ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ನಡೆಸುತ್ತಿದೆ: ಶೋಭಾ ಕರಂದ್ಲಾಜೆ

Wednesday, November 21st, 2018
shobha-karandlaje

ಬೆಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಧರಣಿ ನಡೆಸಿದರು. ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಯ್ಯಪ್ಪ ಭಕ್ತರು ಇಂದು ಸಂಕಷ್ಟದಲ್ಲಿ ಇದ್ದಾರೆ, ದೇವಸ್ಥಾನದಲ್ಲಿ ಇರಬೇಕಾದ ಭಕ್ತರು ಪೋಲಿಸ್ ಸ್ಟೇಷನ್ನಲ್ಲಿ ಇದ್ದಾರೆ, ಪೋಲಿಸ್ ಸ್ಟೇಷನ್ ಇರಬೇಕಾದ ಪೋಲಿಸರು ಅಯ್ಯಪ್ಪ ದೇವಸ್ಥಾನದಲ್ಲಿ ಇದ್ದಾರೆ ಎಂದು ಟೀಕಿಸಿದರು. ಕೇರಳದ ಕಮ್ಯುನಿಸ್ಟ್ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಕೇಸ್ ನಡೆಯಬೇಕಾದರೆ ಮೌನವಹಿಸಿತು ಇದರ […]

ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ‌ ನಿರ್ಮಾಣಕ್ಕೆ ಯೋಜನೆ: ಡಾ. ಜಿ.ಪರಮೇಶ್ವರ್

Tuesday, November 20th, 2018
parameshwar

ಬೆಂಗಳೂರು: ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಪ್ಯಾರಾ ಏಷಿಯನ್‌ ಗೇಮ್ಸ್ನಲ್ಲಿ 9 ಪದಕ ಪಡೆದ ಏಳು ವಿಕಲಚೇತನ ಕ್ರೀಡಾಪಟುಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ. ಜಿ.ಪರಮೇಶ್ವರ್ ಅವರು ಗೃಹ ಕಚೇರಿಯಲ್ಲಿ ಇಂದು ಸನ್ಮಾನಿಸಿದರು. ಪ್ಯಾರಾ ಒಲಂಪಿಕ್‌ನಲ್ಲಿ‌ ಚಿನ್ನ ಗಳಿಸಿದ ರಕ್ಷಿತಾ ಆರ್., ಬೆಳ್ಳಿ ಹಾಗೂ ಕಂಚು ಪದಕ ವಿಜೇತೆ ವಿ.ರಾಧ, ಜಾವಲಿನ್ ಥ್ರೋ ವಿಭಾಗದಲ್ಲಿ ಕಂಚು ಪಡೆದ ಎನ್‌.ಎಸ್‌. ರಮ್ಯಾ, ಪ್ಯಾರ ಬ್ಯಾಡ್ಮಿಂಟನ್‌ನಲ್ಲಿ ಕಂಚು ವಿಜೇತ ಆನಂದ ಕುಮಾರ್, ಚೆಸ್‌ನಲ್ಲಿ ಚಿನ್ನದ ಪದಕ […]

ಟ್ರ್ಯಾಕ್ಟರ್​​ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

Tuesday, November 20th, 2018
accident

ಕಲಬುರಗಿ: ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹತ್ತಿರ ನಡೆದಿದೆ. ಯಾದಗಿರಿ ತಾಲೂಕು ಯರಗೋಳ ಗ್ರಾಮದ ನಿವಾಸಿ ಹಳ್ಳೆಪ್ಪ (25) ಮೃತಪಟ್ಟ ಬೈಕ್ ಸವಾರನೆಂದು ಗುರುತಿಸಲಾಗಿದೆ. ಯರಗೋಳದಿಂದ ನಾಲವಾರ ಕಡೆ ಹಳ್ಳೆಪ್ಪ ಬೈಕ್ನಲ್ಲಿ ಹೊರಟ್ಟಿದ್ದ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಾ.ರಾ.ಗೋವಿಂದ ಪುತ್ರ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ..!

Tuesday, November 20th, 2018
anup-actor

ಬೆಂಗಳೂರು: ಖ್ಯಾತ ನಿರ್ಮಾಪಕ ಹಾಗೂ ಫಿಲ್ಮ್ ಛೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ ಪುತ್ರ, ನಟ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಕೇಳಿ ಬಂದಿದೆ. ಹರೀಶ್ ಎಂಬಾತನಿಗೆ ತನ್ನ ಮೊಬೈಲ್ನಿಂದ ಕರೆ ಮಾಡಿ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಬಳಿ ಬರುವಂತೆ ಅನೂಪ್ ಹೇಳಿದ್ದನಂತೆ. ಅಲ್ಲಿಗೆ ಬಂದ ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ಅನೂಪ್ನಿಂದ ಎಸ್ಕೇಪ್ ಆದ ಹರೀಶ್, ಸದಾಶಿವನಗರದ ಠಾಣೆಯಲ್ಲಿ […]

ಏಕಾಏಕಿ ಗೋವಾ ಸರ್ಕಾರ ಕರ್ನಾಟಕದ ಮೀನು ನಿಷೇಧ ಮಾಡಿರುವುದು ಸರಿಯಲ್ಲ: ಯು.ಟಿ.ಖಾದರ್

Monday, November 19th, 2018
bengaluru

ಬೆಂಗಳೂರು: ಏಕಾಏಕಿ ಗೋವಾ ಸರ್ಕಾರ ಕರ್ನಾಟಕದ ಮೀನು ನಿಷೇಧ ಮಾಡಿರುವುದು ಸರಿಯಲ್ಲ ಎಂದು ಸಚಿವ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಏಕಾಏಕಿ ಈ ರೀತಿ ಮಾಡಿರೋದು ಸರಿಯಲ್ಲ. ಈ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನಾದರೂ ನೀಡಬೇಕಾಗಿತ್ತು. ನಮ್ಮ ಜೊತೆ ಗೋವಾ ಸರ್ಕಾರ ಚರ್ಚೆ ಮಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ರೀತಿ ಚರ್ಚಿಸದೆ ಹೀಗೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇವೆ. ಜೊತೆಗೆ ಕ್ಯಾಬಿನೆಟ್ನಲ್ಲೂ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು […]

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ಬಿ.ಎಸ್. ಯಡಿಯೂರಪ್ಪ

Monday, November 19th, 2018
yedyurappa

ಬೆಂಗಳೂರು: ಇಂದಿನ ರೈತರ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಬರದೇ ಇದ್ದರೆ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಉಗ್ರ ಹೋರಾಟ‌ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳಗಾರರ ಸಮಸ್ಯೆ ವಿಕೋಪಕ್ಕೆ‌ ಹೋಗಿದೆ. ಸಾಲಮನ್ನಾ ಘೋಷಣೆ ಆದರೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಮಾಡ್ತೀನಿ ಅಂತ ರಾಜಕೀಯ ದೊಂಬರಾಟ ಮಾಡಿದ ಮುಖ್ಯಮಂತ್ರಿಗಳೇ ರೈತರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದರು. […]

ವಿಜಯಪುರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಇನ್ನಿಲ್ಲ

Monday, November 19th, 2018
vijayapura

ವಿಜಯಪುರ: ಜಿಲ್ಲೆಯ ಕಲಕೇರಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರತನಚಂದ ಪಾಯಪ್ಪ ಜಗಶೆಟ್ಟಿ(98) ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಕಲಕೇರಿಯಲ್ಲಿ ಸಕಲ ಗೌರವದೊಂದಿಗೆ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಲು ಜಿಲ್ಲಾಧಿಕಾರಿ ಶಿಫಾರಸ್ಸು

Saturday, November 17th, 2018
mysuru

ಮೈಸೂರು: ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮೈಸೂರು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಜನದಟ್ಟಣೆಯನ್ನು ನಿವಾರಿಸಲು ರಸ್ತೆಗಳನ್ನು ಅಗಲೀಕರಿಸುವ ಸಂಬಂಧ ಅಲ್ಲಿರುವ ಪಾರಂಪರಿಕ ಕಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು. ಸಮಿತಿ ಸದಸ್ಯರು ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ […]

ಅನಂತ್​ಕುಮಾರ್ ನಿವಾಸಕ್ಕೆ ವೇಣುಗೋಪಾಲ್‌ ಭೇಟಿ!

Saturday, November 17th, 2018
ananth-kumar

ಬೆಂಗಳೂರು: ಅನಾರೋಗ್ಯದಿಂದ ಮೊನ್ನೆ ನಿಧಾನರಾಗಿದ್ದ ದಿವಂಗತ ಅನಂತ್ಕುಮಾರ್ ರವರ ಬಸನವಗುಡಿಯಲ್ಲಿರುವ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ನೀಡಿದರು. ಈ ವೇಳೆ ತೇಜಸ್ವಿನಿ ಅನಂತಕುಮಾರ್ರವರಿಗೆ ಸಾಂತ್ವನ ಹೇಳಿದ ಅವರು, ಪಕ್ಷಾತೀತವಾಗಿ ಅಪಾರ ಸ್ನೇಹಿತರನ್ನು‌ ಅನಂತ್ ಕುಮಾರ್ ಪಡೆದಿದ್ದರು ಎಂದು ಅವರ ನಿಧನಕ್ಕೆ ವೇಣುಗೋಪಾಲ್ ಸಂತಾಪ ಸೂಚಿಸಿದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅಂತಿಮ ನಮನ ಸಲ್ಲಿಸಿದ್ದರು. ಆದರೆ, ವೇಣುಗೋಪಾಲ್ ರಾಜ್ಯದಲ್ಲಿ ಇಲ್ಲದ ಕಾರಣಕ್ಕಾಗಿ‌‌ ಇಂದು ಅನಂತ್ಕುಮಾರ್ ನಿವಾಸಕ್ಕೆ ಭೇಟಿ […]

ಸಿದ್ದರಾಮಯ್ಯ ಮುಖಂಡತ್ವದಲ್ಲಿ ಮೈಸೂರು ಮೇಯರ್​ ವಿವಾದ ಬಗೆ ಹರಿಸುತ್ತೇವೆ: ಹೆಚ್ ಡಿ ದೇವೇಗೌಡ

Friday, November 16th, 2018
devegouda

ದೇವನಹಳ್ಳಿ: ತಾಲೂಕಿನ ಗ್ರಾಮ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣಾ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದರು. ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ -ಜೆಡಿಎಸ್ ಎರಡು ಪಕ್ಷಗಳು ಮೈತ್ರಿಯಾಗಿವೆ. ಸಿದ್ದರಾಮಯ್ಯ ನವರ ಮುಖಂಡತ್ವದಲ್ಲಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು. ಮೇಯರ್ ಆಯ್ಕೆಗೆ ನಾಳೆಯವರೆಗೂ ಸಮಯಕಾಶವಿದೆ. ಎಲ್ಲರೂ ಓಗ್ಗಟ್ಟಾಗಿ ಸೇರಿ ಮೇಯರ್ ಆಯ್ಕೆ ಮಾಡ್ತಾರೆ ಎಂದು ದೇವೇಗೌಡ ತಿಳಿಸಿದ್ರು.