ಶೀಘ್ರವೇ ತುಳು ರಾಜ್ಯದ ಅಧಿಕೃತ ಭಾಷೆಯಾಗಲಿದೆ ; ಉಮಾಶ್ರೀ

Thursday, August 1st, 2013
Tulu Language

ಬೆಂಗಳೂರು : ಕರ್ನಾಟಕ ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದೆನಿಸಲು ತುಳು ಭಾಷೆಗೆ ಎಲ್ಲಾ ಅರ್ಹತೆ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸುಮಾರು 70 ಲಕ್ಷ ಜನರು(2001 ರ ಜನಗಣತಿಯಂತೆ) ಮಾತನಾಡುವ ತುಳು ಭಾಷೆ ಸಾಹಿತ್ಯಿಕವಾಗಿ ಸಮೃದ್ಧವಾಗಿದೆ ಎಂದು ಉಮಾಶ್ರೀ ಸದನಕ್ಕೆ ವಿವರಿಸಿದರು. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆಗೊಳಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿದೆ. ಕಳೆದ ತಿಂಗಳು ಈ […]

ನಗರದ ವುಡ್‌ಲ್ಯಾಂಡ್ಸ್ ನಲ್ಲಿ ಜೂಟ್ ಮೇಳ ಉದ್ಘಾಟನೆ

Thursday, August 1st, 2013
Jute fair

ಮಂಗಳೂರು : ನಗರದ ವುಡ್‌ಲ್ಯಾಂಡ್ಸ್ ನಲ್ಲಿ ಜುಲೈ 31 ರಿಂದ 5 ದಿನಗಳ ಕಾಲ ನಡೆಯಲಿರುವ  ಜೂಟ್ ಮೇಳವನ್ನು  ಜಿಲ್ಲಾಧಿಕಾರಿ ಎನ್.ಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ಲಾಸ್ಟಿಕ್ ಬಳಕೆಯ ಪರ್ಯಾಯ ಉತ್ಪನ್ನವಾಗಿ ಜೂಟ್‌ನಿಂದ ತಯಾರಾದ ವಸ್ತುಗಳನ್ನು ಬಳಸಬಹುದು. ಜೂಟ್‌ ಪರಿಸರ ಸ್ನೇಹಿ ಉತ್ಪನ್ನವಾಗಿದ್ದು ಪ್ಲಾಸ್ಟಿಕ್ ವಸ್ತುಗಳಿಗೆ ಬದಲಾಗಿ ಅವುಗಳನ್ನು ಬಳಸಬಹುದು ಎಂದು ಹೇಳಿದರು. ಮೇಳದಲ್ಲಿ ಗ್ರಾಹಕರ ಮೆಚ್ಚುಗೆಯ ವಸ್ತುಗಳಾದ ಅಲಂಕಾರಿಕ ಸಾಮಾಗ್ರಿಗಳು, ಮನೆಯ ಸಾಮಾಗ್ರಿಗಳು, ಹಾಗೂ ಇನ್ನಿತ್ತರ ಉತ್ಪನ್ನಗಳನ್ನು ಮಾರಾಟಮಾಡಲಾಗುತ್ತಿದೆ, ಜೂಟ್ ಉತ್ಪನ್ನಗಳು ಪರಿಸರ ನೈರ್ಮಲ್ಯಕ್ಕೆ ಸಹಕಾರಿ ಎಂದು ತಿಳಿಸಿದರು. ನ್ಯಾಷನಲ್ […]

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ದಿ.ಬೊಂಡಾಲ ಜಗನ್ನಾಥ ಶೆಟ್ಟಿಯವರ ಪ್ರಥಮ ಪುಣ್ಯತಿಥಿ ಆಚರಣೆ

Wednesday, July 31st, 2013
Bondala death anniversary

ಮಂಗಳೂರು : ದಿ.ಬೊಂಡಾಲ ಜಗನ್ನಾಥ ಶೆಟ್ಟಿಯವರ ಪ್ರಥಮ ಪುಣ್ಯತಿಥಿಯನ್ನು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ  ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣುಹಂಪಲುಗಳನ್ನು ನೀಡುವ ಮೂಲಕ ಆಚರಿಸಲಾಯಿತು. ಬಳಿಕ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿಯವರು ಬಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ಯುವ ಕಾಂಗ್ರೆಸ್ ನಾಯಕನಿಗೆ ಶ್ರದ್ದಾಂಜಲಿ ಸಮರ್ಪಿಸಲಾಯಿತು. ಶ್ರದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ  ಅಧ್ಯಕ್ಷ ಮಿಥುನ್ ರೈ ಮಾತನಾಡಿ 2001 […]

ಡಿ.ಸಿ. ಆಪೀಸ್ ಬಳಿ ಎ.ಬಿ.ವಿ.ಪಿ.ಯಿಂದ ಸಿ.ಇ.ಟಿ. ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

Wednesday, July 31st, 2013
Abvp protest

ಮಂಗಳೂರು : ಸಿ.ಇ.ಟಿ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷದಿಂದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ಕಾಲೇಜು ಚುಣಾವಣೆ ನಿಷೇಧ ಕ್ರಮದ ವಿರುದ್ದ ಎ.ಬಿ.ವಿ.ಪಿ. ಜುಲೈ 31 ರಂದು ರಾಜ್ಯದ್ಯಾಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಅದರ ಅಂಗವಾಗಿನಗರದ ಡಿ.ಸಿ. ಆಫೀಸ್ ಬಳಿಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ.ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಮಾತನಾಡಿ ಸುಪ್ರಿಂಕೋರ್ಟ್ ಸಿ.ಇ.ಟಿ ಪ್ರವೇಶಾತಿಯನ್ನು ಜುಲೈ […]

ವೇಣೂರು ಪಂಚಾಯತ್ ನ ಮಾಜಿ ಅಧ್ಯಕ್ಷ ಎರ್ಮೋಡಿ ಗುಣಪಾಲ್ ಜೈನ್ ನಿಧನ

Wednesday, July 31st, 2013
Yermodi Gunapal Jain

ಬೆಳ್ತಂಗಡಿ  :  ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ -ಬೆಳ್ತಂಗಡಿ ದಾರಿಯಲ್ಲಿ ಪೆರಿಂಜೆಯ ಹೊಸಂಗಡಿ ಗ್ರಾಪಂ ಕಚೇರಿಯ ಬಳಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೈನ ಸಮಾಜದ ಮುಖಂಡ ಎರ್ಮೋಡಿ ಗುಣಪಾಲ್ ಜೈನ್(64) ಮೃತ ಪಟ್ಟಿದ್ದಾರೆ. ಮೂಡುಬಿದಿರೆಯ ಮನೆಯಿಂದ ವೇಣೂರಿಗೆ ಬರುತ್ತಿದ್ದ ಗುಣಪಾಲ್ ಜೈನ್‌ರ ಇನ್ನೋವಾ ಕಾರಿಗೆ ಹೊಸಂಗಡಿ ಪಂಚಾಯತ್ ಬಳಿ ಬೆಳ್ತಂಗಡಿಯಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ  ಕಾರು ಸುಮಾರು 50 ಮೀಟರ್‌ಗಳಷ್ಟು ತಳ್ಳಲ್ಪಟ್ಟ ಸಂಪೂರ್ಣ ನಜ್ಜುಗುಜ್ಜಾಗಿದೆ. ತಲೆಗೆ ಗಂಭೀರ ಗಾಯಗೊಂಡಿದ್ದ ಗುಣಪಾಲ್ ಜೈನ್‌ರನ್ನು ಕೂಡಲೇ ಆಸ್ಪತ್ರೆಗೆ […]

ಚರಂಡಿಯಲ್ಲಿ ಸಿಲುಕಿದ್ದ ಶವವನ್ನು ಜೆಸಿಬಿ ಯಂತ್ರದ ಮೂಲಕ ಆಸ್ಪತ್ರೆವರೆಗೆ ಸಾಗಿಸಿದ ಪೊಲೀಸರು

Tuesday, July 30th, 2013
Dead Body in JCB

ಲಖನೌ : ಫಿರೋಜಾಬಾದ್ ಪಟ್ಟಣದ ನಳಬಂದನ್ ಪ್ರದೇಶದಲ್ಲಿ ಭಾನುವಾರ ಚರಂಡಿಯೊಂದರಲ್ಲಿ ಸಿಲುಕಿದ್ದ ಶವವನ್ನು ಜೆಸಿಬಿ ಯಂತ್ರದ ಮೂಲಕ ಹೊರ ತೆಗೆದು, ನಂತರ ಅದರಲ್ಲೇ ಆಸ್ಪತ್ರೆವರೆಗೆ ಸಾಗಿಸಿದ ಪ್ರಕರಣವೊಂದು ಉತ್ತರ ಪ್ರದೇಶದದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೋಲಿಸರನ್ನು ಅಮಾನತು ಮಾಡಲಾಗಿದೆ. ತ್ಯಾಜ್ಯ ತುಂಬಿದ್ದ ದೊಡ್ಡ ಚರಂಡಿಯಲ್ಲಿ 18 ವರ್ಷದ ಯುವಕನ ನಗ್ನ ಶವವೊಂದು ಇರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ತ್ಯಾಜ್ಯ ಹೊರತೆಗೆಯುವ ಜೆಸಿಬಿ ಯಂತ್ರಕ್ಕಾಗಿ ನಗರ ಪಾಲಿಕೆಗೆ ಮನವಿ ಸಲ್ಲಿಸಿದರು. […]

ಅಂತರಾಷ್ಟ್ರಿಯ ದಂತ ವೈದ್ಯ ಕಾಲೇಜು ವತಿಯಿಂದ ಓಸಿಯನ್ ಪರ್ಲ್ ನಲ್ಲಿ ಅರ್ಧ ವಾರ್ಷಿಕ ಸಮಾವೇಶ

Tuesday, July 30th, 2013
ICD Press Meet

ಮಂಗಳೂರು : ಆಗಸ್ಟ್ 3ರಂದು ನಗರದ ಓಸಿಯನ್ ಪರ್ಲ್ ಹೋಟೆಲಿನಲ್ಲಿ ಅಂತರಾಷ್ಟ್ರಿಯ ದಂತ ಕಾಲೇಜು ವತಿಯಿಂದ ಅರ್ಧ ವಾರ್ಷಿಕ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಅಂತರಾಷ್ಟ್ರಿಯ ದಂತ ವೈದ್ಯ ಕಾಲೇಜುಗಳ ಆರನೇ ವಿಭಾಗದ ಅಧ್ಯಕ್ಷ ಡಾ. ಯು.ಎಸ್.ಕೃಷ್ಣಮೂರ್ತಿ ಪತ್ರಿಕಾಭವನದಲ್ಲಿ ಮಂಗಳವಾರ, ಜುಲೈ 30 ರಂದು ನಡೆದ ಪತ್ರಿಕಾಘೊಷ್ಟಿಯಲ್ಲಿ ತಿಳಿಸಿದರು. ಈ ಸಂಸ್ಥೆಯು 1928ರಲ್ಲಿ ಸ್ಥಾಪನೆಯಾಯಿತು, ಇದರ ಪ್ರಧಾನ ಕಛೇರಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿದೆ, ಇದು 12000ಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ದಂತ ವೈದ್ಯ ಕಾಲೇಜು ವತಿಯಿಂದ ನಡೆಯುವ ಸಮಾವೇಶದಲ್ಲಿ […]

ನಿಡ್ಡೋಡಿಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳನ್ನು ಚಪ್ಪಲಿ ಹಾಗೂ ಹಿಡಿಸೂಡಿ ಹಿಡಿದು ಓಡಿಸಿದ ಸ್ಟಳೀಯರು

Tuesday, July 30th, 2013
Niddodi villagers

ಮಂಗಳೂರು: ನಿಡ್ಡೋಡಿಯಲ್ಲಿ ಬೃಹತ್ ಮಟ್ಟದ ಉಷ್ಣವಿದ್ಯುತ್ ಸ್ಥಾವರದ ಉದ್ದೇಶಿತ  ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸೋಮವಾರ ಬೆಳಿಗ್ಗೆ  ಹೋಗಿದ್ದರು. ಸ್ಥಾವರ ಸ್ಥಾಪನೆಯ ಬಗ್ಗೆ ಜನರಿಗೆ ವಿವರಿಸಲು ಹೋಗಿದ್ದ ಕಾಂಗ್ರೆಸ್ ನ ಪ್ರತಿನಿಧಿಗಳನ್ನು  ಚಪ್ಪಲಿ ಹಾಗೂ ಹಿಡಿಸೂಡಿಯನ್ನು ಹಿಡಿದು ಹಿಂದಕ್ಕೆ ಓಡಿಸಿದ ಘಟನೆ ಸೋಮವಾರ ನಡೆಯಿತು. 500ಕ್ಕೂ ಹೆಚ್ಚು ಸ್ಥಳೀಯರು ಸೇರಿ ಬಂದು ಕಾಂಗ್ರೆಸ್ ಪ್ರತಿನಿಧಿಗಳಿಗೆ ದಿಗ್ಭಂದನ ಹಾಕಿ ಘೇರಾವ್ ಹಾಕಿದರು. ಯಾವುದೇ ಪ್ರತಿನಿಧಿಗಳು ಇಲ್ಲಿಗೆ ಬಂದು ವಿವರಣೆ ನೀಡುವುದನ್ನು ನಾವು ಬಯಸುವುದಿಲ್ಲ. ನಿಮ್ಮ ನಾಯಕ ಅಥವಾ ಶಾಸಕನನ್ನು ಇಲ್ಲಿಗೆ ಕಳುಹಿಸಿ. ಅವರಿಗೆ ನಮ್ಮ ಸಮಸ್ಯೆಗಳನ್ನು […]

ಉಡುಪಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Tuesday, July 30th, 2013
udupi rape accused

ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯೋಗೇಶ, ಹರಿಪ್ರಸಾದ್ ಮತ್ತು ಆನಂದನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೆ ನ್ಯಾಯಾಧೀಶರು ಆಗಸ್ಟ್ 12 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ. ಈ ಮೂವರೂ ಆರೋಪಿಗಳನ್ನು  ಜುಲೈ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರ ತೀರ್ಪಿನಂತೆ ಜುಲೈ 29 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಕಾನೂನಿನಂತೆ ಆರೋಪಿಗಳನ್ನು ಪ್ರತೀ 15 ದಿವಸಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ಸೂಚಿಸುತ್ತಾರೆ. ಅವರನ್ನು ಇಂದು ಈ […]

ಚಲ್ಲಾಪಿಲ್ಲಿ ಚಿತ್ರದ 25ನೇ ದಿನ: ರೋಡ್ ಶೋ ನಲ್ಲಿ ವಿಜಯ ರಾಘವೇಂದ್ರ, ಐಶ್ವರ್ಯನಾಗ್

Tuesday, July 30th, 2013
Chellapilli 25th day

ಮಂಗಳೂರು :  ಮಂಗಳೂರಿನ ಮಂಗಳ ಕ್ರಿಡಾಂಗಣದಿಂದ ಜ್ಯೊತಿ ಟಾಕೀಸ್ ತನಕ ಚಲ್ಲಾಪಿಲ್ಲಿ ಚಿತ್ರದ 25ನೇ ದಿನದ ರೋಡ್ ಶೋ ಜುಲೈ 29 ಸೋಮವಾರ ನಡೆಯಿತು. ಈ ರೋಡ್ ಶೋನಲ್ಲಿ ನಾಯಕ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಸಹಿತ ಚಿತ್ರ ತಂಡದ ನಟರು ಭಾಗವಹಿಸಿದರು. ರೋಡ್ ಶೋನಲ್ಲಿ ಅಭಿಮಾನಿಗಳ ಮಹಾಪುರವೇ ನೆರೆದಿತ್ತು, ಉತ್ಸಾಹಿ ಅಭಿಮಾನಿಗಳು ಬೈಕ್ ಮೂಲಕ ರ್ರ್ಯಾಲಿ ನಡೆಸಿದರು. ನಂತರ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಜ್ಯೊತಿ ಟಾಕೀಸ್ ನಲ್ಲಿ ಅಭಿಮಾನಿಗಳೊಂದಿಗೆ ಚಿತ್ರ […]