ಕೊರಗಜ್ಜನ ವೇಷವನ್ನು ಧರಿಸಿ ಅವಹೇಳನ, ಇಬ್ಬರ ಬಂಧನ

Tuesday, January 11th, 2022
Koragajja Defame

ವಿಟ್ಲ: ಸಾಲೆತ್ತೂರು ಎಂಬಲ್ಲಿ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.‌ ಪ್ರಕರಣದ ಪ್ರಮುಖ ಆರೋಪಿ ಮಂಗಲಪ್ಪಾಡಿ  ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು(28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, […]

ಗ್ರಾಮೀಣ ಭಾಗದ ಮೂಲಭೂತ ಅಭಿವೃದ್ಧಿಗೆ ಸರಕಾರದ‌ ಆದ್ಯತೆ- ಸಚಿವ ಎಸ್.ಅಂಗಾರ

Tuesday, January 11th, 2022
madappady

  ಸುಳ್ಯ : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಗ್ರಾಮೀಣ‌ ಭಾಗದ ಅಭಿವೃದ್ಧಿ ಇನ್ನೂ ಆಗಿಲ್ಲ. ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂಬ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸರಕಾರವು ಇಚ್ಛಾಶಕ್ತಿಯಿಂದ ಕೆಲಸ ಮಾಡುತಿದೆ. ರಸ್ತೆ, ಸೇತುವೆಗಳು ಸೇರಿದಂತೆ ಗ್ರಾಮೀಣ ಭಾಗದ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪೂರ್ತಿ ಮಾಡಲಾಗುವುದು ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ […]

ಹಿಂದಿ ಈಗ ಜಾಗತಿಕ ಭಾಷೆ: ಜಾನ್ ಎ. ಅಬ್ರಹಾಂ

Tuesday, January 11th, 2022
World Hindi Day

ಮಂಗಳೂರು: ಹಿಂದಿ ಭಾಷೆ ಉಪನ್ಯಾಸಕ ವೃತ್ತಿಗೆ ಸೀಮಿತವಾಗಿರದೆ ಇತರ ಕ್ಷೇತ್ರಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿವೆ, ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಜಭಾಷಾ ವಿಭಾಗದ ವರಿಷ್ಠ ಪ್ರಬಂಧಕ ಜಾನ್ ಎ. ಅಬ್ರಹಾಂ ತಿಳಿಸಿದರು. ನಗರದ ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ವತಿಯಿಂದ ಮಂಗಳವಾರ ನಡೆದ ವಿಶ್ವ ಹಿಂದಿ ದಿನಾಚರಣೆಯಲ್ಲಿ ʼಹಿಂದಿ ಭಾಷೆಯಲ್ಲಿ ಉದ್ಯೋಗಾವಕಾಶಗಳುʼ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಆನಿವಾಸಿ ಭಾರತೀಯರು ವಿಶ್ವಾದ್ಯಂತ ಹಿಂದಿಯನ್ನು ಬಳಸುತ್ತಿರುವುದರಿಂದ ಅದೊಂದು […]

ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಗಣ್ಯರ ಸಂತಾಪ

Monday, January 10th, 2022
champa

ಮಂಗಳೂರು  :  ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸೋಮವಾರ  ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ, ಭಾಷಾ ಹೋರಾಟಕಾರ ಚಂದ್ರಶೇಖರ ಪಾಟೀಲ (ಚಂಪಾ)ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕ ಎಂ.ಜಿ.ಆರ್ ಅರಸ್, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್, ಉಡುಪಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕಾ.ವೀ.ಕೃಷ್ಣದಾಸ್, ಗೌರವಾಧ್ಯಕ್ಷೆ ತಾರಾ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ […]

ಆನ್‌ಲೈನ್ ಸಾಲದ ಫೋನ್ ಕಿರಿಕಿರಿ – ಕಚೇರಿಯಲ್ಲಿ ಯುವಕ ಆತ್ಮಹತ್ಯೆ

Monday, January 10th, 2022
Sushath

ಮಂಗಳೂರು :  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವಕನೊಬ್ಬ ಆನ್‌ಲೈನ್ ಸಾಲದ ಫೋನ್ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು  ಕಿನ್ನಿಗೋಳಿ ಪಕ್ಷಿಕೆರೆ ಮೂಲದ ಸುಶಾಂತ್(26) ಎಂದು ಗುರುತಿಸಲಾಗಿದೆ. ಸೋಮವಾರ ತಾನು ಕೆಲಸ ಮಾಡಿಕೊಂಡಿದ್ದ ಸುರತ್ಕಲ್‌ನ ಕುಳಾಯಿಯ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿನ ಕುರಿತಂತೆ ತುಳುವಿನಲ್ಲಿ ಡೆತ್‌ನೋಟ್ ಬರೆದಿದ್ದಾರೆ. ‘ಸಾರಿ ಮಾತೆರೆಗ್ಲಾ. ಎಂಕ್ ಏರ‌್ನಲಾ ನಂಬಿಕೆ ಒರಿಪಾರೆ ಆಯಿಜಿ. ಕಾಸ್‌ದ ವಿಷಯೊಡ್ ತೊಂದರೆ ಆಂಡ್. ಸಾರಿ, ಆನ್‌ಲೈನ್ ಲೋನ್‌ದಕುಲ್ ಕಾಲ್ ಮಲ್ತೆರ್‌ಡ ಡೆತ್ ಆತೆ ಪನ್ಲೆ. […]

ಕನ್ನಡ, ತುಳು ಸಿನೆಮಾ ನಟ, ನಿರ್ದೇಶಕ ಶರತ್ ಚಂದ್ರ ಕದ್ರಿ ಇನ್ನಿಲ್ಲ

Monday, January 10th, 2022
sharathchandra Kadri

ಮಂಗಳೂರು : ಕನ್ನಡ, ತುಳು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ ಹಾಗೂ ನೂರಕ್ಕೂ ಹೆಚ್ಚು ನಾಟಕ ಗಳನ್ನು ರಚಿಸಿ ಅಭಿನಯಿಸಿದ ಹಿರಿಯ ನಟ ಹಾಗೂ ನಿರ್ದೇಶಕ ಶರತ್ ಚಂದ್ರ ಕದ್ರಿ ಅವರು ಭಾನುವಾರ ಬೆಳಿಗ್ಗೆ 4.30  ಕ್ಕೆ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆ.ಏನ್ ಟೈಲರ್ ನಾಟಕಗಳ ಮೂಲಕ ನಾಯಕ ನಟನಾಗಿ ರಂಗಭೂಮಿ ಪ್ರವೇಶಿಸಿದ ಶರತ್ ಚಂದ್ರ ಕದ್ರಿ ಕನ್ನಡದ ಕತ್ತೆಗಳು ಸಾರ್ ಕತ್ತೆಗಳು ಸಿನೆಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ತುಳುವಿನ ಕಟಪಾಡಿ ಕಟ್ಟಪ್ಪಾ, ದೊಂಬರಾಟ ಮೊದಲಾದ ಚಿತ್ರಗಳಲ್ಲಿ […]

ಸ್ವಾಮಿ ಕೊರಗಜ್ಜನ ನಿಂದನೆ, ಅಪಹಾಸ್ಯ -ಮಂಗಳವಾರ ಸಾಮೂಹಿಕ ಪ್ರಾರ್ಥನೆಗೆ ಕರೆ -ವಿಶ್ವ ಹಿಂದೂ ಪರಿಷತ್

Saturday, January 8th, 2022
VHP

ಮಂಗಳೂರು  : ವಿಟ್ಲದಲ್ಲಿ ಕೊರಗಜ್ಜನನ್ನು ಅವಮಾನಿಸಿದ ಘಟನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಂಗಳವಾರ 11 ಜನವರಿ 2022 ರಂದು ನಡೆಸಲು ಸಮಸ್ತ ಹಿಂದೂ ಬಂಧುಗಳಲ್ಲಿ ವಿಶ್ವ ಹಿಂದೂ ಪರಿಷತ್ ವಿನಂತಿಸಿದೆ. ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರು, ಸಂಘಟನೆಗಳು, ಸಂಘ ಸಂಸ್ಥೆಗಳು, ಭಕ್ತರು, ಸಮಸ್ತ ಹಿಂದೂಗಳು ಒಟ್ಟು ಸೇರಿ ನಮ್ಮ ನಮ್ಮ ಊರುಗಳ ದೈವಸ್ಥಾನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ […]

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಡಿತರದಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಅನುಮತಿ

Saturday, January 8th, 2022
kota Srinivas Poojary

ಮಂಗಳೂರು  : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಕುಚ್ಚಲಕ್ಕಿ ಪ್ರಭೇದಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.‌  ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಪೂರೈಕೆ ಆಗಲಿದೆ. ಈ ಬಗ್ಗೆ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಬಹುಕಾಲದ ಬೇಡಿಕೆ ಈಡೇರುತ್ತಿರುವ ಬಗ್ಗೆ ಮೆಚ್ಚುಗೆ, ತೃಪ್ತಿ ಇದೆ. ಇದಕ್ಕಾಗಿ ಈ ಭಾಗದ ಶಾಸಕರು, ಸಂಸದರು, ರಾಜ್ಯದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ , ಆಹಾರ ನಿಗಮದ ಅಧ್ಯಕ್ಷ ಕೊಡ್ಗಿ ಅವರನ್ನು ಸಚಿವ ಕೋಟ […]

ಅಮಲು ಪದಾರ್ಥ ಸೇವಿಸಿ ನಡುರಸ್ತೆಯಲ್ಲೇ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ

Saturday, January 8th, 2022
Students Clash

ಮಂಗಳೂರು : ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಅಮಲು ಪದಾರ್ಥ ಸೇವಿಸಿ ಪಡುಬಿದ್ರಿ ಪೇಟೆಯ ನಡುರಸ್ತೆಯಲ್ಲೇ ಹೊಡೆದಾಟ ನಡೆಸಿ ರಂಪಾಟ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಬ್ಬರು ಯುವಕರು ಒರ್ವ ಯುವತಿಯ ತಂಡದಲ್ಲಿದ್ದು ಮೂವರು ಕೂಡಾ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಗೂ”ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ” ಎಂದು ಅವಾಜ್ ಹಾಕಿದ್ದಾರೆ. ಕೊನೆಗೂ ಪೊಲೀಸರು […]

ವೀಕೆಂಡ್ ಕರ್ಫ್ಯೂ : ಮಂಗಳೂರಲ್ಲಿ ವಿರಳವಾಗಿ ಬಸ್ ಸಂಚಾರ, ಜೊತೆಗೆ ಜನ ಸಂಚಾರವು ಇದೆ

Saturday, January 8th, 2022
Mangalore Weekend

ಮಂಗಳೂರು : ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಧ್ಯೆಯೂ ಬಸ್ಸುಗಳ ಸಂಚಾರವಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜನ ಸಂಚಾರವು ಇದೆ. ಆದರೆ ಅನಗತ್ಯ ಸಂಚಾರ ನಡೆಸಿರುವ ವಾಹನಗಳನ್ನು ಮಂಗಳೂರು ಪೊಲೀಸರು ತಡೆ ಹಿಡಿದಿದ್ದಾರೆ. ಕ್ಲಾಕ್ ಟವರ್ ಬಳಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಕಾರಣವಿಲ್ಲದೆ ವಾಹನಗಳಲ್ಲಿ ಸಂಚಾರ ಮಾಡುವವರನ್ನು ತಡೆದು ದಂಡ ಹಾಕುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ. ನಗರದಲ್ಲಿ ಬೆಳಗ್ಗೆಯಿಂದ ಸುಮಾರು 25ಕ್ಕೂ‌ಅಧಿಕ ದ್ವಿಚಕ್ರ ವಾಹನ  ಗಳನ್ನು ಜಪ್ತಿ ಮಾಡಿ. ಮಾಸ್ಕ್ […]