ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢ ಹತ್ಯೆ : ಉಗ್ರರ ಕೈವಾಡ ಸ್ಪಷ್ಟ

Saturday, January 11th, 2020
kerala

ತಿರುವನಂತಪುರಂ : ಕೇರಳ ಪೊಲೀಸ್ ಅಧಿಕಾರಿ ಹತ್ಯೆ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢವಾಗಿ ಹತ್ಯೆಯಾದ ಎರಡು ದಿನಗಳ ಬಳಿಕ ತನಿಖಾ ತಂಡಕ್ಕೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ವಾರ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅವರ ಬಂಧನದ ಪ್ರತೀಕಾರಕ್ಕೆ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ.ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಅಬ್ದುಲ್ ಶಮೀಮ್ ಎಂಬಾತ ಸ್ವಯಂ ಘೋಷಿತ ಜಿಹಾದಿ ಎಂದು ಹೇಳಿಕೊಂಡಿದ್ದಾನೆ ಎಂಬುದು […]

ಮಕ್ಕಳಿಗೆ ಊಟ ಕೊಡಿಸಲು 150 ರೂ. ಗೆ ತಲೆ ಬೋಳಿಸಿದ ತಾಯಿ

Saturday, January 11th, 2020
chennai

ಚೆನ್ನೈ : ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ತಾಯಿಯೊಬ್ಬರು ತನ್ನ ತಲೆ ಕೂದಲನ್ನು ಬೊಳಿಸಿ ಅದನ್ನು 150 ರೂ.ಗೆ ಮಾರಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಸೇಲಂನ ಪ್ರೇಮಾ (31) ಎಂಬವರು ತನ್ನ ಮಕ್ಕಳಿಗಾಗಿ ತಲೆ ಕೂದಲನ್ನು ಮಾರಿದ್ದಾರೆ. ಪ್ರೇಮಾ ಅವರ ಪತ್ನಿ ಸೇಲಂ ತುಂಬಾ ಸಾಲ ಮಾಡಿ ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಾ ದಂಪತಿಗೆ ಮೂರು ಮಕ್ಕಳಿದ್ದು, ಆ ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ಪ್ರೇಮಾ ತನ್ನ ತಲೆ ಕೂದಲನ್ನು ಮಾರಿದ್ದಾರೆ. ಪತಿಯ […]

ಭೌತಿಕ ಮಾಲೀನ್ಯದಿಂದಾಗಿ ಭಾರತೀಯ ನದಿಗಳಿಂದ ಸಿಗುವ ಆಧ್ಯಾತ್ಮಿಕ ಲಾಭವು ಕಡಿಮೆಯಾಗುತ್ತಿದೆ

Friday, January 10th, 2020
kolkatta

ಕೋಲ್ಕತ್ತಾ : ವಿದೇಶಿ ನದಿಗಳ ತುಲನೆಯಲ್ಲಿ ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ ಇರುತ್ತದೆ, ಇದು ಋಷಿಗಳ ಮತ್ತು ಭಕ್ತರ ಸಾಧನೆಯಿಂದಾಗಿ ಇರುವ ಭಾರತದ ಉನ್ನತ ಸಾತ್ತ್ವಿಕತೆಯ ಸಂಕೇತವಾಗಿದೆ. ಭಾರತೀಯ ನದಿಗಳು ಇಷ್ಟು ಮಾಲಿನ್ಯಕ್ಕೊಳಗಾಗದೇ ಇರುತ್ತಿದ್ದರೆ, ಆ ನದಿಗಳ ಆಧ್ಯಾತ್ಮಿಕ ಲಾಭ ತುಂಬಾ ಹೆಚ್ಚಾಗುತ್ತಿತ್ತು. ಏಕೆಂದರೆ ಭೌತಿಕ ಮಾಲಿನ್ಯವು ಇಂತಹ ಸಾತ್ತ್ವಿಕ ನದಿಗಳ ಮೇಲೆ ಒಂದು ಸೂಕ್ಷ್ಮ ನಕಾರಾತ್ಮಕ ಆವರಣವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಈ ನದಿಗಳಿಂದ ಸಮಾಜಕ್ಕಾಗುವ ಲಾಭವು ತುಂಬಾ ಕಡಿಮೆಯಾಗುತ್ತದೆ. ವಿದೇಶದಲ್ಲಿನ ವಿಕಸಿತ ದೇಶಗಳಿಂದ […]

ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ : ಸಿಎಎ ಮೇಲ್ಮನವಿ ಬಗ್ಗೆ ಸುಪ್ರೀಂಕೋರ್ಟ್

Thursday, January 9th, 2020
SC

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸಿಎಎ ಸಂವಿಧಾನಬದ್ಧ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. ದೇಶ ಪ್ರಸ್ತುತ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂತಹ ಮೇಲ್ಮನವಿಗಳಿಂದ ಸಹಾಯವಾಗಲ್ಲ. ಹೀಗಾಗಿ ಹಿಂಸಾಚಾರ ನಿಂತ ನಂತರವೇ ಸಿಎಎ ಕುರಿತ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬದ್ಧ ಎಂದು ಘೋಷಿಸಬೇಕು. ಅಲ್ಲದೇ ಕಾನೂನಿನ ಕುರಿತು ಪ್ರತಿಭಟನೆ […]

ನಿರ್ಭಯಾ ಪ್ರಕರಣ : ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್

Thursday, January 9th, 2020
nirbhaya

ಮೀರತ್ : ನಿರ್ಭಯಾ ಸಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಸಿಗಲಿರುವ ಸಂಭಾವನೆ ಮೊತ್ತ ಬಹಿರಂಗವಾಗಿದೆ. ಪವನ್ ಅವರಿಗೆ 1 ಲಕ್ಷ ರೂ ಸಂಭಾವನೆ ಸಿಗಲಿದೆ ಎಂದು ತಿಳಿದು ಬಂದಿದೆ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ನೇಣಿಗೇರಿಸುವ ಪ್ರಕ್ರಿಯೆ ಹೊಸದೇನಲ್ಲ, ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ […]

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅನಾಹುತ : ಓರ್ವ ವ್ಯಕ್ತಿ ಸಾವು, ಹಲವರು ಗಂಭೀರ

Thursday, January 9th, 2020
dehali

ನವದೆಹಲಿ : ಪೂರ್ವ ದೆಹಲಿಯ ಪತ್ ಪರ್ ಗಂಜ್ ಕೈಗಾರಿಕ ಪ್ರದೇಶದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ. ಸ್ಥಳಕ್ಕೆ 32 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು , ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಪತ್ ಪರ್ ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಗ್ ಪ್ರೆಸ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಾರದ ಹಿಂದೆ ದೆಹಲಿಯ ಪಿರಾಗ್ರಹಿ ಇನ್ ವರ್ಟರ್ ಬ್ಯಾಟರಿ […]

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್​​​​ ಘೋಷ್ ವಿರುದ್ಧ ಎಫ್​​ಐಆರ್​​​

Tuesday, January 7th, 2020
Ish-ghosh

ನವದೆಹಲಿ : ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ನೊಳಗೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆಗೊಳಗಾದ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 19 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಸುಕುಧಾರಿಗಳು ಕ್ಯಾಂಪಸ್ಗೆ ನುಗ್ಗಿ ಹಿಂಸಾಚಾರ ನಡೆಸುವ ಮುನ್ನ ದಿನ ಜನವರಿ 4ನೇ ತಾರಿಕು ಜೆಎನ್ಯು ಸರ್ವರ್‌ ಕೊಠಡಿಯಲ್ಲಿ ಐಶೆ ಘೋಷ್ ಸೇರಿದಂತೆ 19 ಮಂದಿ ದಾಂದಲೆ ನಡೆಸಿದರು. ಈ ಆರೋಪದ ಮೇಲೆ ಐಶೆ ಘೋಷ್ ಮತ್ತಿತರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕ್ಯಾಂಪಸ್ನಲ್ಲಿ ಹಿಂಸಾಚಾರ […]

ಶಬರಿಮಲೆ ವಿವಾದ : ಜ.13 ರಿಂದ ಸುಪ್ರೀಂಕೋರ್ಟ್​​ನಲ್ಲಿ ಸಾಂವಿಧಾನಿಕ ಪೀಠ ವಿಚಾರಣೆ

Tuesday, January 7th, 2020
SC

ನವದೆಹಲಿ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಬೇಕೇ ಬೇಡವೇ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಜನವರಿ 13ನೇ ತಾರೀಕಿನಿಂದ ಅಂತಿಮ ವಿಚಾರಣೆ ಆರಂಭವಾಗಲಿದೆ. ಸುಪ್ರೀಂಕೋರ್ಟ್ನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ವಿಚಾರಣೆ ನಡೆಸಲಿದೆ. ಇದೇ ವೇಳೆ ಮುಸ್ಲಿಂ ಮತ್ತು ಪಾರ್ಸಿ ಸುಮಾಯದ ಮಹಿಳೆಯರ ತಾರತಮ್ಯದ ಬಗ್ಗೆಯೂ ವಿಚಾರಣೆ ಮಾಡಲಿದೆ. ಈ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್ ತನ್ನ ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವನ್ನು […]

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಪೇಜಾವರ ಶ್ರೀಯವರಿಗೆ ನುಡಿ ನಮನ

Monday, January 6th, 2020
mumbay

ಮುಂಬಯಿ : ವಿಶ್ವಕ್ಕೆ ಮಾರ್ಗದರ್ಶಕರಾಗಿ, ಸರ್ವಶ್ರೇಷ್ಠ ಸ್ವಾಮೀಜಿಯವರೆಂದಿನಿಸಿದ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ಶ್ರದ್ದಾಂಜಲಿ ಸಭೆಯನ್ನು ಜ. 3 ರಂದು ಸಂಜೆ ಅಂಧೇರಿ ಪೂರ್ವದ ಮರೋಲ್ – ಮರೋಶಿ ರೋಡ್ ನಲ್ಲಿರುವ ಮಾಂಗಲ್ಯ ಕಟ್ಟಡದಲ್ಲಿನ ಸಿ-502ರಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನಡೆಸಲಾಯಿತು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ನುಡಿನಮನ ಸಲ್ಲಿಸುತ್ತಾ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಶ್ರೀ ಶ್ರೀ […]

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಲಷ್ಕರ್​-ಇ-ತೋಯ್ಬಾ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ

Saturday, January 4th, 2020
bhadrata-pade

ಜಮ್ಮು : ಭದ್ರತಾ ಪಡೆಯು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಉಗ್ರ ನಿಸಾರ್ ಅಹಮದ್ ದಾರ್ನನ್ನು ಶ್ರೀನಗರದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಿದೆ. ಉಗ್ರ ಅಡಗಿ ಕುಳಿತಿದ್ದಾನೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು. ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಶ್ರೀನಗರದ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅಂದರೆ 2019 ನವೆಂಬರ್ನಲ್ಲಿ ಕುಲ್ಲಾನ್ ಗಂದೇರ್ಬಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ನಿಸಾರ್ ತಪ್ಪಿಸಿಕೊಂಡಿದ್ದ. ಆತ […]