ಬಜಗೋಳಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ದಲ್ಲಿ ಮಿಂಚಿದ ಮಕ್ಕಿಮನೆ ಕಲಾವೃಂದ

Monday, November 27th, 2023
makkimane

ಬಜಗೋಳಿ : ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಅಪ್ಪಾಯಿ ಬಸದಿ ಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. ಶ್ರೀಪ್ರಮಯಿ ಜೈನ್ ಮೂಡುಬಿದಿರೆ ಹಾಗೂ ಸೌಜನ್ಯ ಜೈನ್ ಮೂಡುಬಿದಿರೆ ನಿರೂಪಿಸಿದರು. ಈ ಸಂದರ್ಭದಲ್ಲಿ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಶ್ವೇತಾ ಜೈನ್ ಮೂಡುಬಿದಿರೆ,,ಭಗವಾನ್ ಜೈನ್,ಅಪ್ಪಾಯಿಗುತ್ತು ಪ್ರಥ್ವಿ ರಾಜ್ ಹೆಗ್ಡೆ,ಭರತ್ ರಾಜ್ ಜೈನ್ ಮುಡಾರು, ಸನತ್ ಕುಮಾರ್ ಜೈನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಸಿಸಿಬಿ ಪೊಲೀಸರ ಕಾರ್ಯಾಚರಣೆ ಯಲ್ಲಿ ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸ್ ವಶ

Saturday, November 25th, 2023
Ambergris

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ ಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳಿಂದ ಒಟ್ಟು 1,62,80,000/- ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ನವೆಂಬರ್ 25 ರಂದು ರಂದು ಮಂಗಳೂರು ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ […]

ಚಂದ್ರಗಿರಿ ನದಿಗೆ ಹಾರಿದ ವ್ಯಕ್ತಿಯ ಮೃತದೇಹ ಪತ್ತೆ

Saturday, November 25th, 2023
Haisainar

ಕಾಸರಗೋಡು : ಚಂದ್ರಗಿರಿ ಸೇತುವೆಯಿಂದ ನದಿಗೆ ಹಾರಿದ್ದ ವ್ಯಾಪಾರಿಯೋರ್ವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಉಳಿಯತ್ತಡ್ಕ ಶಿರಿಬಾಗಿಲಿನ ಹಸೈನಾರ್ (46) ಮೃತಪಟ್ಟವರು. ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ನನ್ನ ಜೀವನ ಅಂತ್ಯಗೊಳಿಸುವುದಾಗಿ ಶುಕ್ರವಾರ ಮುಂಜಾನೆ ಸಂದೇಶ ಕಳುಹಿಸಿದ್ದ ಹಸೈನಾರ್ ಬಳಿಕ ಕಾರಿನಲ್ಲಿ ಬಂದು ಚಂದ್ರಗಿರಿ ಸೇತುವೆಯಲ್ಲಿ ನಿಲ್ಲಿಸಿ ನಂತರ ನದಿಗೆ ಹಾರಿದ್ದರು. ನದಿಗೆ ಹಾರುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿರೋರ್ವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಪ್ಪಲಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು , ನಾಗರಿಕರು […]

ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಮತ್ತು ಉಡುಪಿ ಎಸ್ಪಿ ನಡುವೆ ವಾಕ್ಸಮರ

Friday, November 24th, 2023
Udupi-KDP

ಉಡುಪಿ : ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ ನಡುವೆ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಜಟಾಪಟಿ ನಡೆದಿದೆ. ಲಾರಿ ಮುಷ್ಕರ ಮಾಡಿದ್ದ ವೇಳೆ ಪೊಲೀಸ್ ವರಿಷ್ಠಾಧಿಕಾರಿ ನೋಟಿಸ್ ನೀಡಿದ್ದು ಈ ಬಗ್ಗೆ ವಾಗ್ದಾಳಿ ನಡೇಸಿರುವ ಸುನೀಲ್ ಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ. ನಾವು ಮನೆಯಲ್ಲಿ […]

ಪೆಟ್ರೋಲ್ ಪಂಪ್ ನಲ್ಲಿ ಮಲಗಿದ್ದ ವ್ಯಕ್ತಿಗಳಿಬ್ಬರ ಮೇಲೆ ಹರಿದ ಟಿಪ್ಪರ್, ಓರ್ವ ಸಾವು

Friday, November 24th, 2023
hebri-petrol-bunk

ಉಡುಪಿ: ಹೆಬ್ರಿ ಸಮೀಪದ ಪೆಟ್ರೋಲ್ ಪಂಪ್ ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ. ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ […]

ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಯೋಧರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ

Friday, November 24th, 2023
ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಯೋಧರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ

ಮಂಗಳೂರು : ರಾಷ್ಟ್ರಭಕ್ತ ನಾಗರಿಕರು ಮಂಗಳೂರು ಇವರ ವತಿಯಿಂದ ರಜೌರಿಯ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಸಮರಕಲಿಗಳಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್, ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ಟ್ ಹಾಗೂ ಪ್ಯಾರಾಟ್ರೂಪರ್ ಸಚಿನ್ ಲಾರ್ ಇವರಿಗೆ ಇಂದು ಸಂಜೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕ್ಯಾಪ್ಟನ್ ಬೃಜೇಶ್ ಚೌಟ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಕೆ ಪಿ ಟಿ […]

ಅಜ್ಜನ ಮರಣ ಪತ್ರಕ್ಕೆ ಲಂಚ ಪಡೆದ ಗ್ರಾಮ ಲೆಕ್ಕಿಗನನ್ನು ಬಂಧಿಸಿದ ಪೊಲೀಸರು

Friday, November 24th, 2023
Vijith

ಮಂಗಳೂರು : ಅಜ್ಜನ ಮರಣ ಪತ್ರವನ್ನು ಕೇಳಲು ಬಂದ ವ್ಯಕ್ತಿಗೆ ಸುಮಾರು 13 ಸಾವಿರ ರೂಪಾಯಿಗಳನ್ನು ಲಂಚ ಕೇಳಿದ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಚೇಳ್ಯಾರು ಗ್ರಾಮದ ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿದ್ದ ಜಾಗದಲ್ಲಿ 5 ಸೆಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಹಾಗೂ ಸಂತತಿ ನಕ್ಷೆ ಮಾಡಲು ಮುಂದಾಗಿದ್ದು ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು. ವಿಜಿತ್ ನ. 20 […]

ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

Thursday, November 23rd, 2023
ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

ಬಂಟ್ವಾಳ: ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಬಂಟ್ವಾಳ ಅರಣ್ಯ ಇಲಾಖೆಯವರು ಆರೋಪಿಗಳ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕು ಸಜಿಪ ಪಡು ಗ್ರಾಮದ ಕೋಟೆಕನಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ದಿಮ್ಮಿಗಳನ್ನು […]

ಉಡುಪಿ ಉದ್ಯಾವರ ಫಿಶ್ ಕಟಿಂಗ್ ಯೂನಿಟ್ ನಲ್ಲಿ ದೆವ್ವದ ಕಾಟ, ಕೆಲಸ ಬಿಟ್ಟು ಓಡಿ ಹೋದ ಕಾರ್ಮಿಕರು

Thursday, November 23rd, 2023
ssf-fish

ಉಡುಪಿ: ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ ಅಸ್ಸಾಂ ಯುವಕನೊಬ್ಬನಿಗೆ ದೆವ್ವದ ಆವೇಶ ಆಗಿ ಜೊತೆಯಲ್ಲಿದ್ದ ಕಾರ್ಮಿಕರ ತಂಡ ಓಡಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ಈ ಘಟನೆ ನಡೆದಿದ್ದು ಕೊಠಡಿಯಲ್ಲಿದ್ದ ಎಲ್ಲಾ ಕಾರ್ಮಿಕರು ದೆವ್ವ ಇದೆಯೆಂದು ಆತಂಕಪಟ್ಟಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಸ್ಥಳೀಯರು ಕೊಡುವ ಮಾಹಿತಿ ಪ್ರಕಾರ, ಫಿಶ್ ಕಟ್ಟಿಂಗ್ ಯೂನಿಟ್ […]

ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು, ಡಿ.14ರ ಮೊದಲು ಅಪ್ಡೇಟ್ ಮಾಡವುದು ಕಡ್ಡಾಯ

Thursday, November 23rd, 2023
adhar-card

ಮಂಗಳೂರು: ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಇದೀಗ ಡಿ.14ರ ಮೊದಲು ಅಪ್ಡೇಟ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. 2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಸಂದೇಶ ರವಾನೆಯಾಗುತ್ತಿದೆ. ಅವರು ಸಮೀಪದ ಆಧಾರ ಕೇಂದ್ರದಲ್ಲಿ ಹೋಗಿ ತಮ್ಮ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಬೇಕಾಗಿದೆ ಆರಂಭದಲ್ಲಿ ಆಧಾರ್ ಮಾಡಿಸುವಾಗ ಇದ್ದ ವಿಳಾಸ ಆ ಬಳಿಕ ಬದಲಾವಣೆಯಾಗಿರುತ್ತದೆ. ಕೆಲವರ ವಿಳಾಸ ಸರಿಯಾಗಿರುವುದಿಲ್ಲ. ಹೀಗಾಗಿ ಅಪ್ಡೇಟ್ […]