ಮಾತೃ ಶಕ್ತಿ ಜಾಗೃತವಾದಾಗ ದೇಶದ ಪ್ರಗತಿ ಸಾಧ್ಯ : ಹರೀಶ್ ಶೆಟ್ಟಿ ಮಾಡ

Saturday, August 13th, 2016
Varamahalkshmi pooja

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ಆಶ್ರಯದಲ್ಲಿ 13 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಮಡೆಯಿತು. ಬಾಲ್ಯದಲ್ಲೇ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಒಳಗೊಂಡ ವಿಷಯಗಳನ್ನು ತಿಳಿಯಪಡಿಸಿ ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ನಡೆಸುವಂತೆ ಪ್ರೇರೇಪಿಸಬೇಕು. ಮಾತೆಯರೆಲ್ಲ ಸುರುಚಿಯಂತಾಗದೆ ಸುನೀತಿಯಂತಾಗಿ ಧ್ರುವಕುಮಾರನಂತಹ ಪೀಳಿಗೆಯಿಂದ ಬಲಿಷ್ಠ ಭಾರತ, ಶ್ರೇಷ್ಠಭಾರತ, ಜಗದ್ಗುರು ಭಾರತವನ್ನಾಗಿಸಿ ತ್ಯಾಗದಿಂದ ಶಾಂತಿಯಿಂದ ಸಮೃದ್ಧಿಯನ್ನು ಬೆಳೆಸೋಣ. ಮಾತೃಶಕ್ತಿ ಜಾಗೃತವಾದಾಗ ದೇಶದ ಪ್ರಗತಿ ಸಾಧ್ಯ ಎಂದು ಧಾರ್ಮಿಕ ಮುಂದಾಳು […]

’ದಬಕ್ ದಬಾ ಐಸಾ’ ಗಳಿಕೆಯಲ್ಲಿ ಹೊಸದಾಖಲೆ: ಪ್ರಥಮ ವಾರದಲ್ಲಿ 12 ಥಿಯೇಟರ್‌ಗಳಲ್ಲಿ 371 ಪ್ರದರ್ಶನ

Saturday, August 13th, 2016
Dabak daba isa

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ ’ದಬಕ್ ದಬಾ ಐಸಾ’ ಸಿನಿಮಾವು ಪ್ರಥಮ ವಾರದಲ್ಲಿ ಒಟ್ಟು 12 ಥಿಯೇಟರ್‌ಗಳಲ್ಲಿ 50,26,357 ಲಕ್ಷ.ರೂ.ಗಳಿಸುವ ಮೂಲಕ ತುಳು ಸಿನಿಮಾರಂಗದಲ್ಲಿ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಪ್ರಥಮ ವಾರದಲ್ಲಿ ಒಟ್ಟು 12 ಥಿಯೇಟರ್‌ಗಳಲ್ಲಿ 371 ಪ್ರದರ್ಶನಗಳನ್ನು ಕಂಡಿರುವ ’ದಬಕ್ ದಬಾ ಐಸಾ’ ಸಿನಿಮಾವು ಜಯಕಿರಣ ಫಿಲಂಸ್‌ನ ಮೊದಲ ’ಚಾಲಿಪೋಲಿಲು’ ಸಿನಿಮಾದ 45 ಲಕ್ಷದ ಗಳಿಕೆಯನ್ನು ಹಿಂದಿಕ್ಕಿದೆ. ಸಿನಿಮಾರಂಗದ ಇತಿಹಾಸದಲ್ಲೇ ವಾರದ ಗಳಿಕೆಯಲ್ಲಿ ’ದಬಕ್ ದಬಾ ಐಸಾ’ ಸಿನಿಮಾವು ಹೊಸ ದಾಖಲೆ ಬರೆದಿದೆ. […]

ಸಿ ಮಹಾದೇವಯ್ಯ ಮಂಗಳೂರು ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕಾರ

Saturday, August 13th, 2016
C Mahadevaiah

ಮಂಗಳೂರು : ಕೊಳ್ಳೆಗಾಲ ತಾಲೂಕು ಚಾಮರಾಜನಗರದಲ್ಲಿ ತಹಸೀಲ್ದಾರ್ ಆಗಿದ್ದ ಸಿ.ಮಹಾದೇವಯ್ಯ ಅವರು ನಿರ್ಗಮನ ತಹಸೀಲ್ದಾರ್ ಆರ್.ಬಿ. ಶಿವಶಂಕರ್ ಅವರಿಂದ ಶುಕ್ರವಾರ ಮಂಗಳೂರು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡರು. ಮೆಗಾಮೀಡಿಯಾದೊಂದಿಗೆ ಮಾತನಾಡುತ್ತಾ ಸಿ.ಮಹಾದೇವಯ್ಯ ಅವರು 2012  ರ ಮೊದಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಸತಿಗಳಿಗೆ 94ಸಿ ಮತ್ತು 94ಸಿಸಿ ಅರ್ಜಿಗಳನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು. ಈ ಬಗ್ಗೆ ವಾರಕ್ಕೊಮ್ಮೆ ಸಭೆಕರೆದು ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಕಂದಾಯ ಸಚಿವರ ಆದೇಶದಂತೆ ಕಂದಾಯ ಅದಾಲತ್ ಮತ್ತು ಪೋಡಿ […]

ಪ್ರದೀಪ್ ಡಿ’ಸೋಜ ಮಂಗಳಾ ಸ್ಟೇಡಿಯಂ ಯುವ ಸಬಲೀಕರಣದ ಹೆಚ್ಚುವರಿ ಉಪನಿರ್ದೇಶಕರಾಗಿ ನೇಮಕ

Saturday, August 13th, 2016
Pradeep D souza

ಮಂಗಳೂರು : ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ‍್ಯದರ್ಶಿ ಪ್ರದೀಪ್ ಡಿ’ಸೋಜ ಅವರು ಮಂಗಳಾ ಸ್ಟೇಡಿಯಂ ಯುವ ಸಬಲೀಕರಣದ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಉಪನಿರ್ದೇಶಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಜಿಲ್ಲೆಯ ಯುವ ಪ್ರತಿಭೆಗಳಿಗೆ ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಪ್ರದೀಪ್ ಡಿ’ಸೋಜ ಅವರು ಮೆಗಾಮೀಡಿಯಾದೊಂದಿಗೆ ಮಾತನಾಡುತ್ತಾ ತಿಳಿಸಿದರು. ಪ್ರದೀಪ್ ಡಿ’ಸೋಜ ಸ್ವತ: ಉತ್ತಮ ಕ್ರೀಡಾಪಟುವಾಗಿದ್ದು ವಾಲಿಬಾಲ್ ಮತ್ತು ಪುಟ್ಬಾಲ್ ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ […]

ಆಸ್ಪತ್ರೆಯಲ್ಲಿ ಮಹಿಳೆಯೊರ್ವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Friday, August 12th, 2016
Susheela

ಮಂಗಳೂರು: ನಗರದ ಆಸ್ಪತ್ರೆಯಲ್ಲಿ ಮಹಿಳೆಯೊರ್ವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿಂದು ನಡೆದಿದೆ. ಸುಶೀಲಾ (67) ಎಂಬ ಅಸ್ತಮಾ ರೋಗಿ ಆತ್ಮಹತ್ಯೆಗೆ ಶರಣಾಗಿರುವ ವೃದ್ಧೆ ಎಂದು ತಿಳಿದುಬಂದಿದೆ. ಅಸ್ತಮಾ ಕಾಯಿಲೆಯಿಂದ ನರಳುತ್ತಿದ್ದ ಸುಶೀಲಾ ಅವರು ನಗರದ ಕೆ. ಎಸ್. ರಾವ್ ರಸ್ತೆಯಲ್ಲಿರುವ ಜಯಶ್ರೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ನೆನ್ನೆ ದಾಖಲಾಗಿದ್ದರು. ರಾತ್ರಿ 11 ಗಂಟೆಯ ವೇಳೆಗೆ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಂದು ಬೆಳಗ್ಗೆ ನರ್ಸ್‌ಗಳು ಚಿಕಿತ್ಸೆ ನೀಡಲು ಬಂದಾಗ ಬಾಗಿಲು ತೆರೆದಿಲ್ಲ. ಹೀಗಾಗಿ ಅನುಮಾನಗೊಂಡು ಬಾಗಿಲು ಮುರಿದು […]

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು: ಕಾರಲ್ಲಿದ್ದವರು ಪರಾರಿ

Friday, August 12th, 2016
Cattle

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರಿನಲ್ಲಿ ದನ ಕಟ್ಟುವ ಹಗ್ಗ, ಸಗಣಿ, ಚೂರಿ ಪತ್ತೆಯಾದ ಘಟನೆ ಕೃಷ್ಣಾಪುರ ಸಮೀಪದ ನೈತಂಗಡಿ ಯುವಕ ಮಂಡಲದ ಬಳಿ ನಡೆದಿದ್ದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಪಘಾತ ನಡೆದ ತಕ್ಷಣ ಕಾರಿನಲ್ಲಿ ಮೂವರು ಕಾರನ್ನು ಬಿಟ್ಟು ಪರಾರಿಯಾಗಿದ್ದರಾದರೂ ಈ ಮೂವರ ಫೊಟೋವನ್ನು ಸ್ಥಳೀಯರು ತೆಗೆದಿದ್ದು ಅದನ್ನು ಪೊಲೀಸರಿಗೆ ನೀಡಿದ್ದಾರೆ. ಅಪಘಾತ ನಡೆದ ಕೂಡಲೇ ಕಾರಲ್ಲಿದ್ದವರು ಪರಾರಿಯಾದ ಕಾರಣ ಶಂಕೆಗೊಂಡ ಸ್ಥಳೀಯರು ಕಾರು ಪರಿಶೀಲಿಸಿದಾಗ ಅದರಲ್ಲಿ ದನ […]

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ

Friday, August 12th, 2016
Bomb nishkriya dala

ಬಂಟ್ವಾಳ: ಮಂಗಳೂರು ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ.ಬೋರಾಸೆ ಅವರ ನೇತೃತ್ವದ ಪಶ್ಚಿಮವಲಯದ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೇಯಾದ್ಯಂತ ಪ್ರಮುಖ ಸ್ಥಳಗಳಾದ ಬಸ್ ನಿಲ್ದಾಣ, ಕೋರ್ಟು, ರೈಲ್ವೆ ನಿಲ್ದಾಣ ಮತ್ತು ಪ್ರವಾಸಿ ತಾಣಗಳಲ್ಲಿ ವಿಶೇಷ ತಪಾಸಣೆ ನಡೆಸಿದರು. ಬಂಟ್ವಾಳದಲ್ಲೂ ಖಾಸಗಿ ಬಸ್ ನಿಲ್ದಾಣ, ಕೋರ್ಟು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಂಚರಿಸಿ ತಪಾಸಣೆ ನಡೆಸಿದರು. ಮೈಸೂರು ನಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ […]

ಅಪ್ರಸ್ತುತ ಭೂದಾಖಲೆ ನೋಂದಾವಣಾ ಶುಲ್ಕ ಏರಿಕೆ ನ್ಯಾಯವಲ್ಲ-ಹಕೀಂ ಕುನ್ನಿಲ್

Friday, August 12th, 2016
Bhudakhale-nondavani

ಕುಂಬಳೆ: ಭೂ ದಾಖಲೆಗಳ ನೋಂದಾವಣಿ ಮತ್ತು ದಾನಪತ್ರ,ಪಾಲುಪಟ್ಟಿ ಮೊದಲಾದ ಅತ್ಯಾವಶ್ಯಕ ವಿಚಾರಗಳಲ್ಲಿ ನೂತನ ರಾಜ್ಯ ಸರಕಾರ ಅಪರಿಮಿತ ಶುಲ್ಕ ಏರಿಕೆಗೊಳಿಸಿ ಅನ್ಯಾಯವೆಸಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಟೀಕೆ ವ್ಯಕ್ತಪಡಿಸಿದರು. ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಸಮಿತಿಯ ನೇತೃತ್ವದಲ್ಲಿ ಗುರುವಾರ ರಾಜ್ಯ ಸರಕಾರದ ಹೊಸ ಅಪ್ರಬುದ್ದ ಭೂದಾಖಲೆ ನೋಂದಾವಣಿ ಕಾನೂನಿಗೆದುರಾಗಿ ಕುಂಬಳೆ ಸರ್ವೇ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನ ಸಾಮಾನ್ಯರಲ್ಲಿ ಕುಟುಂಬದ ಆಸ್ತಿಗಳ ಪಾಲುಮಾಡಿಕೊಳ್ಳುವುದು,ತಂದೆ ಮಕ್ಕಳಿಗೆ ಆಸ್ತಿಯನ್ನು ದಾನಪತ್ರ ಮಾಡಿಕೊಡುವುದು ಮೊದಲಾದವುಗಳಿಗೆ […]

ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಛೇರಿಯ ಮುಂಭಾಗ ಕಾಂಗ್ರೆಸ್ ವತಿಯಿಂದ ಸ್ಟಾಂಪ್ ಪೇಪರ್ ಬೆಲೆಯೇರಿಕೆ ವಿರುದ್ಧ ಧರಣಿ

Friday, August 12th, 2016
Stamp-paper

ಬದಿಯಡ್ಕ : ಕಾರಡ್ಕ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಆಶ್ರಯದಲ್ಲಿ ಪಾಲ್ಪಟ್ಟಿ ದೃಢಪತ್ರದ ಬೆಲೆಯೇರಿಕೆ ವಿರುದ್ಧ ಬದಿಯಡ್ಕ ಉಪನೋಂದಾವಣಾ ಕಚೇರಿಗೆ ನಡೆಸಿದ ಧರಣಿ ಸತ್ಯಾಗ್ರಹವನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಕಾರ್ಯದರ್ಶಿ ನೀಲಕಂಠನ್ ಉದ್ಘಾಟಿಸಿ, ಮಾತನಾಡಿ ಅಧಿಕಾರಕ್ಕೆ ಬಂದು 2 ತಿಂಗಳಲ್ಲೇ ಜನತೆಯನ್ನು ವಂಚಿಸಲು ಈ ಸರಕಾರ ಹೊರಟಿದೆ. ಸ್ಟಾಂಪ್ ಪೇಪರ್‌ನ ಬೆಲೆ ಹೆಚ್ಚಳವು ಜನಸಾಮಾನ್ಯರಿಗೆ ದೊಡ್ಡ ಹೊಡೆತವಾಗಿದೆ ಎಂದರು. ಈ ತೀರ್ಮಾನವನ್ನು ಕೂಡಲೇ ಹಿಂತೆಗೆದು ಸಾರ್ವಜನಿಕರಿಗಾಗುವ ತೊಂದರೆಯನ್ನು ನಿವಾರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಕಾರಡ್ಕ ಬ್ಲಾಕ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ […]

ಮಂಗಳೂರು ತಾಲೂಕು ತಹಶಿಲ್ದಾರ್ ಆರ್.ವಿ.ಶಿವಶಂಕರಪ್ಪ  ಹಾಸನಕ್ಕೆ ವರ್ಗಾವಣೆ

Thursday, August 11th, 2016
RV Shivashankarappa

ಮಂಗಳೂರು : ಮಂಗಳೂರು ತಾಲೂಕು ತಹಶಿಲ್ದಾರ್ ಆರ್.ವಿ.ಶಿವಶಂಕರಪ್ಪ ಅವರು ಹಾಸನ ತಾಲೂಕಿನಲ್ಲಿ ತೆರವಾದ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ. ಮಂಗಳೂರು ತಹಸಿಲ್ದಾರ್ ಆಗಿ ಸಿ. ಮಹಾದೇವಯ್ಯ ಅವರು ಶುಕ್ರವಾರ ಅಧಿಕಾರ ವಹಿಸಲಿದ್ದಾರೆ. ಸಿ ಮಹದೇವಯ್ಯ ಅವರು ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನಲ್ಲಿ ತಹಶಿಲ್ದಾರರಾಗಿದ್ದರು. ತಹಶಿಲ್ದಾರ್ ಆರ್.ವಿ.ಶಿವಶಂಕರಪ್ಪ ಅವರು 2015ರ ಆಗಸ್ಟ್ 31 ರಂದು ಮಂಗಳೂರಿನ ತಹಶಿಲ್ದಾರ್‌ಆಗಿ ಅಧಿಕಾರ ವಹಿಸಿಕೊಂಡಿದ್ದರು. ಹೊಳೆನರಸೀಪುರದ ಕೆ.ಆರ್ ನಗರದ ತಹಶೀಲ್ದಾರ್ ವಿ ಮಂಜುನಾಥ್ ಅವರ ತೆರವಾದ ಸ್ಥಾನಕ್ಕೆ ಆರ್.ವಿ.ಶಿವಶಂಕರಪ್ಪ ವರ್ಗಾವಣೆ ಯಾಗಿದ್ದಾರೆ. ತಹಶಿಲ್ದಾರ್ ಆರ್.ವಿ.ಶಿವಶಂಕರಪ್ಪ ಅವರು ಜನಸ್ನೇಹಿ ಅಧಿಕಾರಿಯಾಗಿದ್ದರು. […]