ಜ್ಞಾನ ಗಂಗೆ ಮತ್ತು ಜ್ಞಾನ ತುಂಗೆ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ

Wednesday, August 1st, 2018
moral-books

ಉಜಿರೆ: ಜ್ಞಾನದ ಮೂಲ ಮನಸ್ಸಿನ ಅಂತರಾಳದಲ್ಲಿ ಸುಪ್ತವಾಗಿರುತ್ತದೆ. ಏಕಾಗ್ರತೆಯಿಂದ ಆಳವಾದ ಚಿಂತನ -ಮಂಥನದಿಂದ ಪರಿಶುದ್ಧ ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ-ಸಾಮರ್ಥ್ಯ ನಮ್ಮಲ್ಲಿ ಮೂಡಿ ಬರುತ್ತದೆ. ಯಾವುದೇ ಕೆಲಸ ಕಷ್ಟವಲ್ಲ, ಇಷ್ಟವಾಗಬೇಕು ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಹೇಳಿದರು. ಅವರು ಧರ್ಮಸ್ಥಳದಲ್ಲಿ ಮಂಗಳವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ಪ್ರಕಟಿಸಲಾದ ಜ್ಞಾನ ಗಂಗೆ ಮತ್ತು ಜ್ಞಾನ ತುಂಗೆ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು […]

ವಿದ್ಯಾರ್ಥಿಗಳಿಂದ ಸೆಲ್ಫಿ ವಿತ್ ಡ್ರಗ್ಸ್ ಫ್ರೀ ಕ್ಯಾಂಪಸ್

Wednesday, August 1st, 2018
selfie

ಮಂಗಳೂರು  : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಳೆದ 69 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲಿ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂದಿನ ವಿದ್ಯಾರ್ಥಿ- ಇಂದಿನ ಪ್ರಜೆಯೆಂಬ ಕಲ್ಪನೆಯೊಂದಿಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ನಾಯಕತ್ವವನ್ನು ನೀಡುತ್ತಿದೆ.ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳ ವಿರುದ್ಧ ನಿರಂತರವಾದ ಯಶಸ್ವಿ ಹೋರಾಟಗಳನ ಕಟ್ಟಿ ವಿದ್ಯಾರ್ಥಿಗಳ ನಡುವೇಜಾಗೃತಿ ಮೂಡಿಸುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜುಲೈ 30 […]

ಹುಬ್ಬಳ್ಳಿ : ಸಿಎಂ ಕುಮಾರಸ್ವಾಮಿ ಬಾಡಿಗೆ ಮನೆ ಮಾರಾಟಕ್ಕೆ!

Wednesday, August 1st, 2018
HD kumaraswamy

ಹುಬ್ಬಳ್ಳಿ : ಉತ್ತರ ಕರ್ನಾಟಕ‌ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೋಸ್ಕರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಮನೆ ಮಾಡಿ ಅದ್ಧೂರಿ ಗೃಹ ಪ್ರವೇಶ ಮಾಡಿದ್ರು. ಆದರೆ ಈಗ ಅದೇ ಮನೆಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. ಇದು ಕುಮಾರಸ್ವಾಮಿ ಅವರನ್ನು ಮುಜುಗರಕ್ಕೀಡು ಮಾಡಿದೆ. ಸಿಎಂ ಆದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕುತ್ತಲೇ ಇರುವ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಸಾಲ ಮನ್ನಾ ವಿಚಾರವಾಗಿ ಮುಜುಗರಕ್ಕೀಡಾಗಿದ್ದದರು. ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ […]

ಸಿಟಿ ಬಸ್ ಗಳಿಗೆ ಸಿಸಿ ಕೆಮರಾ..ಪ್ರಯಾಣಿಕರ ಒತ್ತಾಯ!

Tuesday, July 31st, 2018
city-bus

ಮಂಗಳೂರು: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಿಟಿ ಬಸ್‌ ಮಾಲಕರ ಸಂಘ ಈಗ ಚಿಂತಿಸಿದೆ. ಖಾಸಗಿ ಸಿಟಿ ಬಸ್‌ಗಳಲ್ಲಿ ನಡೆಯುವ ಅಕ್ರಮ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಬಸ್‌ಗಳಲ್ಲಿ ಸಿಸಿ ಕೆಮರಾ ಕಣ್ಗಾವಲನ್ನಿಡಬೇಕು ಎಂದು ಪ್ರಯಾಣಿಕರ […]

ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮನ..!

Tuesday, July 31st, 2018
dakshina-kannada

ಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಮಳೆರಾಯ ಕೊಂಚ ಬಿಡುವು ಪಡೆದಿದ್ದಾನೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಕೃಷಿಕರು ಕೈಚೆಲ್ಲಿ ಕೂತಿದ್ದಾರೆ. ಆದರೆ ಈ ನಡುವೆ ದೂರದ ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. 125 ಕೃಷಿ ಕಾರ್ಮಿಕರ ಈ ತಂಡ ಮಂಗಳೂರು ತಾಲೂಕಿನ ಬಜಪೆ ಪರಸರದಲ್ಲಿ ಬೀಡು ಬಿಟ್ಟಿದ್ದು, […]

ಮಕ್ಕಳ ಸಂತೆ : ಬಿಜಿಎಸ್ ಆಂಗ್ಲ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ

Tuesday, July 31st, 2018
bgs

ಚಿಕ್ಕಬಳ್ಳಾಪುರ : ಇಲ್ಲಿಗೆ ಸಮೀಪದ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ ವಿಶಿಷ್ಟ ಕಾರ್ಯಕ್ರಮ ಭಾನುವಾರ ಶಾಲಾ ಮೈದಾನದಲ್ಲಿ ಜರುಗಿತು. ಸಂತೆಯಲ್ಲಿ 1 ರಿಂದ 4ನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಬಗೆಬಗೆಯ ತರಕಾರಿ, ಹಣ್ಣುಗಳು, ಸೊಪ್ಪು, ಮಜ್ಜಿಗೆ, ಬಿಸ್ಕೆಟ್, ಬಾಳೆಹಣ್ಣು, ದ್ರಾಕ್ಷಿ, ಬಜ್ಜಿ, ಬೊಂಡ, ಕಡಲೆಕಾಯಿ, ಹೂವು ಇತ್ಯಾದಿ ಆಹಾರ ಪದಾರ್ಥಗಳನ್ನು ತಂದು ಸಂತೆಯಲ್ಲಿ ಜೋಡಿಸಿದಂತೆ ಜೋಡಿಸಿಕೊಂಡು ಮಾರುಕಟ್ಟೆಯನ್ನು ನಾಚಿಸುವಂತೆ ಮಕ್ಕಳು ಪೈಪೋಟಿಯಿಂದ ಪೋಷಕ ಗ್ರಾಹಕರನ್ನು ತಮ್ಮತ್ತ ಸೆಳೆದರು. ಮಕ್ಕಳು ಖುಷಿ ಖುಷಿಯಿಂದ […]

ಬಂಟರ ಸಂಘದ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆ

Tuesday, July 31st, 2018
upendra

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ 5323 ಪಡೆದು ಭಾರಿ ಮತಗಳಿಂದ ಜಯಗಳಿಸಿದ್ದಾರೆ. ಉಪೇಂದ್ರ ಶೆಟ್ಟಿ ಅವರು ಬೆಂಗಳೂರಿನ ಯೂನಿರ್ವಸೆಲ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ನಿರ್ದೇಶರಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಭೋಜರಾಜ ಶೆಟ್ಟಿ, ಅಮೃತಕ್ಕ ಎಸ್. ಶೆಟ್ಟಿ ಕಾರ್ಯದರ್ಶಿಯಾಗಿ ಮಧುಕರ್ ಎಂ. ಶೆಟ್ಟಿ, ಜಂಟಿ ಕಾರ್ಯದರ್ಶಿ ಸೌಮ್ಯ ಪ್ರಿಯ, ಖಜಾಂಚಿಯಾಗಿ ದೀಪಕ್ ಶೆಟ್ಟಿ ಅವರುಗಳು ಆಯ್ಕೆಯಾಗಿದ್ದಾರೆ ಕಾರ್ಯಕಾರಿ ಸಮಿತಿಗೆ ಅಶೋಕ್ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, […]

ಸೋಮೇಶ್ವರ ಬೀಚ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರ ರಕ್ಷಣೆ..!

Tuesday, July 31st, 2018
someshwra-beach

ಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರನ್ನು ಜೀವರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಸೋಮೇಶ್ವರ ಬೀಚಿಗೆ ಬಂದ 70 ವರ್ಷದ ವೃದ್ಧೆ ನೇರ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನವನ್ನು ಗಮನಿಸಿದ ಸಮುದ್ರ ತೀರದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. ವೃದ್ಧೆಯನ್ನು ಕೌನ್ಸೆಲಿಂಗ್ ಮಾಡಿದ ಬಳಿಕ ಆಕೆಯನ್ನು ಕುಟುಂಬಿಕರಿಗೆ ಜೀವರಕ್ಷಕ ದಳದ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.

ಪ್ರೀತಿ ನಿರಾಕರಿಸದಕ್ಕೆ ಯುವತಿಯ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನ..!

Tuesday, July 31st, 2018
attempt

ಮಂಗಳೂರು: ಯುವತಿಯು ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಯುವಕನೊಬ್ಬ ಆಕೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ತನ್ನ ಪಿಕಪ್ ವಾಹನ ಡಿಕ್ಕಿ ಹೊಡೆಸಿ, ಯುವತಿ ಮತ್ತು ಆಕೆಯ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲುವಿನಲ್ಲಿ‌ ನಡೆದಿದೆ. ಆರೋಪಿ ಥಾಮಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರು ಆಟೋ ರಿಕ್ಷಾದಲ್ಲಿ ಅಣೆಯೂರುನಿಂದ ಗಂಡಿಬಾಗಿಲುವರೆಗೆ ತೆರಳುವಾಗ ಈ ಘಟನೆ ನಡೆದಿದೆ. ಆರೋಪಿ ಥಾಮಸ್ ತನ್ನ ಪಿಕಪ್ ವಾಹನದಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದ. ರಿಕ್ಷಾ ಮಗುಚಿ ಬಿದ್ದಾಗ […]

ಪರಂಗಿಪೇಟೆಯಲ್ಲಿ ನೈತಿಕ ಪೊಲೀಸ್ ಗಿರಿ..ನಾಲ್ವರು ಆರೋಪಿಗಳು ಸೆರೆ!

Tuesday, July 31st, 2018
arrested

ಮಂಗಳೂರು: ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಂಗಿಪೇಟೆ ಮಸೀದಿ ಬಳಿಯ ನಿವಾಸಿ, ಆಟೋಚಾಲಕ ಉಮರ್ ಫಾರುಕ್ (36), ಅಮ್ಮೆಮಾರ್ ನಿವಾಸಿಗಳಾದ ಅರ್ಫಾತ್ (28), ಮೊಹಮ್ಮದ್ ಅಫ್ರಿದ್ (21), ಆಟೊ ಚಾಲಕ ಮೊಹಮ್ಮದ್ ಇಕ್ಬಾಲ್ (32) ಬಂಧಿತ ಆರೋಪಿಗಳು. ಆರೋಪಿಗಳು ಜುಲೈ 29ರಂದು ಫರಂಗಿಪೇಟೆಯಲ್ಲಿ ಉಡುಪಿ ಕೋಟ ಮೂಲದ ಸುರೇಶ್ ಎಂಬವರ ಮೇಲೆ ಹಲ್ಲೆನಡೆಸಿದ್ದರು. ಪ್ರಕರಣದ ಕುರಿತಂತೆ ಬಂಟ್ವಾಳ […]