ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದ ಮತದಾನ ಬಿರುಸಿನಿಂದ ಆರಂಭ

Tuesday, December 22nd, 2020
GP vote

ಮಂಗಳೂರು :  ಗ್ರಾಮ ಪಂಚಾಯತ್ ಗಳಿಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 10 ಗಂಟೆ ವೇಳೆಗೆ ಮಂಗಳೂರು ತಾಲೂಕಿನಲ್ಲಿ 14.6 ಶೆ., ಮೂಡುಬಿದರೆ15.64 ಶೇ. ಹಾಗೂ ಬಂಟ್ಟಾಳ ತಾಲೂಕಿನಲ್ಲಿ 13.75 ಶೇ. ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 14.48 ಶೇ. ಮತದಾನವಾಗಿರುವುದು ವರದಿಯಾಗಿದೆ. ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಥರ್ಮಾಮೀಟರ್ ನಲ್ಲಿ ದೇಹದ […]

ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಕರ್ನಾಟಕ ಮೀನುಗಾರರ ಬೋಟ್

Tuesday, December 22nd, 2020
Karnataka Boat

ಕಾಸರಗೋಡು :  ಕರ್ನಾಟಕ ನೋಂದಣಿಯ ಬೋಟ್ ಕೇರಳ ಸರಹದ್ದಿನ ಮಂಜೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಕ್ಕೆ ಕೇರಳ ಪೊಲೀಸರು ಬೋಟನ್ನು ವಶಪಡಿಸಿದ್ದರು ಆದರೆ  ಮೀನುಗಾರರ ತಂಡ ಇಬ್ಬರು ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಘಟನೆ ಸೋಮವಾರ ನಡೆದಿದೆ. ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ಕುಂಬಳೆ ಶಿರಿಯದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದೆ. ಈ ವೇಳೆ ಅದರ ದಾಖಲೆ ಗಳನ್ನು ಪರಿಶೀಲಿಸಿದಾಗ ಕೆಲ ಸಂಶಯ ಉಂಟಾದ […]

ಗ್ರಾಮ ಪಂಚಾಯತ್ ಚುನಾವಣೆಗೆ ಸಿಬ್ಬಂದಿಗಳ ಸಿದ್ಧತೆ

Monday, December 21st, 2020
GP vote

ಬಂಟ್ವಾಳ : ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ  ಡಿ.22ರಂದು ನಡೆಯಲಿದ್ದು, ಚುನಾವಣಾ ಸಾಮಗ್ರಿಗಳನ್ನುಆಯಾಯ ಮತಗಟ್ಟೆಗಳಿಗೆ  ಇಂದು ಕೊಂಡೊಯ್ಯಲಾಗಿದೆ. ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ 57 ಗ್ರಾಮ ಪಂಚಾಯತ್ಗಳ 822 ಸ್ಥಾನಗಳಿಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಟ್ಟು 2,75,097 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡ್ ನ ಮೊಡಂಕಾಪುವಿನಿಂದ 155 ವಾಹನಗಳಲ್ಲಿ ಪ್ರತಿಯೊಂದು ಬೂತ್ ಗೆ ತಲಾ 6ರಂತೆ ಒಟ್ಟು 2,376 ಮಂದಿ ನಿಗದಿಪಡಿಸಲಾಗಿರುವ ಬೂತ್ ಗಳಿಗೆ ಇಂದು ತೆರಳಿದ್ದಾರೆ. ಮಂಗಳೂರು ತಾಲೂಕಿನ 57 ಗ್ರಾಪಂಗಳ 837 […]

ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವನ ಸಂಬಂಧಿಕನ ಪ್ರತಿಕಾರ, ಪೋಲೀಸರ ಮೇಲೆ ತಲವಾರಿನಿಂದ ಹಲ್ಲೆ

Monday, December 21st, 2020
Noushin

ಮಂಗಳೂರು : ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಂಬಂಧಿಕನೊಬ್ಬ ಅದಕ್ಕೆ  ಪ್ರತಿಕಾರವಾಗಿ ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರ ಫರ್ನಿಚರ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್‌‌ ನವಾಝ್‌ (30) ಹಾಗೂ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ. ನವಾಝ್‌ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. 2019ರ ಡಿ.19ರಂದು […]

ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

Monday, December 21st, 2020
Rasia

ಬ್ರಹ್ಮಾವರ :  ತನ್ನ ಮೂರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಹಾರಾಡಿ ಗ್ರಾಮದ ಹೊನ್ನಾಳ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಹೊನ್ನಾಳ ಬಕ್ಕಪಟ್ಟಣ ನಿವಾಸಿ ಮುಹಮ್ಮದ್ ಖಲೀಲ್ ಎಂಬವರ ಪತ್ನಿ ರಾಸಿಯಾ (32), ಮಕ್ಕಳಾದ ಪಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7), ಆಯಿಷಾ ಝಿಫ್ರಾ (3) ಎಂದು ಗುರುತಿಸಲಾಗಿದೆ. ರಾಸಿಯಾ ಡಿ.18ರಂದು ಬೆಳಗ್ಗೆ ತನ್ನ ಮೂರು ಮಕ್ಕಳೊಂದಿಗೆ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾ.ಪಂ. ಚುನಾವಣೆಯ ಪಕ್ಷೇತರ ಅಭ್ಯರ್ಥಿ, ಆರ್‌ಟಿಐ ಕಾರ್ಯಕರ್ತ ನಾಪತ್ತೆ

Sunday, December 20th, 2020
missing

ಕುಂದಾಪುರ : ಆರ್‌ಟಿಐ ಕಾರ್ಯಕರ್ತ ತನ್ನ ಕುಟುಂಬದ ಸದಸ್ಯರಾದ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಅವರು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆಯಿಂದ  ಡಿ. 15ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್‌ ಶೆಟ್ಟಿಗಾರ್‌ ಅವರು ಗ್ರಾ.ಪಂ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಚುನಾವಣೆ ಮುಗಿಯುವವರೆಗೆ ಬೇರೆಡೆ ಇರೋಣವೆಂದು […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ, ಬ್ರಹ್ಮರಥೋತ್ಸವ

Sunday, December 20th, 2020
Kukke subrahmanya

ಸುಬ್ರಹ್ಮಣ್ಯ : ದಕ್ಷಿಣ ಭಾರತದ ಪ್ರಮುಖ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ ಮಹೊತ್ಸವ ಸಂಪನ್ನಗೊಂಡಿದೆ. ದೇವಳದ ರಾಜಮಾರ್ಗದಲ್ಲಿ ಯಶಸ್ವಿನಿ ಅನೆಯೊಂದಿಗೆ ಸಂಭ್ರಮದ ಬ್ರಹ್ಮರಥೋತ್ಸವ ಜರಗಿತು.ಕೋಟ್ಯಾಂತರ ಭಕ್ತರ ಅರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ ಮುಂಜಾನೆಯ 7.25 ರ ಧನು ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥದಲ್ಲಿ ರಥಾರೂಢನಾಗಿ ಭಕ್ತರಿಗೆ ದರ್ಶನ ನೀಡಿದ್ದಾನೆ. ಕೋವಿಡ್ ಕಾರಣದಿಂದಾಗಿ ಪರ ಊರಿನ ಭಕ್ತರಿಗೆ ಪ್ರವೇಶ ನಿರ್ಬಂನಿರ್ಬಂಧವಿದ್ದರೂ ಕೂಡಾ ಅಪಾರ ಸಂಖ್ಯೆಯಲ್ಲಿ ಭಕ್ತರು  ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ನೋಡಿ ಕಣ್ತುಂಬಿಕೊಂಡರು. […]

ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಡಿ.22ರಂದು

Sunday, December 20th, 2020
Grama panchayath

ಮಂಗಳೂರು : ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ  ಡಿ.22ರಂದು ನಡೆಯಲಿದ್ದು, ದ.ಕ.ಜಿಲ್ಲೆಯ 106 ಗ್ರಾಪಂಗಳ 1,631 ಸ್ಥಾನಗಳಿಗೆ 3,854 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅನುಸೂಚಿತ ಜಾತಿಯ 238, ಅನುಸೂಚಿತ ಪಂಗಡದ 215 ಹಾಗೂ ಹಿಂದುಳಿದ ‘ಅ’ ವರ್ಗದ 958, ಹಿಂದುಳಿದ ‘ಬಿ’ ವರ್ಗದ 226, ಸಾಮಾನ್ಯ 2,217 ಸಹಿತ ಒಟ್ಟು 3,854 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಮಂಗಳೂರಿನ 322, ಮೂಡುಬಿದಿರೆಯ 99, ಬಂಟ್ವಾಳದ 396 ಸಹಿತ 817 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 1350 ಮತಪೆಟ್ಟಿಗೆಗಳನ್ನು […]

ಡಾ. ಸಂಧ್ಯಾ ಆರ್. ಅನ್ವೆಕರ್ ಸಹ್ಯಾದ್ರಿ ಕಾಲೇಜ್ ಗೆ ಭೇಟಿ

Sunday, December 20th, 2020
sandya Anvekar

ಮಂಗಳೂರು  : ಡಾ. ಸಂಧ್ಯಾ ಆರ್. ಅನ್ವೆಕರ್, ಕರ್ನಾಟಕ ಸರ್ಕಾರದ ಕಾರ್ಯಕ್ರಮದ ಸ್ಕಿಲ್ಲಿಂಗ್, ಕಿಟ್ಸ್, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ, ಮುಖ್ಯಸ್ಥೆ: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತುಮ್ಯಾನೇಜ್ಮೆಂಟ್ ಮಂಗಳೂರಿಗೆ ಭೇಟಿ ನೀಡಿದರು. ಕರ್ನಾಟಕ ಸರ್ಕಾರದ ಸ್ಕಿಲ್ಲಿಂಗ್, ಕಿಟ್ಸ್, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಡಾ. ಸಂಧ್ಯಾ ಆರ್. ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸಲು ಸಂಸ್ಥೆ ಒದಗಿಸಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಶ್ಲಾಘಿಸಿದರು. ಕರ್ನಾಟಕ […]

ದಕ್ಷಿಣ ಕನ್ನಡ ಜಿಲ್ಲೆಯ 5 ಅಭಿವೃದ್ಧಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಚಾಲನೆ

Saturday, December 19th, 2020
Nithin Gadkari

ಮಂಗಳೂರು : ದ.ಕ ಜಿಲ್ಲೆಯ 214.22 ಕೋಟಿ ರೂ. ವೆಚ್ಚದ 5 ಅಭಿವೃದ್ಧಿ ಕಾಮಗಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ 69.02 ಕೋಟಿ ರೂ. ವೆಚ್ಚದ ನೂತನ ಷಟ್ಪಥ ಕೂಳೂರು ಸೇತುವೆ, ರಾಷ್ಟ್ರೀಯ ಹೆದ್ದಾರಿ 275ರಲ್ಲಿರುವ ಸಂಪಾಜೆ ಘಾಟ್ನ ತಡೆಗೋಡೆ ಹಾಗೂ ರಸ್ತೆ 2.53 ಕಿ.ಮೀ. […]