ಕೊರೋನ ಯೋಧರು ಎಂದು ಆಸ್ಪತ್ರೆ ಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು, ನಮಗೆ ಸೌಲಭ್ಯ ನೀಡುತ್ತಿಲ್ಲ

Monday, October 5th, 2020
contract doctors

ಮಂಗಳೂರು : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಹೊರಗುತ್ತಿಗೆ ನೌಕರರ ಪ್ರತಿಭಟನೆ 12 ದಿನಕ್ಕೆ ಕಾಲಿಟ್ಟಿದ್ದು ನಗರದ ಮನಪಾ ಗಾಂಧಿ ಪ್ರತಿಮೆಯ ಬಳಿ ಸೋಮವಾರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು. ಸರಕಾರದ ಆಸ್ಪತ್ರೆಯಲ್ಲಿ 15ರಿಂದ 18 ವರ್ಷಗಳಿಂದ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಇನ್ನೂ ಜಾರಿಯಾಗಿಲ್ಲ. ತಾನು ಕೂಡಾ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಗುತ್ತಿಗೆ, ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಕಾರ್ಮಿಕ […]

ಸರಕಾರಿ ಬಸ್ಸುಗಳ ನಡುವೆ ಅಪಘಾತ, 12 ಜನರಿಗೆ ಗಂಭೀರ ಗಾಯ

Monday, October 5th, 2020
ksrtc

ಮಂಗಳೂರು  : ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ಸರಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೋ ಸರಕಾರಿ ಬಸ್ಸಿನ (ಕೆ ಎ 19 ಎಫ್ 3376) ಹಿಂಭಾಗಕ್ಕೆ ಉತ್ತರ ಕರ್ನಾಟಕದ ಸರಕಾರಿ ಬಸ್ (ಕೆ17 f19 28) ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ […]

ದ್ವೀಪ ಪ್ರದೇಶ ಬಡ್ಡ ಕುದ್ರು ನಿವಾಸಿಗಳಿಂದ ತೂಗು ಸೇತುವೆಗೆ ಮನವಿ, ಡಾ.ಭರತ್ ಶೆಟ್ಟಿ ವೈ ಸ್ಪಂದನೆ

Sunday, October 4th, 2020
Badda Kudru

ಕಾವೂರು : ದ್ವೀಪ ಪ್ರದೇಶ ಬಡ್ಡ ಕುದ್ರುವಿಗೆ ತೂಗು ಸೇತುವೆ ಮಾಡಿಕೊಡಿ, ನಮ್ಮ ಹಿರಿಯ ಕಾಲದಿಂದಲೂ ಇಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಅನಾರೋಗ್ಯ ಬಂದರೆ ಚಿಕಿತ್ಸೆಗೂ ಪರದಾಟ, ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆ, ಮಳೆಗಾಲದಲ್ಲಿ ನದಿ ಉಕ್ಕಿ ಹರಿದಾಗ ದೋಣಿಯಲ್ಲೂ ದಾಟಲು ಆಗದ ಸ್ಥಿತಿ. ಕಳೆದ ಐವತ್ತು ವರ್ಷಗಳಲ್ಲಿ ಯಾರೊಬ್ಬರೂ ನಮ್ಮ ಅಹವಾಲು ಆಲಿಸಲು ಬರಲಿಲ್ಲ.ನೀವಾದರೂ ಮಾಡಿಕೊಡಿ. ಇದು ದ್ವೀಪ ಪ್ರದೇಶದ ನಿವಾಸಿಗಳ ಮನವಿ. ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶನಿವಾರ […]

ಮುಂದಿನ ವರ್ಷದಿಂದ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ

Sunday, October 4th, 2020
online Bajane

ಉಜಿರೆ: ಧರ್ಮಸ್ಥಳದ ವತಿಯಿಂದ ಮುಂದಿನ ವರ್ಷದಿಂದ ಆನ್ ಲೈನ್ ಮೂಲಕ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಶನಿವಾರ ಕರ್ನಾಟಕ ಭಜನಾ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ ಪ್ರಾರ್ಥನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಭಜನಾ ತರಬೇತಿ ಕಮ್ಮಟ ದಿಂದಾಗಿ ಜನರಲ್ಲಿ ಭಜನೆ ಬಗ್ಗೆ ಗೌರವ, ಭಕ್ತಿ, ಶಿಸ್ತು, ಸಂಯಮ, ನಾಯಕತ್ವ ಗುಣ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಧಾರ್ಮಿಕ ಪ್ರಜ್ಞೆ ಮೂಡಿಬಂದಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ದೇವರ ಅಪ್ಪಣೆ […]

ತಲೆಯ ಮೇಲೆ ಕಲ್ಲು ಬಿದ್ದು ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ಯ ಮೃತ್ಯು

Sunday, October 4th, 2020
Raghavendra Acharya

ಬೆಳ್ತಂಗಡಿ : ಯುವ ಕಲಾವಿದ ಹಾಗೂ ಚಲನಚಿತ್ರ ನಟರಾಗಿದ್ದ ರಾಘವೇಂದ್ರ ಆಚಾರ್ಯಗೋಳಿಕಟ್ಟೆ ಅವರು ತಲೆಯ ಮೇಲೆ ಕಲ್ಲು ಕುಸಿದು ಬಿದ್ದ ಪರಿಣಾಮ ಅ.4 ರಂದು ದಾರುಣವಾಗಿ ಮೃತಪಟ್ಟಿದ್ದಾರೆ. ರಾಘವೇಂದ್ರ ಆಚಾರ್ಯ ಅವರು ಬಳಪದ ಕಲ್ಲಿನಿಂದ ರೊಟ್ಟಿ ಮಾಡುವ ಹಂಚನ್ನು ತಯಾರಿಸುತ್ತಿದ್ದರು. ತನ್ನ ಪ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದ ಸಂದರ್ಭ ಕುಲುಮೆಯ ಮೇಲಿನಿಂದ ಏಕಾಏಕಿ ಕಲ್ಲೊಂದು ಜಾರಿ ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯವಾಗಿ ಅವರು ಅಕಾಲಿಕವಾಗಿ ಸಾವನ್ನಪ್ಪಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ, ಉಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನ, […]

ಅಕ್ರಮವಾಗಿ ದನ ಕರುಗಳನ್ನು ವಧೆಗೆ ಸಾಗಿಸುತ್ತಿದ್ದಾಗ ರಸ್ತೆಗೆ ಬಿದ್ದ ಆರು ಕರುಗಳು, ಬೆನ್ನಟ್ಟಿದ ವಿಹೆಚ್ ಪಿ ಕಾರ್ಯಕರ್ತರು

Sunday, October 4th, 2020
vhp-protest

  ಮಂಗಳೂರು: ಅಕ್ರಮವಾಗಿ 30-35 ದನದ ಕರುಗಳನ್ನು 407 ವಾಹನವೊಂದರಲ್ಲಿ ಕುದ್ರೋಳಿಯ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರು ಕರುಗಳು ವಾಹನದಿಂದ ಬಿದ್ದು  ಗಂಭೀರ ಗಾಯಗೊಂಡ ಘಟನೆಯನ್ನು ಖಂಡಿಸಿ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. […]

ಜಿಲ್ಲೆಯ ಹಲವೆಡೆ ಪೆಟ್ರೋಲ್ ಬಂಕ್ ಕಳವು​​​​ ಮಾಡುತ್ತಿದ್ದ ಮೂವರ ಬಂಧನ

Saturday, October 3rd, 2020
Petrol Pump Robers

ಮಂಗಳೂರು : ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ ಕಳವು ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕೆ. ಸಿ. ರೋಡ್ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಸಿದ್ದರು‌. ಈ […]

ಮಂಗಳೂರು ನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಸ್ವತ್ತುಗಳ ಹಸ್ತಾಂತರ

Saturday, October 3rd, 2020
Parade

ಮಂಗಳೂರು: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019-20ರಲ್ಲಿ ಕಳುವಾದ ಸ್ವತ್ತುಗಳ ಪರೇಡ್ ಶನಿವಾರ  ಮಂಗಳೂರು ಪೊಲೀಸ್ ಕವಾಯತು ಮೈದಾನಿನಲ್ಲಿ ನಡೆಯಿತು. ಮಂಗಳೂರು ನಗರ ಪೊಲೀಸರಿಂದ ವಾರಸುದಾರರಿಗೆ ಸ್ವತ್ತುಗಳ ಹಸ್ತಾಂತರ ಈ ಸಂದರ್ಭ ನಡೆಯಿತು.  ಈ ಅವಧಿಯಲ್ಲಿ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9,05,35,412 ರೂ. ಮೌಲ್ಯದ ಸ್ವತ್ತು‌ಗಳು ಕಳುವಾಗಿದ್ದು, ಅದರಲ್ಲಿ ಒಟ್ಟು 5,37,86,517 ರೂ. ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಲಾಗಿದೆ. ಅವುಗಳಲ್ಲಿ ‌ಇಂದು 2.277 ಕೆಜಿ ಚಿನ್ನಾಭರಣ, 25 ದ್ವಿಚಕ್ರ ವಾಹನಗಳು, 19 ಮೊಬೈಲ್ ಫೋನ್ಗಳು, 11 ಇತರ […]

ಮೂವರು ಡ್ರಗ್ಸ್ ಆರೋಪಿಗಳು ಸಿಸಿಬಿ ವಶಕ್ಕೆ

Saturday, October 3rd, 2020
drugs

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನೈಜೀರಿಯಾದ ಘಾನಾ ಪ್ರಜೆ ಸಹಿತ ಪ್ರಮುಖ ಮೂವರು ಆರೋಪಿಗಳನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೆಂಗಳೂರು ಹಾಗೂ ಮುಂಬಯಿಯಿಂದ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಾನಾ ರಾಜ್ಯದ ಕುಮಾಸ್‌ ನಿವಾಸಿ ಫ್ರ್ಯಾಂಕ್‌ ಸಂಡೇ ಇಬೆಬುಚಿ (33), ಮಂಗಳೂರಿನ ಕೂಳೂರು ಗುಡ್ಡೆಯಂಗಡಿಯ ಶಮೀನ್‌ ಫೆರ್ನಾಂಡಿಸ್‌ ಯಾನೆ ಸ್ಯಾಮ್‌ (28) ಮತ್ತು ತೊಕ್ಕೊಟು ಹಿದಾಯತ್‌ ನಗರದ ನಿವಾಸಿ ಶಾನ್‌ ನವಾಸ್‌ (34) ಪೊಲೀಸರ ವಶದಲ್ಲಿದ್ದಾರೆ. ಬೆಂಗಳೂರಿನ ಕಟ್ಟಿಗೆನಹಳ್ಳಿಯಲ್ಲಿ ಸುಮಾರು 2 ವರ್ಷಗಳಿಂದ ವಾಸ್ತವ್ಯ ಮಾಡುತ್ತಿದ್ದ ಫ್ರಾಂಕ್‌ ಸಂಡೇ […]

ಕೊರೋನ ಸೋಂಕು : ದಕ್ಷಿಣ ಕನ್ನಡ – 322, ಸಾವು 12, ಕಾಸರಗೋಡು – 476

Saturday, October 3rd, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶುಕ್ರವಾರ ಹೊಸದಾಗಿ 322 ಮಂದಿಗೆ ಕೊರೋನ ಸೋಂಕು ತಗುಲಿದೆ. ಸೋಂಕಿನಿಂದಾಗಿ ಮತ್ತೆ 12 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 23,761ಕ್ಕೆ ಏರಿಕೆ ಕಂಡಿದೆ. ಮೃತಪಟ್ಟವರ ಸಂಖ್ಯೆ ಇದೀಗ 557ಕ್ಕೆ ತಲುಪಿದ್ದು ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 277 ಮಂದಿಗೆ ಕೊರೋನ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರಾದವರ ಸಂಖ್ಯೆ 17,365ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 5,839 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 1,66,456 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 1,42,695 ಮಂದಿಯ […]