ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಸ್ನೇಹ ಮಿಲನ

Wednesday, February 19th, 2020
vijaya-collage

ಮುಂಬಯಿ : ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿಗಳು ಮುಂಬಯಿ ಮಾತ್ರವಲ್ಲ ಪರಿಸರದ ಪೂನಾದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು ಅವರೆಲ್ಲರನ್ನೂ ಯವುದಾದರೂ ರೀತಿಯಲ್ಲಿ ಸಂಪರ್ಕಿಸಬೇಕಾಗಿದೆ. ಇಲ್ಲಿ 1970 ರಿಂದ 2015 ರ ತನಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ನಮ್ಮ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಇನ್ನೂ ಅಧಿಕ ಸಂಖ್ಯೆಯಲ್ಲಿ ಸಂಘಟಿಸೋಣ ಎಂದು ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಅಧ್ಯಕ್ಷ ರಾದ ಆನಂದ ಶೆಟ್ಟಿ ನುಡಿದರು. ವಿಜಯ ಕಾಲೇಜು ಮೂಲ್ಕಿ ಹಳೆ […]

ವಾರಣಾಸಿಗೆ ಭೇಟಿ ನೀಡಿ ಕೈ ಗಾಡಿ ಎಳೆಯೋ ವ್ಯಕ್ತಿಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

Tuesday, February 18th, 2020
varanasi

ಉತ್ತರಪ್ರದೇಶ : ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾಡಿ ತಳ್ಳುವ ವ್ಯಕ್ತಿ ಮಂಗಲ್ ಕೇವಾಟ್ ಅವರನ್ನು ಭೇಟಿಯಾಗಿದ್ದಾರೆ. ಕೇವಾಟ್ ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟಿದ್ದ ಹಿನ್ನೆಲೆಯಲ್ಲಿ ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ. ಮಂಗಲ್ ಕೇವಾಟ್ ಅವರ ಆರೋಗ್ಯ ಹಾಗೂ ಕುಟುಂಬದ ಬಗ್ಗೆ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇವಾಟ್ ನೀಡಿದ ಕೊಡುಗೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ವರದಿ […]

ಮಹಾತ್ಮಾ ಗಾಂಧೀಜಿಯವರು ಕಟ್ಟಾ ಹಿಂದೂವಾದಿಯಾಗಿದ್ದರು : ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

Tuesday, February 18th, 2020
RSS

ನವದೆಹಲಿ : ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕಟ್ಟಾ ಹಿಂದೂವಾದಿಯಾಗಿದ್ದರು ಎಂದು ಆರ್ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಎನ್ಸಿಇಆರ್ಟಿಯ ಮಾಜಿ ನಿರ್ದೇಶಕ ಜೆ.ಎಸ್.ರಜಪೂತ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಗಾಂಧೀಜಿ ಭಾರತವನ್ನು ಅರಿತುಕೊಳ್ಳುವ ಸಲುವಾಗಿ ಪೂರ್ತಿ ದೇಶವನ್ನು ಸುತ್ತಿದರು. ಅವರು ಹಿಂದೂ ಎಂದು ಹೇಳಿಕೊಳ್ಳಲು ಎಂದೂ ಅಂಜುತ್ತಿರಲಿಲ್ಲ. ನಾನು ಕಟ್ಟಾ ಸನಾತನೀ ಹಿಂದೂ ಎಂದು ಅವರು ಹೇಳಿಕೊಂಡಿದ್ದರು. ಹಾಗೆಯೇ ಬೇರೆ ಧರ್ಮಗಳನ್ನೂ ಗೌರವಿಸುತ್ತಿದ್ದರು.” ಎಂದು ಹೇಳಿದರು. ಗಾಂಧೀಜಿಯನ್ನು ಇಂದಿನವರಿಗೆ ಹೋಲಿಕೆ […]

ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತೆ ಪೊಲೀಸ್ ವಶಕ್ಕೆ

Monday, February 17th, 2020
kashmiri

ಹುಬ್ಬಳ್ಳಿ : ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರಸ್ತೆ ಪೊಲೀಸರು ಸೋಮವಾರ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಾನುವಾರ ತಡರಾತ್ರಿ ಮತ್ತೆ ಬಂಧಿಸಿದ್ದು, ಸೋಮವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇಲ್ಲಿನ 3ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶೆ ಪುಷ್ಪಾ ಅವರು ಮೂವರು ವಿದ್ಯಾರ್ಥಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ವರದಿ ತಿಳಿಸಿದೆ. ಹುಬ್ಬಳ್ಳಿ ತಾಲೂಕು ಕೊಟಗುಣಸಿಯಲ್ಲಿರುವ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲೂ […]

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಎನ್ ಕೌಂಟರ್ : ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ ಪೊಲೀಸರು

Monday, February 17th, 2020
dehali

ಹೊಸದಿಲ್ಲಿ : ಇಂದು ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದಾರೆ. ಇಂದು ಬೆಳಿಗ್ಗೆ ಸುಮಾರು 5 ಗಂಟೆ ಸಮಯಕ್ಕೆ ದಿಲ್ಲಿಯ ಪ್ರಹ್ಲಾದ್ ಪುರ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದ್ದು, ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಹತ್ಯೆಯಾದವರು. ಈ ಇಬ್ಬರು ಆರೋಪಿಗಳು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು ಎನ್ನಲಾಗಿದೆ. ಇತ್ತೀಚೆಗೆ ದಿಲ್ಲಿಯ ಕರವಾಲ್ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಈ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ. ವರದಿಯ ಪ್ರಕಾರ, ಪೊಲೀಸರು […]

ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಲು ತೆಲಂಗಾಣ ಸರ್ಕಾರ ನಿರ್ಧಾರ

Monday, February 17th, 2020
CAA

ನವದೆಹಲಿ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ತೆಲಂಗಾಣ ಸರ್ಕಾರವು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ನಿರ್ಧರಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಸಿಎಂ ಚಂದ್ರಶೇಖರ್ ರಾವ್ ಕಳೆದ ತಿಂಗಳು ಹೇಳಿದ್ದರು. ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ […]

ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರ ಅಸ್ವಾಭಾವಿಕ, ಅವಾಸ್ತವಿಕದ್ದು : ಜೆ.ಪಿ. ನಡ್ಡಾ

Monday, February 17th, 2020
JP-Nadda

ಮುಂಬಯಿ : ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿನ ಸರಕಾರ ಅಸ್ವಾಭಾವಿಕ, ಅವಾಸ್ತವಿಕ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂಬಯಿನಲ್ಲಿ ಪಕ್ಷದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಎನ್‌ಸಿಪಿ- ಶಿವಸೇನೆ ಮೈತ್ರಿ ಕೂಟ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಎಂದು ದೂರಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಥಾನಗಳು ಬಂದಿದ್ದರೂ ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಮುಂಬರುವ ಚುನಾವಣೆಗಾಗಿ ಪಕ್ಷ ಸ್ವಯಂ ಶಕ್ತಿಯಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧಗೊಳ್ಳಬೇಕು. ‘ಬಿಜೆಪಿ ವರ್ಸಸ್‌ ಎಲ್ಲರೂ’ ಎಂಬಂಥ ಸ್ಪರ್ಧೆಗೆ ಅಣಿಯಾಗಬೇಕು. […]

ಗೂಬೆ ಹಿಡಿದು ಟಿಕ್ ಟಾಕ್ ಮಾಡಿದ ಯುವತಿಗೆ 25 ಸಾವಿರ ರೂ. ದಂಡ

Saturday, February 15th, 2020
tik-tok

ಗಾಂಧಿನಗರ : ಗೂಬೆ ಹಿಡಿದು ಟಿಕ್ ಟಾಕ್ ಮಾಡಿದ ಯುವತಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ. ಸೂರತ್ ನಿವಾಸಿ ಕೀರ್ತಿ ಪಟೇಲ್ ದಂಡ ಪಾವತಿಸಿದ ಯುವತಿ. ಕೀರ್ತಿ ಪಟೇಲ್ ಇತ್ತೀಚೆಗೆ ಗೂಬೆ ಹಿಡಿದು ವಿಡಿಯೋ ಮಾಡಿ ತನ್ನ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.ಕೀರ್ತಿ ಪಟೇಲ್, ತನ್ನ ವಿಡಿಯೋದಲ್ಲಿ ಗೂಬೆಗಳನ್ನು ಮನುಷ್ಯನಿಗೆ ಹೋಲಿಕೆ ಮಾಡಿದ್ದಳು. ರಾತ್ರಿ ವೇಳೆ ಮಾತ್ರ ಗೂಬೆಗಳಿಗೆ […]

ದಯವಿಟ್ಟು ನಿಮ್ಮ ಹಣ ತೆಗೆದುಕೊಂಡುಬಿಡಿ : ವಿಜಯ್ ಮಲ್ಯ

Saturday, February 15th, 2020
vijay

ಲಂಡನ್ : ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ ಸಾಲದ ಬಾಕಿ ಉಳಿಸಿಕೊಂಡು ಬ್ರಿಟನ್ ದೇಶಕ್ಕೆ ಹೋಗಿ ನೆಲಸಿರುವ ವಿಜಯ್ ಮಲ್ಯ ಈಗ ಬ್ಯಾಂಕುಗಳಿಗೆ ಹಣ ವಾಪಸ್ ಕೊಡುವುದಾಗಿ ಮತ್ತೊಮ್ಮೆ ಹೇಳಿದ್ಧಾರೆ. ವಿಜಯ್ ಮಲ್ಯ ಈ ಹಿಂದೆಯೂ ತಾನು ಬ್ಯಾಂಕುಗಳ ಬಾಕಿ ಹಣ ಹಿಂದಿರುಗಿಸುತ್ತೇನೆ ಎಂದು ಕೆಲ ಬಾರಿ ಹೇಳಿದ್ದುಂಟು. ನಿನ್ನೆ ಅವರು ಬ್ರಿಟನ್ ಉಚ್ಚ ನ್ಯಾಯಾಲಯದ ಬಳಿ ಈ ವಿಚಾರವನ್ನು ಅರಿಕೆ ಮಾಡಿಕೊಂಡಿದ್ದಾರೆ. ಭಾರತಕ್ಕೆ ಹಸ್ತಾಂತರಿಸಬೇಡಿ ಎಂದು ಅವರು ಬ್ರಿಟಿಷ್ ಹೈಕರ್ಟ್ಗೆ ಮನವಿ ಮಾಡಿಕೊಂಡಿದ್ದರು. ಅವರ […]

ಪುಲ್ವಾಮ ಕರಾಳ ದಿನ : ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಗೌರವ ಸಮರ್ಪಣೆ

Friday, February 14th, 2020
pulwama

ಶ್ರೀನಗರ : ಪುಲ್ವಾಮದಲ್ಲಿ 2019 ಫೆ .14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ ಗೌರವ ಸಲ್ಲಿಸಲಿದೆ. ಪುಲ್ವಾಮದ ಲೆಟ್ ಪೋರಾ ಎಂಬಲ್ಲಿರುವ ಸಿಆರ್ ಪಿ ಎಫ್ ತರಭೇತಿ ಕೇಂದ್ರದಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಿಆರ್ ಪಿ ಎಫ್ ವಿಶೇಷ ಮಹಾ ನಿರ್ದೇಶಕಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸ್ತಂಭದ ಮೇಲೆ […]