆಡುವುದನ್ನು ತಡೆದ 16 ವರ್ಷದ ಬಾಲಕ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಮತ್ತು ಆಕೆಯ ದೇಹವನ್ನು ಎರಡು ದಿನಗಳ ಕಾಲ ಮನೆಯಲ್ಲಿ ಮರೆಮಾಡಿ ಇರಿಸಿದ್ದ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯನ್ನು ಯಾರಿಗೂ ಬಹಿರಂಗಪಡಿಸದಂತೆ ತನ್ನ ಒಂಬತ್ತು ವರ್ಷದ ಸಹೋದರಿಗೆ ಬೆದರಿಕೆ ಹಾಕಿದ್ದಾನೆ ಮತ್ತು ಕೊಳೆತ ದೇಹದ ವಾಸನೆಯನ್ನು ಮರೆಮಾಡಲು ರೂಮ್ ಫ್ರೆಶ್ನರ್ ಅನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ದುರ್ವಾಸನೆ ಅಸಹನೀಯವಾದಾಗ.ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿ ತನ್ನ ತಂದೆಗೆ […]

ಜಿಲ್ಲೆಗಳ ಪ್ರಗತಿಯಲ್ಲಿ ಜಾರ್ಜ್ ಫೆರ್ನಾಂಡೀಸರ ಕೊಡುಗೆ ಅಪಾರ – ಎಲ್ ವಿ ಅಮೀನ್

Tuesday, June 7th, 2022
Jayakrishna

ಮುಂಬಯಿ : ಮಹಾನಗರದಲ್ಲಿನ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಜಿಲ್ಲೆಗಳ ಪ್ರಗತಿಗಾಗಿ ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಇದರ ಮಾರ್ಗದರ್ಶಕರಾಗಿದ್ದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಕರೆಯಲ್ಪಡುವ , ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್ ಅವರ 93ನೇ ಜನ್ಮ ದಿನದ ಸಂಸ್ಮರಣೆಯನ್ನು ಜೂ. 3ರಂದು ಬಿಲ್ಲವ […]

ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಪೆಟ್ರೋಲ್, ಡೀಸೆಲ್ ದರ ಇಳಿಕೆ, ಗ್ಯಾಸ್ ಸಿಲಿಂಡರ್‌ಗೆ ಸಬ್ಸಿಡಿ

Saturday, May 21st, 2022
nirmala-seetharaman

ನವದೆಹಲಿ: ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದ್ದು, ಪರಿಣಾಮ ಪೆಟ್ರೋಲ್ ಬೆಲೆ .9.5ರೂ, ಡೀಸೆಲ್ ದರ 7 ರೂ ಇಳಿಕೆಯಾಗಿದೆ. ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿಚಿ ನೀಡಿದ್ದು, ಇಂಧನ ಬೆಲೆಗಳ ಮೇಲಿನ ಕೇಂದ್ರ ಅಬಕಾರಿ ಸುಂಕದಲ್ಲಿ ತೀವ್ರ ಕಡಿತವನ್ನು ಘೋಷಿಸಲಾಗಿದೆ. ಪೆಟ್ರೋಲ್ ಬೆಲೆ 9.5 ರಷ್ಟು ಮತ್ತು ಡೀಸೆಲ್ 7 ರಷ್ಟು ಅಗ್ಗವಾಗಲಿದೆ. ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ಮತ್ತು ಡೀಸೆಲ್‌ಗೆ […]

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ನಿಧನ

Friday, May 13th, 2022
ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್  ನಿಧನ

ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶೇಖ್ ಖಲೀಫಾ ಬಿನ್ ಜಾಯೆದ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಸಾವಿಗೆ ಸಂತಾಪ ಸೂಚಿಸಿ, ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಶುಕ್ರವಾರದಿಂದ ಧ್ವಜಗಳನ್ನು […]

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ – ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ

Thursday, May 12th, 2022
Jayasri Krishna

ಮುಂಬಯಿ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಾಲೀನ್ಯ ರಹಿತ ಸರ್ವತೋಮುಖ ಅಭಿವೃದ್ಧಿಗೆ ಕಳೆದ 22 ವರ್ಷಗಳಿಂದ ಹೋರಾಟ ನಡೆಸುತ್ತಾ ಯಶಸ್ವಿಯೊಂದಿಗೆ ಸಾಧನೆಯನ್ನು ಮಾಡುತ್ತಾ ಜಿಲ್ಲೆಗಳನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿರುವ ಮುಂಬಯಿಯ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ವತಿಯಿಂದ ಮಾ. 7 ರಂದು ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ ಕಾರ್ಯಕ್ರಮವು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಮುಂಬಯಿಯ ಹಾಗೂ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ಸಂಸ್ಥಾಪಕರಾದ […]

ಮೋಯ ಸಮುದಾಯದ ಜಾಗತಿಕ ಮಟ್ಟದ ಸಂಘಟನೆ, ‘ನಮೋ ಮೋಯರ್ ಗ್ಲೋಬಲ್ ಫೌಂಡೇಶನ್’ ಲೊಕಾರ್ಪಣೆ

Thursday, May 5th, 2022
ಮೋಯ ಸಮುದಾಯದ ಜಾಗತಿಕ ಮಟ್ಟದ ಸಂಘಟನೆ, 'ನಮೋ ಮೋಯರ್ ಗ್ಲೋಬಲ್ ಫೌಂಡೇಶನ್' ಲೊಕಾರ್ಪಣೆ

ಮುಂಬಯಿ : ಜನಸಾಮಾನ್ಯರ ಸೇವೆಗಾಗಿ ಹೊಸ ಉದ್ದೇಶವನ್ನು ಇಟ್ಟುಕೊಂಡು ಸಮುದಾಯದ ಜನರ ಪ್ರೋತ್ಸಾಹ ಮತ್ತು ಅಮ್ಮ ಭಗವತಿಯವರ ಆಶೀರ್ವಾದಿಂದ, ನಾವು ಜಾಗತಿಕ ಮಟ್ಟದ ನೂತನ ಸಂಘಟನೆ (ಟ್ರಸ್ಟ್ ) ಯನ್ನು ಸ್ಥಾಪಿಸಿದ್ದು , ಇವತ್ತು ಇದನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ನುಡಿದರು. ಮೇ 1 ರಂದು, ರಾಜೇ ಸಂಭಾಜಿ ಸಭಾಗ್ರಹ ಮುಲುಂಡ್ (ಪೂರ್ವ) ದಲ್ಲಿ ನಡೆದ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು […]

ತೀಯಾ ಸಮಾಜ ಪಶ್ಚಿಮ ವಲಯ ದ ವತಿಯಿಂದ 20ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಅರಸಿನ ಕುಂಕುಮ

Monday, March 21st, 2022
Tiya Samaja

ಮುಂಬಯಿ : ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ವಲಯ ವತಿಯಿಂದ 20ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಮಾ 20ರಂದು ಜೋಗೇಶ್ವರಿ ಪೂರ್ವ ಸಾಯಿ ಸಿದ್ದಿ ವೆಲ್ಪೇರ್ ಅಸೋಷಿಯೇಷನ್ ಸಭಾಗೃಹ, ಇಲ್ಲಿ ವೈಕುಂಠ ಭಟ್ ಇವರ ಪೌರೋಹಿತ್ಯದಲ್ಲಿ ತೀಯಾ ಸಮಾಜ ಮುಂಬಯಿ ಪಶ್ಚಿಮ ವಲಯದ ಕಾರ್ಯಾಧ್ಯಕ್ಷರಾದ ಸುಧಾಕರ್ ಉಚ್ಚಿಲ್ ಇವರ ನೇತೃತ್ವದಲ್ಲಿ ನಡೆಯಿತು. ಪೂಜಾ ವಿಧಿಯಲ್ಲಿ ಶುಶಾಂತ್ ಸಾಲ್ಯಾನ್ ಮತ್ತು ಅಂಕಿತಾ ಸಾಲ್ಯಾನ್ ದಂಪತಿ ಬಾಗವಹಿಸಿದ್ದರು. ಪ್ರತೀ ವರ್ಷದಂತೆ ಈ ಸಲವೂ ನವ ವಿವಾಹಿತರನ್ನು ತೀಯಾ […]

ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ -ವಿರಾರ್ ವಾರ್ಷಿಕೋತ್ಸವ ಹಾಗೂ ಶಶಿಧರ ಕೆ. ಶೆಟ್ಟಿ ದಂಪತಿಯ ವೈವಾಹಿಕ ಬೆಳ್ಳಿ ಹಬ್ಬ ಸಂಬ್ರಮ

Tuesday, February 22nd, 2022
Sri Devi Yaksha Kala Nilaya

ಮುಂಬಯಿ : ನನ್ನ ಸಮಾಜ ಸೇವೆಯ ಯಶಸ್ಸಿಗೆ ಅನೇಕರು ಕಾರಣರು. ಅವರೆಲ್ಲರೆ ಪ್ರೇರಣೆಯಿಂದ ಹಾಗೂ ಮಾರ್ಗದರ್ಶನದಿಂದ ನಾನು ಸಮಾಜ ಸೇವಾ ನಿರತನಾಗಿದ್ದೇನೆ. ನನ್ನ ಗುರುಗಳ ಬಗ್ಗೆ ಯಾರಾದರೂ ಕೇಳಿದಲ್ಲಿ ಐಕಳ ಹರೀಶ್ ಶೆಟ್ಟಿಯವರ ಹೆಸರು ಹೇಳುತ್ತಿದ್ದೆ ಯಾಕೆಂದರೆ ಕೇವಲ ಮೂರು ವರ್ಷಗಳಲ್ಲಿ ಅದೆಷ್ಟೋ ಕೋಟಿ ರೂಪಾಯಿ ವೆಚ್ಚದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಐಕಳ ಹರೀಶ್ ಶೆಟ್ಟಿಯಂತವರನ್ನು ಗುರು ಎನ್ನಲು ನನಗೆ ಹೆಮ್ಮೆಯಾಗುತ್ತದೆ ಎಂದು ಶ್ರೀ ದೇವಿ ಯಕ್ಷಕಲಾ ನಿಲಯ ನಲಾಸೋಪಾರ – ವಿರಾರ್ ಇದರ ಅಧ್ಯಕ್ಷರಾದ […]