ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಭೇಟಿ ಮಾಡಿ ಮಾತುಕತೆ ನಡೆಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

Saturday, August 7th, 2021
Srinivas pooajary

ಬಂಟ್ವಾಳ  : ನೂತನ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರ ಕಾಲಿಗೆ ಬಿದ್ದು  ಆರ್ಶೀವಾದ ಪಡೆದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿ ಡಾ|ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿ ಕಾಲು ಮುಟ್ಟಿ ನಮಸ್ಕಾರ ಮಾಡಿದರು.  ಪ್ರಭಾಕರ್ ಭಟ್ ಅವರಿಗೆ  ಶಾಲು ಹೊದಿಸಿ ಸಿಹಿತಿಂಡಿ ಬಾಯಿಗೆ ತಿನ್ನಿಸಿದರು. ಬಳಿಕ ಕೆಲ ಹೊತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಸಂಘಟನಾತ್ಮಕ ಕರಾವಳಿ ಜಿಲ್ಲೆಗೆ ಪ್ರಮುಖ ಖಾತೆ ಬಿಜೆಪಿ ಹರ್ಷ : ಸುದರ್ಶನ ಎಂ.

Saturday, August 7th, 2021
Sudarshana-M

ಮಂಗಳೂರು  : ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯ ಮಾಡುವವರನ್ನು ಯಾವತ್ತೂ ಬಿಜೆಪಿ ಕೈ ಬಿಡುವುದಿಲ್ಲ. ರಾಜ್ಯ ಸರ್ಕಾರಕ್ಕೆ 29 ಶಾಸಕರುಗಳನ್ನು ನೀಡಿದ ಕರಾವಳಿ ಜಿಲ್ಲೆಗೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಸ್ಥಾನಮಾನ ನೀಡಿದ್ದು ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತರಿಗೆ ಹರ್ಷ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ತಿಳಿಸಿದರು. ಎಸ್. ಅಂಗಾರರವರಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಖಾತೆ, ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗ ಅಭಿವೃದ್ದಿ ಖಾತೆ, ವಿ.ಸುನಿಲ್ […]

ಆಯುಷ್ಮಾನ್ ಕಾರ್ಡ್ ಇದ್ದರೂ, ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡಿದ ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ

Saturday, August 7th, 2021
Ayushman

ಮಂಗಳೂರು : ಕೊರೋನಾ ಸೋಂಕು ಬಂದ ಮೇಲಂತೂ ಖಾಸಗಿ ಆಸ್ಪತ್ರೆಗಳ ಸುಲಿಗೆಗಳಿಂದ ಜನ ಮನೆ ಮಠ ಮಾರಿ ತಮ್ಮವರನ್ನೂ ಕಳಕೊಂಡಿದ್ದಾರೆ. ಅದರಲ್ಲೂ ಸರಕಾರದ ಅಯುಷ್ಮಾನ್ ಕಾರ್ಡ್ ಇದ್ದರೂ ಅದನ್ನು ತಿರಸ್ಕರಿಸಿದ ಆಸ್ಪತ್ರೆಗಳು ಹೆಚ್ಚು ಬಿಲ್ಲು ವಸೂಲಿ ಮಾಡುತ್ತಿದ್ದವು. ಅಂತಹ  ಮಂಗಳೂರಿನ ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಂತ್ರಸ್ತರು ದಾಖಲಿಸಿದ್ದ […]

ಚಾಲಕ, ಕೃಷಿಕ ಇರಾ ಆಚೇಬೈಲು ಪದ್ಮನಾಭ ನಿಧನ

Friday, August 6th, 2021
padmanabha

ಮಂಗಳೂರು : ಬಂಟ್ವಾಳ ತಾಲೂಕು ಇರಾ ಆಚೇಬೈಲು ಪದ್ಮನಾಭ ಬೆಳ್ಚಡ್ಡ (63) ನಿಧನರಾಗಿದ್ದಾರೆ. ಚಾಲಕರಾಗಿದ್ದ ಅವರು ಕೃಷಿಕರಾಗಿಯೂ ಇದ್ದರು. ಅಲ್ಪಕಾಲದ ಅಸೌಖ್ಯದ ಬಳಿಕ ಅವರು ಶುಕ್ರವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನ ಅಗಲಿದ್ದಾರೆ.

ಸ್ನಾತಕ/ಸ್ನಾತಕೋತ್ತರ ಪರೀಕ್ಷೆಗಳು ಆಗಸ್ಟ್‌ 11 (ಬುಧವಾರ) ರಿಂದ ಮರು ಪ್ರಾರಂಭ

Thursday, August 5th, 2021
Mangalore University

ಮಂಗಳೂರು :  ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿರ್ದೇಶನ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಸಲಹೆಯಂತೆ ಇಂದು (ಆಗಸ್ಟ್‌ 05) ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ, ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದೂಡಲಾಗಿದ್ದ ಸ್ನಾತಕ/ಸ್ನಾತಕೋತ್ತರ ಪರೀಕ್ಷೆಗಳನ್ನು ಆಗಸ್ಟ್‌ 11 (ಬುಧವಾರ) ರಿಂದ ಕೊವಿಡ್‌ ಶಿಷ್ಟಾಚಾರದೊಂದಿಗೆ ಮರುಪ್ರಾರಂಭಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಕಾಲೇಜಿನ ವೆಬ್‌ಸೈಟ್‌ ಮೂಲಕ ತಿಳಿಸಲಾಗುವುದು. ವಾಹನ ಸೌಲಭ್ಯ ಅಥವಾ ಕೊವಿಡ್‌ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ನಡೆಸಲಾಗುವುದು.

ಊರಿಗೆ ಬರುವ ಮಾರಿ ಕಳೆವ ‘ಆಟಿ ಕಳೆಂಜ’: ತುಳುನಾಡಿನ ವಿಶಿಷ್ಟ ಆಚರಣೆ

Thursday, August 5th, 2021
Ati Kalanja

ಸುರತ್ಕಲ್ : ವಿನಾಯಕ ಫ್ರೆಂಡ್ಸ್ ಕ್ಲಬ್ ಮೂರನೇ ಬ್ಲಾಕ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಸಹಯೋಗದಲ್ಲಿ ‘ಆಟಿ ಕಳೆಂಜ ನಿಮ್ಮ ಮನೆಗೆ’ ಎಂಬ ಆಟಿಕಳಂಜ ಮನೆ ಮನೆ ಗೆ ಭೇಟಿ ನೀಡುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ದೈವದ ಮಧ್ಯಸ್ಥ ರವಿರಾಜ ಶೆಟ್ಟಿ ಮಾತನಾಡಿ ಅಳಿಯುತ್ತಿರುವ ಆಟಿಕಳಂಜ ಸಂಪ್ರದಾಯದ ಉಳಿಯುವಿಕೆಗಾಗಿ ವಿನಾಯಕ ಫ್ರೆಂಡ್ಸ್ ಕ್ಲಬ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಪ್ರಯತ್ನ ಶ್ಲಾಘನೀಯ ಎಂದರು. ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ […]

ಚಾತುರ್ಮಾಸದ ವೈಶಿಷ್ಟ್ಯಗಳು ಮತ್ತು ಮಹತ್ವ

Thursday, August 5th, 2021
chaturmasya

ಮಂಗಳೂರು  : ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬ, ಧಾರ್ಮಿಕ ಉತ್ಸವಗಳಿಗೆ ಒಂದೊಂದು ವಿಶೇಷ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಬರುವ ಹಬ್ಬಗಳ ಸಾಲು ಎಂದರೆ ಆಷಾಢ ಮಾಸದಿಂದ ಕಾರ್ತಿಕ ಮಾಸದ ಈ ನಾಲ್ಕು ತಿಂಗಳು ಬೇರೆ ಬೇರೆ ಹಬ್ಬಗಳ ಆಚರಣೆ ಮಾಡುತ್ತೇವೆ ಈ ನಾಲ್ಕು ತಿಂಗಳ ಅಂದರೆ ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಚಾತುರ್ಮಾಸದ ಕಾಲ […]

ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ಉಚಿತವಾಗಿ ಬಿ ಎಸ್ -6 ಚಾಸಿಸ್ ವಿತರಣೆ

Thursday, August 5th, 2021
bmtc

ಬೆಂಗಳೂರು : ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ರವರು ಉಚಿತವಾಗಿ ಬಿಎಸ್ -6 ಚಾಸಿಸ್ ಅನ್ನು ಉಚಿತವಾಗಿ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ನೀಡಿರುತ್ತಾರೆ. ಬಿಎಸ್ -6 ವಾಹನದ ಕಾರ್ಯಾಚರಣೆಯನ್ನು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ. ಈ ಚಾಸಿಸ್ನ ಅಂದಾಜು ವೆಚ್ಚ ರೂ. 27 ಲಕ್ಷಗಳಾಗಿದೆ. ಇದು ಬಿಎಸ್ – 6 ಮಾದರಿಯ ಚಾಸ್ಸಿಯಾಗಿದ್ದು, 4 ಸಿಲಿಂಡರ್, 5 ಲೀ 180 ಎಚ್ಪಿ ಇಂಜಿನ್ ಆಗಿರುತ್ತದೆ. ಇದರ ವೀಲ್ಬೇಸ್ 224″ ಇರುತ್ತದೆ. ಹಾಗೂ ಬಿಎಸ್ -4 ಗೆ […]

ರೈಲ್ವೆ ಬೇಡಿಕೆಗಳ ಈಡೇರಿಕೆಗಾಗಿ ರೈಲ್ವೆ ಸಚಿವರಿಗೆ ನಳಿನ್ ಕುಮಾರ್ ಕಟೀಲ್ ಮನವಿ

Wednesday, August 4th, 2021
nalin-Kumar-Kateel

ಮಂಗಳೂರು  :  ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಶ್ಣವ್ ರವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ವಿಷಯಗಳ ಕುರಿತು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಆಡಳಿತಾತ್ಮಕ ಬದಲಾವಣೆ. 1. ಮಂಗಳೂರು ತೋಕುರು ರೈಲ್ವೆ ಲೈನ್ ನ್ನು ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಬಗ್ಗೆ. 2. ಹಾಸನ ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿಯನ್ನು […]

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹಾಸನದಲ್ಲಿ ಅಭಿನಂದನಾ ಕಾರ್ಯಕ್ರಮ

Wednesday, August 4th, 2021
DK journalists

ಹಾಸನ: 35 ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹಾಸನದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಸನದ ಹೊಳೆನರಸೀಪುರ ರಸ್ತೆಯಲ್ಲಿರುವ ನಂದಗೋಕುಲ ಕನ್ವೆನ್ಷನ್ ಹಾಲ್ ನಲ್ಲಿ ಆಗಸ್ಟ್ 3 ರಂದು ಸಂಜೆ ನಡೆದ ಅಭಿನಂದನಾ ಸಮಾರಂಭದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪದಾಧಿಕಾರಿಗಳನ್ನು ಹಾಗೂ ಯಶಸ್ವಿ ಸಮ್ಮೇಳನದ […]