ಜನವರಿಯಲ್ಲಿ ರಸ್ತೆಗೆ ಇಳಿಯಲಿರುವ ಪೆಟ್ರೋಲ್ ರಹಿತ ಬಜಾಜ್ ಸ್ಕೂಟರ್ ಗಳು

Tuesday, January 14th, 2020
scooter

ಮುಂಬೈ : ಸ್ಕೂಟರ್ ಎಂದರೆ ‘ಚೇತಕ್‌’ ಎನ್ನುವಷ್ಟು ಭಾರತೀಯರಲ್ಲಿ ಮನೆ ಮಾತಾಗಿದ್ದ ಬಜಾಜ್‌ ಆಟೊದ ಸ್ಕೂಟರ್‌ ಈಗ ಎಲೆಕ್ಟ್ರಿಕ್‌ ರೂಪದಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ದಿನದಿಂದ ಬುಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ. ವೇಗದ ಬೈಕ್‌ಗಳ ಜಮಾನದಲ್ಲಿ ಮರೆಗೆ ಸರಿದಿದ್ದ ‘ಚೇತಕ್‌’ ಬ್ರ್ಯಾಂಡ್‌ ಈಗ ವಿದ್ಯುತ್‌ ಚಾಲಿತ ಸ್ಕೂಟರ್ ಆಗಿ ಮಾರುಕಟ್ಟೆ ಪ್ರವೇಶಿಸಿದೆ. ಜನವರಿ 15ರಿಂದ ಸ್ಕೂಟರ್‌ ಬುಕ್ಕಿಂಗ್‌ ಮಾಡಬಹುದಾಗಿದ್ದು, ಆರಂಭಿಕ ಬೆಲೆ1 ಲಕ್ಷ ನಿಗದಿಯಾಗಿದೆ. ಫೆಬ್ರುವರಿ ಅಂತ್ಯಕ್ಕೆ ಗ್ರಾಹಕರಿಗೆ ಹೊಸ ಚೇತಕ್‌ ಸಿಗಲಿದೆ. ಆರಂಭಿಕವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಎಲೆಕ್ಟ್ರಿಕ್‌ […]

ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ : ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲು ಕೇರಳ ಸಿಎಂ ಒತ್ತಾಯ

Tuesday, January 14th, 2020
pinarayi

ನವದೆಹಲಿ : ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ. ಕೇರಳ ವಿಧಾನಸಭೆ ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ […]

ಇಂದು ಸುಪ್ರೀಂ ಕೋರ್ಟ್ ನಲ್ಲಿ ಶಬರಿಮಲೆ ಮರುಪರಿಶೀಲನಾ ಅರ್ಜಿ ವಿಚಾರಣೆ

Monday, January 13th, 2020
shabarimale

ನವದೆಹಲಿ : ಕೇರಳದ ಪುರಾಣ ಪ್ರಸಿದ್ದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಇಂದು ಸುಪ್ರೀಂ ಕೋರ್ಟ್ ನ ಒಂಬತ್ತು ಸದಸ್ಯರ ಪೀಠದ ಮುಂದೆ ಬರಲಿದೆ. ಮಹಿಳೆಯರ ಪ್ರವೇಶಕ್ಕೆ ಅಸ್ತು ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ಸುಮಾರು 60 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷದ ನವೆಂಬರ್ 14ರಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ, ಇದನ್ನು ಒಂಬತ್ತು ಸದಸ್ಯರ ಪೀಠಕ್ಕೆ […]

ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ಚಿತ್ರ ಪ್ರದರ್ಶನಕ್ಕೆ ಜ.15 ರಿಂದ ತಡೆ : ದೆಹಲಿ ಹೈಕೋರ್ಟ್ ಆದೇಶ

Saturday, January 11th, 2020
chapak

ನವದೆಹಲಿ : ನಿನ್ನೆಯಷ್ಟೇ ಬಿಡುಗಡೆಯಾದ ನಟಿ ದೀಪಿಕಾ ಪಡುಕೋಣೆ ಅಭಿನಯದ `ಚಪಾಕ್’ ಚಿತ್ರ ಪ್ರದರ್ಶನಕ್ಕೆ ಜ.15 ರಿಂದ ತಡೆ ನೀಡುವಂತೆ ದೆಹಲಿ ಹೈಕೋರ್ಟ್ ಇಂದು ಆದೇಶಿಸಿದೆ. ಜ.15 ರಿಂದ ಎಲ್ಲ ಮಲ್ಟಿಫ್ಲೆಕ್ಸ್ ಹಾಗೂ ಲೈವ್ ಸ್ಟ್ರೀಮಿಂಗ್ ಆಯಪ್ಗಳಲ್ಲಿ ಹಾಗೂ ಜ.17 ರಿಂದ ಇತರೆ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರ್ಟ್ ಆದೇಶಿಸಿದೆ. ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನ ಭಾಗವಾಗಿ ಚಿತ್ರ ಮೂಡಿಬಂದಿದ್ದು, ಲಕ್ಷ್ಮೀ ಅಗರ್ವಾಲ್ ಪಾತ್ರಕ್ಕೆ ದೀಪಿಕಾ ಬಣ್ಣ ಹಚ್ಚಿದ್ದಾರೆ. ಆದರೆ, ಆಸಿಡ್ […]

ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢ ಹತ್ಯೆ : ಉಗ್ರರ ಕೈವಾಡ ಸ್ಪಷ್ಟ

Saturday, January 11th, 2020
kerala

ತಿರುವನಂತಪುರಂ : ಕೇರಳ ಪೊಲೀಸ್ ಅಧಿಕಾರಿ ಹತ್ಯೆ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢವಾಗಿ ಹತ್ಯೆಯಾದ ಎರಡು ದಿನಗಳ ಬಳಿಕ ತನಿಖಾ ತಂಡಕ್ಕೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ವಾರ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅವರ ಬಂಧನದ ಪ್ರತೀಕಾರಕ್ಕೆ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ.ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಅಬ್ದುಲ್ ಶಮೀಮ್ ಎಂಬಾತ ಸ್ವಯಂ ಘೋಷಿತ ಜಿಹಾದಿ ಎಂದು ಹೇಳಿಕೊಂಡಿದ್ದಾನೆ ಎಂಬುದು […]

ಮಕ್ಕಳಿಗೆ ಊಟ ಕೊಡಿಸಲು 150 ರೂ. ಗೆ ತಲೆ ಬೋಳಿಸಿದ ತಾಯಿ

Saturday, January 11th, 2020
chennai

ಚೆನ್ನೈ : ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ತಾಯಿಯೊಬ್ಬರು ತನ್ನ ತಲೆ ಕೂದಲನ್ನು ಬೊಳಿಸಿ ಅದನ್ನು 150 ರೂ.ಗೆ ಮಾರಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಸೇಲಂನ ಪ್ರೇಮಾ (31) ಎಂಬವರು ತನ್ನ ಮಕ್ಕಳಿಗಾಗಿ ತಲೆ ಕೂದಲನ್ನು ಮಾರಿದ್ದಾರೆ. ಪ್ರೇಮಾ ಅವರ ಪತ್ನಿ ಸೇಲಂ ತುಂಬಾ ಸಾಲ ಮಾಡಿ ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಾ ದಂಪತಿಗೆ ಮೂರು ಮಕ್ಕಳಿದ್ದು, ಆ ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ಪ್ರೇಮಾ ತನ್ನ ತಲೆ ಕೂದಲನ್ನು ಮಾರಿದ್ದಾರೆ. ಪತಿಯ […]

ಭೌತಿಕ ಮಾಲೀನ್ಯದಿಂದಾಗಿ ಭಾರತೀಯ ನದಿಗಳಿಂದ ಸಿಗುವ ಆಧ್ಯಾತ್ಮಿಕ ಲಾಭವು ಕಡಿಮೆಯಾಗುತ್ತಿದೆ

Friday, January 10th, 2020
kolkatta

ಕೋಲ್ಕತ್ತಾ : ವಿದೇಶಿ ನದಿಗಳ ತುಲನೆಯಲ್ಲಿ ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ ಇರುತ್ತದೆ, ಇದು ಋಷಿಗಳ ಮತ್ತು ಭಕ್ತರ ಸಾಧನೆಯಿಂದಾಗಿ ಇರುವ ಭಾರತದ ಉನ್ನತ ಸಾತ್ತ್ವಿಕತೆಯ ಸಂಕೇತವಾಗಿದೆ. ಭಾರತೀಯ ನದಿಗಳು ಇಷ್ಟು ಮಾಲಿನ್ಯಕ್ಕೊಳಗಾಗದೇ ಇರುತ್ತಿದ್ದರೆ, ಆ ನದಿಗಳ ಆಧ್ಯಾತ್ಮಿಕ ಲಾಭ ತುಂಬಾ ಹೆಚ್ಚಾಗುತ್ತಿತ್ತು. ಏಕೆಂದರೆ ಭೌತಿಕ ಮಾಲಿನ್ಯವು ಇಂತಹ ಸಾತ್ತ್ವಿಕ ನದಿಗಳ ಮೇಲೆ ಒಂದು ಸೂಕ್ಷ್ಮ ನಕಾರಾತ್ಮಕ ಆವರಣವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಈ ನದಿಗಳಿಂದ ಸಮಾಜಕ್ಕಾಗುವ ಲಾಭವು ತುಂಬಾ ಕಡಿಮೆಯಾಗುತ್ತದೆ. ವಿದೇಶದಲ್ಲಿನ ವಿಕಸಿತ ದೇಶಗಳಿಂದ […]

ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ : ಸಿಎಎ ಮೇಲ್ಮನವಿ ಬಗ್ಗೆ ಸುಪ್ರೀಂಕೋರ್ಟ್

Thursday, January 9th, 2020
SC

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸಿಎಎ ಸಂವಿಧಾನಬದ್ಧ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. ದೇಶ ಪ್ರಸ್ತುತ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂತಹ ಮೇಲ್ಮನವಿಗಳಿಂದ ಸಹಾಯವಾಗಲ್ಲ. ಹೀಗಾಗಿ ಹಿಂಸಾಚಾರ ನಿಂತ ನಂತರವೇ ಸಿಎಎ ಕುರಿತ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬದ್ಧ ಎಂದು ಘೋಷಿಸಬೇಕು. ಅಲ್ಲದೇ ಕಾನೂನಿನ ಕುರಿತು ಪ್ರತಿಭಟನೆ […]

ನಿರ್ಭಯಾ ಪ್ರಕರಣ : ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್

Thursday, January 9th, 2020
nirbhaya

ಮೀರತ್ : ನಿರ್ಭಯಾ ಸಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಸಿಗಲಿರುವ ಸಂಭಾವನೆ ಮೊತ್ತ ಬಹಿರಂಗವಾಗಿದೆ. ಪವನ್ ಅವರಿಗೆ 1 ಲಕ್ಷ ರೂ ಸಂಭಾವನೆ ಸಿಗಲಿದೆ ಎಂದು ತಿಳಿದು ಬಂದಿದೆ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ನೇಣಿಗೇರಿಸುವ ಪ್ರಕ್ರಿಯೆ ಹೊಸದೇನಲ್ಲ, ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ […]

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅನಾಹುತ : ಓರ್ವ ವ್ಯಕ್ತಿ ಸಾವು, ಹಲವರು ಗಂಭೀರ

Thursday, January 9th, 2020
dehali

ನವದೆಹಲಿ : ಪೂರ್ವ ದೆಹಲಿಯ ಪತ್ ಪರ್ ಗಂಜ್ ಕೈಗಾರಿಕ ಪ್ರದೇಶದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ. ಸ್ಥಳಕ್ಕೆ 32 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು , ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಪತ್ ಪರ್ ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಗ್ ಪ್ರೆಸ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಾರದ ಹಿಂದೆ ದೆಹಲಿಯ ಪಿರಾಗ್ರಹಿ ಇನ್ ವರ್ಟರ್ ಬ್ಯಾಟರಿ […]