ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಕುಸಿತ, ವಾಹನ ಸಂಚಾರ ಬಂದ್

Tuesday, June 15th, 2021
palguni-bridge

ಮಂಗಳೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿಗೆ  ಸಂಪರ್ಕ ಕಲ್ಪಿಸುವ ಪಲ್ಗುಣಿ ನದಿ ಸೇತುವೆ ಕುಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆ ಮಧ್ಯರಾತ್ರಿ 3 ಗಂಟೆಗೆ ಕುಸಿದಿದೆ. ಸೇತುವೆ ಸದ್ಯ ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಉಡುಪಿಯಿಂದ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ ಮೂಲಕ ಬರಬಹುದು. ಕಾಸರಗೋಡು, […]

ಕರೊನಾ ಲಸಿಕೆ ಪಡೆದ ವ್ಯಕ್ತಿ ಮೈಮೇಲೆ ಅಯಸ್ಕಾಂತೀಯ ಶಕ್ತಿ

Tuesday, June 15th, 2021
ಕರೊನಾ ಲಸಿಕೆ ಪಡೆದ ವ್ಯಕ್ತಿ ಮೈಮೇಲೆ ಅಯಸ್ಕಾಂತೀಯ ಶಕ್ತಿ

ಉಡುಪಿ: ಕರೊನಾ ಲಸಿಕೆ ಪಡೆದ ಉಡುಪಿಯ ವ್ಯಕ್ತಿಯೊಬ್ಬರಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡುಬಂದಿದ್ದು, ಭುಜ, ಹಣೆ, ಹೃದಯಭಾಗಗಳಲ್ಲಿ ಸ್ಟೀಲ್ ಚಮಚ, ನಾಣ್ಯಗಳು ಅಂಟಿಕೊಳ್ಳುತ್ತಿರುವ ಘಟನೆ ನಡೆದಿದೆ. ನಗರದ ಪಿಪಿಸಿ ಕಾಲೇಜು ಸಮೀಪ ನಿವಾಸಿ ರಾಮ್ ದಾಸ್ ಶೇಟ್ (52) ಅವರಲ್ಲಿ ಅಯಸ್ಕಾಂತೀಯ ಗುಣಲಕ್ಷಣ ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮಾಡಿದ್ದಾರೆ. ಹೆಚ್ಚಿನ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆೆ. ವರದಿ ಬಳಿಕವೇ ಸತ್ಯ ತಿಳಿಯಲಿದೆ ಎಂದು ರಾಮ್‌ದಾಸ್ ಶೇಟ್ ತಿಳಿಸಿದ್ದಾರೆ. ಕೋವಿಡ್ […]

ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ, ಗಾಂಜಾ ಹಾಗೂ ಎಂಡಿಎಂಎ ವಶ

Monday, June 14th, 2021
omanian

ಮಂಗಳೂರು :  ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ. ಬಂಧಿತರನ್ನು ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಒಮನ್ ಪ್ರಜೆ ಅಹ್ಮದ್ ಮುಸಬಾ 6 ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ […]

ಮಂಗಳೂರು ವಿವಿ: ಕಾಲೇಜುಗಳ ಸಂಯೋಜನೆಗೆ ಅರ್ಜಿ ಆಹ್ವಾನ

Monday, June 14th, 2021
Mangalore University

ಮಂಗಳೂರು: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಗಳ ಅಧಿನಿಯಮ ದಡಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲಾ ಕಾಲೇಜು/ವಿದ್ಯಾಸಂಸ್ಥೆಗಳಿಂದ ಶೈಕ್ಷಣಿಕ ವರ್ಷ 2021-22 ನೇ ಸಾಲಿಗೆ ಶಾಶ್ವತ/ಮುಂದುವರಿಕೆ/ವಿಸ್ತರಣಾ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ಸಂಸ್ಥೆಗಳಿಂದ ಹೊಸ ಸಂಯೋಜನೆ ಕುರಿತಂತೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು www.onlineaffiliation.karnataka.gov.in ಪೋರ್ಟಲ್‌ ಮುಖಾಂತರ ಜುಲೈ 08, 2021 ರ ಒಳಗಾಗಿ ಸಲ್ಲಿಸಬಹುದು. ಅರ್ಜಿಶುಲ್ಕ ರೂ.1000 ಪಾವತಿಸಿ (ಡಿಡಿ/ಚಲನ್‌/ಆರ್‌ಟಿಜಿಎಸ್‌) ಅರ್ಜಿಗಳ ಪ್ರತಿಯನ್ನು ಕುಲಸಚಿವರ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌- www.mangaloreuniversity.ac.in ಗೆ ಭೇಟಿ […]

ತುಂಬೆ: ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆ ಸ್ವಂತ ಕೊಠಡಿಗೆ ಸ್ಥಳಾಂತರ

Monday, June 14th, 2021
Somangala Society

ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆಯನ್ನು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಸೋಮವಾರ ಉದ್ಘಾಟಿಸಿದರು. ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ತುಂಬೆ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಶಾಖೆಯನ್ನು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ ದಂಪತಿ ಸೋಮವಾರ ಉದ್ಘಾಟಿಸಿ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಮಾತನಾಡಿ, ಸಂಘವು ರೂ 233 ಕೋಟಿ […]

ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗಿ ನೈಜ ಫಲಾನುಭವಿಗಳಿಗೆ ಅನ್ಯಾಯ : ಡಾ.ವೈ ಭರತ್ ಶೆಟ್ಟಿ

Monday, June 14th, 2021
bharath-shetty

ಮಂಗಳೂರು  : ದಕ್ಷಿಣ ಕನ್ನಡ  ಜಿಲ್ಲೆಯಾದ್ಯಂತ ನೈಜ ಬಿಪಿಎಲ್ ಫಲಾನುಭವಿಗಳ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗಿರುವುದು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ಗಮನಕ್ಕೆ ಬಂದಿತ್ತು. ಈ ವಿಷಯದ ಬಗ್ಗೆ ಅವರು ಜಿಲ್ಲಾಧಿಕಾರಿ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಜೊತೆ ಮಾತುಕತೆ ನಡೆಸಿರುತ್ತಾರೆ. ಈ ವಿಷಯದ ಕುರಿತು ಆಹಾರ ಇಲಾಖೆಯ ರಾಜ್ಯದ ಆಯುಕ್ತರೊಂದಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಪ್ರಸ್ತಾಪಿಸಿದಾಗ ಆಯುಕ್ತರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆ ಬಳಿಕ ಆಹಾರ ಇಲಾಖೆಯ ಜಿಲ್ಲೆಯ ಅಧಿಕಾರಿಗಳಿಗೆ […]

ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ ಮೂಡಿಸುತ್ತದೆ : ಯು.ಟಿ.ಖಾದರ್

Sunday, June 13th, 2021
UT Khader

ಮಂಗಳೂರು  : ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ, ಸಂಶಯ ಮೂಡಿಸುತ್ತದೆ ಹೊರತು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ನಷ್ಟವೂ ಇಲ್ಲ,ಲಾಭವೂ ಇಲ್ಲ ಎಂದು  ಯು.ಟಿ.ಖಾದರ್ ಹೇಳಿದ್ದಾರೆ. ಬಹಳ ಸಮಯದ ಹಿಂದಿನಿಂದ ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಮಂದಿರ ಮಸೀದಿಗಳ ನಿರ್ವಹಣೆಗಾಗಿ ದುಡ್ಡಿನ ಬದಲು “ಇನಾಮು” ಮೂಲಕ ಈ ಜಮೀನು ನೀಡಲಾಗುತ್ತಿತ್ತು. ನಂತರ ಭಾರತ ಸ್ವತಂತ್ರಗೊಂಡ ಬಳಿಕ ಮೊದಲಿದ್ದ ಕಾನೂನನ್ನು ರದ್ದು ಪಡಿಸಿ “Inams Abolition Act” ನ್ನು ಜಾರಿಗೆ ತಂದು ಸರಕಾರದ ವತಿಯಿಂದಲೇ ಮಂದಿರ ಮಸೀದಿಗಳ […]

ಜೆಪ್ಪು ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗೆ ಆಹಾರ-ದಾನ್ಯದ ಕಿಟ್ ವಿತರಣೆ

Sunday, June 13th, 2021
Kit Distribution

ಮಂಗಳೂರು : ನಗರದ ಜೆಪ್ಪು ಸಂತ ಆಂತೋನಿಯ ವಾರ್ಷಿಕ ಮಹೋತ್ಸವದ  ಅಂಗವಾಗಿ  ಪತ್ರಕರ್ತ ಮಿತ್ರರಿಗೆ,   ಜೂನ್ 13 ರಂದು(ಬಾನುವಾರ) ಸಾಯಾಂಕಾಲ 5.30 ಕ್ಕೆ  ಸಂತ ಆಂತೋನಿ ಆಶ್ರಮ, ಜೆಪ್ಪು ಇಲ್ಲಿ ಆಹಾರ-ದಾನ್ಯದ ಕಿಟ್ ವಿತರಿಸಲಾಯಿತು. ಮಂಗಳೂರು ಧರ್ಮಪ್ರಾಂತದ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನ  ಆಹಾರ-ದಾನ್ಯದ ಕಿಟ್ ವಿತರಿಸಿದರು. ನಂತರ  ಬಿಷಪ್ ಬಲಿಪೂಜೆ ಅರ್ಪಿಸಿ, ಪ್ರವಚನ ನೀಡಿದರು. ಈ ಸಂದರ್ಭ ‘ಯುನೈಟೆಡ್ ಕ್ಯಾಥೊಲಿಕ್ಸ್’ ಪೇಜ್‌ಬುಕ್ ಸಂತ ಆಂತೋನಿಯವರ ಜೀವನಕ್ಕೆ ಸಂಬಂಧಿಸಿ ನಡೆಸಿದ ಕ್ವಿಝ್ ಸ್ಪರ್ಧೆಯ ಅದೃಷ್ಟ ಚೀಟಿಯನ್ನು ಎತ್ತುವ ಮೂಲಕ […]

ಕರ್ನಾಟಕ ಮತ್ತು ಕೇರಳದಲ್ಲಿ ತುಳುವನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಿಸಲು ಟ್ವಿಟ್ ಅಭಿಯಾನ

Sunday, June 13th, 2021
Tulu Language

ಮಂಗಳೂರು:  ಕರ್ನಾಟಕ ಮತ್ತು ಕೇರಳ ಸರಕಾರ ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರಿಂದ ರವಿವಾರದಂದು ಟ್ವಿಟರ್ ಅಭಿಯಾನ ಆರಂಭಗೊಂಡಿದೆ. ರವಿವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯೋಜಿಸಲಾದ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಅಭಿಯಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ. ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್‌ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಗ್ರಾಮ ಪಂಚಾಯತ್ ಗಳು ಸೀಲ್ ಡೌನ್

Sunday, June 13th, 2021
KV Rajendra Kumar

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ  ಪ್ರಮಾಣ ಹೆಚ್ಚಳವಾಗಿರುವ ಹದಿನೇಳು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸೀಲ್ ಡೌನ್ ಆಗಲಿದೆ. ದ.ಕ. ಜಿಲ್ಲೆಯ 17 ಗ್ರಾಪಂ.ಗಳು  […]