ಲಾಕ್ ಡೌನ್ ಬಳಿಕ ನಷ್ಟ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಸ್ಸು ಮಾಲಕ

Monday, January 24th, 2022
Prakash Travels

ಶಿವಮೊಗ್ಗ : ಕಳೆದ ಶುಕ್ರವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ (54) ಅವರ ಮೃತದೇಹ ಪತ್ತೆಯಾಗಿದೆ. ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪದ ಪಟಗುಪ್ಪ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸಾಗರ ತಾಲೂಕಿನ ಪ್ರಕಾಶ್ ಟ್ರಾವೆಲ್ಸ್ ಮಾಲಕರಾದ ಪ್ರಕಾಶ್ ಅವರು ಶುಕ್ರವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ಕುಟುಂಬಸ್ಥರು ದೂರು ನೀಡಿದ್ದರು. ಶನಿವಾರ ಸೇತುವೆ ಮೇಲೆ ಅವರ ಚಪ್ಪಲಿ ಪತ್ತೆಯಾಗಿತ್ತು. ಪ್ರಕಾಶ್ ಗಾಗಿ ನಿರಂತರವಾಗಿ ಅಗ್ನಿಶಾಮಕ ಸಿಬ್ಬಂದಿ […]

ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು : ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ

Monday, January 24th, 2022
Kalahastendra

ಮಂಗಳೂರು: ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು, ಸರ್ವವ್ಯಾಪಿಯಾದ ದೇವರ ಸ್ಮರಣೆಯನ್ನು ಕೇವಲ ಕಷ್ಟ ಕಾಲದಲ್ಲಿ ಮಾತ್ರ ಮಾಡದೆ ನಿರಂತರವಾಗಿ ಸದಾ ಕಾಲ ಸ್ಮರಿಸಿ ದೇವರ ಕ್ರಪೆಗೆ ಪಾತ್ರರಾಗಬೇಕು ಶ್ರೀ ಕಾಳಿಕಾಂಬಾ ಅಮ್ಮನವರಿಗೆ ಸರ್ವಸ್ವವನ್ನೂ ಅರ್ಪಿಸಿ ಕಾರ್ಯಕರ್ತರು ದೇವಸ್ಥಾನ ಜೀರ್ಣೋದ್ದಾರ ಕಾರ್ಯದಲ್ಲಿ ಶ್ರಮಿಸಿದ್ದಾರೆ ಧನ ಸಹಾಯವನ್ನೂ ಮಾಡಿದ್ದಾರೆ ಅವರೆಲ್ಲರಿಗೂ ಒಳಿತಾಗಲಿ ಎಂದು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ (23.01.2022) ದಿನದ ಧಾರ್ಮಿಕ […]

ರಾಷ್ಟ್ರ ಧ್ವಜದ ಅಪಮಾನವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ

Saturday, January 22nd, 2022
HJJ

ಮಂಗಳೂರು : ಗಣರಾಜ್ಯೋತ್ಸವದ ಸಮಯದಲ್ಲಿ ರಾಷ್ಟ್ರ ಧ್ವಜದ ಮೇಲಾಗುವ ಅಪಮಾನವನ್ನು ತಡೆಯಲು ಮತ್ತು ಉಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯಚರಣೆ ಮಾಡಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಧ್ವಜದ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೆಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಚುನಾವಣಾ ತಹಸೀಲ್ದಾರ್ ಕೆ.ಯಸ್ ದಯಾನಂದ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಕಮಿಷನರ್ ಕಚೇರಿಯ ಪೊಲೀಸ್ ಸಿಬಂಧಿ ಆದ ಶ್ರೀ ವರುಣ ಇವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ […]

ಕಾಂಗ್ರೆಸ್‌ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ : ಹರಿಕೃಷ್ಣ ಬಂಟ್ವಾಳ್

Saturday, January 22nd, 2022
Harikrishna Bantwal

ಮಂಗಳೂರು :  ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತಾ ಬಂದಿರುವ ಕಾರಣ ಇದೀಗ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ. ಆದರೆ ಆ ಕಾರ್ಯಕ್ಕೆ ನಾರಾಯಣ ಗುರುಗಳೇ ಬೆಂಕಿ ಹಾಕುತ್ತಾರೆ ಎಂದು ಬಿಜೆಪಿ ನಾಯಕ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿಲ್ಲ ಎಂಬ ವಿವಾದ ಸೃಷ್ಟಿ ಕಮುನಿಷ್ಟ್ ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು […]

ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ತಾಯಿ ಮಗು ಸಾವು

Saturday, January 22nd, 2022
Savitha

ಮಂಗಳೂರು : ಹೆರಿಗೆಗೆಂದು ಖಾಸಗಿ ಆಸ್ಪತ್ರೆಯೊಂದರಲ್ಲಿ  ದಾಖಲುಗೊಂಡಿದ್ದ  ತಾಯಿ ಮತ್ತು ಮಗು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಟ್ಲ ಮೂಲದ ಸವಿತಾ (33) ಹೆರಿಗೆಗಾಗಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ಮಗು ಬೆಳಗ್ಗೆ ಮೃತಪಟ್ಟಿದೆ. ಸಂಜೆ ವೇಳೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. […]

ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು- ಕಲ್ಲಡ್ಕ ಪ್ರಭಾಕರ ಭಟ್

Saturday, January 22nd, 2022
Kalikamba

ಮಂಗಳೂರು : ರಾಷ್ಟ್ರ ಮತ್ತು ಧರ್ಮ ವೈಶಿಷ್ಟ್ಯ ತೆಯೇ ಕಳೆದುಹೋಗಿದೆ. ನಾವು ಸೃಷ್ಟಿಯನ್ನು ಪೂಜಿಸುವವರು, ನಮಗೆ ಸಂಸ್ಕಾರ ನೀಡುವವಳೇ ತಾಯಿ, ಮಕ್ಕಳಲ್ಲೂ ತಾಯಿಯನ್ನು ಕಾಣುವ ಸಮಾಜ ನಮ್ಮದು, ಹಿಂದು ಸಮಾಜದ ಮೇಲೆ ಸಾಕಷ್ಟು ಆಕ್ರಮಣ ನಡೆದಿದೆ. ನಮ್ಮಮಕ್ಕಳಿಗೆ ನಮ್ಮತನವನ್ನು ತಿಳಿಸುವ ಕೆಲಸ ಆಗಬೇಕು, ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು, ಹಣದ ಹಿಂದೆ ಗುಣ ಬರುವುದಿಲ್ಲ, ಗುಣದ ಹಿಂದೆ ಹಣ ತನ್ನಷ್ಟಕ್ಕೆ ಬರುತ್ತದೆ. ಧರ್ಮಪ್ರಧಾನ ರಾಷ್ಟ್ರ ನಮ್ಮದಾಗಬೇಕು, ಹಿಂದು […]

ಹಣ ಡಬಲ್ ಮಾಡಿ ಕೊಡುವ ಜಾಲಕ್ಕೆ ಮೋಸ ಹೋಗಿ10 ಸಾವಿರ ಕಳಕೊಂಡ ಯುವಕ

Friday, January 21st, 2022
stella

ಮಂಗಳೂರು : ಟಿಕ್ ಟಾಕ್ ಸ್ಟಾರ್ ಒಬ್ಬಳು ಹಣ ಡಬಲ್ ಮಾಡಿ ಕೊಡುವ ಭರವಸೆ ಕೊಡುವುದಾಗಿ ಮಾಡಿದ ವಿಡಿಯೋವನ್ನು ನೋಡಿ ಹಣ ಹೂಡಿಕೆ ಮಾಡಿದ ಯುವಕ ಮೋಸ ಹೋಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ಯುವಕ ದೂರು ನೀಡಿದ್ದಾರೆ. ಸೋನು ಶ್ರೀನಿವಾಸ ಗೌಡ ಎಂಬ ಟಿಕ್ ಟಾಕ್ ಸ್ಟಾರ್ ಸೋಶಿಯಲ್ ಮೀಡಿಯಾ ಪ್ರೊಮೋಷನ್‌ನಲ್ಲಿ ಟ್ರೇಡರ್ ಸ್ಟೆಲ್ಲಾ ಕುರಿತು ವೀಡಿಯೋ ಮಾಡಿದ್ದು, ಇದನ್ನು ನೋಡಿದ ಮಂಗಳೂರಿನ ಯುವಕನೊಬ್ಬ ಹಣ ಹೂಡಿಕೆ ಮಾಡಿ ಇದೀಗ ಮೋಸ ಹೋಗಿದ್ದಾನೆ. ತಾನು ಮೋಸ […]

ಕೊರೋನ ಭೀತಿಯಿಂದ ಮೈಮೇಲೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

Friday, January 21st, 2022
flame

ಕಾರ್ಕಳ :  ಕೊರೋನ ಭೀತಿಯಿಂದ ಮೈಮೇಲೆ ಬೆಂಕಿ ಹಚ್ಚಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಗ್ರಾಮದ ಹೊಸ್ಮಾರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಹೊಸ್ಮಾರು ನಿವಾಸಿ ಲಕ್ಷ್ಮೀ(65) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಕೊರೋನ ಪಾಸಿಟಿವ್ ಅಲ್ಲದಿದ್ದರೂ ಕೊರೋನ ಭೀತಿಯಲ್ಲಿ ಪತ್ರ ಬರೆದಿಟ್ಟು, ಮನೆಯ ಹಿಂಬದಿಯಲ್ಲಿ ಮೈಮೇಲೆ ಡಿಸೇಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರೋಹಿತರನ್ನು ಪೂಜೆ ಮಾಡಿಸಿ, 49 ಲಕ್ಷ ರೂ. ಸುಲಿಗೆ ಮಾಡಿದ ಆರೋಪಿಗಳು

Friday, January 21st, 2022
Honey Trap

ಮಂಗಳೂರು : ನಗರದ ಪದವಿನಂಗಡಿಯ ಬಾಡಿಗೆ ಮನೆಯೊಂದಕ್ಕೆ ಪೂಜೆ ನೆಪದಲ್ಲಿ ಚಿಕ್ಕಮಗಳೂರಿನ ಪುರೋಹಿತರೊಬ್ಬರನ್ನು ಕರೆಸಿಕೊಂಡು ಜೊತೆಗೆ ಫೋಟೋ ತೆಗಿಸಿಕೊಂಡು ಬ್ಲಾಕ್ಮೇಲ್ ಮಾಡಿ  ಸುಮಾರು 49 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೂಲತ: ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಭವ್ಯ (30) ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕುಮಾರ್ ರಾಜು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಕುಮಾರ್ ರಾಜು ಹಾಗೂ ಭವ್ಯ ನಗರದ ಮೇರಿಹಿಲ್‌ನ ಅಪಾರ್ಟ್‌ಮೆಂಟ್‌ನ […]

ಅನಂತ ಗುಣ ಸ್ವರೂಪಿ ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು – ಜಿತಕಾಮಾನಂದಜಿ ಮಹಾರಾಜ್

Friday, January 21st, 2022
Kalikamba

ಮಂಗಳೂರು : ಅನಂತ ಸ್ವರೂಪಳಾಗಿರುವ ಕಾಳಿಕಾಂಬೆಯು ಶಕ್ತಿಯ ವಿವಿಧ ರೂಪಗಳಲ್ಲಿ ಜಗತ್ತಿನಲ್ಲಿ ಗೋಚರಿಸುವಳು, ಜೀವನಕ್ಕೆ ಆಧಾರವೇ ಭಗವಂತನ ಅನುಗ್ರಹ, ನಿಜವಾದ ನೆಮ್ಮದಿ ನಮ್ಮದೇ ಅಂತರಾಳದಲ್ಲಿ ಇದೆ, ಅನಂತ ಗುಣ ಸ್ವರೂಪಿ ಭಗವಂತ, ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ-ಸಂಸ್ಕಾರ ನೀಡದಿದ್ದರೆ , ಮಕ್ಕಳನ್ನೇ ಅವಸಾನಗೊಳಿಸಿದಂತೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನುಡಿದರು. ಅವರು  ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ […]