ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಲು ಎಬಿವಿಪಿಯಿಂದ ಸಹಿಸಂಗ್ರಹ ಅಭಿಯಾನ

Tuesday, September 15th, 2020
Abvp

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯ ವತಿಯಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಸಹಿಸಂಗ್ರಹ ಅಭಿಯಾನವನ್ನು ಮಂಗಳವಾರ ನಗರದ ಪುರಭವನದ ಎದುರು ಹಮ್ಮಿಕೊಳ್ಳಲಾಗಿತ್ತು, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀ ಡಾ. ರಾಜಶೇಖರ್ ಹೆಬ್ಬಾರ್ ರವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ನಾಗರಿಕರು ಸ್ವತಃ ಸಹಿ ಮಾಡುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸಿದರು. ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣನವರ್, ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ, […]

ಕೊರೋನ ಸೋಂಕು : ದಕ್ಷಿಣ ಕನ್ನಡ 316, ಐವರು ಮೃತ, ಕಾಸರಗೋಡು 172

Tuesday, September 15th, 2020
DK-corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 316 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.  ಮಂಗಳವಾರ ಮತ್ತೆ ಐವರು ಕೊರೋನ ಸೋಂಕಿಗೆ ಮೃತಪಟ್ಟಿದ್ದಾರೆ. ಮೃತರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ತಲಾ ಓರ್ವರು ಇದ್ದಾರೆ. ಮೃತರು ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜೊತೆಗೆ ಕೊರೋನ ಸೋಂಕೂ ತಗುಲಿತ್ತು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. 316 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕು ಹಿಡಿತಕ್ಕೆ ಬಾರದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ […]

ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ನೇಮಕ

Tuesday, September 15th, 2020
Rashmi

ಬಂಟ್ವಾಳ :  ಪ್ರಸಿದ್ಧ ಕಾರಣಿಕ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಒಂದುವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಆಗಿದ್ದು ಕೊಂಡು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ರಶ್ಮಿ ಪಾತ್ರರಾಗಿದ್ದಾರೆ. ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿ ಆದೇಶ ನೀಡಿದೆ. ನೆರೆ ಬಂದ ಸಂದರ್ಭ ರಾತ್ರೋ ರಾತ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, […]

ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 52 ಕೋಣಗಳ ವಶ

Tuesday, September 15th, 2020
baffalo

ಉಡುಪಿ  : ಹೊರ ಜಿಲ್ಲೆಗಳಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಮಂಗಳವಾರ  ಬೆಳಗ್ಗೆ ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ  ಒಟ್ಟು 52 ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಹರಿಹರ ತಾಲೂಕಿನ ಮೆಹಬೂಬ್(27), ಬೆಳಗಾವಿ ಬೈಲಹೊಂಗಲ ತಾಲೂಕಿನ ಬಾಪು ಸಾಹೇಬ್(46) ಮತ್ತು ಆಸಿಫ್(23) ಹಾಗೂ ದಾವಣಗೆರೆ ಹೊಸ ಚಿಕ್ಕನಹಳ್ಳಿ ಹೊಸ ಬಡಾವಣೆಯ ಇಮ್ರಾನ್(29) ಬಂಧಿತ ಆರೋಪಿಗಳು. ಎರಡು ಈಚರ್ ಲಾರಿಗಳಲ್ಲಿ ವಾಹನಗಳಲ್ಲಿ ಕ್ರಮವಾಗಿ 24 ಮತ್ತು 28 ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ […]

ಸರಕಾರಿ ಹೊದಿಕೆಗಳನ್ನು ಕದ್ದೊಯ್ದು ಮಹಿಳೆಯೊಂದಿಗೆ ಅಕ್ರಮ ಸಂಬಂಧ, ಪತ್ನಿಯಿಂದ ದೂರು

Tuesday, September 15th, 2020
Koragappa poojary

ಮಂಗಳೂರು: ಸರಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಪತಿಯ ಮೇಲೆ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ನಡೆದಿದೆ . ಪಡು ಪಣಂಬೂರು ಗ್ರಾಮದ ನಿವಾಸಿ ಸರಕಾರಿ ಹಾಸ್ಟೆಲ್ನಲ್ಲಿ ಅಡುಗೆ ಕೆಲಸದಲ್ಲಿರುವ ಕೊರಗಪ್ಪ ಪೂಜಾರಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿ ತೇಜಾಕ್ಷಿ ಎಂಬುವರು ದೂರು ದಾಖಲಿಸಿದ್ದಾರೆ. ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ, ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡಿದ್ದಾನೆ. ಕೆಲವನ್ನು ಮಾರಾಟ ಮಾಡಿದ್ದು, ಮನೆಗೂ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಆತನ‌ ವಿರುದ್ಧ […]

ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

Monday, September 14th, 2020
Ramanatha Rai

ಬಂಟ್ವಾಳ:  ಮಾಜಿ ಸಚಿವ ಬಿ.ರಮಾನಾಥ ರೈ ಅವರು ತನ್ನ 68 ನೇ ಹುಟ್ಟು ಹಬ್ಬವನ್ನು ಮೇರಮಜಲುವಿನ ಶ್ರೀ ಮಾತಾ ಲಕ್ಷ್ಮಣಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ಕೇಕ್ ಕಟ್  ಮಾಡಿ  ಆಶ್ರಮವಾಸಿಗಳೊಂದಿಗೆ ಸಹಭೋಜನವನ್ನು ಮಾಡುವುದರೊಂದಿಗೆ ಆಚರಿಸಿದರು. ಜೊತೆಗೆ ಬಂಟ್ವಾಳ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಕಾರ್ಯಕರ್ತರು ಅಲ್ಲಲ್ಲಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ಮಾತನಾಡಿದ ರೈ, ತಮ್ಮ ಹುಟ್ಟುಹಬ್ಬ ಸಂದರ್ಭ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಕಾರ್ಯಕರ್ತರು ನನ್ನ ಆಶಯವನ್ನು ಅನುಷ್ಠಾನಕ್ಕೆ […]

ಸೋಮವಾರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೇವೆಗಳು ಆರಂಭ

Sunday, September 13th, 2020
sarpasamskara

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು  ಸೋಮವಾರದಿಂದ ಆರಂಭವಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಷರತ್ತುಗಳನ್ನು ಪೂಜಾ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಅನ್ವಯ ಮಾಡಲಾಗುತ್ತದೆ ಎಂದು ದೇವಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ. ದೇಗುಲವು ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30ರವರೆಗೆ ಮತ್ತು 3.30 ರಿಂದ ರಾತ್ರಿ 8ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಪ್ರತಿದಿನ ಮೂವತ್ತು ಭಕ್ತರಿಗೆ ಮಾತ್ರ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ನಡೆಸಲು ಅವಕಾಶ ನೀಡಲಾಗುತ್ತಿದೆ. ಸೇವಾರ್ಥಿಗಳಿಗೆ ಮಾತ್ರ ಭೋಜನ […]

ಕೋವಿಡ್ ಹೆಸರಿನಲ್ಲಿ ರಾಜ್ಯ ಸರಕಾರ ನಡೆಸಿರುವ ಭ್ರಷ್ಟಾಚಾರ ತಿಳಿಸಲು ಕಾಂಗ್ರೆಸ್ನಿಂದ ಲೆಕ್ಕಕೊಡಿ ಅಭಿಯಾನ

Sunday, September 13th, 2020
saleem

ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನದೊಂದಿಗೆ ರಾಜ್ಯ ಸರಕಾರ ಕೋವಿಡ್ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ವನ್ನು ಜನರಿಗೆ ತಿಳಿಸುವ ಅಭಿಯಾನ ವನ್ನು ಹಮ್ಮಿಕೊಂಡಿದೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. ರಾಜ್ಯಕ್ಕೆ ಜಿ.ಎಸ್ ಟಿ ಮೂಲಕ ಬರಬೇಕಾದ ಪಾಲು ಬಂದಿಲ್ಲ, ನೆರೆ ಪರಿಹಾರ ವಾಗಿ ಕಳೆದ ವರ್ಷ ಬರಬೇಕಾದ 50 ಸಾವಿರ ಕೋಟಿ ರೂ ನಷ್ಟ ಆಗಿತ್ತು. ಕೇಂದ್ರ ಸರಕಾರದಿಂದ ಕೇವಲ 1800 ಕೋಟಿ ನೆರವು ಮಾತ್ರ ಬಂದಿದೆ. ಈ ಬಾರಿ 10 ಸಾವಿರ […]

ಸ್ಕೂಟಿ – ಲಾರಿ ಅಪಘಾತ ಸ್ಕೂಟಿ ಚಾಲಕ ಮೃತ್ಯು

Sunday, September 13th, 2020
scooty accident

ಬೆಳ್ತಂಗಡಿ : ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಮೃತ ಸ್ಕೂಟಿ ಚಾಲಕನನ್ನು ಗರ್ಡಾಡಿ ನಿವಾಸಿ ಗಿರೀಶ್‌ ಮೂಲ್ಯ ಎಂದು ಗುರುತಿಸಲಾಗಿದೆ. ಲಾರಿಯು ಅಳದಂಗಡಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಸ್ಕೂಟಿ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೈಕಾಡಿ ಜನಾರ್ದನ ಆಚಾರ್ ನಿಧನ

Sunday, September 13th, 2020
Baikady Janardhana-Achar

ಮಂಗಳೂರು : ಆದರ್ಶ ಶಿಕ್ಷಕ, ಶಿಕ್ಷಣ ತಜ್ಞ ಬೈಕಾಡಿ ಜನಾರ್ದನ ಆಚಾರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು. ಅವರು ಕೆನರಾ ಹೈ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನರಾಯಣ ಪಟ್ಟಣದ ಮಲನಾಡು ಪಿಯು ಕಾಲೇಜು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ವಿಶ್ವ ಹಿಂದೂ ಪರಿಷತ್‌ನಲ್ಲೂ ಗುರುತಿಸಿಕೊಂಡಿದ್ದರು. ಎಸ್‌ಕೆಜಿಐ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿದ್ದ ಅವರು ಆಗಸ್ಟ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಶಾಲಾ ದಿನಗಳಿಂದಲೇ ಅನೇಕರಿಗೆ […]